ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಪುತ್ತೂರು: ಸಂಟ್ಯಾರು ಬಳಿ ಭೀಕರ ಅಪಘಾತ:ಸುಳ್ಯ ಮೂಲದ ನಾಗರಾಜ್ ಸ್ಥಳದಲ್ಲೇ ಮೃತ್ಯು

Posted by Vidyamaana on 2023-06-28 09:38:12 |

Share: | | | | |


ಪುತ್ತೂರು: ಸಂಟ್ಯಾರು ಬಳಿ ಭೀಕರ ಅಪಘಾತ:ಸುಳ್ಯ ಮೂಲದ ನಾಗರಾಜ್ ಸ್ಥಳದಲ್ಲೇ ಮೃತ್ಯು

ಪುತ್ತೂರು: ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಕಲ್ಲರ್ಪೆಯಲ್ಲಿ ಜೂ 28 ರಂದು ನಡೆದಿದೆ.

ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ.ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. 

ಹೃದಯಾಘಾತದಿಂದ ನಿಲಿಕಾ ನಿಧನ

Posted by Vidyamaana on 2024-06-27 16:50:11 |

Share: | | | | |


ಹೃದಯಾಘಾತದಿಂದ ನಿಲಿಕಾ ನಿಧನ

ಮಡಿಕೇರಿ: ಎಂದಿನಂತೆ ಇನ್ನೇನು ತನ್ನ ಕರ್ತವ್ಯಕ್ಕೆ ಹೊರಡಬೇಕಾಗಿದ್ದ ಯುವತಿ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ದಾರುಣ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿ.

ನಾಪತ್ತೆಯಾಗಿದ್ದ ಕುಂಬ್ರ ನಿವಾಸಿ ಉಮ್ಮರ್ ಪತ್ತೆ

Posted by Vidyamaana on 2023-07-03 01:48:04 |

Share: | | | | |


ನಾಪತ್ತೆಯಾಗಿದ್ದ ಕುಂಬ್ರ ನಿವಾಸಿ ಉಮ್ಮರ್ ಪತ್ತೆ


ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ಜು. 1ರಂದು ದಿಡೀರನೆ ನಾಪತ್ತೆಯಾಗಿದ್ದು, ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 

ಜು. 1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚಾಫ್ ಆಗಿತ್ತು.

ಇವರ ಮಗನ ಮದುವೆ ಜು. 3ರಂದು ನಡೆಯಲಿದ್ದು, ಜು. 2ರಂದು ನಡೆಯಬೇಕಿದ್ದ ಮದರಂಗಿ ರದ್ದು ಮಾಡಲಾಗಿತ್ತು. ಜು 2 ರಂದು ರಾತ್ರಿ ಮಂಗಳೂರಿನಲ್ಲಿ ಪತ್ತೆ ಆಗಿದ್ದಾರೆ.

ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!

Posted by Vidyamaana on 2024-05-31 20:08:32 |

Share: | | | | |


ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!


ಪುತ್ತೂರು: ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಹೋಗುತ್ತಿದ್ದ ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದ ಘಟನೆ ಪಡೀಲ್ ಹಾರಾಡಿ ಶಾಲಾ ಎದುರು ಶುಕ್ರವಾರ ಸಂಜೆ ನಡೆದಿದೆ.

ಆ್ಯಕ್ಟೀವಾ (KA 19 HN 1431) ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ (KA21 A 6438) ನಜ್ಜುಗುಜ್ಜಾಗಿದೆ.

ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

Posted by Vidyamaana on 2024-06-09 14:02:56 |

Share: | | | | |


ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

ಮುಂಬೈ :ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುತ್ತಿದ್ದ ರನ್ ವೇಯಲ್ಲಿ ಇಂಡಿಗೋ ವಿಮಾನವೊಂದು ಇಳಿದ ನಂತರ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ತ್ವರಿತ ಪ್ರತಿಕ್ರಿಯೆಯಲ್ಲಿ, ನಾಗರಿಕ ವಿಮಾನಯಾನ ನಿಯಮಿತ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ವಜಾಗೊಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಹೊರಹೊಮ್ಮಿದ ವೀಡಿಯೊದಲ್ಲಿ, ಎರಡೂ ವಿಮಾನಗಳು ಒಂದೇ ರನ್ವೇಯಲ್ಲಿ ಕಂಡುಬರುತ್ತವೆ. ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಇಂಡಿಗೊ ವಿಮಾನವು ಇಳಿಯುವುದನ್ನು ಕಾಣಬಹುದು. ಇಂಡಿಗೋ ವಿಮಾನವು ಇಂದೋರ್ ನಿಂದ ಮುಂಬೈಗೆ ಹಾರುತ್ತಿದ್ದರೆ, ಏರ್ ಇಂಡಿಯಾ ವಿಮಾನವು ಕೇರಳದ ತಿರುವನಂತಪುರಕ್ಕೆ ಹೊರಟಿತು.

ಸುರತ್ಕಲ್: ಆಯತಪ್ಪಿ ನದಿಗೆ ಬಿದ್ದ ಬಜ್ಪೆ ನಿವಾಸಿ ಶಾಕಿರ್ ಮೃತ್ಯು

Posted by Vidyamaana on 2023-11-21 07:18:37 |

Share: | | | | |


ಸುರತ್ಕಲ್: ಆಯತಪ್ಪಿ ನದಿಗೆ ಬಿದ್ದ ಬಜ್ಪೆ ನಿವಾಸಿ ಶಾಕಿರ್ ಮೃತ್ಯು

ಸುರತ್ಕಲ್: ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಸುರತ್ಕಲ್ ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ಸೋಮವಾರ ನಡೆದಿದೆ.



ಮೃತರನ್ನು ಮೂಲತಃ ಬಜ್ಪೆ ನಿವಾಸಿ ಪ್ರಸ್ತುತ ಸುರತ್ಕಲ್‌ ಸಮೀಪದ ಚೊಕ್ಕಬೊಟ್ಟುವಿನಲ್ಲಿ ವಾಸವಾಗಿರುವ ಶಾಕಿರ್‌ (30) ಎಂದು ತಿಳಿದುಬಂದಿದೆ.


ಮೃತ ಶಾಕಿರ್‌ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೇ ಸೇತುವೆಯ ಕೆಳ ಭಾಗಕ್ಕೆ ಈಜಲೆಂದು ತೆರಳಿದ್ದರು. ಈ ವೇಳೆ ಶಾಕಿರ್‌ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಜೊತೆಗಿದ್ದ ಸ್ನೇಹಿತರು ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.


ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.


ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: