ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಕರುಣಾಕರ ಮತ್ತು ಉಪಾಧ್ಯಕ್ಷರಾಗಿ ಸಂಗೀತ ಪಾಣೆಮಜಲು ಆಯ್ಕೆ

Posted by Vidyamaana on 2024-09-02 18:45:08 |

Share: | | | | |


ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಕರುಣಾಕರ  ಮತ್ತು ಉಪಾಧ್ಯಕ್ಷರಾಗಿ ಸಂಗೀತ ಪಾಣೆಮಜಲು ಆಯ್ಕೆ

ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ವಿಟ್ಲ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ.

ಪುತ್ತೂರು ಸರಕಾರಿ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಗೆ ಚೂರಿ ಇರಿತ ಆಸ್ಪತ್ರೆಗೆ ದಾಖಲು!

Posted by Vidyamaana on 2024-08-20 13:38:42 |

Share: | | | | |


ಪುತ್ತೂರು ಸರಕಾರಿ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಗೆ ಚೂರಿ ಇರಿತ ಆಸ್ಪತ್ರೆಗೆ ದಾಖಲು!

ಪುತ್ತೂರು : ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ಯುವಕ ಚೂರಿಯಿಂದ ಇರಿದ ಘಟನೆ ಆ 20 ರಂದು ನಡೆದಿದೆ.

ಬನ್ನೂರು ಮೂಲದ ಪುತ್ತೂರು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗೆ,ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದಿದ್ದು, ಗಾಯಗೊಂಡ ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ: SDPI ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

Posted by Vidyamaana on 2023-05-01 11:09:01 |

Share: | | | | |


ಬೆಳ್ತಂಗಡಿ: SDPI ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

.

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರ ಪರವಾಗಿ ಬೆಳ್ತಂಗಡಿ ತಾಲೂಕಿನ ಲಾಯಿಲ, ಗುರುವಾಯನಕೆರೆ, ಪಡಂಗಡಿ, ಕಲ್ಲೇರಿ, ಕುಪ್ಪೆಟ್ಟಿ, ಸುನ್ನತ್ ಕೆರೆ, ಚಾರ್ಮಾಡಿ, ಕಕ್ಕಿಂಜೆ, ಪುಂಜಾಲಕಟ್ಟೆ, ಕಟ್ಟೆ, ಕಾಜೂರು ಪ್ರದೇಶಗಳಲ್ಲಿ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. 

ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

Posted by Vidyamaana on 2023-08-19 14:25:24 |

Share: | | | | |


ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

ಪುತ್ತೂರು: ಅಭಿರಾಮ್‌ ಫ್ರೆಂಡ್ಸ್‌ (ರಿ.) ಪುತ್ತೂರು ಇದರ ವತಿಯಿಂದ ಹಿರಿಯ ಪ್ರಾ. ಶಾಲೆ ಕೃಷ್ಣನಗರ ಹಾಗೂ ಕೇಪುಳು, ನೆಲ್ಲಿಕಟ್ಟೆ, ರೋಟರಿಪುರ, ಕೆಮ್ಮಾಯಿ ಗುಂಡಿಜಾಲು, ಬೀರ್ನಹಿತ್ಲು ಅಂಗನವಾಡಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿತಿಂಡಿ ವಿತರಿಸಿದರು.

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಗೆ ಚಯರ್‌, ಟೇಬಲ್‌ ವಿತರಣೆ:

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಯ ಮಕ್ಕಳಿಗೆ ನಲಿ-ಕಲಿಗೆ ಬೇಕಾದಂತಹ‌ ಮೂರು ಟೇಬಲ್‌ ಹಾಗೂ 15 ಚಯರ್ ಗಳನ್ನು ಅಭಿರಾಮ್‌ ಫ್ರೆಂಡ್ಸ್‌ (ರಿ.)ನ  ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಅಭಿರಾಮ್‌ ಫ್ರೆಂಡ್ಸ್‌ (ರಿ.)ನ ಅಧ್ಯಕ್ಷ ತೇಜಕುಮಾರ್‌ ಕೆಮ್ಮಾಯಿ, ಕಾರ್ಯದರ್ಶಿ ಸನತ್‌ ಸುವರ್ಣ, ಉಪಾಧ್ಯಕ್ಷರಾದ ಪ್ರಜೀತ್ ಮಂಜಲ್ಪಡ್ಪು, ಹರ್ಷಿತ್‌ ರಾಮ್‌ ಬಳ್ಳಾಲ್‌, ಖಜಾಂಜಿ ಜಯೇಶ್‌ ಹಾಗೂ ಸದಸ್ಯರಾದ ಶರತ್‌ ಕೇಪುಳು, ರಮೇಶ್‌ ಬಂಡಾಜೆ, ಭರತ್‌, ಚಿದಾನಂದ ಕೇಪುಳು, ರಾಜೇಶ್‌ ಜಿಡೆಕಲ್ಲು, ಕಾರ್ತಿಕ್‌ ಊರಮಾಲು, ಕಿಶೋರ್‌ ತಾರಿಗುಡ್ಡೆ, ಪ್ರದೀಪ್‌ ಕೇಪುಳು, ಅವಿನಾಶ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ, ಕಾರ್ತಿಕ್ ಚಿಕ್ಕಪುತ್ತೂರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಬನ್ನೂರು ಗ್ರಾ, ಪಂ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಮಕ್ಕಳ ಪೋಷಕರು, ಊರುವರು ಉಪಸ್ಥಿತರಿದ್ದರು.

ಕೈರೋ:ಮಸೀದಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted by Vidyamaana on 2023-06-27 07:44:29 |

Share: | | | | |


ಕೈರೋ:ಮಸೀದಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಕೈರೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಬೊಹ್ರಾ ಸಮುದಾಯದಿಂದ ಪುನಃಸ್ಥಾಪಿಸಲಾದ ಕೈರೋದಲ್ಲಿರುವ ಈಜಿಪ್ಟ್​ನ 11ನೇ ಶತಮಾನದ ಐತಿಹಾಸಿಕ ಅಲ್​-ಹಕೀಮ್​​ ಮಸೀದಿಗೆ ಭೇಟಿ ನೀಡಿದ್ದಾರೆ.ಅಮೆರಿಕದಿಂದ ನೇರವಾಗಿ ಈಜಿಪ್ಟ್‌ಗೆ 2 ದಿನ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾವಿರ ವರ್ಷ ಹಳೆಯದಾದ ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಿದರು. ಈ ಕುರಿತಾದ ಕೆಲವು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆಸಾವಿರಾರು ವರ್ಷಗಳಷ್ಟು ಹಳೆಯದಾದ ಅಲ್​​-ಹಕೀಮ್​​​ ಕೈರೋದಲ್ಲಿನ ನಾಲ್ಕನೇ ಅತ್ಯಂತ ಹಳೆಯ ಮಸೀದಿಯಾಗಿದೆ. ಮಸೀದಿಯು 13,560 ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ, ಸಾಂಪ್ರದಾಯಿಕ ಕೇಂದ್ರ ಪ್ರಾಂಗಣವು 5,000 ಚದರ ಮೀಟರ್‌ಗಳನ್ನು ಆಕ್ರಮಿಸಿಕೊಂಡಿದೆಈಜಿಪ್ಟ್‌ಗೆ ಅವರ ರಾಜ್ಯ ಭೇಟಿಯ ಎರಡನೇ ದಿನದಂದು, ಮೋದಿಯವರಿಗೆ ಮಸೀದಿಯ ಸುತ್ತಲೂ ತೋರಿಸಲಾಯಿತು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆ ನೋಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರುಭಾರತದಲ್ಲಿ ನೆಲೆಸಿರುವ ಬೋಹ್ರಾ ಸಮುದಾಯವು ಫಾತಿಮಿಡ್‌ಗಳಿಂದ ಹುಟ್ಟಿಕೊಂಡಿದೆ. ಅವರು 1970ರಿಂದ ಮಸೀದಿಯನ್ನು ನವೀಕರಿಸಿದರು ಮತ್ತು ಅಂದಿನಿಂದ ಅದನ್ನು ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಗುಜರಾತ್‌ನಲ್ಲಿರುವ ಬೊಹ್ರಾ ಸಮುದಾಯದೊಂದಿಗೆ ಪ್ರಧಾನಿಯವರು ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಬೊಹ್ರಾ ಸಮುದಾಯದ ಪ್ರಮುಖ ಧಾರ್ಮಿಕ ಕ್ಷೇತ್ರಕ್ಕೆ ಮತ್ತೊಮ್ಮೆ ಭೇಟಿ ನೀಡುವ ಸಂದರ್ಭವಾಗಿದೆ ಎಂದು ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಅಜಿತ್ ಗುಪ್ತೆ ಹೇಳಿದ್ದಾರೆ.  ಐತಿಹಾಸಿಕ ಮಸೀದಿಗೆ 16 ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬೈ-ಅಮ್ರ್ ಅಲ್ಲಾ ಅವರ ಹೆಸರನ್ನು ಇಡಲಾಗಿದೆ ಮತ್ತು ದಾವೂದಿ ಬೊಹ್ರಾ ಸಮುದಾಯಕ್ಕೆ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ.

ಎ.23ರಂದು ಪುತ್ತೂರಿನಲ್ಲಿ ಅಣ್ಣಾಮಲೈ ಹವಾ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಮತಯಾಚನೆ

Posted by Vidyamaana on 2024-04-20 20:54:33 |

Share: | | | | |


ಎ.23ರಂದು ಪುತ್ತೂರಿನಲ್ಲಿ ಅಣ್ಣಾಮಲೈ ಹವಾ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಮತಯಾಚನೆ

ಪುತ್ತೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರವಾಗಿ ಏಪ್ರಿಲ್ ೨೩ರಂದು ಪುತ್ತೂರಿನಲ್ಲಿ ರೋಡ್ ಶೋ ನಡೆಯಲಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾದ ಅಣ್ಣಾಮಲೈ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬಿಜೆಪಿ ಚುನಾವಣಾ ಸಂಯೋಜಕರಾದ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಅಂದು ಬೆಳಗ್ಗೆ ೮.೩೦ಕ್ಕೆ ಅಣ್ಣಾ ಮಲೈ ಅವರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ೧೦.೩೦ಕ್ಕೆ ಪುತ್ತೂರಿಗೆ ಬರಲಿದ್ದುö, ದರ್ಬೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ  ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.



Leave a Comment: