ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

Posted by Vidyamaana on 2023-11-05 21:52:52 |

Share: | | | | |


ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

ಬೆಂಗಳೂರು : ಆನೇಕಲ್ ಮುಗಳೂರು ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಪ್ರಕರಣಕ್ಕೆ ಹಿಂದೆ ಬಿದ್ದ ಖಾಕಿ ಪಡೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆಂಟಿಯ ಪ್ರೀತಿಸಲು ಹೋಗಿ ಯುವಕ ಹೆಣವಾಗಿ ಹೋಗಿದ್ದಾನೆ..ಈ ಕೇಸ್​ನಲ್ಲಿ ಮೃತನ ಪ್ರೇಯಸಿಯೇ ಆತನನ್ನು ಕೊಂದಿರುವ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುಗಳೂರು ಹೊಳೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಸಿಕ್ಕಿದ್ದು, ಈ ಪ್ರಕರಣ ಆಸುಪಾಸಿನ ಜನರನ್ನು ಆತಂಕಕ್ಕೀಡು ಮಾಡಿತ್ತು. ಆದರೀಗ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದು, ಮೃತ ಯುವಕನನ್ನು ಕೋಲಾರ ಮಾಲೂರು ತಾಲೂಕಿನ ಅಯ್ಯಪ್ಪನಗರದ 28 ವರ್ಷದ ಚೇತನ್ ಎಂದು ಗುರುತಿಸಲಾಗಿದೆ. ಮಾಲೂರು ಸೊನ್ನಾಪುರ ಗ್ರಾಮದ ಸತೀಶ್(30), ಶಶಿ(29), ಶೋಭಾ(28) ಕೊಲೆ ಆರೋಪಿಗಳಾಗಿದ್ದಾರೆ.


ಕಳೆದ ತಿಂಗಳು 26ನೇ ತಾರೀಖು ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ವೇಳೆ ಸಮೀಪದ ಮುಗಳೂರು ಬ್ರಿಡ್ಜ್ ತಡೆಗೋಡೆ ಮೇಲೆ ರಕ್ತದ ಕಲೆಗಳಿರುವುದು ಪತ್ತೆಯಾಗಿತ್ತು. ಆದ್ರೆ ಅಂದು ಮೃತನ ಗುರುತು ಪತ್ತೆಯಾಗಿರಲಿಲ್ಲ. ಸರ್ಜಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇದಾದ ಬಳಿಕವೇ ಯುವಕನ ಮರ್ಡರ್ ಕಹಾನಿ ಬಯಲಿಗೆ ಬಂದಿದೆ.ಮೃತ ಚೇತನ್ ಗಂಡ ಬಿಟ್ಟಿದ್ದ ಮಹಿಳೆ ಜೊತೆ ಸಹಜೀವನ ಆರಂಭಿಸಿದ್ದು, ಕಳೆದ ಎಂಟು ತಿಂಗಳಿಂದ ಇಬ್ಬರೂ ಒಟ್ಟಿಗಿದ್ದರೆನ್ನಲಾಗಿದೆ. ಈ ನಡುವೆ ಚೇತನ್ ಮೂಲಕ ಸತೀಶ್ ಪರಿಚಯವಾಗಿದ್ದು, ಸಿರಿವಂತ ಸತೀಶ್ ಮೇಲೆ ಶೋಭಾ ಕಣ್ಣು ಬಿದ್ದಿದೆ. ಕೆಲವೇ ದಿನಗಳಲ್ಲಿ ಶೋಭಾಗಾಗಿ ಆತ ಲಕ್ಷ ಲಕ್ಷ ಖರ್ಚು ಮಾಡಿದ್ದ. 25 ಲಕ್ಷ ಖರ್ಚು ಮಾಡಿದ್ದ ಆತ ಶೋಭಗಾಗಿ ಬ್ಯೂಟಿ ಪಾರ್ಲರ್ ಆರಂಭ ಮಾಡಿದ್ದ. ಆದರೆ ಇಬ್ಬರ ನಡುವಿನ ಈ ಆಪ್ತತೆಗೆ ಚೇತನ್ ಅಡ್ಡಿಯಾಗಿದ್ದ.


ತಮ್ಮ ಈ ಸಂಬಂಧಕ್ಕೆ ಅಡ್ಡಿಯಾದ ಚೇತನ್​ ಆಟ ಮುಗಿಸಲು ಶೋಭಾ ಪ್ಲಾನ್ ಮಾಡಿದ್ದಾಳೆ. ನಂತರ ಒಂದು ದಿನ ಎಣ್ಣೆ ಪಾರ್ಟಿ ನಡೆದಿದೆ. ಹೊಸಕೋಟೆ ಐಶ್ವರ್ಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಚೇತನ್‍ನನ್ನು ಮಚ್ಚಿನಿಂದ ಹೊಡೆದು ಮುಗಳೂರು ಹೊಳೆಗೆ ಎಸೆದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಈ ಹಿಂದೆ ಅತ್ತಿಬೆಲೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ  ಶೋಭಾ, ಈ ಬಾರಿ ತನ್ನ ಮಾಸ್ಟರ್ ಪ್ಲಾನ್ ನಿಂದಾಗಿ ಇಬ್ಬರ ಭವಿಷ್ಯ ಹಾಳು ಮಾಡಿದ್ದಾಳೆ. ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ಔಟಾ ಅಥವಾ ನಾಟೌಟಾ?

Posted by Vidyamaana on 2024-05-19 07:56:34 |

Share: | | | | |


ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ಔಟಾ ಅಥವಾ ನಾಟೌಟಾ?

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ಕಿಂಗ್ಸ್​ ನಡುವಿನ ನಾಕೌಟ್​ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆಯೂ 27 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇಆಫ್​ ಪ್ರವೇಶಿಸಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ಮತ್ತೊಮ್ಮೆ ಕಳಪೆ ಅಂಪೈರಿಂಗ್​ ಕಂಡು ಬಂದಿದ್ದು, ಈ ಬಗ್ಗೆ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ದಾರೆ.ಅಂಪೈರ್​ನ ವಿವಾದಾತ್ಮಕ ತೀರ್ಪಿನ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಚಾರವನ್ನು ಮುಂದಿಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ.ಆರ್​ಸಿಬಿ ಬ್ಯಾಟಿಂಗ್​ ವೇಳೆ ಮಿಚೆಲ್​ ಸ್ಯಾಂಟ್ನರ್​ ಎಸೆದ 13ನೇ ಓವರ್​ನಲ್ಲಿ ರಜತ್​ ಪಾಟೀದಾರ್​ ಬಾರಿಸಿದ ಚೆಂಡು ಬೌಲರ್​ ಕೈತಾಗಿ ನಾನ್​ಸ್ಟ್ರೈಕ್​ ಎಂಡ್​ನಲ್ಲಿದ್ದ ಸ್ಟಂಪ್ಸ್​ ತಾಗುತ್ತದೆ. ಈ ವೇಳೆ ಕ್ರೀಸ್​ ಬಿಟ್ಟು ಒಂದು ಹೆಜ್ಜೆ ಮುಂದಿದ್ದ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಕೂಡಲೇ ಹಿಂತಿರುಗಿ ತಮ್ಮ ಬ್ಯಾಟನ್ನು ಕ್ರೀಸ್​ನೊಳಗೆ ಇರಿಸುತ್ತಾರೆ. ಇದನ್ನು ಪರಿಶೀಲಿಸುವಂತೆ ಆನ್​ಫೀಲ್ಡ್​ ಅಂಪೈರ್​ ಥರ್ಡ್​ ಅಂಪೈರ್​ಗೆ ಮನವಿ ಮಾಡುತ್ತಾರೆ. ಇದನ್ನು ಪರಿಶೀಲಿಸಿದ ಥರ್ಡ್​ ಅಂಪೈರ್ ಮೈಕೆಲ್​ ಗೋಫ್​ ಔಟ್​ ಎಂದು ತೀರ್ಪು ನೀಡುತ್ತಾರೆ. ಮೂರನೇ ಅಂಪೈರ್​ನ ಈ ತೀರ್ಪಿಗೆ ಆರ್​ಸಿಬಿ ನಾಯಕ ಫಾಫ್​ ಸೇರಿದಂತೆ ಸಹ ಆಟಗಾರರು ಅಸಮಾಧಾನ ಹೊರಹಾಕುತ್ತಾರೆ.

ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ ಬೊಮ್ಮಾಯಿ ಸೋಮಣ್ಣ

Posted by Vidyamaana on 2023-11-17 12:35:00 |

Share: | | | | |


ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ ಬೊಮ್ಮಾಯಿ ಸೋಮಣ್ಣ

ಬೆಂಗಳೂರು: ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಹದಿನೆಂಟನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ‌ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿ.ಸೋಮಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.ಮೂವರು ನಾಯಕರು ಒಂದೇ ವೇದಿಕೆ ಹಂಚಿಕೊಂಡಿರುವುದು ವಿಧಾನಸಭಾ ಚುನಾವಣೆಯ ಬಳಿಕ ಇದೇ ಮೊದಲು.‌ 


ವಿ.ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅದಾದ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸೋಮಣ್ಣ ಬಿಜೆಪಿಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ, ಬಿ.ವೈ.ವಿಜಯೇಂದ್ರ ಆಯ್ಕೆಯಿಂದ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 


ಸೋಮಣ್ಣನ ಮೇಲೆ ನನಗೆ ದ್ವೇಷ ಇಲ್ಲ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, "ಸೋಮಣ್ಣ ಮತ್ತು ಬೊಮ್ಮಾಯಿ ಅವರನ್ನು ಹೊಗಳಿದರು. ನಾನು ಸೋಮಣ್ಣ, ಬೊಮ್ಮಾಯಿ ಒಂದೇ ಪಕ್ಷದಲ್ಲಿ ಇದ್ದೆವು. ಆಗ ಬಹಳ ಪ್ರೀತಿ, ವಿಶ್ವಾಸ ಇತ್ತು. ಈಗಲೂ ಬೊಮ್ಮಾಯಿಯವರ ಜತೆ ಅದೇ ಪ್ರೀತಿ ಇದೆ. ವೈಯಕ್ತಿಕವಾಗಿ ಬೊಮ್ಮಾಯಿಯವರ ತಂದೆ ನನಗೆ ಬಹಳ ಸಹಾಯ ಮಾಡಿದ್ದಾರೆ. ಇವರಿಗೆ ನನ್ನ ಮೇಲೆ ಆಂತರಿಕ ಪ್ರೀತಿ ಇದೆ. ಸೋಮಣ್ಣ ವರುಣಾದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ. ಆದರೂ ಸೋಮಣ್ಣನಿಗೂ ನನ್ನ ಮೇಲೆ ಪ್ರೀತಿ ಇದೆ.‌ ಪಾಪ ಹೈಕಮಾಂಡ್ ಹೇಳಿದ್ರು ಅಂತ ನನ್ನ ವಿರುದ್ಧ ನಿಂತ್ಕೊಂಡಿದ್ದ" ಎಂದರು. 


ಸಿದ್ದರಾಮಯ್ಯ ಅತ್ಯಂತ ಆತ್ಮೀಯರು: ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದ ವಿ.ಸೋಮಣ್ಣ, "ಆಡಳಿತ, ವಿಪಕ್ಷ ಅನ್ನೋದು ಇಲ್ಲ. ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತ ರಾಜಕೀಯದಲ್ಲಿ ಉತ್ತಮ ಬಾಂಧವ್ಯ ಇದೆ. ನನಗೆ ಸಿದ್ದರಾಮಯ್ಯ ಮತ್ತು ಬೊಮ್ಮಾಯಿಯವರು ಅತ್ಯಂತ ಆತ್ಮೀಯರು.ಜನತಾ ಪಕ್ಷದಲ್ಲಿ ಇದ್ದವರು ನಾವು. ಈಗ ಎಲ್ಲೇ ಇದ್ರೂ ನಮ್ಮದೇ ನೀತಿ ತತ್ವದಡಿ ಸಣ್ಣ ಅಪಚಾರವೂ ಇಲ್ಲದೇ ಬದುಕುತ್ತಿದ್ದೀವಿ" ಎಂದು ತಿಳಿಸಿದರು. 


ಕಾಂಗ್ರೆಸ್ ಸೇರುವ ಅವಶ್ಯಕತೆ ಈಗಿಲ್ಲ: "ಪಕ್ಷಕ್ಕೆ ನನ್ನದೂ ದುಡಿಮೆ,‌ ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದೆ ತಿಳಿಸುತ್ತೇನೆ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ ಕಾಂಗ್ರೆಸ್ ಸೇರುವ ಅವಶ್ಯಕತೆ ನನಗೆ ಈಗಿಲ್ಲ" ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮೂರು ದಿನ ಹಗುರ ಮಳೆ ಸಾಧ್ಯತೆ

Posted by Vidyamaana on 2023-08-19 06:20:40 |

Share: | | | | |


ರಾಜ್ಯದಲ್ಲಿ ಮೂರು ದಿನ ಹಗುರ ಮಳೆ ಸಾಧ್ಯತೆ

ಬೆಂಗಳೂರು :-ನಿನ್ನೆಯಿಂದ ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇದರಿಂದ ತಾಪಮಾನ ಇಳಿಕೆಯಾಗಿದ್ದು, ತಂಪಾದ ವಾತಾವರಣ ಕಂಡುಬರುತ್ತಿದೆ. ಕಳೆದ ಮೂರು ವಾರಗಳಿಂದ ಮಳೆಯಿಲ್ಲದೆ ಒಣಹವೆ ಮುಂದುವರೆದಿದ್ದರಿಂದ ಗರಿಷ್ಟ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿತ್ತು.ಇದರಿಂದ ಬೇಸಿಗೆಯ ವಾತಾವರಣವನ್ನು ನೆನಪಿಸುವಂತಾಗಿತ್ತು.


ವಾತಾವರಣದಲ್ಲಿ ಬದಲಾವಣೆಯಾಗಿದ್ದು, ನಿನ್ನೆಯಿಂದ ಮೋಡ ಕವಿದ ವಾತಾವರಣ ಹಾಗು ತಂಪಾದ ಗಾಳಿ ಬೀಸುತ್ತಿದೆ. ಇದೇ ರೀತಿಯ ವಾತಾವರಣ ಆ.21ರವರೆಗೂ ಮುಂದುವರೆಯಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಯಾವುದೇ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ಮೋಡ ಮುಸುಕಿದ ವಾತಾವರಣ ಇರುವುದರಿಂದ ತಾಪಮಾನದಲ್ಲಿ ಇಳಿಕೆಯಾಗಿದೆ.  ಗಾಳಿ ಹಾಗು ತುಂತುರು ಮಳೆ ಸೋಮವಾರದವರೆಗೂ ಮುಂದುವರೆಯುವ ಲಕ್ಷಣಗಳಿವೆ. ಮತ್ತೆ ಮಂಗಳವಾರದಿಂದ ಒಣಹವೆ ಮುಂದುವರೆಯಲಿದೆ ಎಂದರು.


ಆ.23ರಿಂದ ಮತ್ತೆ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಆನಂತರ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಲಿದೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಲಾಗರ್‌ ಸ್ವಾತಿಕೃಷ್ಣ ಅರೆಸ್ಟ್

Posted by Vidyamaana on 2024-01-13 04:46:08 |

Share: | | | | |


ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಲಾಗರ್‌ ಸ್ವಾತಿಕೃಷ್ಣ ಅರೆಸ್ಟ್

ಕೊಚ್ಚಿ : ಕೇರಳದ ಎರ್ನಾಕುಲಂ ಕಾಲಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ವ್ಲಾಗರ್ ರನ್ನು ಬಂಧಿಸಿದ್ದಾರೆ.ಕುನ್ನತ್ತುನಾಡು ಮೂಲದ ಸ್ವಾತಿ ಕೃಷ್ಣ (28) ಬಂಧಿತ ಆರೋಪಿಯಾಗಿದ್ದು ಅಬಕಾರಿ ವಿಶೇಷ ತಂಡ ಬಂಧಿಸಿದೆ.ಆಕೆಯಿಂದ 2.78 ಗ್ರಾಂ ಎಂಡಿಎಂಎ ಹಾಗೂ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾಲಡಿ ಅಬಕಾರಿ ನಿರೀಕ್ಷಕ ಸಿಜೋ ವರ್ಗೀಸ್ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ.ಪೊಲೀಸರ ಪ್ರಕಾರ ಸ್ವಾತಿ ಕೃಷ್ಣ ಕಾಲೇಜು ವಿದ್ಯಾರ್ಥಿಗಳಿಗೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಕಳೆದ ಕೆಲ ದಿನಗಳಿಂದ ಅಬಕಾರಿ ಇಲಾಖೆ ನಿಗಾದಲ್ಲಿದ್ದಳು.

ಕಾರ್ಕಳ: ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಹೊಡೆದ ಆರೋಪ; ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-09-07 11:46:29 |

Share: | | | | |


ಕಾರ್ಕಳ: ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಹೊಡೆದ ಆರೋಪ; ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಶಾಲಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಪ್ರಾಂಶುಪಾಲರು ಹೊಡೆದಿದ್ದಾರೆ ಎಂದು ಪ್ರಿನ್ಸ್ ಪಾಲ್ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.


ಮೈಸೂರು ಮೂಲದ ವೆರೋನಿಕಾ ಎಂಬವರ ಮಕ್ಕಳಾದ ಆಯಂಟೋನಿ ಜೀವನ್ ಹಾಗೂ ಮರಿಯನ್ ಕೆವಿನ್ ಎಂಬವರು ಈದು ಗ್ರಾಮದ ಬೊಟ್ಟು ಗುರುಕುಲ ಸೆಂಟ್ರಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಇವರಿಬ್ಬರು ಶಾಲಾ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು.ಸೆ.2ರಂದು ಶಾಲಾ ಪ್ರಾಂಶುಪಾಲ ರೋಹಿತ್, ಹಾಸ್ಟೆಲ್‌ನ ಕೊಠಡಿಯಲ್ಲಿ ಬೆಡ್ ಮೇಲೆ ಗಲಾಟೆ ಮಾಡಿದ ಕಾರಣಕ್ಕಾಗಿ 7ನೇ ತರಗತಿಯ ವಿದ್ಯಾರ್ಥಿ ಮರಿಯನ್ ಕೆವಿನ್‌ಗೆ ಬೆತ್ತದಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: