ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಈದಲ್ ಫಿತ್ರ್: ಗುರಿ ಸಾಧಿಸಿದವರ ಸಂಭ್ರಮ ಸಹಜೀವಿಗಳೊಂದಿಗೆ ಸದಾಚಾರದ ಪ್ರತಿಜ್ಞೆ

Posted by Vidyamaana on 2024-04-09 20:20:16 |

Share: | | | | |


ಈದಲ್ ಫಿತ್ರ್: ಗುರಿ ಸಾಧಿಸಿದವರ ಸಂಭ್ರಮ ಸಹಜೀವಿಗಳೊಂದಿಗೆ ಸದಾಚಾರದ ಪ್ರತಿಜ್ಞೆ

ತನ್ನೆಲ್ಲಾ ಸ್ವಾತಂತ್ರ್ಯಗಳನ್ನು ಸ್ವಯಂ ಪ್ರೇರಿತನಾಗಿ ತಡೆದು ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗತಿ ಸಲ್ಲಿಸುವ ವ್ರತಾಚರಣೆಯ ಮೂಲಕ ದೈಹಿಕ ಮತ್ತು ಆತ್ಮೀಯ ಪರಿಶುದ್ಧಿಯನ್ನು ಪಡೆದ ಮನುಷ್ಯನಿಗೆ ತನ್ನ ಸಂತೋಷವನ್ನು ಪ್ರಕಟಪಡಿಸಲು ಅಲ್ಲಾಹನು ನಿಗದಿಪಡಿಸಿದ ಪವಿತ್ರ ದಿನವಾಗಿದೆ ಈದ್. ಇದು ಸ್ರಷ್ಟಿಯನ್ನು  ಸ್ರಷ್ಟಿಕರ್ತನೆಡೆಗೆ ಮತ್ತಷ್ಟು ನಿಕಟಗೊಳಿಸುವ ಗುರಿ ಸಾಧಿಸಿದವರ ಹಬ್ಬವಾಗಿದೆ.

   ಅಲ್ಲಾಹು ಅಕ್ಬರ್.... ವಲಿಲ್ಲಾಹಿಲ್ ಹಮ್ದ್ -ತಕ್ಬೀರ್ ಮೊಳಗಿಸುತ್ತಾ ಗುರಿಸಾಧಿಸಿದ ಸಂತೋಷವನ್ನು ಪ್ರಕಟಿಸುತ್ತಾ ತನ್ನ ಸಹಜೀವಿಗಳೊಂದಿಗೆ ಸೇರಿ ಸದಾಚಾರದ ಪ್ರತಿಜ್ಞೆಗೈಯ್ಯುತ್ತಾನೆ.

      ಹಬ್ಬಗಳಿಗೆ ಅರಬಿ ಭಾಷೆಯಲ್ಲಿ ಈದ್ ಎನ್ನಲಾಗುತ್ತಿದ್ದು ಒಳಿತು ಮತ್ತು ಔದಾರ್ಯಗಳು ಎಂಬ ಅರ್ಥದ ಜೊತೆಗೆ ಸಂಭ್ರಮ ಸಡಗರದೊಂದಿಗೆ ಪುನರಾವರ್ತನೆಯಾಗುವ ಹಬ್ಬ ಎಂಬ ವಿವರಣೆಯೂ ಇದೆ.

     ರಂಝಾನ್ ಉಪವಾಸದ ಮುಕ್ತಾಯದ ವೇಳೆ ಬರುವ ಈದುಲ್ ಫಿತ್ರ್ ಹಬ್ಬವು ಮನುಷ್ಯನ ಆತ್ಮದ ರೋಗಗಳಾದ ಮದ, ಮೋಹ, ಅಹಂಕಾರ,ಲೋಭಾದಿಗಳನ್ನು ಮೆಟ್ಟಿನಿಂತು ವಿಶೇಷ ತರಬೇತಿ ಪಡೆದು ಶುದ್ಧ ಪ್ರಕೃತಿಗೆ ಮರಳುವ ಸ್ಥಿತಿಯನ್ನುಂಟುಮಾಡುತ್ತದೆ. 

ಆ ಮೂಲಕ ಮನುಷ್ಯನು ತನ್ನನ್ನು ಹೊಸ ಬದುಕಿಗೆ ತೆರೆದುಕೊಳ್ಳುತ್ತಾನೆ. 

   ರಂಝಾನ್ ತಿಂಗಳ ಕೊನೆಯ ಸೂರ್ಯಾಸ್ತಮಾನದೊಂದಿಗೆ ಪ್ರಾರಂಭಿಸಿ ಆ ದಿನ ಸೂರ್ಯಾಸ್ತದವರೆಗೆ ಮುಂದುವರೆದು ಈ ದಿನದಲ್ಲಿ ವಿಶೇಷ ಸ್ನಾನ ಮಾಡಿ ಸೂರ್ಯೋದಯದ ಬಳಿಕ ವಿಶೇಷ ನಮಾಜಿಗೆ ಸಿದ್ದರಾಗುತ್ತಾರೆ. ಸೂರ್ಯನುದಯಿಸಿ ಸುಮಾರು 20 ನಿಮಿಷಗಳ ನಂತರ ನಮಾಝಿನ ಸಮಯವಾಗಲಿದ್ದು ಮಧ್ಯಾಹ್ನದೊಂದಿಗೆ ಕೊನೆಗೊಳ್ಳುತ್ತದೆ.ಪುರುಷರು ಮಸೀದಿಯಲ್ಲಿ ಸಾಮೂಹಿಕವಾಗಿಯೂ ಸ್ತ್ರೀಯರು ಮನೆಗಳಲ್ಲಿಯೂ ಇದನ್ನು ನಿರ್ವಹಿಸುತ್ತಾರೆ. ದಾನ ಧರ್ಮಗಳಿಗೂ ಸತ್ಕಾರ್ಯಗಳಿಗೂ ಕುಟುಂಬ ಸಂಬಂಧವನ್ನು ಸದೃಢಗೊಳಿಸುವುದಕ್ಕೂ ಈ ಹಬ್ಬವು ಬಹಳ ಉಪಕಾರಿ. ಫಿತ್ರ್ ಝಕಾತ್ ಎಂಬ ಕಡ್ಡಾಯ ದಾನವು ಆ ದಿನದ ಪ್ರಮುಖ ಆರಾಧನೆಗಳಲ್ಲೊಂದಾಗಿದೆ.

   

ಉದ್ಯಮಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣ 3ನೇ ಆರೋಪಿ ಹಾಲಶ್ರೀ ಸ್ವಾಮೀಜಿ ಬಂಧನ

Posted by Vidyamaana on 2023-09-19 11:45:11 |

Share: | | | | |


ಉದ್ಯಮಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣ  3ನೇ ಆರೋಪಿ ಹಾಲಶ್ರೀ ಸ್ವಾಮೀಜಿ ಬಂಧನ

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ ನಡೆಸಿದ ಐದು ಕೋಟಿ ರೂ. ವಂಚನೆ (Five crore rupees Fraud) ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು (Halashri Swameeji) ಕೊನೆಗೂ ಸಿಸಿಬಿ ಪೊಲೀಸರು (CCB police) ಬಂಧಿಸಿದ್ದಾರೆ.ಪ್ರಕರಣದ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಸ್ವಾಮೀಜಿ ಈಗ ಸೆರೆಸಿಕ್ಕಿದ್ದು ಒಡಿಶಾ ರಾಜ್ಯದ ಕಟಕ್‌ನಲ್ಲಿ! ಅಂದರೆ ಊರು ಬಿಟ್ಟು ಎಲ್ಲಾದರೂ ಹೋಗಿ ತಪ್ಪಿಸಿಕೊಳ್ಳುತ್ತೇನೆ ಎಂದು ಹೊರಟಿದ್ದ ಅವರು ಈಗ ಸಿಸಿಬಿಯ ಕೈಗೆ ಸಿಕ್ಕಿಬಿದ್ದಿದ್ದಾರೆ.

Read More....

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌


ಉದ್ಯಮಿ ಗೋವಿಂದ ಪೂಜಾರಿಗೆ (Govinda Poojari) ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP ticket) ಕೊಡಿಸುವ ಚೈತ್ರಾ ಕುಂದಾಪುರ ಗ್ಯಾಂಗ್‌ನ ವಂಚನಾ ಜಾಲದಲ್ಲಿ ಪ್ರಮುಖ ಕೊಂಡಿ ಈ ಸ್ವಾಮೀಜಿ. ಗೋವಿಂದ ಪೂಜಾರಿಯಿಂದ ನೇರವಾಗಿ 1.5 ಕೋಟಿ ರೂ. ಸ್ವೀಕರಿಸಿದ್ದ ಸ್ವಾಮೀಜಿ ಪ್ರಕರಣ ಕುತ್ತಿಗೆಗೆ ಬರುತ್ತದೆ ಎಂದು ಹೇಳುವಾಗ ಕಂತು ಕಂತಿನಲ್ಲಿ ನಿಮ್ಮ ಹಣ ವಾಪಸ್‌ ಮಾಡುತ್ತೇನೆ ಎಂದು ಅಂಗಲಾಚಿದ್ದರು. ಆದರೆ, ಗೋವಿಂದ ಪೂಜಾರಿ ಕೇಸು ದಾಖಲಿಸಿಯೇಬಿಟ್ಟಾಗ ತಲೆಮರೆಸಿಕೊಂಡರು.ಗೋವಿಂದ ಪೂಜಾರಿಯನ್ನು ಮಠಕ್ಕೆ ಕರೆಸಿಕೊಂಡು ಮಾತನಾಡಿ, ಬೆಂಗಳೂರಿನ ಆಶ್ರಮದಲ್ಲಿ ಹಣ ಸ್ವೀಕರಿಸಿದ್ದ ಸ್ವಾಮೀಜಿ ಈ ಹಣವನ್ನು ಬಳಸಿಕೊಂಡು ಪೆಟ್ರೋಲ್‌ ಪಂಪ್‌, ಜಾಗ ಮತ್ತು ಕಾರು ಖರೀದಿಸಿದ್ದರು. ಗೋವಿಂದ ಪೂಜಾರಿ ದೂರು ದಾಖಲಿಸುತ್ತೇನೆ ಎಂದಾಗ ಅದರಲ್ಲಿ 50 ಲಕ್ಷ ರೂ.ಯನ್ನು ವಾಪಸ್‌ ಕೊಟ್ಟಿದ್ದರೆನ್ನಲಾಗಿದೆ.


ಡ್ರೈವರ್‌ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದರಾ?

ಕಣ್ಮರೆಯಾಗಿದ್ದ ಹಾಲಶ್ರೀ ಸ್ವಾಮೀಜಿ ಒಂದು ಕಡೆ ಕಣ್ಮರೆಯಾಗಿದ್ರೂ ಇನ್ನೊಂದು ಕಡೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಯಾರೊಂದಿಗೋ ಅವರು ಕನೆಕ್ಷನ್‌ನಲ್ಲಿರುವುದು ಸ್ಪಷ್ಟವಾಗಿತ್ತು. ಪೊಲೀಸರು ಅವರ ಕಾರು ಚಾಲಕನನ್ನು ತಂದು ವಿಚಾರಣೆಗೆ ಒಳಪಡಿಸಿದ್ದರು. ಆತನ ಬಳಿ ಹೆಚ್ಚು ಮಾಹಿತಿ ಸಿಗಲಿಲ್ಲವಾದರೂ ಅವನ ಮೇಲೂ ಒಂದು ಕಣ್ಣಿಟ್ಟಿದ್ದರು. ಹೀಗಾಗಿ ಅವನ ಫೋನ್‌ಗೆ ಬಂದ ಕರೆಗಳಆಧಾರದಲ್ಲಿ ಸ್ವಾಮೀಜಿಯನ್ನು ಟ್ರ್ಯಾಕ್‌ ಮಾಡಲಾಯಿತು ಎನ್ನಲಾಗುತ್ತಿದೆ.


ಹೈದರಾಬಾದ್‌ ಮೂಲಕ ಕಟಕ್‌ಗೆ ಹೋಗಿದ್ದರು


ಹಾಲಶ್ರೀ ಸ್ವಾಮೀಜಿ ಕೆಲವು ದಿನಗಳ ಕಾಲ ರಾಜ್ಯದಲ್ಲೇ ಇದ್ದರು. ಒಂದು ಕಡೆ ನಿರೀಕ್ಷಣಾ ಜಾಮೀನು ಸಿಗುತ್ತಿಲ್ಲ, ಇನ್ನೊಂದು ಕಡೆ ಪೊಲೀಸರು ಬಿಡುತ್ತಿಲ್ಲ ಎಂಬ ಕಾರಣದಿಂದ ಭಯಗೊಂಡು ಹೈದರಾಬಾದ್‌ಗೆ ಹೋಗಿದ್ದರು. ಅಲ್ಲಿಂದ ಒಡಿಶಾದ ಕಟಕ್‌, ಆ ನಂತರ ಬಿಹಾರಕ್ಕೆ ಹೋಗಿ ತಲೆ ಮರೆಸಿಕೊಳ್ಳುವ ಪ್ಲ್ಯಾನ್‌ ಹೊಂದಿದ್ದರು ಎನ್ನಲಾಗಿದೆ. ಆದರೆ, ಇದರ ಸುಳಿವು ಪಡೆದ ಸಿಸಿಬಿ ಪೊಲೀಸರು ಕಟಕ್‌ನಲ್ಲಿ ಅವರನ್ನು ವಶಕ್ಕೆ ಪಡೆದಿದೆ.ಸಿಸಿಬಿಯ ಮೂರು ವಿಶೇಷ‌ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಹಾಲಶ್ರೀ ಪ್ರತಿ ಒಂದೊಂದು ಗಂಟೆಗೆ ಒಂದೊಂದು ಲೊಕೇಶನ್‌ ಚೇಂಜ್ ಮಾಡುತ್ತಿದ್ದುದರಿಂದ ಅವರು ಪರಾರಿಯಾಗುತ್ತಿರುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಈಗ ಲೊಕೇಶನ್‌ಗಳ ಆಧಾರದಲ್ಲಿ ಬಂಧಿಸಲಾಗಿದೆ.


ಇಂದು ಸಂಜೆ ಬೆಂಗಳೂರಿಗೆ ಕರೆತರುವ ಸಾಧ್ಯತೆ


ಒಡಿಶಾದಲ್ಲಿ ಬಂಧಿತರಾಗಿರುವ ಅಭಿವನ ಹಾಲಶ್ರೀಯನ್ನು ಈಗ ಅಲ್ಲಿನ ಪೊಲೀಸ್‌ ಠಾಣೆಗೆ ಹಾಜರುಪಡಿಸಿ ಬಳಿಕ ವಿಮಾನದ ಮೂಲಕ ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

Posted by Vidyamaana on 2023-10-27 07:15:15 |

Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಪುತ್ತೂರು :ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ತರಬೇತಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯದಲ್ಲಿ ಪ್ರಾರಂಭವಾಗಲಿದೆ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ದಿನಾಂಕ 19/11/2023 ರಂದು ಹಾಗೂ ಕೆ.ಪಿ.ಎಸ್.ಸಿ ನೇಮಕಾತಿಯ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯು ದಿನಾಂಕ 4/11/2023 ಮತ್ತು 5 /11 /2023ರಂದು ನಡೆಯಲಿದ್ದು, ಈ ಎರಡು ನೇಮಕಾತಿಗಳ ಅಂತಿಮ ಹಂತದ ಪೂರ್ವ ತಯಾರಿಯ ತರಬೇತಿಯು ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ,

 ವಿದ್ಯಾಮಾತಾ ಅಕಾಡೆಮಿಯ ಪುತ್ತೂರು,  ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಎಂಸಿ ರಸ್ತೆ ,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ.- 574201.

962 046869/9148935808


ವಿದ್ಯಾಮಾತಾ ಅಕಾಡೆಮಿ ಸುಳ್ಯ,

ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣಕನ್ನಡ.

9448527606 ಅನ್ನು ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.

ಉಮೇಶ್‌ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್‌ ನಕಾರ

Posted by Vidyamaana on 2024-02-27 12:40:36 |

Share: | | | | |


ಉಮೇಶ್‌ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್‌ ನಕಾರ

ಬೆಂಗಳೂರು : ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಮೇಶ್‌ ರೆಡ್ಡಿಗೆ ಪೆರೋಲ್‌ ನೀಡಲು ಹೈಕೋರ್ಟ್‌ ನಿರಾಕರಿಸಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಉಮೇಶ್‌ ರೆಡ್ಡಿ, ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು 30 ದಿನಗಳ ಕಾಲ ಪೆರೋಲ್‌ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ.ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೆರೋಲ್ ನೀಡಲು ನಿರಾಕರಿಸಿದೆ.


ಆಸ್ಪಾಕ್ ವಿರುದ್ಧದ ರಾಜಸ್ಥಾನ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಿಗೆ ಪೆರೋಲ್ ನೀಡಬೇಕಾದಲ್ಲಿ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಅರ್ಜಿದಾರರಿಗೆ ಪೆರೋಲ್ ನೀಡಿದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಿರಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಜೈಲು ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿರುವ ಸುಪ್ರೀಂಕೋರ್ಟ್ ಅರ್ಜಿದಾರರು ಜೈಲಿನಿಂದ ಹೊರ ಬಂದಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.ಮನೆ ದುರಸ್ತಿಯಲ್ಲಿದ್ದು ಅದನ್ನು ಸರಿಪಡಿಸುವುದಕ್ಕಾಗಿ ಪೆರೋಲ್ ನೀಡಬೇಕು ಎಂದು ಅರ್ಜಿದಾರರ ಮತ್ತೊಂದು ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಇಬ್ಬರು ಸಹೋದರರಿದ್ದು, ತಾಯಿಯನ್ನು ನೋಡಿಕೊಳ್ಳುತ್ತಾರೆ. ಮನೆ ದುರಸ್ತಿಯನ್ನೂ ಮಾಡುತ್ತಾರೆ. ಅರ್ಜಿದಾರರ ನೀಡಿರುವ ಎರಡೂ ಕಾರಣಗಳಲ್ಲಿ ಸಮರ್ಥವಾಗಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.


1998 ರ ಫೆ. 28 ರಂದು ಬೆಂಗಳೂರು ನಗರದಲ್ಲಿ ನಡೆದಿದ್ದ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿಉಮೇಶ್‌ ರೆಡ್ಡಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಸುಪ್ರೀಂಕೋರ್ಟ್‌ ಮಾರ್ಪಾಡು ಮಾಡಿ ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯಕ್ಕೆ ಪೆರೋಲ್‌ ಸೇರಿದಂತೆ ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕು ಎಂದಾದರೆ ಕನಿಷ್ಟ 30 ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿತ್ತು.

ಕಂಬಳದ ವೇದಿಕೆಯಲ್ಲೇ ನಡೀತು ಬರ್ತ್ ಡೇ ಸೆಲೆಬ್ರೇಷನ್

Posted by Vidyamaana on 2024-01-26 22:54:07 |

Share: | | | | |


ಕಂಬಳದ ವೇದಿಕೆಯಲ್ಲೇ ನಡೀತು ಬರ್ತ್ ಡೇ ಸೆಲೆಬ್ರೇಷನ್

ಪುತ್ತೂರು: ಉದ್ಯಮಿ ಕಂಬಳ ಸಮಿತಿ ಯ ಉಪಾಧ್ಯಕ್ಷ ಶಿವರಾಮ ಆಳ್ವ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಶುಕ್ರವಾರ ರಾತ್ರಿ ಶಿವರಾಮ ಆಳ್ವ ರವರ ಪುತ್ತೂರು ಕೋಟಿ - ಚೆನ್ನಯ ಜೋಡುಕರೆ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕಂಬಳ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಕಂಬಳದ ವೇದಿಕೆ ಮುಂಭಾಗದಲ್ಲೇ ಕೇಕ್ ಕತ್ತರಿಸಿ, ಶುಭಾಶಯ ಕೋರಿದರು.

ಚಂದ್ರಹಾಸ ಶೆಟ್ಟಿ,ಉಮೇಶ್ ನಾಡಜೆ,ಅಜಿತ್ ಶೆಟ್ಟಿ ಕಡಬ, ರೋಷನ್ ರೈ ಬನ್ನೂರು, ವಿಕ್ರಂ ಶೆಟ್ಟಿ, ಪ್ರಶಾಂತ್ ರೈ ಕೈಕಾರ, ಪ್ರವೀಣ್ ಶೆಟ್ಟಿ ಅಳಕೆ ಮಜಲು, ರಂಜಿತ್ ಬಂಗೇರ,ಅಮೋಘ ಆಳ್ವ, ಸಂಮಿತ್ ರೈ, ವರುಣ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.

ಸಚಿವರು ಸಹಿತ ಹಲವು ರಾಜಕೀಯ ಮುಖಂಡರಗಳು ಶುಭಹಾರೈಸಿದರು

ಪುತ್ತೂರು ಬಿಜೆಪಿ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಸಭೆ

Posted by Vidyamaana on 2024-04-05 21:48:40 |

Share: | | | | |


ಪುತ್ತೂರು ಬಿಜೆಪಿ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಸಭೆ

ಪುತ್ತೂರು : ಬಿಜೆಪಿ ಪುತ್ತೂರು ಮಂಡಲದಲ್ಲಿ ಮಂಡಲದ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸಭೆ ನಡೆಯಿತು.ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಅಲ್ಪಸಂಖ್ಯಾತ ಮತದಾರರನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರರ ಮತವನ್ನು ಪಡೆದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ರನ್ನು ಲಕ್ಷಾಂತರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಕರೆ ನೀಡಿದರು



Leave a Comment: