ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಜೋರು ಮಳೆಗೆ ರಜೆ ನಡುವೆ ಚಿಣ್ಣರಿಗೆ ಇನ್ನೊಂದು ಗುಡ್ ನ್ಯೂಸ್

Posted by Vidyamaana on 2023-07-06 03:59:05 |

Share: | | | | |


ಜೋರು ಮಳೆಗೆ ರಜೆ ನಡುವೆ ಚಿಣ್ಣರಿಗೆ ಇನ್ನೊಂದು ಗುಡ್ ನ್ಯೂಸ್

ಬೆಂಗಳೂರು: ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಬ್ಯಾಗ್ ರಹಿತವಾಗಿ ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ’ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.ಇತ್ತೀಚೆಗಷ್ಟೇ ಶಾಲಾ ಬ್ಯಾಗ್‌ತೂಕ ಇಳಿಸಿ ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ, ಇದೀಗ ಸಂಭ್ರಮ ಶನಿವಾರ ಆದೇಶ ಹೊರಡಿಸಿದೆ.ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ ಪ್ರತಿ ತಿಂಗಳು 3ನೇ ಶನಿವಾರ ಶಾಲಾ ಹಂತದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚನೆ ನೀಡಿದೆ.ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್‌ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.ಈ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುವ ಮುಖ್ಯ ಶಿಕ್ಷಕರು ಶಿಕ್ಷಕರ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.ಸಂಭ್ರಮ ಶನಿವಾರ ದಂದು ಜಿಲ್ಲಾ ಹಂತ, ಬ್ಲಾಕ್ ಹಂತದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ. 2023-24ನೇ ಶೈಕ್ಷಣಿಕ ಸಾಲಿನ ‘ಸಂಭ್ರಮ ಶನಿವಾರ’ ಆಚರಣೆಗೆ ಸಂಬಂಧಿಸಿದ ಜಿಲ್ಲಾ ಹಂತದ ಕ್ರೋಡೀಕೃತ ವರದಿಯನ್ನು ಪ್ರತಿ ತಿಂಗಳು ಸಿದ್ಧಪಡಿಸಿ ಕಚೇರಿಗೆ ಕಳುಹಿಸಿಕೊಡುವಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ. ವಿದ್ಯಾರ್ಥಿ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಕೈಪಿಡಿಯನ್ನು ಡಿಎಸ್‌ಇಆರ್‌ಟಿ ವೆಬ್‌ಸೈಟ್ https://dsert.karnataka.gov.in/ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿಸೋಜಾ

Posted by Vidyamaana on 2024-08-27 16:36:42 |

Share: | | | | |


ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿಸೋಜಾ

ಪುತ್ತೂರು : ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟ‌ರ್ ಆಗಿ ಜಾನ್ಸನ್ ಕಿರಣ್ ಡಿಸೋಜ ನೇಮಕಗೊಂಡಿದ್ದಾರೆ.ಮೂಲತಃ ಸಾಗರ ನಿವಾಸಿಯಾಗಿರುವ ಜಾನ್ಸನ್ ಕಿರಣ್ ಡಿಸೋಜ ದ.ಕ.ಜಿಲ್ಲೆಯ ಹಲವು ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು

ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭ

Posted by Vidyamaana on 2024-05-01 15:56:14 |

Share: | | | | |


ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭ

ಪುತ್ತೂರು :ಪುತ್ತೂರಿನ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ದಾಖಲಾತಿ ಪ್ರಾರಂಭಗೊಂಡಿದೆ.

ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ , ಡಿಪ್ಲೋಮಾ ಇನ್ ಆಪರೇಷನ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಡಿಪ್ಲೋಮಾ ಇನ್ ಆಪ್ತಲ್ಮಿಕ್ ಟೆಕ್ನಾಲಜಿ ಹಾಗೂ ಬಿ ಎಸ್ಸಿ  ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ , ಬಿ ಎಸ್ಸಿ ಆಪರೇಷನ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಬಿಎಸ್ಸಿ ಎಮರ್ಜೆನ್ಸಿ ಅಂಡ್ ಟ್ರಾಮಾ ಕೇರ್ ಕೋರ್ಸ್ ಗಳಿಗೆ 2024 -25 ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ.

ಕರಾವಳಿಯ ಸಾರಿಗೆ ಕ್ಷೇತ್ರದಲ್ಲಿ 50 ವರ್ಷಗಳ ಬಸ್ ಸಂಚಾರ ಸೇವೆಯ ಸಾಧನೆ

Posted by Vidyamaana on 2023-10-01 21:28:45 |

Share: | | | | |


ಕರಾವಳಿಯ ಸಾರಿಗೆ ಕ್ಷೇತ್ರದಲ್ಲಿ 50 ವರ್ಷಗಳ ಬಸ್ ಸಂಚಾರ ಸೇವೆಯ ಸಾಧನೆ

ಮಂಗಳೂರು, ಅ.1: ಮಂಗಳೂರಿನಲ್ಲಿ ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮದ ಮೂಲಕ ಹೆಸರು ಮಾಡಿದ್ದ ಪ್ರಕಾಶ್ ಶೇಖ (43) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


50 ವರ್ಷಗಳ ಹಿಂದೆಯೇ 1972ರ ವೇಳೆಗೆ ಜಯರಾಮ ಶೇಖ ಅವರು ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದರು. ಮೊದಲಿಗೆ ಜ್ಯೋತಿ ಎಂದಿದ್ದ ಹೆಸರನ್ನು ಬಳಿಕ ಎರಡನೇ ಮಗ ಮಹೇಶ್ ಹೆಸರಿಗೆ ಬದಲಿಸಿದ್ದರು.‌  ಆರಂಭದಿಂದಲೇ ಮಂಗಳೂರಿನಿಂದ ಕೊಣಾಜೆ ರೂಟಿನಲ್ಲಿ ಬಸ್ ಉದ್ಯಮ ಆರಂಭಿಸಿದ್ದರು. ಆನಂತರ ಇತರ ರೂಟಿನಲ್ಲೂ ಮಹೇಶ್ ಬಸ್ ಸಂಚಾರ ಆರಂಭಿಸಿತ್ತು. ಮೂರನೇ ಮಗ ಪ್ರಕಾಶ್ ಶೇಖ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ ವ್ಯವಹಾರ ವಿಸ್ತರಣೆಯಾಗಿತ್ತು.‌


ಕಳೆದ 15 ವರ್ಷಗಳಲ್ಲಿ ಮಹೇಶ್ ಹೆಸರಲ್ಲಿ ಟೂರಿಸ್ಟ್ ಉದ್ಯಮ, ಟಿಪ್ಪರ್, ಸಿಮೆಂಟ್ ಮಿಕ್ಸರ್ ಲಾರಿ ಹೀಗೆ ಹಲವಾರು ವ್ಯವಹಾರ ಮಾಡಿಕೊಂಡಿದ್ದರು. ಹಿರಿಯ ಪುತ್ರರಿಬ್ಬರು ಬೆಂಗಳೂರು, ಮುಂಬೈನಲ್ಲಿ ನೆಲೆಸಿದ ಬಳಿಕ ಪೂರ್ತಿ ಬಸ್ ಉದ್ಯಮದ ವ್ಯವಹಾರವನ್ನು ಪ್ರಕಾಶ್ ಅವರೇ ನೋಡಿಕೊಂಡಿದ್ದರು. ಆಪ್ತರ ಪ್ರಕಾರ, ನೂರಕ್ಕೂ ಹೆಚ್ಚು ಬಸ್ ಗಳು ಅವರ ಒಡೆತನದಲ್ಲಿದ್ದವು. ಹಲವಾರು ಬಸ್ ಗಳನ್ನು ಬೇರೆ ಬೇರೆ ಕಡೆ ಖಾಸಗಿಯಾಗಿ ಕಾಂಟ್ರಾಕ್ಟ್ ಕೊಟ್ಟಿದ್ದರು. ಪ್ರಕಾಶ್ ಅವರು ಪತ್ನಿ ಮಕ್ಕಳ ಜೊತೆಗೆ ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದರು. 80ರ ಹರೆಯದ ಜಯರಾಮ ಶೇಖ ಕುಲಶೇಖರದ ನಿವಾಸದಲ್ಲಿಯೇ ನೆಲೆಸಿದ್ದಾರೆ. 


ಇಂದು ಬೆಳಗ್ಗೆ ಹೊರಗೆ ಹೋಗಿ ಬಂದಿದ್ದ ಪ್ರಕಾಶ್ ಮತ್ತೆ ಬೆಡ್ ರೂಮಿಗೆ ತೆರಳಿದ್ದರು. ಮಧ್ಯಾಹ್ನ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪತ್ನಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ.

ಬಸ್ ಮಾಲಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ, ಪ್ರಕಾಶ್ ತುಂಬ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ತಂದೆಯ ಕಾಲದಿಂದಲೂ ಒಡನಾಟ ಇದೆ. ಜಿಲ್ಲಾ ಬಸ್ ಮಾಲಕರ ಸಂಘ ಗಾಢ ಶೋಕ ವ್ಯಕ್ತಪಡಿಸುತ್ತದೆ ಎಂದಿದ್ದಾರೆ


ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ, ದಿಲ್‌ರಾಜ್‌ ಆಳ್ವ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಅಂತ್ಯಕ್ರಿಯೆ ಅ.2ರಂದು ಸಂಜೆ 4ಕ್ಕೆ ಕುಲಶೇಖರದಲ್ಲಿರುವ ಅವರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

BREAKING: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 11 ಸದಸ್ಯರು ಅವಿರೋಧವಾಗಿ ಆಯ್ಕೆ

Posted by Vidyamaana on 2024-06-06 16:46:38 |

Share: | | | | |


BREAKING: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 11 ಸದಸ್ಯರು ಅವಿರೋಧವಾಗಿ ಆಯ್ಕೆ

ಬೆಂಗಳೂರು : ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಸದಸ್ಯರ ಆಯ್ಕೆಗಾಗಿ ಚುನಾವಣೆ ಘೋಷಣೆಯಾಗಿತ್ತು. ಈ ಚುನಾವಣೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಪ್ರಕಟವಾದಂತ ಚುನಾವಣಾ ಫಲಿತಾಂಶದಲ್ಲಿ ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶೇರ್ ಯುವರ್ ಗ್ಲೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Posted by Vidyamaana on 2023-08-18 14:58:21 |

Share: | | | | |


ಶೇರ್ ಯುವರ್ ಗ್ಲೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಿದ `ಶೇರ್ ಯುವರ್ ಗ್ಲೋ’ ಫೊಟೋ ಸ್ಪರ್ಧೆಯಲ್ಲಿ ವಿಜೇತರಾದ ಧನ್ಯ ಕಿರಣ್ ಶೆಟ್ಟಿ ಅವರಿಗೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಜಿ.ಎಲ್. ಬಲರಾಮ್ ಆಚಾರ್ಯ ಅವರು 5000 ರೂ. ಮೌಲ್ಯದ ಗಿಫ್ಟ್ ವೋಚರ್ ನೀಡಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

Recent News


Leave a Comment: