ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಸುದ್ದಿಗಳು News

Posted by vidyamaana on 2024-06-18 14:45:56 |

Share: | | | | |


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಪುತ್ತೂರು: ಮಂಗಳೂರು-ಬೆಂಗಳೂರು ರಸ್ತೆ, ರೈಲ್ವೇ

ಸಂಪರ್ಕ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಂಗಳೂರಿನಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಲಿಸ್ಟ್ ಮಾಡಿ ಯಾವ್ಯಾವ ಹಂತದಲ್ಲಿದೆ, ಕಾನೂನು ತೊಡಕುಗಳು ಎಲ್ಲವನ್ನೂ ಸರಿಪಡಿಸಲು ವರದಿ ತಯಾರಿಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಬಿ.ಸಿ.ರೋಡು, ಅಡ್ಡಹೊಳೆ, ಶಿರಾಡಿ ಘಾಟ್ ರಸ್ತೆಗಳಿಗಿರುವ ಅಡಚಣೆ, ಕಾನೂನು ತೊಡಕುಗಳನ್ನು ಮನಗಂಡು ಸಾಧ್ಯವಾದಷ್ಟು ಶೀಘ್ರದಲ್ಲಿ ಎಲ್ಲಾ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸುವ ಇರಾದೆ ಹೊಂದಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡು ಹಿಂದೂಪರ ಕಾರ್ಯಕರ್ತರ ಮೆಲೆ ದಬ್ಬಾಳಿಕೆ ಮೂಲಕ ದಮನ ಮಾಡುವ ಕಾರ್ಯ, ಸುಳ್ಳು ಕೇಸುಗಳನ್ನು ಹಾಕುತ್ತಿದ್ದು, ಈ ಕುರಿತ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅವರ ಶ್ರೇಯಸ್ಸಿಗೋಸ್ಕರ ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.

ಬಳಿಕ ಸಂಸದರು ಪುತ್ತೂರು ಬಿಜೆಪಿ ಕಚೇರಿಗೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ಆ‌ರ್.ಸಿ.ನಾರಾಯಣ, ಬುಡಿಯಾರ್ ರಾಧಾಕೃಷ್ಣ ರೈ,ಅರುಣ್ ಕುಮಾರ್ ಪುತ್ತಿಲ, ನಿತೀಶ್ ಕುಮಾರ್ ಶಾಂತಿವನ, ಚಂದ್ರಶೇಖರ ರಾವ್‌ ಬಪ್ಪಳಿಗೆ, ಅನಿಲ್‌ ತೆಂಕಿಲ, ಪ್ರಸನ್ನ ಮಾರ್ತ, ರಾಜೇಶ್ ಬನ್ನೂರು, ಸಹಜ್ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬಿಜೆಪಿ ಕಾರ್ಯಕರ್ತರು ಮತ್ತಿತರರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

 Share: | | | | |


ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Posted by Vidyamaana on 2023-08-29 01:48:42 |

Share: | | | | |


ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಮಂಗಳೂರು; ಕೆರೆಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಉಳ್ಳಾಲದ ತಲಪಾಡಿಯಲ್ಲಿ ನಡೆದಿದೆ.ದುರ್ಗಿಪಳ್ಳ ನಿವಾಸಿ ಹರೀಶ ಯಾನೆ ಹರಿ ಪ್ರಸಾದ್ ಆಚಾರ್ಯ (36) ದುರ್ದೈವಿ.ಅವಿವಾಹಿತರಾಗಿದ್ದ ಹರಿಪ್ರಸಾದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತ ಚಟ ಹೊಂದಿದ್ದರಂತೆ.ಕಳೆದ ನಾಲ್ಕು ದಿವಸಗಳಿಂದ ಮನೆಗೂ ಹೋಗಿರಲಿಲ್ಲ ಎನ್ನಲಾಗಿದೆ.ಹರಿಪ್ರಸಾದ್ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಎಂಬವರೊಂದಿಗೆ ಸಮೀಪದ ಖಾಸಗಿ ಲೇ ಔಟ್ ನಲ್ಲಿರುವ ಕೆರೆಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ಅಕಸ್ಮತ್ ಆಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ಕಡಬ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್

Posted by Vidyamaana on 2024-03-30 19:42:56 |

Share: | | | | |


ಕಡಬ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್

ಕಡಬ: ಅಡಿಕೆ ಆಮದಿನ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಆಗಬೇಕು. ಅಡಿಕೆಗೆ ಎದುರಾಗಿರುವ ರೋಗಬಾಧೆಗಳ ನಿವಾರಣೆಗೆ ಸಂಶೋಧನಾ ಕೇಂದ್ರ ತೆರೆಯುವ ಅಗತ್ಯವಿದೆ. ಇದರ ಜೊತೆಗೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಗೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಶ್ರಮ ಪಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಖಂಡಿತವಾಗಿಯೂ ಕಾಂಗ್ರೆಸ್ ಜಯ ಸಾಧಿಸಲಿದೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವ. ಹಿಂದೂ ದರ್ಮದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವನು ನಾನು. ಜೊತೆಗೆ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಆದರೆ ಎಲ್ಲಿಯೂ ಕೂಡ ಅಪಪ್ರಚಾರ, ಅಪನಂಬಿಕೆ ಬರುವ ಕೆಲಸ ಮಾಡಿಲ್ಲ. ಆದ್ದರಿಂದ ನಾವು ಯಾರನ್ನು ದ್ವೇಷಿಸುವ, ವಿರೋಧಿಸುವ ಕೆಲಸ ಮಾಡುವುದು ಬೇಡ. ಕಾಂಗ್ರೆಸ್ ಸರಕಾರದ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ ಮತ ಕೇಳಿ ಎಂದರು.


ವಿಟ್ಲ: ಸ್ಕೂಟರ್ ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ: ರಿಕ್ಷಾ ಪ್ರಯಾಣಿಕ ನಾಗೇಶ್ ಸ್ಥಳದಲ್ಲೇ ಮೃತ್ಯು

Posted by Vidyamaana on 2023-10-24 07:31:12 |

Share: | | | | |


ವಿಟ್ಲ: ಸ್ಕೂಟರ್ ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ: ರಿಕ್ಷಾ ಪ್ರಯಾಣಿಕ ನಾಗೇಶ್ ಸ್ಥಳದಲ್ಲೇ ಮೃತ್ಯು

ವಿಟ್ಲ: ಪೆರುವಾಯಿ–ಬೆರಿಪದವು ರಸ್ತೆಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ರಿಕ್ಷಾದಲ್ಲಿದ್ದ ಮೂವರ ಪೈಕಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಪೆರುವಾಯಿ–ಬೆರಿಪದವು ರಸ್ತೆಯಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಟಿ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ರಿಕ್ಷಾದಲ್ಲಿದ್ದ ಬಾಯಾರು ಪೆರುವೋಡಿ ನಿವಾಸಿ ನಾಗೇಶ್ ಭಟ್ (47) ಎಂಬವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಉಳಿದವರು ಗಂಭೀರ ಗಾಯ ಗೊಂಡಿದ್ದು, ಸ್ಥಳದಲ್ಲಿ ಸೇರಿದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.


ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾ.9 : ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

Posted by Vidyamaana on 2024-03-07 08:57:44 |

Share: | | | | |


ಮಾ.9 : ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

ಪುತ್ತೂರು : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ  ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9 ರಂದು  ನಡೆಯಲಿದೆ.

ಮಾ.9 ರಂದು ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ ,ಶ್ರೀ ಮಹಾಗಣಪತಿ ಹೋಮ ನಡೆಯಲಿದೆ.

ಸಂಜೆ 6 ಗಂಟೆಗೆ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು ,ರಾತ್ರಿ 7 ರಿಂದ ಶ್ರೀರಾಜಗುಳಿಗ ದೈವದ ನರ್ತನ ಸೇವೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ರಾಜಗುಳಿಗ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ನಂತೂರು ವೃತ್ತದಲ್ಲಿ ಪ್ರಾಣ ಹಿಂಡುತ್ತಿದ್ದ ಗುಂಡಿಗಳು

Posted by Vidyamaana on 2023-09-23 09:49:40 |

Share: | | | | |


ನಂತೂರು ವೃತ್ತದಲ್ಲಿ ಪ್ರಾಣ ಹಿಂಡುತ್ತಿದ್ದ ಗುಂಡಿಗಳು

ಮಂಗಳೂರು: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಕಳೆದ ಎರಡು ವಾರಗಳಲ್ಲಿ ವಾಹನ ಸವಾರರು ಚಲಿಸಲಾಗದ ಸ್ಥಿತಿ ಉಂಟಾಗಿತ್ತು. ತಿರುವಿನ ಭಾಗದಲ್ಲಿಯೇ ಇಂತಹ ಸ್ಥಿತಿಯಾಗಿದ್ದರಿಂದ ಅಲ್ಲಿ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯೂ ಭಾರೀ ತ್ರಾಸ ಪಡುತ್ತಿದ್ದರು. ಅಲ್ಲದೆ, ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾಗಿತ್ತು. ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೊಲೀಸ್ ಸಿಬಂದಿಯೇ ಗುಂಡಿ ಬಿದ್ದ ಜಾಗಕ್ಕೆ ಜಲ್ಲಿ ಹುಡಿ ತಂದು ತಾತ್ಕಾಲಿಕ ರಿಪೇರಿ ಕೆಲಸ ಮಾಡಿದ್ದಾರೆ.


ಟ್ರಾಫಿಕ್ ಕರ್ತವ್ಯದಲ್ಲಿದ್ದ ಕದ್ರಿ ಸಂಚಾರಿ ಠಾಣೆ ವಿಭಾಗದ ಎಸ್ಐ ಈಶ್ವರ ಸ್ವಾಮಿ ಮತ್ತು ಎಎಸ್ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿಯನ್ನು ಹಿಡಿದು ತಾವೇ ದುರಸ್ತಿ ಕೆಲಸ ಮಾಡಿದ್ದಾರೆ. ವಾಹನಗಳ ಸಾಗಾಟದ ನಡುವೆಯೇ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ನಂತೂರು ವೃತ್ತದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಜೊತೆಗೂಡುವುದರಿಂದ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಉಡುಪಿ ಕಡೆಯಿಂದ ಬರುವ ದೊಡ್ಡ ಗಾತ್ರದ ವಾಹನಗಳು ಬೆಂಗಳೂರು, ಪುತ್ತೂರು, ಮಡಿಕೇರಿ ಕಡೆಗೆ ಸಾಗಲು ನಂತೂರು ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುತ್ತದೆ. ಅದೇ ಜಾಗದಲ್ಲಿ ಪೂರ್ತಿ ಡಾಮರು ಕಿತ್ತು ಹೋಗಿದ್ದರಿಂದ ಗುಂಡಿ ಬಿದ್ದು ಜಲ್ಲಿ ಜಾರಿ ಹೋಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಾಗಿತ್ತು. ಇತ್ತೀಚೆಗೆ 15 ದಿನಗಳಲ್ಲಿ ಮಳೆ ಹೆಚ್ಚು ಬಿದ್ದಿದ್ದರಿಂದ ಸಂಚಾರವೇ ದುಸ್ತರವಾಗಿತ್ತು. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅಲ್ಲಿಯೇ ನಿಂತು ಪೊಲೀಸರು ಜಾಗ್ರತೆ ವಹಿಸಬೇಕಾದ ಸ್ಥಿತಿಯಿತ್ತು.


ಹೆದ್ದಾರಿ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದ್ದರೂ, ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಪೊಲೀಸ್ ಸಿಬಂದಿಯೇ ಜಲ್ಲಿಯನ್ನು ತಂದು ರಸ್ತೆ ರಿಪೇರಿ ಮಾಡಿಸಿದ್ದಾರೆ. ಪೊಲೀಸರ ಕೆಲಸದ ಬಗ್ಗೆ ಸಾರ್ವಜನಿಕರ ಕಡೆಯಿಂದ ಅಭಿನಂದನೆಗಳ ಮಹಾಪೂರ ಜಾಲತಾಣದಲ್ಲಿ ಹರಿದು ಬಂದಿದೆ. ಇದೇ ಮಳೆಗಾಲದಲ್ಲಿ ಮೂರನೇ ಬಾರಿ ರಸ್ತೆ ಕಿತ್ತು ಹೋಗಿದ್ದು, ಹೆದ್ದಾರಿ ಅಧಿಕಾರಿಗಳ ಕಳಪೆ ಕಾಮಗಾರಿಯನ್ನೂ ಇದು ಎತ್ತಿತೋರಿಸಿದೆ.

ಮುಳಿಯ ಜ್ಯುವೆಲ್ಸ್‌ನೊಂದಿಗೆ ಯುಗಾದಿ ಸಂಭ್ರಮ

Posted by Vidyamaana on 2023-03-22 02:07:50 |

Share: | | | | |


ಮುಳಿಯ ಜ್ಯುವೆಲ್ಸ್‌ನೊಂದಿಗೆ ಯುಗಾದಿ ಸಂಭ್ರಮ

ಪುತ್ತೂರು: ರಾಜ್ಯದ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಎಲ್ಲ ಶೋರೂಂಗಳಲ್ಲಿ ಮಾರ್ಚ್ 22ರಂದು ಯುಗಾದಿ ಒನ್‌ ಡೇ ವಿಶೇಷ ಆಫರ್‍‌ ನೀಡಲಾಗುತ್ತಿದೆ. ಪ್ರತಿ ಖರೀದಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಒಟ್ಟಾರೆಯಾಗಿ 100 ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ. ಪ್ರತಿ Walk-in ಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ ನೀಡಲಾಗುತ್ತಿದೆ. ಈ ಆಫರ್ ನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶೋ ರೂಂ ನ ಪ್ರಬಂಧಕರನ್ನು ಸಂಪರ್ಕಿಸಬಹುದು.

ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಮಳಿಗೆಗಳಲ್ಲಿ ಈ ಆಫರ್‍‌ ಲಭ್ಯವಿದೆ. ಗ್ರಾಹಕರು ಯುಗಾದಿ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಆಭರಣಗಳ ಖರೀದಿಗಾಗಿ ಮುಳಿಯ ಜ್ಯುವೆಲ್ಸ್‌ನ ಮಳಿಗೆಗಳಿಗೆ ಹಬ್ಬದ ದಿನ ತಪ್ಪದೇ ಭೇಟಿ ನೀಡಿ ಎಂದು ಸಂಸ್ಥೆ ಆಹ್ವಾನಿಸುತ್ತಿದೆ. ನೆನಪಿರಲಿ, ಈ ಕೊಡುಗೆ ಯುಗಾದಿ ಹಬ್ಬದ ದಿನ ಮಾತ್ರ ಲಭ್ಯವಿದೆ.



Leave a Comment: