ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

Posted by Vidyamaana on 2024-01-06 15:01:18 |

Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿದ್ದು, ತಕ್ಷಣ ಬಂಧಿಸಬೇಕು ಎಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ , ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ.


ಹಿಂದೂಗಳ ಭಾವನೆ ಜೊತೆ ಆಟವಾಡುವ ಇಂತಹ ರಾಮವಿರೋಧಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಹೋರಾಟಕ್ಕಿಳಿಯಬೇಕಾದಿತು ಎಂಬ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

Posted by Vidyamaana on 2023-03-15 09:47:10 |

Share: | | | | |


ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

ಪುತ್ತೂರು: ಇಲ್ಲಿನ ಪುಣಚದಲ್ಲಿ ಬುಧವಾರ ಮಧ್ಯಾಹ್ನ‌ ಮಳೆಯಾಗಿದೆ.ಪುತ್ತೂರು ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ‌ ಸದ್ದು ಕೇಳಿಬರುತ್ತಿತ್ತು.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇನ್ನು ಕೆಲ ದಿನ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚೆಗೆ ಹವಾಮಾನ ಇಲಾಖೆ, ಕರಾವಳಿ ಸಹಿತ ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ, ಹವಾಮಾನ ಇಲಾಖೆಯ ವರದಿ ನಿಜವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

Posted by Vidyamaana on 2024-04-03 21:01:49 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಆಶೀರ್ವಾದ ಪಡೆದರು.

ಮಂಗಳೂರು| ವಕೀಲೆಗೆ ಮಾನಸಿಕ ಕಿರುಕುಳ: ಬಸ್ ಚಾಲಕ ಕಂಡೆಕ್ಟರ್ ಬಂಧನ

Posted by Vidyamaana on 2023-10-13 20:00:19 |

Share: | | | | |


ಮಂಗಳೂರು|  ವಕೀಲೆಗೆ ಮಾನಸಿಕ ಕಿರುಕುಳ: ಬಸ್ ಚಾಲಕ ಕಂಡೆಕ್ಟರ್ ಬಂಧನ

ಮಂಗಳೂರು: ವಕೀಲೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಮುಂದೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕ ಮತ್ತು ಚಾಲಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭರತ್ ಸಾಲಿಯ್ಯಾನ್ ಮತ್ತು ಶಶಿಕುಮಾರ್ ಬಂಧಿತರು. ಇಂದು ಬೆಳಿಗ್ಗೆ ಮಂಗಳೂರು ಪೂರ್ವ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮಧ್ಯಾಹ್ನ ಮಾನ್ಯ 6 ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಬ್ಬರಿಗೂ ಮಂಗಳೂರು ಆರನೇ ಜೆಎಂಎಫ್ ಸಿ ನ್ಯಾಯಾಲಯ 14ದಿನ ನ್ಯಾಯಾಂಗ ಬಂಧನ ವಿಧಿಸಿದೆ.



ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್ ನಿಂದ ಸ್ಟೆಟ್ ಬ್ಯಾಂಕ್ ಗೆ ತೆರಳುವ ರೂಟ್ ನಂಬರ್ 19, ಆಶೆಲ್ ಬಸ್ ನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ ಡ್ರೈವರ್ ಎಕಾಏಕಿ ಬಸ್ ನ್ನು ಚಲಾಯಿಸಿದ್ದು, ಮಹಿಳೆ ರಸ್ತೆಗೆ ಬೀಳುವ ವೇಳೆ ಬಸ್ ನ ನಿರ್ವಾಹಕ ಮಹಿಳೆಯ ಕೈಯನ್ನು ಹಿಡಿದು ಎಳೆದು ಸಾರ್ವಜನಿಕರ ಎದುರೇ ”ನೀಮ್ಮ ಸಮುದಾಯದ ಹೆಂಗಸರಿಗೆ ತುಂಬಾ ಅಹಂಕಾರ, ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು ಇಲ್ಲದಿದ್ದರೆ ಇಳಿಯಬೇಕು” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತಂತೆ ವಕೀಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು

45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

Posted by Vidyamaana on 2023-06-24 16:36:52 |

Share: | | | | |


45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

ಪುತ್ತೂರು: ಸುಳ್ಯದ ಯುವಕನೋರ್ವನಿಗೆ ಲಾಟರಿಯಲ್ಲಿ 45 ಕೋಟಿ ರೂ. ಬಹುಮಾನ ಬಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಬುದಾಬಿಯಲ್ಲಿರುವ ಸುಳ್ಯ ಮೂಲದ ಯುವಕನಿಗೆ ಲಾಟರಿಯಲ್ಲಿ ದೊಡ್ಡ ಮೊತ್ತ ಬಂದಿದೆ ಎಂದು ಹೇಳಲಾಗುತ್ತಿದೆ. ಮೊದಲಿಗೆ ಬೆಳ್ತಂಗಡಿಯ ಯುವಕನೋರ್ವನ ಫೊಟೋ ಬಳಸಿಕೊಂಡು ಇಂತಹ ಫೇಕ್ ಸುದ್ದಿಯನ್ನು ರವಾನಿಸಲಾಗುತ್ತಿತ್ತು. ಬಳಿಕ ಸುಳ್ಯದ ಯುವಕನೋರ್ವನ ಫೊಟೋವನ್ನು ಬಳಸಕೊಳ್ಳಲಾಯಿತು. ಒಟ್ಟಿನಲ್ಲಿ ಇದು ರಾಜ್ಯದಲ್ಲಿ ಬ್ಯಾನ್ ಆಗಿರುವ ಲಾಟರಿಗೆ ಪ್ರೋತ್ಸಾಹ ನೀಡುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

5 ವರ್ಷದಿಂದ ವಿಟ್ಲದ ಬಾಲಕಿಗೆ ಲೈಂಗಿಕ ಕಿರುಕುಳ- ಕೇರಳದ ಯುವಕರ ಮೇಲೆ ಕೇಸ್

Posted by Vidyamaana on 2023-07-30 12:11:11 |

Share: | | | | |


5 ವರ್ಷದಿಂದ ವಿಟ್ಲದ ಬಾಲಕಿಗೆ ಲೈಂಗಿಕ ಕಿರುಕುಳ- ಕೇರಳದ ಯುವಕರ ಮೇಲೆ ಕೇಸ್

ವಿಟ್ಲ: ಬಾಲಕಿ ಮೇಲೆ, ಬೇರೆ ಬೇರೆ ಯುವಕರು ಬೇರೆ ಬೇರೆ ಸಂದರ್ಭದಲ್ಲಿ ಲೈಂಗಿಕ ಅಪರಾಧ ನಡೆಸಿದ್ದಾರೆ ಎಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿ ಮೇಲೆ ಕೇರಳ ಭಾಗದ ಕೆಲವು ಯುವಕರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಅಪರಾಧ ನಡೆಸಿದ್ದರು.ಬಾಲಕಿ ಮನೆಗೆ ಈಚೆಗೆ ಒಂದು ದಿನ ಬರುವಾಗ


ತಡವಾದ ಬಗ್ಗೆ ವಿಚಾರಿಸಿದಾಗ ಆಕೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಐವರು ಆರೋಪಿಗಳು ಲೈಂಗಿಕ ಅಪರಾಧ ನಡೆಸಿದ್ದಾರೆ. 2019ರಿಂದಲೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆರೋಪಿಗಳಲ್ಲಿ ಒಬ್ಬಾತ ಬಾಲಕಿಯ ಬಂಧು. ಉಳಿದವರು ಕೇರಳದವರು ಎಂದು ಪೋಷಕರು ತಿಳಿಸಿದ್ದಾರೆದೂರಿನಲ್ಲಿ ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸ್‌) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ

Recent News


Leave a Comment: