ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಉಳ್ಳಾಲ : ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರು ಸಾವು

Posted by Vidyamaana on 2024-06-26 10:30:16 |

Share: | | | | |


ಉಳ್ಳಾಲ : ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರು ಸಾವು

ಉಳ್ಳಾಲ : ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಬುಧವಾರ ಬೆಳಗ್ಗೆ ಮನೆಯ ಹಿಂಬದಿಯಲ್ಲಿದ್ದ ಕಂಪೌಂಡ್ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.ಮನೆಯೊಳಗೆ ವಾಸ್ತವ್ಯವಿದ್ದ ಯಾಸಿರ್(45), ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತರು.

ವಿಟ್ಲ :ಪರ್ತಿಪ್ಪಾಡಿ M.K.ಖಲೀಲ್ ಮನೆಗೆ ನುಗ್ಗಿದ ಕಳ್ಳರಿಂದ ನಾಲ್ಕು ಕಪಾಟುಗಳು ಧ್ವಂಸ

Posted by Vidyamaana on 2024-05-26 13:53:21 |

Share: | | | | |


ವಿಟ್ಲ :ಪರ್ತಿಪ್ಪಾಡಿ M.K.ಖಲೀಲ್ ಮನೆಗೆ ನುಗ್ಗಿದ ಕಳ್ಳರಿಂದ ನಾಲ್ಕು ಕಪಾಟುಗಳು ಧ್ವಂಸ

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕೈಚಳಕ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು.

ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು. ಎ.ಸಿ.ಚಾಲು ಮಾಡಿಯೇ ಆರಾಮವಾಗಿ ನಾಲ್ಕು ಕಪಾಟುಗಳನ್ನು ಒಡೆದ

ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

Posted by Vidyamaana on 2023-09-24 16:55:47 |

Share: | | | | |


ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು (ಸೆ.24ರ ಭಾನುವಾರ) ಬೆಳಿಗ್ಗೆ ಪಾಣೆಮಂಗಳೂರಿನ ನೂತನ ಸೇತುವೆಯಲ್ಲಿ ನಡೆದಿದೆ.


ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಮೃತಪಟ್ಟವರು.


ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು.


ವಾಮದಪದವಿನ ಮನೆಯಿಂದ ಸಜೀಪದಲ್ಲಿರುವ ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಢಿಕ್ಕಿಯಾಗಿದೆ.


ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಗರೇ – ಇನ್ನೊಬ್ಬರಿಗೆ ಪ್ರಯಾಸ ನೀಡಬೇಡಿ

Posted by Vidyamaana on 2023-07-10 16:41:37 |

Share: | | | | |


ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಗರೇ – ಇನ್ನೊಬ್ಬರಿಗೆ ಪ್ರಯಾಸ ನೀಡಬೇಡಿ

ಚಿಕ್ಕಮಗಳೂರು: ಜಿನುಗು ಮಳೆಯ ನಡುವೆಯೇ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ರಸ್ತೆಗಳ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.

ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ-ಕೇಳೋರಿಲ್ಲ ಎಂಬಂತಾಗಿದ್ದು, ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಪ್ರವಾಸಿಗರು ಮುಂದಾಗಿದ್ದಾರೆ. ಈ ಭಾಗದಲ್ಲಿ ಮೊದಲೇ ಕಿರಿದಾದ ರಸ್ತೆಗಳು ಇದ್ದು, ವಾಹನ ಸವಾರರಿಗೆ ಇಕ್ಕಟ್ಟು ಆದಂತಾಗಿದೆ. ಇಂತಹದ್ದರಲ್ಲೂ ಕೆಲವರು ರಸ್ತೆ ಮಧ್ಯೆಯೆ ಕಾರ್ಗಳನ್ನು ನಿಲ್ಲಿಸಿ ಪುಂಡಾಟ ಮೆರೆಯುವ ಮೂಲಕ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುವಂತೆ ಮಾಡುತ್ತಿದ್ದಾರೆ. ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಡ್ಯಾನ್ಸ್ ಮಾಡುವ ಭರದಲ್ಲಿ ಇನ್ನುಳಿದ ವಾಹನಗಳಿಗೂ ಅಡ್ಡಲಾಗಿ ನಿಲ್ಲುತ್ತಿದ್ದಾರೆ.

ಇದರಿಂದ ಅಪಾಘಾತ, ಟ್ರಾಫಿಕ್ ಜಾಮ್ಗೂ ಆಹ್ವಾನ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೂಡ ಕೆಲವು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಈ ಹುಚ್ಚಾಟದಿಂದ ಬೇಸತ್ತ ಸ್ಥಳೀಯರು ಜಲಪಾತಗಳ ಬಳಿ ಪೊಲೀಸರು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.

ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

Posted by Vidyamaana on 2023-01-18 08:23:59 |

Share: | | | | |


ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: 1979ರಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ಒಕ್ಕಲುತನ ಮಾಡುತ್ತಿದ್ದ ಮನೆಗಳಲ್ಲಿ ನಿಂತು, ಇಲ್ಲಿನ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಸಂಘಟನೆಯ ಕಾರ್ಯಕ್ಕೂ ಚಾಲನೆ ನೀಡಿ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ, ಕೊಂಬೆಟ್ಟು ಐಟಿಐ ನಿರ್ಮಾಣಕ್ಕೆ ಕಾರಣಕರ್ತರಾದರು. ಅವರ ಈ ಎಲ್ಲಾ ಕೆಲಸಗಳನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಜ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಹೊಸ ವರ್ಷದ ಪಾರ್ಟಿಗಾಗಿ 5 ಲಕ್ಷ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗೆ ತಿನ್ನಲೆಸೆದ ಕಿರಾತಕರು!

Posted by Vidyamaana on 2024-01-10 19:16:52 |

Share: | | | | |


ಹೊಸ ವರ್ಷದ ಪಾರ್ಟಿಗಾಗಿ 5 ಲಕ್ಷ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗೆ ತಿನ್ನಲೆಸೆದ ಕಿರಾತಕರು!

ಬೆಂಗಳೂರು (ಜ.10): ಹೊಸ ವರ್ಷದ ಪಾರ್ಟಿಗೆಂದು ವ್ಯಕ್ತಿಯೊಬ್ಬನನ್ನು ಕಿಡ್ನಾಪ್‌ ಮಾಡಿ 5 ಲಕ್ಷ ರೂ. ಹಣವನ್ನು ಪಡೆದ ಕಿರಾತಕರು, ನಂತರ ಹಣ ಕೊಟ್ಟವನನ್ನು ಬಿಟ್ಟು ಕಳಿಸದೇ ಕೊಲೆಗೈದು ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ಎಸೆದು ಬಂದಿದ್ದಾರೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಡಿಯುವ ವರ್ಗ ಒಂದಿದ್ದರೆ, ದುಡಿದು ಸಂಪಾದನೆ ಮಾಡಿದ್ದವರನ್ನು ದರೋಡೆ ಮಾಡಿ ಮಜಾ ಮಾಡುವ ಇನ್ನೊಂದು ವರ್ಗವಿದೆ.ಹೀಗೆ, ನಾಲ್ವರು ಕಿರಾತಕರು ತಮ್ಮ ಹೊಸ ವರ್ಷದ ಪಾರ್ಟಿ ಹಾಗೂ ಶೋಕಿಗಾಗಿ ಅಮಾಯಕರಿಂದ ಹಣ ಪಡೆದಿದ್ದೂ ಅಲ್ಲದೇ, ಅವರನ್ನು ಅನ್ಯಾಯವಾಗಿ ಕೊಲೆಗೈದು ಅವರ ಮೃತ ದೇಹವೂ ಸಿಗದಂತೆ ಕಾಡು ಪ್ರಾಣಿಗಳಿಗೆ ಎಸೆದು ವಿಕೃತಿ ಮೆರೆದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಕಷ್ಟಪಟ್ಟು ದುಡಿದು ಮನೆ, ಹೆಂಡತಿ-ಮಕ್ಕಳ ಜೊತೆಗೆ ನೆಮ್ಮದಿಯಾಗಿದ್ದ ಕುಟುಂಬಗಳು ಬೀದಿಗೆ ಬರುತ್ತಿವೆ.


ಬೆಂಗಳೂರಿನ ಜ್ಞಾನಭಾರತೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜಯ್ , ಆನಂದ್, ತಿಮ್ಮ ಮತ್ತು ಹನುಮಂತ ಎಂಬ ನಾಲ್ವರು ಹೊಸ ವರ್ಷದ ಪಾರ್ಟಿಗಾಗಿ ಯಾರನ್ನಾದರೂ ಕಿಡ್ನಾಪ್‌ ಮಾಡಬೇಕು ಎಂದು ಸ್ಕೆಚ್ ಹಾಕಿದ್ದರು. ಅದರಂತೆ ತಮಗೆ ಪರಿಚಿತವಿದ್ದ ಗುರುಸಿದ್ದಪ್ಪ ಎನ್ನುವವರನ್ನು ಡಿ.3ಒರಂದು ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ಕಿಡ್ನಾಪ್‌ ಮಾಡಿದ್ದಾರೆ. ನಂತರ, ಆತನ ಪತ್ನಿಗೆ ಕರೆ ಮಾಡಿಸಿ 5 ಲಕ್ಷ ರೂ. ತರಲು ಹೇಳಿದ್ದಾರೆ. ಹಣವನ್ನು ಪಡೆದ ನಂತರ ಆತನನ್ನು ಬಿಟ್ಟು ಕಳುಹಿಸದೇ ಕಾರಿನಲ್ಲಿ ಕೂಡಿಸಿಕೊಂಡು ಮದ್ಯ ಸೇವನೆ ಮಾಡುತ್ತಾ ಮಂಚಿನಬೆಲೆ ಡ್ಯಾಮ್‌ ಬಳಿಗೆ ಹೋಗಿದ್ದಾರೆ.ಮಂಚಿನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ ಗ್ಯಾಂಗ್, ಡಿಸೆಂಬರ್ 30ರ ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದ್ರೆ ಇವನನ್ನು ಬಿಟ್ರೆ ಪೊಲೀಸರಿಗೆ ಹೇಳುತ್ತಾನೆ ಎಂದು ಕೊಲೆ ಮಾಡಿದ್ದಾರೆ. ಗುರುಸಿದ್ದಪ್ಪನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಕಾಡಿನಲ್ಲಿಯೇ ಬೀಸಾಡಿ, ಅಲ್ಲಿಂದ ಹೊಸ ವರ್ಷಕ್ಕಾಗಿ ಗೋವಾಕ್ಕೆ ತೆರಳಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಆದರೆ, ಇತ್ತ ಹುಬ್ಬಳ್ಳಿಯಿಂದ ಬಂದು ಜೀವನ ಕಟ್ಟಿಕೊಂಡು, ಬೆಂಗಳೂರಿನ ಕಿರಾತಕ ಹುಡುಗರಿಗೆ ಪಾರ್ಟಿಗಾಗಿ ಹಣವನ್ನು ಕೊಟ್ಟ ಗುರುಸಿದ್ದಪ್ಪ ಅನಾಥ ಹೆಣವಾಗಿ ಕಾಡಿನಲ್ಲಿ ಬಿದ್ದಿದ್ದನು.


ಈ ನಡುವೆ ಗುರುಸಿದ್ದಪ್ಪ ಪತ್ನಿ ತನ್ನ ಗಂಡ ಹಣ ಪಡೆದುಕೊಂಡು ಹೋದವರು ಮನೆಗೆ ವಾಪಸ್ಸು ಬಂದಿಲ್ಲಾ ಎಂದು ಮಿಸ್ಸಿಂಗ್ ಕೇಸ್ ನೀಡಿದ್ದರು. ಮಿಸ್ಸಿಂಗ್ ಕೇಸ್ ವಿಚಾರಣೆ ಮಾಡುವಾಗ ಕೊಲೆ ಆಗಿರುವುದು ಪತ್ತೆಯಾಗಿದೆ. ಸದ್ಯ ಮಂಚಿನ ಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮೃತ ದೇಹ ಪತ್ತೆ ಮಾಡಿದ್ದಾರೆ. ಸತತ ಎರಡು ದಿನ ಹುಡುಕಾಟದ ಬಳಿಕ ಮೃತ ದೇಹ ಪತ್ತೆಯಾಗಿದ್ದು, ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಏಳೆದುಕೊಂಡು ಹೋಗಿ ತಿಂದಿದ್ದಾವೆ. ಇನ್ನು ದೇಹದಲ್ಲಿ ತಲೆ ಬುರುಡೆ ಮತ್ತು ಬೆನ್ನೆಲುಬಿನ ಮೂಳೆಗಳು ಮಾತ್ರ ಲಭ್ಯವಾಗಿವೆ. ಗುರುಸಿದ್ದಪ್ಪನ ಅಳಿದುಳಿದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗುದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುಸಿದ್ದಪ್ಪ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

Recent News


Leave a Comment: