ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Posted by Vidyamaana on 2024-05-02 11:06:52 |

Share: | | | | |


ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮೇ. 1(ಬುಧವಾರ) ದಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಧರಿಸಿದ್ದ ಪುತ್ತೂರು ಅವರು ರಾತ್ರಿ 12.25 ರ ಸುಮಾರಿಗೆ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ಎಸ್ಪಿಯಾಗಿ ಪದೋನ್ನತಿ ಹೊಂದಿದ ಬೆಳ್ಳಾರೆಯ ಜಗನ್ನಾಥ್ ರೈ ಬಜನಿ

Posted by Vidyamaana on 2023-11-30 16:21:41 |

Share: | | | | |


ಎಸ್ಪಿಯಾಗಿ ಪದೋನ್ನತಿ ಹೊಂದಿದ ಬೆಳ್ಳಾರೆಯ  ಜಗನ್ನಾಥ್ ರೈ ಬಜನಿ

ಬೆಂಗಳೂರು : ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. 

ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿ , ನಂತರ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. 

1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ್ ರೈ ಯವರು, ನಂತರ ಇನ್ಸ್ ಪೆಕ್ಟರ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತದನಂತ ಡಿವೈಎಸ್ಪಿ ಯಾಗಿ  ಸಿಸಿಬಿ ಎಸಿಪಿಯಾಗಿ ಇದೀಗ ಎಸ್ಪಿಯಾಗಿದ್ದಾರೆ. 

ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ.  

ಜಗನ್ನಾಥ ರೈಯವರು ಬೆಳ್ಳಾರೆ ಬಜನಿಗುತ್ತು ರಾಮಯ್ಯ ರೈ ಹಾಗೂ ಕುಸುಮಾವತಿ ದಂಪತಿಯ ಪುತ್ರ

ವಿಟ್ಲ‌ಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2024-04-07 14:05:49 |

Share: | | | | |


ವಿಟ್ಲ‌ಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಯನ್ನು ನಿಮಗೆ ತಲುಪಿಸಿ, ನುಡಿದಂತೆ ನಡೆದು ಇದೀಗ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದೇವೆ ಹರಸಿ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಮುಡ್ನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಗೃಹಲಕ್ಣ್ಮಿ ಯೋಜನೆಯ ಎರಡು ಸಾವಿರ ಹಣ ಎಲ್ಲರ ಮನೆ ಬೆಳಗಿಸಿದೆ.‌ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ಹಣ ನೀಡಲಿದ್ದೇವೆ ಎಂದು ಹೇಳಿದರು. 

ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ರಿಗೊಲಿದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಪಟ್ಟ

Posted by Vidyamaana on 2023-12-21 21:19:04 |

Share: | | | | |


ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ರಿಗೊಲಿದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಪಟ್ಟ

ನವದೆಹಲಿ :ಭಾರತೀಯ ಕುಸ್ತಿ ಸಂಘದ(ರಿ.) ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ  ಬಿ.ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. 


ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ  ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.


*ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪಟ್ಟಿ*


ಅಧ್ಯಕ್ಷರು  ಸಂಜಯ್‌ ಕುಮಾರ್‌ ಸಿಂಗ್‌, ಹಿರಿಯ ಉಪಾಧ್ಯಕ್ಷರು  ದೇವೇಂದರ್‌,    ಉಪಾಧ್ಯಕ್ಷರು ಅಸಿತ್‌ ಕುಮಾರ್‌ ಸಹ, ಜಯಪ್ರಕಾಶ್‌, ಕಾರ್‍ತರ್‌ ಸಿಂಗ್‌, ಎನ್‌.ಫೋನಿ


ಪ್ರಧಾನ ಕಾರ್ಯದರ್ಶಿ ಪ್ರೇಮ್‌ ಚಂದ್‌ ಲೊಚಬ್‌, ಕೋಶಾಧಿಕಾರಿ ಸತ್ಯಪಾಲ್‌ ಸಿಂಗ್‌ ದೇಶ್‌ವಾಲ್‌,  ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿ, ಆರ್‌.ಕೆ.ಪುರುಶೋತ್ತಮ್‌, ಕಾರ್ಯಕಾರಿ  ಸಮಿತಿಯ ಸದಸ್ಯರು ಎಮ್‌.ಲೋಗನಾಥನ್‌, ನೈವಿಕೌಲಿ ಖಾತ್ಸು, ಪ್ರಶಾಂತ್‌ ರೈ, ರಜನೀಶ್‌ ಕುಮಾರ್‌, ಉಮ್ಮೆದ್‌ ಸಿಂಗ್.


*ಪುತ್ತೂರಿನ ಕಣ್ಮಣಿ ಕರ್ನಾಟಕದ ಜನರ ಪ್ರೀತಿಪಾತ್ರರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ*


ದಕ್ಷಿಣಕನ್ನಡ ಜಿಲ್ಲೆಯ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಫುಲ್ಲ ವಿ.ಶೆಟ್ಟಿ ದಂಪತಿಗಳ ಸುಪುತ್ರ ಹಾಗೂ ಡಾ.ಸಾಯಿ ರಮೇಶ್‌ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಯವರ ಸಹೋದರ ಬಿ.ಗುಣರಂಜನ್ ಶೆಟ್ಟಿ  ಮೂಲತಃ ಪುತ್ತೂರಿನ ಬೆಳ್ಳಿಪ್ಪಾಡಿ ಮನೆತನದಲ್ಲಿ ಜನಿಸಿ,  ಉರಮಾಲು ಗುತ್ತು ನಿವಾಸಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಬಿ. ಗುಣರಂಜನ್‌ ಶೆಟ್ಟಿಯವರು  ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.


ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ ಬೆಂಗಳೂರು, ಐ ಕ್ಯಾರ್‌ ಬ್ರಿಗೇಡ್‌,  ಐ ಕ್ಯಾರ್‌ ಫೌಂಡೇಶನ್‌, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರೂ ಆಗಿರುತ್ತಾರೆ. ಪರಿಸರವಾದಿಗಳು ಆಗಿರುವ ಇವರು ಬೆಂಗಳೂರು ಮತ್ತು ರಾಜ್ಯದಲ್ಲಿ ಅನೇಕ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಮರಗಳಿಂದ ಕಬ್ಬಿಣದ ರಾಡ್‌ ಮತ್ತು ಮೊಳೆ  ತೆಗೆಯುವ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪರಿಸರ ಪ್ರೇಮಿಗಳಿಗೆ ಹತ್ತಿರವಾಗಿದ್ದರು.

ಇತ್ತೀಚೆಗೆ ನಡೆದ ದೇಶದಲ್ಲೇ ಪ್ರಖ್ಯಾತಿ ಪಡೆದ ಬೆಂಗಳೂರು  ಕಂಬಳದ ಆಯೋಜನೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಕರಾವಳಿ ಹಾಗೂ ಬೆಂಗಳೂರಿನ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತರಾಗಿರುವ ಇವರು ಬೆಂಗಳೂರಿನ ತಿಪ್ಪಸಂದ್ರದಲ್ಲಿ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮವನ್ನು ಬಹಳ ವಿಜ್ರಂಭಣೆಯಿಂದ ಮತ್ತು ಸಾವಿರಾರು ಭಕ್ತರಿಗೆ ಅನ್ನದಾನ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಬಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಗುಣರಂಜನ್‌ ಶೆಟ್ಟಿಯವರನ್ನು  ಅಭಿಮಾನದಿಂದ ಪ್ರೀತಿಯ ಗುಣಣ್ಣ ಎಂದು ಕರೆಯುತ್ತಾರೆ.

ಪ್ರಸ್ತುತ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಆಗಿರುವ ಗುಣರಂಜನ್‌ ಶೆಟ್ಟಿಯವರು ಇದೀಗ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವುದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆಯಾಗಿರುವುದು ಕರ್ನಾಟಕದ ಜನತೆ ಹೆಮ್ಮೆಪಡುವಂತಾಗಿದೆ. 


ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಇವರ ಅವಧಿಯಲ್ಲಿ ಅನೇಕ ಟೂರ್ನಮೆಂಟ್‌ಗಳು ನಡೆದಿದ್ದು, ಅನೇಕ ಕುಸ್ತಿಪಟುಗಳು ಬಹುಮಾನಗಳನ್ನು ಪಡೆದಿರುತ್ತಾರೆ. ಇವರು ಬಂದ ನಂತರ ಕರ್ನಾಟಕ ಕುಸ್ತಿ ಪಟುಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

ನದಿಯಲ್ಲಿ ತೇಲಿ ಹೋದ ಗ್ಯಾಸ್‌ ಟ್ಯಾಂಕ‌ರ್; ಸೋರಿಕೆ ಸಾಧ್ಯತೆ

Posted by Vidyamaana on 2024-07-17 08:26:09 |

Share: | | | | |


ನದಿಯಲ್ಲಿ ತೇಲಿ ಹೋದ ಗ್ಯಾಸ್‌ ಟ್ಯಾಂಕ‌ರ್; ಸೋರಿಕೆ ಸಾಧ್ಯತೆ

ಅಂಕೋಲಾ : ತಾಲೂಕಿನಲ್ಲಿ ಕಳೆದೆರಡು ದಿನದಿಂದ ಅತಿ ಹೆಚ್ಚಿನ ಮಳೆಯಾಗುತ್ತಿದ್ದು, ಶಿರೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಉಂಟಾದ ಪರಿಣಾಮ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಉರುಳಿ ಬಿದ್ದಿದ್ದು, ಗ್ಯಾಸ್ ಸೋರಿಕೆ ಸಾಧ್ಯತೆಗಳಿದ್ದು, ಗಂಗಾವಳಿ ನದಿ ಸುತ್ತಮುತ್ತಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಲೋಕಸಭೆ ಗೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನ ಮುಂದೂಡಿಕೆ

Posted by Vidyamaana on 2023-12-13 13:38:44 |

Share: | | | | |


ಲೋಕಸಭೆ ಗೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನ ಮುಂದೂಡಿಕೆ

ನವದೆಹಲಿ: ನೂತನ ಸಂಸತ್ತು ಭವನದಲ್ಲಿ ಭದ್ರತಾ ಲೋಪ ಕಾಣಿಸಿಕೊಂಡಿದ್ದು ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಅಪರಿಚಿತ ಇಬ್ಬರು ವ್ಯಕ್ತಿ ನುಗ್ಗಿರುವ ಘಟನೆ ನಡೆದಿದೆ.ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ ಲೋಕಸಭೆಯಲ್ಲಿ ಗೊಂದಲ ಉಂಟಾಯಿತು.

💥ವಿಡಿಯೋ ನೋಡಲು ಕ್ಲಿಕ್ ಮಾಡಿ ಲೋಕಸಭೆ ಗೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನ ಮುಂದೂಡಿಕೆ


ಭದ್ರತಾ ಪ್ರೋಟೋಕಾಲ್ಗಳನ್ನು ತ್ವರಿತವಾಗಿ ಸಕ್ರಿಯಗೊಳಿಸಿದ್ದರಿಂದ ಹಠಾತ್ ಒಳನುಸುಳುವಿಕೆಯು ಸದನವನ್ನು ಮುಂದೂಡಲಾಗಿದೆ ಅಂತ ತಿಳಿದು ಬಂದಿದೆ

Recent News


Leave a Comment: