ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

Posted by Vidyamaana on 2023-09-07 16:05:24 |

Share: | | | | |


ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

ಮಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಅಧಿಕಾರ ಹಸ್ತಾಂತರಿಸಿದರು.

ನೂತನ ಆಯುಕ್ತ ಅಗರ್ವಾಲ್ ರಾಜಸ್ಥಾನದ ಜೋಧ್ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ, ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪಪೊಲೀಸ್ ಆಯುಕ್ತರಾಗಿ, ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಮೈಸೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲು

Posted by Vidyamaana on 2023-11-02 11:03:58 |

Share: | | | | |


ಮೈಸೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲು

ಮೈಸೂರು : ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲಾಗಿದ್ದು, ಮೈಸೂರಿನ ತಿ. ನರಸೀಪುರ ರಸ್ತೆಯಲ್ಲಿರುವ ಲಲಿತಮಹಲ್ ನಗರದಲ್ಲಿದ್ದ ಸಲೂನ್ ಮೇಲೆ ದಾಳಿ ಮಾಡಲಾಗಿದೆ. ಒಡನಾಡಿ ಸೇವಾ ಸಂಸ್ಥೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರಿಗೆ ವಾಸದ ಮನೆ ಮೇಲೆ ದಾನಿಯಾ ಸಲೂನ್ ನಡೆಯುತ್ತಿದೆ. ಕಳೆದ ಹಲವಾರು ತಿಂಗಳುಗಳಿಂದ ವೇಶ್ಯಾ ದಂಧೆ ನಡೆಯುತ್ತಿದೆ.


ದಾಳಿ ವೇಳೆ ವೇಶ್ಯಾವಾಟಿಕೆ ಕಿಂಗ್‌ ಪಿನ್ ಬಾಣಲಿ ಮಹೇಶ ಹಾಗೂ ಮಧು ಸುಧಾ ಬಂಧನವಾಗಿದೆ. ಇಬ್ಬರು ಗಿರಾಕಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆರು ಮಂದಿ ಹೆಣ್ಣುಮಕ್ಕಳನ್ನ ರಕ್ಷಣೆ ಮಡಿದ್ದು, ಬಾಣಲಿ ಮಹೇಶನ ಆಡಿಯೋದಲ್ಲಿ ಮಾಲೀಕರ ಪ್ರಸ್ತಾಪ ನಡೆಸಿದ್ದು, ಈ ಹಿಂದೆಯೇ ಸಲೂನ್ ಮೇಲೆ ಒಡನಾಡಿ ದಾಳಿಗೆ ಪ್ಲಾನ್ ಮಾಡಿದ್ದರು.ಪೊಲೀಸರ‌ ಜತೆ ಚರ್ಚಿಸುತ್ತಿದ್ದಂತೆ ಜೆ.ಬಿ. ರಂಗಸ್ವಾಮಿಗೆ ಮಾಹಿತಿ ಸೋರಿಕೆಯಾಗಿದೆ. ಆ ದಿನ ಸಲೂನ್ ಬಂದ್ ಮಾಡಿಸಿದ್ದರೆಂಬ ಮಾಹಿತಿ ದೊರಕಿದ್ದು, ಗಿರಾಕಿ ಜತೆ ಬಾಣಲಿ ಮಹೇಶ್ ಮಾತನಾಡಿರುವ ಆಡಿಯೋ ತುಣುಕು ಬಯಲಾಗಿದೆ. ಇವತ್ತು ರೇಡ್ ಆಗುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಹಾಗಾಗಿ ಬಾಣಲಿ ಮಹೇಶ ಸಲೂನ್ ಬಂದ್ ಮಾಡಿದ್ದೇವೆ ಎಂದಿದ್ದಾರೆ. ಈ ಸಂಬಂಧ ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಸರ್ಕಾರದಿಂದ ಯಾವುದೇ ಶ್ಯೂರಿಟಿ ಇಲ್ಲದೇ 10 ಲಕ್ಷ ದವರೆಗೆ ಸಾಲ ಲಭ್ಯ ; ಪಡೆಯೋದ್ಹೇಗೆ ಗೊತ್ತಾ.?

Posted by Vidyamaana on 2023-12-18 20:05:24 |

Share: | | | | |


ಕೇಂದ್ರ ಸರ್ಕಾರದಿಂದ ಯಾವುದೇ ಶ್ಯೂರಿಟಿ ಇಲ್ಲದೇ 10 ಲಕ್ಷ ದವರೆಗೆ ಸಾಲ ಲಭ್ಯ ; ಪಡೆಯೋದ್ಹೇಗೆ ಗೊತ್ತಾ.?

ನಮ್ಮ ದೇಶದ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದ್ರೆ, ಅವರಿಗೆ ಬೇಕಾಗಿರುವುದು ಸರಿಯಾದ ಪ್ರೋತ್ಸಾಹ. ಅದನ್ನು ಒದಗಿಸಲು ಕೇಂದ್ರ ಸರ್ಕಾರ ಉಪಕ್ರಮ ಕೈಗೊಂಡಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಯುವಕರಿಗೆ ಪ್ರಾರಂಭಿಸಲು ಪ್ರೋತ್ಸಾಹವನ್ನ ನೀಡುತ್ತಿವೆ.ಇದು ಹಲವಾರು ಸಾಲಗಳ ರೂಪದಲ್ಲಿ ವ್ಯವಹಾರವನ್ನ ಪ್ರಾರಂಭಿಸಲು ಅಗತ್ಯವಾದ ಆರಂಭಿಕ ಕಾರ್ಪಸ್ ಒದಗಿಸುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಂತಹ ಒಂದು ಯೋಜನೆಯಾಗಿದೆ. ಕೃಷಿಯೇತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವವರಿಗೆ ಸಾಲ ನೀಡುವ ಮೂಲಕ ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ, ಬ್ಯಾಂಕುಗಳು ದೇಶಾದ್ಯಂತ ಲಕ್ಷಾಂತರ ಕೋಟಿ ಸಾಲವನ್ನ ಮಂಜೂರು ಮಾಡಿವೆ. ನಮ್ಮ ರಾಜ್ಯಗಳಲ್ಲೂ ಅನೇಕ ಉತ್ಸಾಹಿಗಳು ಸಹ ಇದರಿಂದ ಪ್ರಯೋಜನ ಪಡೆದಿದ್ದಾರೆ. 


ಇತ್ತೀಚೆಗೆ, ದೇಶಾದ್ಯಂತ 40 ಕೋಟಿಗೂ ಹೆಚ್ಚು ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಆದಾಗ್ಯೂ, ಈ ಯೋಜನೆಯನ್ನ ಹೇಗೆ ಬಳಸಬೇಕೆಂದು ಅನೇಕ ಜನರಿಗೆ ಇನ್ನೂ ತಿಳಿದಿಲ್ಲ. ನೀವು ಸಣ್ಣ ವ್ಯವಹಾರವನ್ನ ಪ್ರಾರಂಭಿಸಲು ಯೋಚಿಸುತ್ತಿದ್ದರೆ, ನಿಮ್ಮ ಬಳಿ ಅದಕ್ಕೆಬಂಡವಾಳವಿಲ್ಲದಿದ್ದರೆ, ಈ ಮುದ್ರಾ ಯೋಜನೆ ಬಹಳ ಉಪಯುಕ್ತವಾಗಿದೆ. ಈ ಮುದ್ರಾ ಲೋನ್ ಗೆ ಅರ್ಹತಾ ಮಾನದಂಡಗಳು ಯಾವುವು.? ಅರ್ಜಿ ಸಲ್ಲಿಸುವುದು ಹೇಗೆ.? ನೋಡೋಣ.


10 ಲಕ್ಷ ರೂ.ವರೆಗೆ ಸಾಲ.!

ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8, 2015ರಂದು ಪ್ರಾರಂಭಿಸಿದರು. ಭಾರತದ ಯಾವುದೇ ನಾಗರಿಕನು ಉತ್ಪಾದನೆ, ವ್ಯಾಪಾರ, ಸೇವೆಗಳು ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸಾಲವನ್ನ ಪಡೆಯಬಹುದು. ಯಾವುದೇ ಜಾಮೀನು ಮತ್ತು ಅಡಮಾನದ ಅಗತ್ಯವಿಲ್ಲದೆ, 10 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು.


ವಿಸ್ತರಿಸಲು ಸಹ ಸಾಲ.!

ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಿಮ್ಮಲ್ಲಿ ಸಾಕಷ್ಟು ಹೂಡಿಕೆ ಹಣವಿಲ್ಲದಿದ್ದರೆ, ನೀವು ಈ ಮುದ್ರಾ ಯೋಜನೆಯನ್ನ ಪಡೆಯಬಹುದು. ಅಲ್ಲದೆ, ನೀವು ಈಗಾಗಲೇ ಯಾವುದೇ ಸಣ್ಣ ವ್ಯವಹಾರವನ್ನ ಮಾಡುತ್ತಿದ್ದರೆ, ಅದನ್ನು ವಿಸ್ತರಿಸಲು ಸಹ ಈ ಯೋಜನೆ ಸಹಾಯ ಮಾಡುತ್ತದೆ. ಇದಕ್ಕೆ ಯಾವುದೇ ಖಾತರಿಯ ಅಗತ್ಯವಿಲ್ಲ. ಯಾವುದೇ ಅಡಮಾನ ಇಡುವ ಅಗತ್ಯವಿಲ್ಲ.


ಮುದ್ರಾ ಸಾಲಗಳ ವಿಧಗಳು.!

ಪಿಎಂ ಮುದ್ರಾ ಯೋಜನೆಯಡಿ ಮೂರು ರೀತಿಯ ಸಾಲಗಳನ್ನ ಪಡೆಯಬಹುದು. ಶಿಶು, ಕಿಶೋರ್ ಮತ್ತು ತರುಣ್ ಮೂರು ರೀತಿಯ ಸಾಲಗಳು. ಮಕ್ಕಳ ಸಾಲದ ಮೊತ್ತ 50,000 ರೂಪಾಯಿ ಮತ್ತು ಕಿಶೋರ್ ಸಾಲ 50,001 ರೂ.ಗಳಿಂದ ರೂ. 5 ಲಕ್ಷ ರೂ.ಗಳವರೆಗೆ, ತರುಣ್ ಲೋನ್ ಎಂದರೆ 5,00,001 ರಿಂದ ರೂಪಾಯಿ ನೀವು 10 ಲಕ್ಷ ರೂ.ಗಳವರೆಗೆ ಸಾಲವನ್ನ ತೆಗೆದುಕೊಳ್ಳಬಹುದು. ವ್ಯಕ್ತಿಗಳು ತಮ್ಮ ಅಗತ್ಯಕ್ಕಾಗಿ ಇವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.ಸಾಲ ಯಾರು ಕೊಡುತ್ತಾರೆ.?

ಈ ಮುದ್ರಾ ಸಾಲಗಳನ್ನ ಬ್ಯಾಂಕುಗಳು, ಇತರ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಒದಗಿಸುತ್ತವೆ. ವಾಣಿಜ್ಯ ಬ್ಯಾಂಕುಗಳು, ಆರ್‌ಆರ್ಬಿಗಳು, ಸಹಕಾರಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಇವುಗಳನ್ನು ನೀಡುತ್ತವೆ. ನೀವು ಅದಕ್ಕೆ ಅರ್ಜಿ ಸಲ್ಲಿಸಿದ್ರೆ, ನೀವು ಅರ್ಜಿ ಸಲ್ಲಿಸಿದ ಮೊತ್ತದ 10 ಪ್ರತಿಶತವನ್ನ ನೀವು ಸಂಗ್ರಹಿಸಬೇಕು. ಉಳಿದ ಶೇ.90ರಷ್ಟನ್ನು ಸಾಲವಾಗಿ ಮಂಜೂರು ಮಾಡಲಾಗುವುದು.


ಅರ್ಜಿ ಸಲ್ಲಿಸುವುದು ಹೇಗೆ.?

ಪಿಎಂ ಮುದ್ರಾ ಸಾಲಕ್ಕಾಗಿ ನೀವು ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ, https://www.udyamimitra.in/ ವೆಬ್ಸೈಟ್ಗೆ ಹೋಗಿ ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಇತರ ವ್ಯವಹಾರ ದಾಖಲೆಗಳನ್ನು (ಬ್ಯಾಂಕ್ ಸ್ಟೇಟ್ಮೆಂಟ್, ಐಟಿಆರ್, ಪ್ಯಾನ್ ಕಾರ್ಡ್ ಇತ್ಯಾದಿ) ಬ್ಯಾಂಕಿನಲ್ಲಿ ಸಲ್ಲಿಸಬೇಕಾಗುತ್ತದೆ

ಕಡಬ : ನೇಣು ಬಿಗಿದು ಕಾಣಿಯೂರು ಮೂಲದ ದಿವ್ಯಾಶ್ರೀ ಆತ್ಮಹತ್ಯೆ

Posted by Vidyamaana on 2024-03-04 16:29:08 |

Share: | | | | |


ಕಡಬ : ನೇಣು ಬಿಗಿದು ಕಾಣಿಯೂರು ಮೂಲದ ದಿವ್ಯಾಶ್ರೀ ಆತ್ಮಹತ್ಯೆ

ಕಾಣಿಯೂರು : ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರಿನಲ್ಲಿ ನಡೆದಿದೆ.

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಅನಿಲ ಮನೆ ಪದ್ಮಯ್ಯ ಗೌಡ ಅವರ ಪುತ್ರಿ ದಿವ್ಯಾಶ್ರೀ (26) ಮೃತ ಯುವತಿ.ಮಾ.3ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ದಿವ್ಯಾಶ್ರೀ ಅವರು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ನಡೆಸಿರುವುದನ್ನು ಗಮನಿಸಿ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಯುವತಿ ಮೃತಪಟ್ಟಿದ್ದರು.

ಯುವತಿಯ ಬಗ್ಗೆ ಎರಡು ತಿಂಗಳ ಹಿಂದೆ ಅಪಪ್ರಚಾರ ನಡೆಸಲಾಗಿದ್ದು, ಇದೇ ಕಾರಣಕ್ಕೆ ನೊಂದು ಯುವತಿ ಕೃತ್ಯ ಎಸಗಿದ್ದಾರೆ ಎಂದು ಬೆಳ್ಳಾರೆ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ವ್ಯಕ್ತಿಯ ಮೇಲೆ ತಲವಾರು ದಾಳಿ:ಚರಣ್ ರಾಜ್ ಸಹಿತ ಮೂವರ ಬಂಧನ

Posted by Vidyamaana on 2023-08-22 10:50:41 |

Share: | | | | |


ಮಂಗಳೂರು  ವ್ಯಕ್ತಿಯ ಮೇಲೆ ತಲವಾರು ದಾಳಿ:ಚರಣ್ ರಾಜ್ ಸಹಿತ ಮೂವರ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯ ಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಮೂವರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚರಣ್ ರಾಜ್ ( 23), ಸುಮಂತ್ ಬರ್ಮನ್ (24), ಅವಿನಾಶ (24) ಬಂಧಿತ ಆರೋಪಿಗಳು.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ತಲವಾರು ಬಿಸೀದ್ದಾರೆ. ಈ ವೇಳೆ ವ್ಯಕ್ತಿಯು ತಪ್ಪಿಸಿಕೊಂಡಿದ್ದಾರೆ. ಆದರೆ ಮುಖಕ್ಕೆ ಗಾಯವಾಗಿದೆ.


ಇನ್ನು ಕಾವೂರು ಪೊಲೀಸರು ಕಾರ್ಯಪ್ರವತ್ತರಾಗಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರ ತೊರೆಯಬೇಕು:ದ.ಕ. ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಆದೇಶ

Posted by Vidyamaana on 2024-04-24 18:24:14 |

Share: | | | | |


ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರ ತೊರೆಯಬೇಕು:ದ.ಕ. ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಆದೇಶ

ಮಂಗಳೂರು: ಏಪ್ರಿಲ್ 26 ರಂದು ಲೋಕಸಭಾ ಚುನಾವಣಾ ಮತದಾನದ ಹಿನ್ನೆಲೆಯಲ್ಲಿ ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆ ಬಳಿಕ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮು ಸೂಚಿಸಿದ್ದಾರೆ.



Leave a Comment: