ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ: ಸಾವಿರಾರು ಕಾರ್ಯಕರ್ತರು ಭಾಗಿ

Posted by Vidyamaana on 2024-04-03 15:32:17 |

Share: | | | | |


ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ: ಸಾವಿರಾರು ಕಾರ್ಯಕರ್ತರು ಭಾಗಿ

ಮಂಗಳೂರು : ದ.ಕ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಇಂದು ನಾಮಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ನಾಮಪತ್ರ ಸಲ್ಲಿಸುವ ಮುನ್ನ ಬೆಳಗ್ಗೆ 9:30ಕ್ಕೆ ಕುದ್ರೋಳಿ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪದ್ಮರಾಜ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

Posted by Vidyamaana on 2024-02-02 12:12:35 |

Share: | | | | |


ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

ಬೆಂಗಳೂರು: ರಾಜ್ಯ ಬಜೆಟ್​ಗೂ ಮೊದಲೇ ಸರ್ಕಾರ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಬಿಗ್ ಶಾಕ್ ನೀಡಿದ್ದು, ಮತ್ತೆ ಬಿಯರ್​ ಬೆಲೆ ಏರಿಕೆಯಾಗಿದೆ.


ಹೌದು, ಸರ್ಕಾರ ಬಿಯ‌ರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ ಶೇ. 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಗುರುವಾರದಿಂದ (ಫೆ.1) ಪ್ರತಿ ಬಾಟಲ್ ಗೆ 5 ರಿಂದ 12 ರೂ. ವರೆಗೆ ಹೆಚ್ಚಳವಾಗಿದೆ.


ಬ್ರಾಂಡ್‌ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ. ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ಗಳ ದರದಲ್ಲಿ ಹೆಚ್ಚಳವಾಗಲಿದೆ.


ಬಿಯರ್ ಪ್ರಿಯರಿಗೆ ಹೊಸ ರೇಟ್


1. KF ಪ್ರಿಮಿಯಂ

ಹಿಂದಿನ ದರ ₹ 175

ಹೊಸ ದರ ₹185


2. ಕೆಎಫ್ ಸ್ಟ್ರಾಂಗ್

ಹಿಂದಿನ ದರ ₹ 180

ಹೊಸ ದರ ₹190


3. ಟ್ಯೂಬರ್ಗ್

ಹಿಂದಿನ ದರ ₹ 180

ಹೊಸ ದರ ₹190


4. ಬಡ್ ವೈಸರ್

ಹಿಂದಿನ ದರ ₹230

ಹೊಸ ದರ ₹240


5. ಕಾರ್ಲ್ಸ್ ಬರ್ಗ್

ಹಿಂದಿನ ದರ ₹230

ಹೊಸ ದರ ₹240


6. UB ಸ್ಟ್ರಾಂಗ್

ಹಿಂದಿನ ದರ ₹140

ಹೊಸ ದರ ₹150


7. KF ಸ್ಟಾರ್ಮ್

ಹಿಂದಿನ ದರ ₹175

ಹೊಸ‌ ದರ ₹195


8. ಹೆನಿಕೇನ್

ಹಿಂದಿನ ದರ ₹225

ಹೊಸ ದರ ₹240


9. ಆಯಮ್‌ಸ್ಟೆಲ್

ಹಿಂದಿನ ದರ ₹225

ಹೊಸ ದರ ₹240


10. ಪವರ್ ಕೂಲ್

ಹಿಂದಿನ ದರ ₹110

ಹೊಸ ದರ ₹130


ಮೇ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಚುನಾವಣೆ ಗೆದ್ದ ನಂತರ ಜುಲೈ 7 ರಂದು ಮಂಡಿಸಿದ ಮೊದಲ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿತ್ತು. ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದರ ನಂತರ ಇತರ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಬಹುದಾದ ಸಾಧ್ಯತೆಯಿದೆ

ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

Posted by Vidyamaana on 2024-05-14 07:19:38 |

Share: | | | | |


ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

ಉಡುಪಿ, ಮೇ 14: ಪಾರ್ಟ್‌ ಟೈಮ್‌ ಉದ್ಯೋಗದ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ. 


ಶಂಕರಪುರದ ಜೆನಿಫ‌ರ್‌ ಎಂಬ ಮಹಿಳೆಯ ಮೊಬೈಲ್‌ಗೆ ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಸಂದೇಶ ಬಂದಿತ್ತು. ಆನಂತರ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಮೂಲಕ ಲಿಂಕ್‌ ಕಳಿಸಿದ್ದು ಟೆಲಿಗ್ರಾಮ್‌ ಆ್ಯಪ್ ನಲ್ಲಿರುವ ಓಯಸಿಸ್‌ ಫೈನಾನ್ಸ್‌ ಎಂಬ ಗ್ರೂಪ್‌ಗೆ ಜಾಯಿನ್‌ ಆಗುವಂತೆ ತಿಳಿಸಿದ್ದ. ಅದರಂತೆ ಜೆನಿಫ‌ರ್‌ ಜಾಯಿನ್‌ ವಾಟ್ಸಪ್ ಗ್ರೂಪ್ ಜಾಯಿನ್ ಆಗಿದ್ದರು. ಟೆಲಿಗ್ರಾಮ್‌ ಗ್ರೂಪ್‌ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ ಜೆನಿಫ‌ರ್‌ನ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡಿದ್ದರು.

ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

Posted by Vidyamaana on 2023-12-19 21:10:16 |

Share: | | | | |


ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಂಡ ಕೃಷಿಕರಿಗೆ ಮಂಗಳವಾರ ಶುಭ ದಿನ ಯಾಕೆಂದರೆ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದ್ದು ಕೃಷಿಕರ ಮೊಗದಲ್ಲಿ ಸಂತಸದ ಕಳೆ ತುಂಬಿದೆ. ಈ ಸಂತಸಕ್ಕೆ ಕಾರಣರಾದವರು ಪುತ್ತೂರು ಶಾಸಕರು. ಬೆಳೆ ವಿಮೆ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ನೀಡಲಾಗಿದೆ ಎಂದು ಆರೋಪದ ಮಧ್ಯೆ ಕಳೆದ ಅಧಿವೇಶನದಲ್ಲಿ ಶಾಸಕರು ಈ ವಿಚಾರದಲ್ಲಿ ಸರಕಾರದ ಗಮನ ಸೆಳೆದಿದ್ದರು. ವಾರದೊಳಗೆ ವಿಮೆ ಪಾವತಿಯಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು. ಮಂಗಳವಾರದಂದು ವಿಮೆ ಮಾಡಿಸಿಕೊಂಡ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದೆ.


ಹವಾಮಾನ ಆಧಾರಿತ ಮತ್ತು ಬೆಳೆ ವಿಮೆ ಈ ಎರಡೂ ವಿಮೆಯನ್ನು ಕೃಷಿಕರು ಮಾಡಿಸಿಕೊಂಡಿದ್ದರು. ಹವಾಮಾನ ಆಧಾರಿತ ವಿಮೆಗೆ ಅಡಿಕೆ ಮತ್ತು ಬೆಳೆ ವಿಮಾ ವ್ಯಾಪ್ತಿಗೆ ಕಾಳುಮೆಣಸು ಒಳಪಟ್ಟಿತ್ತು. ಹೆಕ್ಟೇರ್‌ಗೆ ೬ ಸಾವಿರದಂತೆ ಕೃಷಿಕರು ವಿಮಾ ಮೊತ್ತವನ್ನು ಪಾವತಿಸಿದ್ದು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ವಿಮೆ ಮಂಜೂರಾಗಿದೆ.


೬ ಸಾವಿರ ವಿಮಾ ಕಂತು ಪಾವತಿಸಿದ ಕೃಷಿಕರ ಖಾತೆಗೆ ೪೦ ಸಾವಿರ ವಿಮಾ ಮೊತ್ತ ಜಮೆಯಾಗಿದ್ದು ದುಪ್ಪಟ್ಟು ಎಂದೇ ಹೇಳಲಾಗಿದೆ.


ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಕೆ ಒಳಪಟ್ಟಿದ್ದು ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಬೆಳೆ ನಷ್ಟ ಅನುಭವಿಸಿದ್ದರೆ ಅವರಿಗೆ ಸರಕಾರದಿಂದ ಹವಾಮಾನ ಆಧರಿತ ಬೆಳೆ ವಿಮೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಬೆಳೆ ವಿಮಾ ವ್ಯಾಪ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಕಾಳುಮೆಣಸು ಒಳಪಟ್ಟಿದ್ದು ಬೆಳೆ ವಿಮೆ ಮಾಡಿಸಿಕೊಂಡವರ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿದ್ದು ಕೃಷಿಕರು ಫುಲ್ ಖುಷಿಯಲ್ಲಿದ್ದಾರೆ.


ಹವಾಮಾನ ಆಧಾರಿತ ಬೆಳೆ ವಿಮೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೃಷಿಕರಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಈ ಭಾಗದ ಕೃಷಿಕರು ನನ್ನ ಗಮನಕ್ಕೆ ತಂದಿದ್ದರು. ಕಳೆದ ಅಧಿವೇಶನದಲ್ಲಿ ಈವಿಚಾರವನ್ನು ಸಚಿವರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ. ಒಂದು ವಾರದೊಳಗೆ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ಭರವಸೆಯನ್ನು ನೀಡಿದ್ದರು. ಅದರಂತೆ ಡಿ. ೧೯ ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮಾ ಪಾವತಿಯಾಗಿದೆ. ಕೃಷಿಕರಲ್ಲಿ ಸಂತಸದ ಅಲೆ ಇದೆ, ಕೃಷಿಕರು ಸಮೃದ್ದರಾದರೆ ಎಲ್ಲರಿಗೂ ಸಂತೋಷ. ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಸರಕಾರ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಪರಿಹಾರ ನೀಡಬಹುದು ಅಥವಾ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನಾದರೂ ಕಂಡು ಹಿಡಯಬಹುದು ಎಂಬ ವಿಶ್ವಾಸ ನನಗಿದೆ.

ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಹತ್ಯೆಯಾದ ಅಕ್ಷಯ್ ಕಲ್ಲೇಗ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

Posted by Vidyamaana on 2023-11-08 15:11:42 |

Share: | | | | |


ಹತ್ಯೆಯಾದ ಅಕ್ಷಯ್ ಕಲ್ಲೇಗ ಮನೆಗೆ  ಅರುಣ್ ಕುಮಾರ್ ಪುತ್ತಿಲ ಭೇಟಿ

ಪುತ್ತೂರು: ಸೋಮವಾರ ತಡರಾತ್ರಿ ಹತ್ಯೆಯಾದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಮನೆಗೆ ಅರುಣ್ ಪುತ್ತಿಲ ಭೇಟಿ ನೀಡಿದರು.


ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಅರುಣ್ ಕುಮಾರ್ ಪುತ್ತಿಲ ಇಂದು ಅಕ್ಷಯ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.


ಘಟನೆ ನಡೆದ ದಿನವೇ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ, ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ಆಗಬೇಕು ಎಂದ ಅವರು, ಮಾಧ್ಯಮಗಳಲ್ಲಿ ವರದಿಯಾದಂತೆ, ಪುತ್ತೂರಿನಲ್ಲಿ ಠಾಣೆಯ ಹಿಡಿತದಲ್ಲಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಇಲಾಖೆ ಆದಷ್ಟು ಶೀಘ್ರ ಪುತ್ತೂರಿನ ಸಿಸಿಟಿವಿಗಳನ್ನು ಸರಿ ಮಾಡಿ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು ಎಂದರು.

BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

Posted by Vidyamaana on 2024-04-09 17:51:34 |

Share: | | | | |


BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ( 2nd PUC Examination-1 Result ) ನಾಳೆ ಬೆಳಗ್ಗೆ 10 ಗಂಟೆಗೆ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ( School Education Department ) ತಿಳಿಸಿದೆ. ರಿಸಲ್ಟ್ ಹೇಗೆ ನೋಡಬೇಕು ಅನ್ನೋ ಬಗ್ಗೆ ಮುಂದೆ ಓದಿ.ಈ  ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ- ನ್ನು ದಿನಾಂಕ:01/03/2024 ರಿಂದ 22/03/2024 ರವರೆಗೆ ನಡೆಸಲಾಯಿತು ಎಂದಿದೆ.

Recent News


Leave a Comment: