ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಡೀಪ್‌ ಫೇಕ್‌ ಕಂಟಕ ; ಭಾರತೀಯ ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

Posted by Vidyamaana on 2023-11-17 19:56:03 |

Share: | | | | |


ಡೀಪ್‌ ಫೇಕ್‌ ಕಂಟಕ ; ಭಾರತೀಯ  ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

ಹೊಸದಿಲ್ಲಿ, ನ.17: ಡೀಪ್‌ ಫೇಕ್‌ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.


ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಬಹುದು. ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಪ್ರಧಾನಿ ಮಾಧ್ಯಮಗಳಿಗೆ ಒತ್ತಾಯಿಸಿದರು.


ದೆಹಲಿಯ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಡೀಪ್‌ ಫೇಕ್‌ ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು.


ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್‌ಫೇಕ್‌ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು ಇತ್ತೀಚೆಗೆ ರಾಜಕಾರಣಿಗಳನ್ನೂ ಗುರಿ ಮಾಡಲಾಗುತ್ತಿದೆ, ಕೃತಕ ವಾಯ್ಸ್‌ಓವರ್‌, ನಕಲಿ ವೀಡಿಯೋ ಕ್ಲಿಪ್‌ಗಳನ್ನು ಬಳಸಿ ರಾಜಕಾರಣಿಗಳನ್ನ ಗುರಿಯಾಗಿಸಲಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಬಾ ನೃತ್ಯ ಮಾಡುತ್ತಿರುವ ಡೀಪ್‌ ಫೇಕ್‌ ವಿಡಿಯೋ ಉಲ್ಲೇಖಿಸಿ ಮಾತನಾಡಿದ್ದು, ತಾನು ಚಿಕ್ಕಂದಿನಿಂದಲೂ ಗರ್ಬಾ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.


ವೈರಲ್‌ ವೀಡಿಯೋದಲ್ಲಿ ಪ್ರಧಾನಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕೆಲ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಕಂಡುಬಂದಿತ್ತು. ಆದ್ರೆ ಮಾಧ್ಯಮ ಸಂಸ್ಥೆಯೊಂದು ಅದನ್ನು ಫ್ಯಾಕ್ಟ್‌ಚೆಕ್‌ಗೆ ಒಳಪಡಿಸಿದಾಗ ವೀಡಿಯೋದಲ್ಲಿದ್ದ ವ್ಯಕ್ತಿ ಪ್ರಧಾನಿಯಲ್ಲ, ವಿಕಾಸ್‌ ಮಹಂತೆ ಎನ್ನುವ ನಟ‌ ಎಂದು ತಿಳಿದುಬಂದಿತ್ತು.


ಇತ್ತೀಚೆಗೆ ಡೀಪ್‌ ಫೇಕ್‌ ವೀಡಿಯೋಗಳು ಹೆಚ್ಚಾಗುತ್ತಿದ್ದು, ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಕಾಜೋಲ್, ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್ ವೀಡಿಯೋಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ

ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

Posted by Vidyamaana on 2024-01-22 21:11:36 |

Share: | | | | |


ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ  ಹಿನ್ನೆಲೆಯಲ್ಲಿ ಪುತ್ತೂರಿನ ರಾಧಿಕ ಪ್ಲಾಜ್ಹಾ ಹಾಗೂ  ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ 

ಲಘು ಉಪಹಾರ, ಸಿಹಿತಿಂಡಿ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಆರ್ . ಭಾನುಪ್ರಕಾಶ್,ಜಗದೀಶ್ ಆಚಾರ್ಯ,ಕೃಷ್ಣಪ್ಪ ಗೌಡ,ರೋಹಿತ್,ನಾಗೇಶ್ ಆಚಾರ್ಯ,ಸಂತೋಷ ಬಂಬಿಲ ,ಪದ್ಮನಾಭ,ಅಭಿಷೇಕ್,ರಾಜೇಶ್ ಆಚಾರ್ಯ,ವಿನೋದ್,ಕೇಶವ ಅಭಿರಾ,ವೆಂಕಟೇಶ್,ಗಣೇಶ್ ಕೊಡಿಯಾಡಿ,ದೀಕ್ಷಿತ್,ಹರ್ಷಿತ್

ಹರೀಶ್ ಸಾವಿತ್ರಿ ಜ್ಯುವೆಲರಿ,ಕೃಷ್ಣಯ್ಯಾ ಆಚಾರ್ಯ,ಪ್ರಸಾದ್ ಸುಬ್ರಮಣ್ಯ,ಗಣೇಶ್ ವಿಟ್ಲ,ರಾಮಣ್ಣ ನಿಡ್ದ್ಪಳಿ,ಚಂದ್ರ ಸುಳ್ಯ ಉಪಸ್ಥಿತರಿದ್ದರು

ಬೆಳ್ತಂಗಡಿ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಪ್ರಕರಣ ಹರೀಶ್ ಪೂಜಾರಿ ಬಂಧನ

Posted by Vidyamaana on 2023-07-12 16:53:38 |

Share: | | | | |


ಬೆಳ್ತಂಗಡಿ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಪ್ರಕರಣ ಹರೀಶ್ ಪೂಜಾರಿ ಬಂಧನ

ಬೆಳ್ತಂಗಡಿ: ಬಜಿರೆ ಗ್ರಾಮದ ಕೊರಗಕಲ್ಲು ಸ್ವಾಮಿ ಕೊರಗಜ್ಜ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿದ ಆರೋಪದಲ್ಲಿ ವೇಣೂರು ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಹರೀಶ್ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಕೊರಗಕಲ್ಲು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ನೀಡಿದ ದೂರಿನಲ್ಲಿ ಹರೀಶ್ ಪೂಜಾರಿ, ಡಾ.ರಾಜೇಶ್, ರಮೇಶ್ ಕುಡೇರು ಓಂ ಪ್ರಕಾಶ್, ಮತ್ತು ಪ್ರಶಾಂತ್ ರವರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸ್ಥಳಕ್ಕೆ ಡಿವೈಎಸ್ಪಿ ಗಾನ ಕುಮಾರ್, ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್, ಎಸ್.ಐ ಸೌಮ್ಯ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹರೀಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರೆ. ಘಟನೆಯಲ್ಲಿ ಇತರ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ

ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

Posted by Vidyamaana on 2023-05-30 06:11:09 |

Share: | | | | |


ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

ಮೈಸೂರು: ಇಂದು ಮೈಸೂರಿನಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಮಧ್ಯೆ ಸಂಭಮೈವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾದವರ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿದ್ದು, ಸತ್ತ ಹತ್ತೂ ಮಂದಿ ಒಂದೇ ಕುಟುಂಬದವರು ಎಂಬುದು ತಿಳಿದುಬಂದಿದೆ.ಮೈಸೂರಿನ ಕೊಳ್ಳೆಗಾಲದ ಬಳಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಬಳ್ಳಾರಿ ತಾಲೂಕಿನ ಸಂಗನಕಲ್ಲ ಗ್ರಾಮಸ್ಥರು.

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆ.ಎಸ್ ಈಶ್ವರಪ್ಪ

Posted by Vidyamaana on 2023-04-11 09:40:23 |

Share: | | | | |


ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.ಈ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ

ನಾಳೆ ಯಾರೂ ಪುತ್ತೂರಿನ ಯಾವುದೇ ಆಸ್ಪತ್ರೆ/ ಕ್ಲಿನಿಕ್ ಕಡೆ ತಲೆ ಹಾಕ್ಬೇಡಿ!!- ಡಾಕ್ಟರ್ ಗಳು ನಾಳೆ ಆಸ್ಪತ್ರೆಗಳಿಗೆ ಬರೋದಿಲ್ಲ..!! ಇಲ್ಲಿದೆ ರಿಸನ್ ಮತ್ತು ಡಿಟೇಲ್ಸ್

Posted by Vidyamaana on 2024-08-16 21:05:32 |

Share: | | | | |


ನಾಳೆ ಯಾರೂ ಪುತ್ತೂರಿನ ಯಾವುದೇ ಆಸ್ಪತ್ರೆ/ ಕ್ಲಿನಿಕ್ ಕಡೆ ತಲೆ ಹಾಕ್ಬೇಡಿ!!- ಡಾಕ್ಟರ್ ಗಳು ನಾಳೆ ಆಸ್ಪತ್ರೆಗಳಿಗೆ ಬರೋದಿಲ್ಲ..!! ಇಲ್ಲಿದೆ ರಿಸನ್ ಮತ್ತು ಡಿಟೇಲ್ಸ್

ಪುತ್ತೂರು :, ಆಗಸ್ಟ್ 16: ವೈದ್ಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್, ಕೊಲೆಯ ಘಟನೆ ನಡೆದಿರುವ ಕೊಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗೂಂಡಾಗಳು ನುಗ್ಗಿ ದಾಂಧಲೆ ನಡೆಸಿದ್ದನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಸಿಡಿದೆದ್ದಿದ್ದಾರೆ. ಘಟನೆ ಖಂಡಿಸಿ ಆಗಸ್ಟ್ 17 ಮತ್ತು 18ರಂದು ದೇಶಾದ್ಯಂತ ವೈದ್ಯರು 24 ಗಂಟೆ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಸೂಚಿಸಲಿದ್ದಾರೆ. 

ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಎಲ್ಲಾ ಕ್ಲಿನಿಕ್ ಗಳು, ಡೆಂಟಲ್ ಕ್ಲಿನಿಕ್ ಗಳು ನಾಳೆ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಡಾಕ್ಟರ್ಸ್ ಫಾರಂ ಪ್ರೆಸಿಡೆಂಟ್ ಡಾ ಸುರೇಶ್ ಪುತ್ತೂರಾಯ ಮತ್ತು IMA ಅಧ್ಯಕ್ಷ Dr .ನರಸಿಂಹ ಶರ್ಮ ಕಾನಾವು ಜಂಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ 

Recent News


Leave a Comment: