ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ರಾಜ್ಯದ APL-BPL ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಆರೋಗ್ಯ ಕಾರ್ಡ್ನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

Posted by Vidyamaana on 2023-12-07 08:41:00 |

Share: | | | | |


ರಾಜ್ಯದ APL-BPL ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಆರೋಗ್ಯ ಕಾರ್ಡ್ನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

ಬೆಳಗಾವಿ : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಬಹುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ.ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.‌


ರಾಜ್ಯದ ಬಿಪಿಎಲ್ ಕಾರ್ಡುದಾರರು ₹5 ಲಕ್ಷ ಹಾಗೂ APL ಕಾರ್ಡುದಾರರಿಗೆ ಗರಿಷ್ಠ ₹1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ. ಯೋಜನೆಗೆ ಕೇಂದ್ರದಿಂದ ಶೇ. 34ರಷ್ಟು ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಶೇ.66ರಷ್ಟು ಅನುದಾನವನ್ನ ಒದಗಿಸಲಿದೆ. ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಸ್ವಾತಂತ್ರ್ಯೋತ್ಸವಕ್ಕೆ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ ಪೂರ್ತಿ ಖರ್ಚು ನಾನು ನೀಡುತ್ತೇನೆ

Posted by Vidyamaana on 2023-08-12 03:27:28 |

Share: | | | | |


ಸ್ವಾತಂತ್ರ್ಯೋತ್ಸವಕ್ಕೆ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ ಪೂರ್ತಿ ಖರ್ಚು ನಾನು ನೀಡುತ್ತೇನೆ

ಪುತ್ತೂರು; ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಬರಿಯ ೭೬ ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯಲಿದ್ದು ಬಳಿಕ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲಾ ಖರ್ಚುಗಳನ್ನು ನಾನೇ ನೀಡುತ್ತೇನೆ ಎಂದು ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ವಾಗ್ದಾನ ನೀಡಿದ್ದು ಖರ್ಚಿನ ಮೊತ್ತವನ್ನು ಈಗಾಗಲೇ ಅಧಿಕಾರಿಗಳ ಕೈಗೆ ನೀಡಿದ್ದಾರೆ.

ಪ್ರತೀ ಬಾರಿ ಸ್ವಾತಂತ್ರ್ಯೋತ್ಸವ ದಿನದ ಖರ್ಚಿನ ಹಣವನ್ನು ವಿವಿಧ ಇಲಾಖೆಯಿಂದ ಒಟ್ಟುಗೂಡಿಸಿ ಅದನ್ನು ಬಳಸುತ್ತಿದ್ದರು. ಸ್ವಾತಂತ್ರ್ಯೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಶಾಸಕರಿಗೆ ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದರು. ಇಲಾ ಖೆಗಳಿಂದ ಹಣ ಒಗ್ಗೂಡಿಸುವುದು ಬೇಡ ಅದು ಕೂಡಾ ಭೃಷ್ಟಾಚಾರದ ಒಂದು ಭಾಗವಾಗಿದೆ ಯಾವುದೇ ಕಾರಣಕ್ಕೂ ಯಾವ ಇಲಾಖೆಯವರು ಕೂಡಾ ಸ್ವಾತಂತ್ರ್ಯೋತ್ಸವದ ಖರ್ಚಿಗೆ ಹಣ ನೀಡುವುದು ಬೇಡ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಿ ಆ ಮೊತ್ತವನ್ನು ನಾನು ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಸ್ವಂತ ಹಣದಿಂದ ಸರಕಾರಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದು ಶಾಸಕರ ನಡೆಗೆ ಮತ್ತು ಭೃಷ್ಟಾಚಾರದ ವಿರೋಧಿನಿಲುವಿಗೆ ಪ್ರಶಂಸೆ ವ್ಯಕ್ತವಾಗಿದೆ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ ಜಾಮೀನು

Posted by Vidyamaana on 2023-11-19 11:10:35 |

Share: | | | | |


ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ ಜಾಮೀನು

ಪುತ್ತೂರು: ಸುಮಾರು ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ  ರಾಮ ಕುಂಜ ಗ್ರಾಮದ ಖಂಡಿಗ ನಿವಾಸಿ  ಸೇಸಪ್ಪ ರವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.


 ದಿನಾಂಕ 04/10/2020 ರಂದು ಬೆಳಿಗ್ಗೆ 11:00 ಗಂಟೆಗೆ ನೊಂದ ಬಾಲಕಿಯ ಮನೆಯಾದ ಹಳೆ ನೇರಂಕಿಯಲ್ಲಿ ಬೆದರಿಸಿ, ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿರುವುದಾಗಿದೆ. ಆಕೆಯ ದೈಹಿಕ ಬದಲಾವಣೆಯನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದವರು ತಪಾಸಣೆ ನಡೆಸಿದಾಗ  ಗರ್ಭಿಣಿ ಎಂಬುದಾಗಿ  ತಿಳಿದಿರುವುದಾಗಿದೆ. ಈ ಬಗ್ಗೆ  ಬಾಲಕಿಯ ತಾಯಿಯು  ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು  ಭಾರತೀಯ ದಂಡ ಸಂಖ್ಯೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 5 ಮತ್ತು 6 ರನ್ವಯ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ ಸೇಸಪ್ಪ ರವರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು.ನಂತರ ಪೊಲೀಸರು ಆರೋಪಿ ವಿರುದ್ಧ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೀಗಿರುವಾಗ, ಆರೋಪಿಯು ತನ್ನ ಪರ

ವಕೀಲರಾದ ಕಜೆ ಲಾ ಚೇಂಬರ್ಸ್ ನ  ಶ್ರೀ ಮಹೇಶ್ ಕಜೆ ಅವರ ಮುಖಾಂತರ   ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷಾಧಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ,ದೂರಿನಲ್ಲಿ ನ ವಿಳಂಬ, ಡಿಎನ್ಎ ಋಣಾತ್ಮಕ ವರದಿ, ಸೂಕ್ತ  ವೈಜ್ಞಾನಿಕ ಸಾಕ್ಷಾಧಾರಗಳ  ಕೊರತೆ,  ಎಂಬಿತ್ಯಾದಿ  ಅಂಶಗಳನ್ನು ವಾದಿಸಿದ್ದರು  ಸರಕಾರಿ ಅಭಿಯೋಜಕರು ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್ ವಿ ರವರು ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ

Posted by Vidyamaana on 2024-05-26 13:22:03 |

Share: | | | | |


ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ

ಉಡುಪಿ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ, ಮಹಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಆಯೋಜಿಸಲಾಗಿತ್ತು.

ಹಾಸನ; ನವವಿವಾಹಿತೆ ಸುರಭಿ ಅನುಮಾನಾಸ್ಪದ ಸಾವು, ಗಂಡನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗಳನ್ನ ಕೊಲೆ ಮಾಡಿ ನೇಣು ಹಾಕಿದ್ದಾನೆ ಪೋಷಕರು ಆರೋಪ

Posted by Vidyamaana on 2024-02-24 04:55:11 |

Share: | | | | |


ಹಾಸನ; ನವವಿವಾಹಿತೆ ಸುರಭಿ ಅನುಮಾನಾಸ್ಪದ ಸಾವು, ಗಂಡನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗಳನ್ನ ಕೊಲೆ ಮಾಡಿ ನೇಣು ಹಾಕಿದ್ದಾನೆ  ಪೋಷಕರು ಆರೋಪ

ಹಾಸನ, ಫೆ 24: ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.


24 ವರ್ಷದ ಸುರಭಿ ಮೃತ ದುರ್ದೈವಿಯಾಗಿದ್ದು, ಪತಿಯೇ ಕೊಲೆ ಮಾಡಿದ್ದಾನೆಂದು ಮೃತ ಪೋಷಕರು ಆರೋಪ ಮಾಡಿದ್ದಾರೆ.


ಹುಣಸೂರಿನ ಮೃತ ಯುವತಿಯನ್ನು ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ವಿವಾಹ ಮಾಡಿಕೊಟ್ಟಿದ್ದರು. ಆದರೆ ನಿನ್ನೆ ಗಂಡನ ಮನೆಯಲ್ಲಿ ಸುರಭಿ ಏಕಾಏಕಿ ಸಾವನ್ನಪ್ಪಿದ್ದಾಳೆ. ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ಪತಿ ದರ್ಶನ್, ಸುರಭಿ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. 


ಸದ್ಯ ಸುರಭಿ ಪೋಷಕರು ಅಳಿಯನೇ ಮಗಳನ್ನು ಕೊಲೆ ಮಾಡಿದ್ದಾನೆ. ದರ್ಶನ್‌ ಬೇರೆ ಯುವತಿ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ಪ್ರಶ್ನಿಸುತ್ತಿದ್ದ ಸುರಭಿಯನ್ನು ನೇಣು ಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶ್ರವಣಬೆಳಗೊಳ ಆಸ್ಪತ್ರೆಗೆ ಸುರಭಿ ಮೃತದೇಹವನ್ನು ಪೊಲೀಸರು ಶಿಫ್ಟ್ ಮಾಡಿದ್ದಾರೆ. ಸ್ಥಳಕ್ಕೆ ಶ್ರವಣಬೆಳಗೊಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ

ವಿದ್ಯಾಮಾತ ಅಕಾಡೆಮಿಯ ಸುಳ್ಯ ಶಾಖೆ ಉದ್ಘಾಟನೆ – ಗಣ್ಯರ ಶುಭ ಹಾರೈಕೆ

Posted by Vidyamaana on 2023-10-02 07:44:52 |

Share: | | | | |


ವಿದ್ಯಾಮಾತ ಅಕಾಡೆಮಿಯ ಸುಳ್ಯ ಶಾಖೆ ಉದ್ಘಾಟನೆ – ಗಣ್ಯರ ಶುಭ ಹಾರೈಕೆ

ಸುಳ್ಯ: ಸಮಾಜಕ್ಕೆ ಬೇಕಾದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುತ್ತಿರುವ ವಿದ್ಯಾಮಾತ ಅಕಾಡೆಮಿ, ಅವಿಭಜಿತ ಜಿಲ್ಲಾಕೇಂದ್ರಗಳಾದ ಮಂಗಳೂರು, ಉಡುಪಿ, ಕುಂದಾಪುರದಲ್ಲೂ ಆರಂಭವಾಗಲಿ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶುಭಹಾರೈಸಿದರು.

ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಮೂಲಕ ಮನೆ ಮಾತಾಗಿರುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಸುಳ್ಯ ರಥಬೀದಿಯ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಗುರುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮೂಲಕ ನಮ್ಮ ಊರಿನ ಯುವಕರು, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎನ್ನುವ ಆಶಯದೊಂದಿಗೆ ವಿದ್ಯಾಮಾತಾದ ಭಾಗ್ಯೇಶ್ ರೈ ಕೆಲಸ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅವರ ಎಲ್ಲಾ ಆಶಯಗಳು ಈಡೇರಲಿ ಎಂದು ಹಾರೈಸಿದರು.


ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಯಶಸ್ವಿ ಸಾಧನೆ ಮಾಡಿ .ಇದೀಗ ಸುಳ್ಯದಲ್ಲಿ ಶಾಖೆಯೊಂದು ಆರಂಭಗೊಂಡಿದೆ ಸಂತಸ. ಸುಳ್ಯ ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರಿಗಿಂತಲೂ ಎತ್ತರ ಏರಿದೆ. ಆರ್ಥಿಕ ಸಮಸ್ಯೆಯಿರುವಂತಹ ವಿದ್ಯಾರ್ಥಿಗಳಿಗೂ ಅಕಾಡೆಮಿ ತರಬೇತಿ ನೀಡೋ ಕಾರ್ಯ ಮಾಡುವಲ್ಲಿ ಸೈ ಎನಿಸಿದ್ದು ಮಂಗಳೂರಿನಲ್ಲಿ ಕೂಡ ಶಾಖೆ ಶೀಘ್ರದಲ್ಲೇ ಉದ್ಘಾಟನೆಯಾಗಲಿಯೆಂದು ಹೇಳಿದರು.


ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್‌. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಈ ಕಟ್ಟಡದಲ್ಲಿ ಒಳ್ಳೆಯ ತರಬೇತಿ ಕೇಂದ್ರ ಆರಂಭವಾಗಬೇಕುನ್ನುವ ಆಕಾಂಕ್ಷೆಯಿತ್ತು, ಅದು ಈಗ ಭಾಗ್ಯಶ್ ರೈ ಮೂಲಕ ಪೂರ್ಣ ವಾಗಿದೆ. ಐ.ಎ.ಎಸ್,ಕೆ.ಎ.ಎಸ್ ತರಬೇತಿ ಕೇಂದ್ರವೇ ಇಲ್ಲದಿರುವ ಸುಳ್ಯಕ್ಕೆ ಅತ್ಯುತ್ತಮ ಭಾಗ್ಯ ಒದಗಿಬಂದಿದೆ.ಅಕಾಡೆಮಿ ಯೋಜನೆ ಯೋಚನೆ ಹಾಗೂ ವ್ಯವಸ್ಥೆಯಿಂದ ಯಶಸ್ಸು ಸಾಧ್ಯವಾಗಲಿಯೆಂದು ಹೇಳಿದರು.


ವಿದ್ಯಾರ್ಥಿಗಳಿಗೆ, ಸಾಧಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಸನ್ಮಾನ

ಭಾರತೀಯ ಸೇನೆಗೆ ಆಯ್ಕೆಗೊಂಡಿರುವ 2 ಜಿಲ್ಲೆಯ 6 ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಸಾಧಕರೂ ಹಾಗೂ ಅಕಾಡೆಮಿಯ ಸಿಬ್ಬಂದಿ ವರ್ಗಕ್ಕೆ ಅತಿಥಿಗಳ ಮುಖೇನ ಸನ್ಮಾನ ಕಾರ್ಯಕ್ರಮ ನಡೆಯಿತು

ಭಾಗ್ಯಶ್ ರೈಯವರ ತಂದೆ-ತಾಯಿ ಎ.ಕೆ.ತಿಮ್ಮಪ್ಪ ರೈ  ಪುತ್ರಿ ದೇವಿದ್ಯಾ ರೈ,ಕೊಳ್ತಿಗೆ ಕೆಳಗಿನ ಮನೆ ಮತ್ತು ರತ್ನಾವತಿ ಟಿ.ರೈ, ಮಾಜಿ ವಿಧಾನ ಪರಿಷತ್‌ ಸದಸ್ಯ ಅಣ್ಣಾ ವಿನಯಚಂದ್ರ, ಪಿ.ಸಿ.ಜಯರಾಮ್, ಜಯಪ್ರಕಾಶ್ ರೈ, ಪ್ರೊ| ಬಾಲಚಂದ್ರ ಗೌಡ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ನಗರ ಕಾಂಗ್ರೆಸ್‌ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಗಣೇಶ್ ಶೆಟ್ಟಿ, ಲಯನ್ಸ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ, ರವಿಪ್ರಸಾದ್ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್‌.ಬಿ.ಜಯರಾಮ್ ರೈ, ಪಿ.ಎಸ್.ಗಂಗಾಧರ್, ಭಾಗ್ಯಶ್ ರೈ ಸಹೋದರ ಯೋಗೀಶ್ ರೈ ಮತ್ತು ಚಿಕ್ಕಪ್ಪ ಎ.ಕೆ.ಜಯರಾಮ ರೈ, ಅತ್ತೆ-ಮಾವ ಸಂಕಪ್ಪ ಶೆಟ್ಟಿ ಹಾಗೂ ಪ್ರೇಮಾ ಎಸ್ ಶೆಟ್ಟಿ, ಟಿಎಪಿಸಿಎಂಎಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಅರವಿಂದ ಚೊಕ್ಕಾಡಿ, ಡಾ| ಪೂವಪ್ಪ ಕಣಿಯೂರು, ವಿನಯ ಕಂದಡ್ಕ, ಪಿ.ಬಿ.ಸುಧಾಕರ ರೈ,ಸುಭಾಶ್ಚಂದ್ರ ರೈ ಸಾರ್ಯ, ಹರಿನಾಥ ರೈ ಕೂಡೇಲು, ವಿದ್ಯಾಮಾತಾ ಅಕಾಡೆಮಿ ಇದರ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿಗಳ ಸಹಿತ ಹಲವರು ಹಾಜರಿದ್ದರು. ಭಾಗ್ಯಶ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರೂಪಿಸಿ, ಅಕಾಡೆಮಿಯ ಸಂಚಾಲಕಿ ರಮ್ಯಾ ಭಾಗೇಶ್ ರೈ ವಂದಿಸಿದರು.ಕಾರ್ಯಕ್ರಮದ ನಡುವೆ ಪುತ್ತೂರಿನ ವಿಶ್ವ ಕಲಾ ನಿಕೇತನ ತಂಡದಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ಇದಕ್ಕೂ ಮೊದಲು ವೇದಿಕೆ ಮುಂಭಾಗದ ನಟರಾಜ ಮೂರ್ತಿಗೆ ಗೌರವ ಅರ್ಪಣೆ ನೆರವೇರಿತು. ಸಂಜೆ ದುರ್ಗಾ ನಮಸ್ಕಾರವೂ ನಡೆಯಿತು.

ವಿದ್ಯಾಮಾತಾ ಅಕಾಡೆಮಿ:

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಕಳೆದ 5 ವರ್ಷಗಳಲ್ಲಿ 4000 ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವ ಅವಕಾಶವನ್ನು ಮಾಡಿಕೊಟ್ಟಿದೆ. ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ ಇದೀಗ ಸುಳ್ಯದಲ್ಲಿ ಶಾಖೆಯನ್ನು ತೆರೆದಿದೆ.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರು 2017ರಲ್ಲಿ ಪುತ್ತೂರಿನಲ್ಲಿ ವಿದ್ಯಾಮಾತಾ ಫೌಂಡೇಶನ್ 2017ನ್ನು ಹುಟ್ಟು ಹಾಕಿದರು. 2020ರಲ್ಲಿ ವಿದ್ಯಾಮಾತಾ ಅಕಾಡಮಿ ಸ್ಥಾಪಿಸಿ ಸರ್ಕಾರದ ಮಾನ್ಯತೆ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಆರಂಭಿಸಿದರು.ಕಳೆದ ಎರಡು ವರ್ಷಗಳಲ್ಲಿ 90 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರ್ಕಾರಿ ಸೇವೆಗೆ ಸೇರುವಂತೆ ತರಬೇತು ಮಾಡಿದ್ದಾರೆ. ಸುಮಾರು 4000 ಕ್ಕೂ ಅಧಿಕ ಮಂದಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಇದೀಗ ಶಾಖೆ ಆರಂಭಿಸಿದ್ದಾರೆ. ಎಲ್ಲಾ ವೃತ್ತಿಪರ ಕೋರ್ಸ್ ಗಳ ಅರ್ಜಿ,ಉದ್ಯೋಗ ಮಾಹಿತಿ,ತರಬೇತಿ, ಎಲ್ಲಾ ಶ್ರೇಣಿಯ ಉದ್ಯೋಗಗಳಿಗೆ ತರಬೇತಿ ಈ ಸಂಸ್ಥೆಯಲ್ಲಿ ಸಿಗುತ್ತದೆ.

Recent News


Leave a Comment: