ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಸುದ್ದಿಗಳು News

Posted by vidyamaana on 2024-07-26 08:10:52 |

Share: | | | | |


ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಪುತ್ತೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ವಿವೇಕಾನಂದ ಕಾಲೇಜು(ಸ್ವಾಯತ್ತ) ಪುತ್ತೂರು ಹಾಗೂ ಪತ್ರಿಕೋದ್ಯಮ ವಿಭಾಗ ಇದರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮವು ಜ 27 ಶನಿವಾರ ಅಪರಾಹ್ನ ಗಂಟೆ 2:00ರಿಂದ ಪುತ್ತೂರು ನೆಹರೂ ನಗರ ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ನಡೆಸಲಿದ್ದಾರೆ. ರಾಮದಾಸ್‌ ಶೆಟ್ಟಿ ವಿಟ್ಲ ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ.) ಪುತ್ತೂರು ತಾಲೂಕು ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಡಾ. ಆಶಾಲತಾ. ಪಿ. ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಗೋವಿಂದದಾಸ ಕಾಲೇಜು ಸುರತ್ಕಲ್ ಇವರು ಉಪನ್ಯಾಸ ನೀಡಲಿದ್ದಾರೆ

ವೇದಿಕೆಯಲ್ಲಿ ಪ್ರೊ.ವಿ.ಬಿ.ಅರ್ತಿಕಜೆ ಗೌರವ ಸಲಹೆಗಾರರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ಮತ್ತು ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರು ಇವರನ್ನು ಡಾ ಯು.ಪಿ. ಶಿವಾನಂದ ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆ ಪುತ್ತೂರು ಇವರು ಸನ್ಮಾನಿಸಲಿದ್ದಾರೆ.

Additional Image

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜುಬಿನ್ ಮೊಹಪಾತ್ರ ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ, ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ ಕ,ಮುರಳೀಕೃಷ್ಣ ಕೆ.ಎನ್ ಸಂಚಾಲಕರು, ವಿವೇಕಾನಂದ ಮಹಾವಿದ್ಯಾಲಯ ನೆಹರೂನಗರ ಪುತ್ತೂರು. ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಮುಖ್ಯಸ್ಥರು, ಕಹಳೆ ನ್ಯೂಸ್ ಚಾನೆಲ್ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 Share: | | | | |


ಬಟ್ಟೆ ಖರೀದಿಸುವ ನೆಪದಲ್ಲಿ ರೇಷ್ಮೆ ಸೀರೆ ಕಳ್ಳತನ: ನಾಲ್ವರು ಮಹಿಳೆಯರ ಬಂಧನ

Posted by Vidyamaana on 2024-09-04 05:13:32 |

Share: | | | | |


ಬಟ್ಟೆ ಖರೀದಿಸುವ ನೆಪದಲ್ಲಿ ರೇಷ್ಮೆ ಸೀರೆ ಕಳ್ಳತನ: ನಾಲ್ವರು ಮಹಿಳೆಯರ ಬಂಧನ

ಬೆಂಗಳೂರು : ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗಳಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶದ ವಿಜಯವಾಡದ ಜಾನಕಿ, ಪೊನ್ನುರು ಮಲ್ಲಿ, ಮೇಧ ರಜಿನಿ ಹಾಗೂ ವೆಂಕಟೇಶ್ವರಮ್ಮ ಎಂಬುವರನ್ನು ಬಂಧಿಸಿ, ₹17.5 ಲಕ್ಷ ಮೌಲ್ಯದ 38 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸಿಲ್ಕ್ ಹೌಸ್​ವೊಂದರಲ್ಲಿ ಆಗಸ್ಟ್‌ 25ರಂದು ಸೀರೆ ಖರೀದಿ ನೆಪದಲ್ಲಿ ಬಂದ ಆರು ಮಹಿಳೆಯರು, ದುಬಾರಿ ಬೆಲೆಯ ರೇಷ್ಮೆ ಸೀರೆ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಸೀರೆಗಳನ್ನು ತೋರಿಸುವಾಗಲೇ ಸಿಬ್ಬಂದಿಯ ಗಮನ ಬೇರೆಡೆ ಸೆಳೆದರು. ಇಬ್ಬರು ಮಹಿಳೆಯರು ತಾವು ಧರಿಸಿದ್ದ ಒಳ ಉಡುಪಿನಲ್ಲಿ ಎಂಟು ಹೊಸ ಸೀರೆ ಅಡಗಿಸಿಟ್ಟುಕೊಂಡು ಪರಾರಿಯಾದರು.

ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್‌ ಕೂಡಲೇ ನಿಲ್ಲಿಸಿ : ಸೌದಿ ದೊರೆ

Posted by Vidyamaana on 2023-10-21 09:54:38 |

Share: | | | | |


ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್‌ ಕೂಡಲೇ ನಿಲ್ಲಿಸಿ : ಸೌದಿ ದೊರೆ

ರಿಯಾದ್‌: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆಗ್ರಹಿಸಿದರು. ರಿಯಾದ್‌ನಲ್ಲಿ ನಡೆದ ಗಲ್ಫ್ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಮಾವೇಶದಲ್ಲಿ ಮಾತನಾಡಿದ ಅವರು, “ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತೀವ್ರ ದುಃಖವಾಗಿದೆ. ಘರ್ಷಣೆಯಲ್ಲಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್‌ ಕೂಡಲೇ ನಿಲ್ಲಿಸಬೇಕು. ಶಾಶ್ವತ ಶಾಂತಿ ಸಾಧಿಸುವ ನಿಟ್ಟಿನಲ್ಲಿ ಪ್ರತ್ಯೇಕ ಪ್ಯಾಲೆಸ್ತೀನ್‌ ರಾಷ್ಟ್ರ ಸ್ಥಾಪನೆಯಾಗಬೇಕು’ ಎಂದು ಒತ್ತಾಯಿಸಿದರು.


ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ರೀತಿಯಲ್ಲೂ ನಾಗರಿಕರನ್ನು ಗುರಿಯಾಗಿ ನಡೆಸುವ ದಾಳಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಮೊಹಮ್ಮದ್‌ ಬಿನ್‌ ಸಲ್ಮಾನ್‌ ಪ್ರತಿಪಾದಿಸಿದರು.

ಪುತ್ತೂರು : ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ : ಪುತ್ತಿಲ ಪರಿವಾರದಿಂದ ಸಹಾಯಹಸ್ತ

Posted by Vidyamaana on 2024-02-09 17:29:46 |

Share: | | | | |


ಪುತ್ತೂರು : ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ : ಪುತ್ತಿಲ ಪರಿವಾರದಿಂದ ಸಹಾಯಹಸ್ತ

ಪುತ್ತೂರು : ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಉಂಟಾದ ಕುಟುಂಬಕ್ಕೆ ಪುತ್ತಿಲ ಪರಿವಾರ ಸಹಾಯಹಸ್ತ ನೀಡಿದೆ.


ಪಡೀಲು ನಾರಾಯಣ ನಾಯ್ಕ್ ಮತ್ತು ಶಿವಪ್ರಸಾದ್ ನಾಯ್ಕ್ ಎಂಬವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟವಾಗಿದೆ.ಅವಘಡ ನಡೆದ ದಿನದಂದೆ ಅರುಣ್ ಕುಮಾರ್ ಪುತ್ತಿಲ ಹಾಗೂ ತಂಡ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಫೆ.9 ರಂದು ಅವರ ಮನೆಗೆ ಭೇಟಿ ನೀಡಿ ಸಹಾಯಹಸ್ತ ನೀಡಿದರು.ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ,ಚಂದ್ರಹಾಸ ಶೆಟ್ಟಿ ಆನೆಮಜಲು,ಸತೀಶ್ ಭಂಡಾರಿ,ಪ್ರವೀಣ್ ಭಂಡಾರಿ, ಮನೀಶ್ ಕುಲಾಲ್, ಶರತ್ ರೈ ಸ್ಥಳಿಯರಾದ ಚಂದ್ರಹಾಸ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

Posted by Vidyamaana on 2024-01-05 18:49:42 |

Share: | | | | |


ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ಗೆ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. (32) ಮೃತರು ಎಂದು ಗುರುತಿಸಲಾಗಿದೆ.ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

Posted by Vidyamaana on 2023-10-11 14:36:06 |

Share: | | | | |


ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

ಬೆಳ್ತಂಗಡಿ: ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಆಕ್ಟೋಬರ್ 10 ರಂದು ಸಂಜೆ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜಿನ ಭಜನಾ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾಗ ವ್ಯಕ್ತಿಯೊರ್ವ ಸ್ಥಳಕ್ಕೆ ತೆರಳಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಮುಂಡೂರಿನ ಆನಂದ ಆಚಾರ್ಯ (38) ಎಂಬಾತನು ಅಕ್ಟೋಬರ್ 10 ರಂದು ಸಂಜೆ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆಸುತ್ತಿದ್ದರು,ಪ್ರವಾಸಿಗರು ಕೂಡ ಇದ್ದರು. ಈ ಸಂದರ್ಭ ಅಲ್ಲಿಗೆ ತೆರಳಿ ಮಚ್ಚು ತೋರಿಸಿ, ಬೊಬ್ಬೆ ಹಾಕಿ ಬೆದರಿಕೆ ಹಾಕಿದ್ದು ಕೂಡಲೇ ಸ್ಥಳಿಯರು ವೇಣೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೋಲೀಸರು ಆಗಮಿಸಿ ಮಚ್ಚನ್ನು ವಶಪಡಿಸಿಕೊಂಡು.ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರಿನಲ್ಲಿ ಯುವತಿಯ ಕೊಲೆ ಪ್ರಕರಣ

Posted by Vidyamaana on 2023-08-24 13:18:04 |

Share: | | | | |


ಪುತ್ತೂರಿನಲ್ಲಿ ಯುವತಿಯ ಕೊಲೆ ಪ್ರಕರಣ

ಪುತ್ತೂರು: ಪುತ್ತೂರಿನಲ್ಲಿ ಯುವತಿಯೋರ್ವಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೃತ್ಯ ನಡೆದ ಒಂದೂವರೆಗಂಟೆಯೊಳಗೆ ಬಂಧಿಸಿರುವುದು ಶ್ಲಾಘನೀಯವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಪ್ರತಿಕ್ರಿಯಿಸಿದ್ದಾರೆ.

ಪುತ್ತೂರು ನಗರದಲ್ಲಿ ಹಾಡುಹಗಲೇ ನಡೆಯಬಾರದ ಘಟನೆ ನಡೆದಿರುವುದು ಅತ್ಯಂತ ದುಖದ ವಿಚಾರವಾಗಿದೆ. ಇಂಥಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರದಿಂದ ಇರಬೇಕಾಗುತ್ತದೆ. ತಮ್ಮ ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ನಾನು ಸಾಂತ್ವನವನ್ನು ಹೇಳುತ್ತಿದ್ದೇನೆ. ಪುತ್ತೂರು ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಅಪರಾಧ ಚಟವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ಸದಾ ಎಚ್ಚರದಿಂದ ಇದ್ದರೂ ಈ ಕೃತ್ಯ ನಡೆದಿದೆ. ಆರೋಪಿಯನ್ನು ಬಂಧಿಸುವಲ್ಲಿ ಮುತುವರ್ಜಿವಹಿಸಿದ ಜಿಲ್ಲಾ ಎಸ್ ಪಿ ಸಿ ಬಿ ರಿಷ್ಯಂತ್ ಹಾಗೂ ಡಿವೈಎಸ್‌ಪಿ ಗಾಣಾ ಪಿ ಕುಮಾರ್ ಹಾಗೂ ಪೊಲೀಸ್ ಇಲಾಖೆಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಶಾಸಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Recent News


Leave a Comment: