ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್

Posted by Vidyamaana on 2024-01-25 15:32:59 |

Share: | | | | |


ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್

ಹಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ನಾವು ನಮ್ಮ ಸ್ನೇಹಿತರ, ಕುಟುಂಬದವರ ಮೊಬೈಲ್ ಸಂಖ್ಯೆಗಳನ್ನು (Mobile Number) ನೆನಪಿಟ್ಟುಕೊಳ್ಳುವ ಕಾಲವೊಂದಿತ್ತು.ಆದರೆ, ಮೊಬೈಲ್ ತಂತ್ರಜ್ಞಾನವು ಮುಂದುವರೆದ ನಂತರ, ನಾವು ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಮರೆತುಬಿಟ್ಟಿದ್ದೇವೆ. ಈಗ ಜನರು ತಮ್ಮ ಫೋನ್‌ಗಳಲ್ಲಿ ಕಾಂಟೆಕ್ಟ್ ಅನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಯಾರಿಗಾದರೂ ಕರೆ ಮಾಡಬೇಕು ಎಂದಿದ್ದರೆ, ಆ ನಂಬರ್ ಅನ್ನು ಡಯಲ್ ಮಾಡುವ ಬದಲು, ಕಾಂಟೆಕ್ಟ್ ಲಿಸ್ಟ್​ಗೆ ಹೋಗಿ ಕರೆ ಮಾಡಿದರೆ ಆಯಿತು. ಆದರೆ, ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಏನು ಗತಿ?.


ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.


ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಫೋನ್ ನಂಬರ್ ಸೇವ್ ಮಾಡಲು Google ID ಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.

ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ.

ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ.

ಫೋನ್ ಬ್ಯಾಕಪ್‌ನಿಂದ ಮೊಬೈಲ್ ನಂಬರ್ ಮರಳಿ ಪಡೆಯಿರಿ:


ನಿಮ್ಮ ಫೋನ್‌ನ ಬ್ಯಾಕಪ್ ನೀವು ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಿ.

ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.

ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ.

ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ.

ನಿಮ್ಮ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೀವು ನೋಡಬಹುದು. ನೀವು ಹೌದು ಎಂದು ಬಯಸಿದರೆ, ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.ಥರ್ಡ್ ಪಾರ್ಟಿ ಅಪ್ಲಿಕೇಷನ್:


ನೀವು ಗೂಗಲ್ ಖಾತೆ ಅಥವಾ ಫೋನ್ ಬ್ಯಾಕಪ್ ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಡಿಲೀಟ್ ಆದ ಕಾಂಟ್ಯಾಕ್ಟ್ ನಂಬರ್ ಗಳನ್ನೂ ಇವುಗಳ ಮೂಲಕ ಹಿಂಪಡೆಯಬಹುದು. ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಲೀಟ್ ಆದ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಕಂಡುಹಿಡಿಯುವ ಸೌಲಭ್ಯವನ್ನು ಈ ಅಪ್ಲಿಕೇಶನ್‌ಗಳು ಒದಗಿಸುತ್ತವೆ. ಥರ್ಡ್ ಪಾರ್ಟಿ ಅಪ್ಲಿಕೇಷನ್​ಗಳನ್ನು ಡೌನ್‌ಲೋಡ್ ಮಾಡುವಾಗ, ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಯಪಲ್ ಆಯಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಥರ್ಡ್ ಪಾರ್ಟಿ ಅಪ್ಲಿಕೇಷನ್ ಅಪಾಯಕಾರಿಯಾಗಿದೆ.

ಕುಮಾರ ಪರ್ವತದ ಗಿರಿಗದ್ದೆ ಭಟ್ರು ಇನ್ನಿಲ್ಲ: ಕಾಡಿನ ಮಧ್ಯ ಮನೆಯೂಟ ನೀಡ್ತಿದ್ದ ಮಹಾಲಿಂಗ ಭಟ್ರು

Posted by Vidyamaana on 2023-12-21 11:56:10 |

Share: | | | | |


ಕುಮಾರ ಪರ್ವತದ ಗಿರಿಗದ್ದೆ ಭಟ್ರು ಇನ್ನಿಲ್ಲ: ಕಾಡಿನ ಮಧ್ಯ ಮನೆಯೂಟ ನೀಡ್ತಿದ್ದ ಮಹಾಲಿಂಗ ಭಟ್ರು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಗಿರಿಗದ್ದೆ ನಿವಾಸಿ ಮಹಾಲಿಂಗ ಭಟ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ಡಿ.20ರ ಬುಧವಾರ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಒರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.ಕುಮಾರಪರ್ವತ ದಾರಿಯ ಗಿರಿಗದ್ದೆಯಲ್ಲಿ ಮನೆ ಹೊಂದಿದ್ದ ಮಹಾಲಿಂಗ ಭಟ್ ಅವರು ಗಿರಿಗದ್ದೆ ಭಟ್ಟರು ಎಂದೇ ಖ್ಯಾತರಾಗಿದ್ದರು. ಇವರು ಕುಮಾರಪರ್ವತ ಚಾರಣಿಗರಿಗೆ ಉಪಚಾರ, ಮಾರ್ಗದರ್ಶನ, ಆಹಾರ ತಯಾರಿಸಿ ನೀಡುವ, ಆಶ್ರಯ ನೀಡುವ ಮೂಲಕ ಚಿರಪರಿಚಿತರಾಗಿದ್ದು, ಚಾರಣಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.


ಕುಮಾರಪರ್ವತ ಚಾರಣಕ್ಕೆ ತೆರಳುವ ಹೆಚ್ಚಿನವರು ಇವರನ್ನು ಸಂಪರ್ಕಿಸಿಯೇ ಆಗಮಿಸುತ್ತಿದ್ದರು. ಮಹಾಲಿಂಗ ಭಟ್ ಅವರ ಮನೆಗೆ ಆಹಾರ ಸಾಮಾಗ್ರಿಗಳನ್ನು ಹಾಗೂ ಮತ್ತಿತರ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಸಾಗಬೇಕಾಗಿತ್ತು. ಮಹಾಲಿಂಗ ಭಟ್ ಅವರು ಗಿರಿಗದ್ದೆಯಲ್ಲಿ ಕೃಷಿ ಕೆಲಸ ನಿರ್ವಹಿಸಿತ್ತಿದ್ದರು

ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

Posted by Vidyamaana on 2024-06-24 18:27:43 |

Share: | | | | |


ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

ಪುತ್ತೂರು :ಇಲ್ಲಿನ ಪುರುಷರಕಟ್ಟೆಯ ನಿವಾಸಿಯಾಗಿದ್ದ ದಿ.ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಶಾಂತಿಗೋಡು ಇವರ ಸ್ಮರಣಾರ್ಥ ಟೈ ಬ್ರೇಕರ್ಸ್ ಪುರುಷರಕಟ್ಟೆ ಹಾಗೂ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಜಂಟಿ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಸೆಂಟರ್ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುರುಷರಕಟ್ಟೆ ಜಂಕ್ಷನ್ ನಲ್ಲಿ ಜೂ 24ರಂದು ಯಶಸ್ವಿಯಾಗಿ ನಡೆಯಿತು.

 60 ಮಂದಿ ಸ್ವಯಂ ಪ್ರೇರಿತರಾಗಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವದಾನಿಗಳಾದರು.

ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

Posted by Vidyamaana on 2023-09-25 12:32:36 |

Share: | | | | |


ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

ಬೆಂಗಳೂರು : ದೇಶದ ವಿವಿಧ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಪಡೆದಂತ ಅನೇಕರು ದೇಶದಿಂದಲೇ ಪರಾರಿಯಾಗಿದ್ದಾರೆ. ಈಗ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಂತ 2,888 ಮಂದಿ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC) ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದಂತ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರೋ ಶಾಕಿಂಗ್ ವಿಚಾರ ಬಯಲಾಗಿದೆ.ಇನ್ನೂ ಹೀಗೆ 1,404 ಕೋಟಿ ಸಾಲ ಪಡೆದು ನಾಪತ್ತೆಯಾಗಿರುವಂತ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಸಿಂಹಪಾಲು ಆಗಿದೆ. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.


ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ 25 ರಿಂದ 30 ವರ್ಷಗಳಿಂದ ಸಾಲಗಾರರು, ತಾವು ಪಡೆದಿರುವ ಸಾಲ ಪಾವತಿಸದಿರುವ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿಯಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಕಟ್ಟದೇ ನಾಪತ್ತೆಯಾಗಿದ್ದಾರೆ.ಅಂದಹಾಗೇ ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ ಒಟ್ಟಾರೆ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್

Posted by Vidyamaana on 2024-06-04 08:08:09 |

Share: | | | | |


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಓಪನ್

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಸುರತ್ಕಲ್ ಎನ್.ಐ.ಟಿ.ಕೆ ಕಾಲೇಜಿನಲ್ಲಿ ಇಂದು (ಜೂ 4) ರಂದು ಬೆಳಿಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಎಣಿಕೆ ಪ್ರಕ್ರಿಯೆ ಭಾಗವಾಗಿ ದ.ಕ ಡಿಸಿ ಮುಲೈ ಮುಗಿಲನ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಅನ್ನು ಚುನಾವಣಾ ಅಧಿಕಾರಿಗಳು ಓಪನ್ ಮಾಡಿದ್ದಾರೆ.

ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ - ಲಕ್ಷಾಂತರ ನಷ್ಟ

Posted by Vidyamaana on 2023-10-21 12:35:31 |

Share: | | | | |


ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ -  ಲಕ್ಷಾಂತರ  ನಷ್ಟ

ಉಪ್ಪಿನಂಗಡಿ : ಹಾಸನ ಕಡೆಯಿಂದ ಮಂಗಳೂರಿಗೆ ಅಕ್ಕಿಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ (Shir

non

i Ghat) ಸಂಭವಿಸಿದೆ.ಶಿರಾಡಿ ಘಾಟ್ ನ ಡಬಲ್ ಟರ್ನ್ ನಲ್ಲಿ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Seemore ವಿಡಿಯೋ ನೋಡಲು ಕ್ಲಿಕ್ ಮಾಡಿ 

ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ - ಲಕ್ಷಾಂತರ ನಷ್ಟ


ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಲಾರಿ ಚಾಲಕ ಹಾಗೂ ಕ್ಲೀನರ್, ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಪಾರಾಗಿದ್ದಾರೆ.ಲಾರಿ ಹಾಗೂ ಅದರಲ್ಲಿದ್ದ ಅಕ್ಕಿ ಸಂಪೂರ್ಣ ಸುಟ್ಟು ಹೋಗಿದೆ. ಹಾಸನದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಆದರೂ ಲಾರಿ ಅಕ್ಕಿ ಸಮೇತ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಕೆಲ ಹೊತ್ತು ಅಡಚಣೆ

ಉಂಟಾಗಿತ್ತು ಎಂದು ತಿಳಿದುಬಂದಿದೆ.



Leave a Comment: