ಸಿದ್ದರಾಮಯ್ಯ ಭೇಟಿ ಮಾಡಿದ ರೇಣುಕಾಸ್ವಾಮಿ ತಂದೆ-ತಾಯಿ; ಇಟ್ಟ ಬೇಡಿಕೆ ಏನು?

ಸುದ್ದಿಗಳು News

Posted by vidyamaana on 2024-06-25 21:18:36 |

Share: | | | | |


ಸಿದ್ದರಾಮಯ್ಯ ಭೇಟಿ ಮಾಡಿದ ರೇಣುಕಾಸ್ವಾಮಿ ತಂದೆ-ತಾಯಿ; ಇಟ್ಟ ಬೇಡಿಕೆ ಏನು?

ಬೆಂಗಳೂರು , ಜೂನ್‌ 25: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿದ್ದು, ಈ ಪ್ರಕರಣ ಕುರಿತು ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಜೈಲುವಶವಾಗಿದ್ದಾರೆ. ಆದರೆ ಕುಟುಂಬದ ಆಧಾರವಾಗಿದ್ದ ರೇಣುಕಾಸ್ವಾಮಿಯನ್ನು ಕಳೆದುಕೊಂಡ ತಂದೆ ತಾಯಿ ಇಂದು (ಮಂಗಳವಾರ) ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.

ರೇಣುಕಾಸ್ವಾಮಿ ಅವರ ತಂದೆ , ತಾಯಿ ಇಂದು ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪುತ್ರನಿ ಸಾವಿನ ಕುರಿತು ತಂದಿ ತಾಯಿ ಇಬ್ಬರು ಕಣ್ಣೀರು ಹಾಕಿದ್ದಾರೆ. ತಪ್ಪು ಮಾಡಿದ್ದರೆ ಕರೆದು ಬುದ್ಧಿ ಹೇಳಬಹುದಿತ್ತು, ಅಥವಾ ಪೊಲೀಸರಿಗೆ ದೂರು ಕೊಡಬಹುದಿತ್ತು ಆದರೆ ಬರ್ಬರವಾಗಿ ಕೊಂದುಬಿಡುವುದು ಯಾವ ನ್ಯಾಯ ಎಂದು ಅವಲತ್ತುಕೊಂಡಿದ್ದಾರೆ.

ರೇಣುಕಾಸ್ವಾಮಿ ತಂದೆ ತಾಯಿ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವಾನ ಹೇಳಿ, ಪೊಲೀಸ್‌ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸ್‌ ತನಿಖೆಯ ಬಗ್ಗೆ ರೇಣುಕಾಸ್ವಾಮಿ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದೆ ರೇಣುಕಾಸ್ವಾಮಿ, ಹೆಂಡತಿ ಮೊಮ್ಮಗುವಿಗೆ ಮುಂದೆ ಯಾರು ಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನೋವು ತೋಡಿಕೊಂಡಿದ್ದಾರೆ.


ಈ ವೇಳೆ ಕುಟುಂಬ ನಿರ್ವಹಣೆಗಾಗಿ ತಮ್ಮ (ಸೊಸೆ) ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು,ರೇಣುಕಾಸ್ವಾಮಿ ಪತ್ನಿಗೆ ಪರಿಹಾರ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡುವಂತೆಯೂ ಒತ್ತಾಯಿಸಿದ್ದಾರೆ.

 Share: | | | | |


ಹರೀಶ್ ಪೂಂಜ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

Posted by Vidyamaana on 2024-05-23 17:53:31 |

Share: | | | | |


ಹರೀಶ್ ಪೂಂಜ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ಮಂಗಳೂರು,ಶಾಸಕ ಹರೀಶ್ ಪೂಂಜ ಪೊಲೀಸರು, ತಹಸೀಲ್ದಾರನ್ನು ನಿಂದಿಸಿ ಬೆಳ್ತಂಗಡಿ ನಾಗರಿಕರಿಗೆ ಅವಮಾನ ಮಾಡಿದ್ದಾರೆ. ರೌಡಿಯಂತೆ ವರ್ತಿಸಿ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ. ರೌಡಿ ರೀತಿ ವರ್ತಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತಾಕತ್ತಿದ್ದರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಜನರಿಂದ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಕ್ಷೇತ್ರವನ್ನು ರತ್ನವರ್ಮ ಹೆಗ್ಗಡೆ, ವೈಕುಂಠ ಬಾಳಿಗಾ, ಸುಬ್ಬಯ್ಯ ಹೆಗಡೆ, ವಸಂತ ಬಂಗೇರರಂತವರು ಪ್ರತಿನಿಧಿಸಿದ್ದರು. ವಸಂತ ಬಂಗೇರ ಐದು ಬಾರಿ ಶಾಸಕರಾಗಿ ಗೌರವ ತಂದುಕೊಟ್ಟಿದ್ದಾರೆ. ಹರೀಶ್ ಪೂಂಜ ಈಗ ವಸಂತ ಬಂಗೇರ ಮಾಡಲು ಹೋಗಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಬಂಗೇರ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವರು, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಕೆಲಸ ಮಾಡುತ್ತಿದ್ದರು. ಯಾವತ್ತೂ ಭ್ರಷ್ಟಾಚಾರಿ, ರೌಡಿಗಳ ಪರ ಕೆಲಸ ಮಾಡಿದವರಲ್ಲ.

ಪುತ್ತೂರು : ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆ

Posted by Vidyamaana on 2024-06-21 16:24:10 |

Share: | | | | |


ಪುತ್ತೂರು : ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಯೋಗದಿನಾಚರಣೆ

ಪುತ್ತೂರು :ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿ ವಿಶ್ವ ಯೋಗದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಜೂ. 21:ರಂದು ಆಚರಿಸಲಾಯಿತು. ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ.ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಸಾಧ್ಯವಿದ್ದು, ಯೋಗ ಇದ್ದರೆ ರೋಗವಿಲ್ಲ,

ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

Posted by Vidyamaana on 2023-01-18 08:23:59 |

Share: | | | | |


ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: 1979ರಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ಒಕ್ಕಲುತನ ಮಾಡುತ್ತಿದ್ದ ಮನೆಗಳಲ್ಲಿ ನಿಂತು, ಇಲ್ಲಿನ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಸಂಘಟನೆಯ ಕಾರ್ಯಕ್ಕೂ ಚಾಲನೆ ನೀಡಿ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ, ಕೊಂಬೆಟ್ಟು ಐಟಿಐ ನಿರ್ಮಾಣಕ್ಕೆ ಕಾರಣಕರ್ತರಾದರು. ಅವರ ಈ ಎಲ್ಲಾ ಕೆಲಸಗಳನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಜ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

Posted by Vidyamaana on 2023-09-26 13:02:56 |

Share: | | | | |


ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ ಚಾಲಕ ಮೃತ ಪಟ್ಟ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.


ಮೃತ ಚಾಲಕನನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ಬಸ್ ನ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.


ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಮುಕ್ವೆ ರಝಾಕ್ ಉಸ್ತಾದ್ ಖ್ಯಾತಿಯ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಕ್ವೆ ನಿಧನ

Posted by Vidyamaana on 2024-01-03 15:37:55 |

Share: | | | | |


ಮುಕ್ವೆ ರಝಾಕ್ ಉಸ್ತಾದ್ ಖ್ಯಾತಿಯ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಕ್ವೆ ನಿಧನ

ಪುತ್ತೂರು: ಮುಕ್ವೆ ಮಸೀದಿಯ ಮುದರಿಸ್ ಆಗಿದ್ದ ಅಬ್ದುಲ್ ರಝಾಕ್ ಮುಸ್ಲಿಯಾರ್ (70 ವ.) ಬುಧವಾರ ಮಧ್ಯಾಹ್ನ  ನರಿಮೂಗರು ಗ್ರಾಮದ ಪಾಪೆತಡ್ಕ ದಲ್ಲಿರುವ  ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.


ಮೂಲತಃ ಕಾಸರಗೋಡಿನ ತೆಕ್ಕಿಲ್ ನಿವಾಸಿಯಾಗಿರುವ ಇವರು, ಪುತ್ತೂರು ತಂಙಲ್ ಸಯ್ಯದ್ ಮಹಮ್ಮದ್ ಹಾದಿಲ್ ಖಾದಿರಿಯ್ಯ ಅವರ ಶಿಷ್ಯನಾಗಿ ಸೇರಿಕೊಂಡರು. ನಂತರ ವಿಟ್ಲ ಕುಡ್ತಮುಗೇರುವಿನಲ್ಲಿ ಮುದರಿಸ್ ಆಗಿ ಸೇವೆ ಆರಂಭಿಸಿದರು. ಬಳಿಕ ಕೆಮ್ಮಾಯಿ, ಚಾಪಲ್ಲ, ಬಡಕೋಡಿ ಮೊದಲಾದೆಡೆ ಸೇವೆ ನೀಡಿ ವಾಲೆಮುಂಡೋವು ಮಸೀದಿ ಖತೀಬರಾಗಿ ಆಯ್ಕೆಗೊಂಡಿದ್ದರು.


ಮುಕ್ವೆ ಮಸೀದಿಯಲ್ಲಿ ಸದರ್ ಉಸ್ತಾದರಾಗಿ, ಸಹ ಮುದರಿಸ್ ಆಗಿ ಸುದೀರ್ಘ 30ಕ್ಕಿಂತ ಹೆಚ್ಚು ವರ್ಷಗಳ ಕಾಲ ಸೇವೆ ನೀಡಿ, ಜನರ ವಿಶ್ವಾಸ ಗಳಿಸಿದ್ದರು. ಮಾತ್ರವಲ್ಲ ಮುಕ್ವೆ ರಝಾಕ್ ಉಸ್ತಾದ್ ಎಂದೇ ಗುರುತಿಸಿಕೊಂಡಿದ್ದರು.

 ಅವರ ಹಿರಿಯ ಪುತ್ರ ಅನೀಸ್ ನಿಝಾಮಿ ಅಲ್ ಅರ್ಷದಿ ಅವರು ತಂದೆಯ ಹಾದಿಯಲ್ಲಿದ್ದಾರೆ.

ಮೃತರು ಪತ್ನಿ ಕಡ್ಯ ಪೊಡಿಯಬ್ಬ ಹಾಜಿಯ ಪುತ್ರಿ ರುಖ್ಯಾ, ಆರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

Posted by Vidyamaana on 2023-09-14 04:35:30 |

Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಬಿಜೆಪಿ ತತ್ತರಿಸಿಹೋಗಿದ್ದು ಅಸ್ತಿತ್ವ ಉಳಿಸುದಕ್ಕೋಸ್ಕರ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಸೆ. ೧೩ ರಂದು ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ದ ಪುತ್ತೂರು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಬ್ಲಾಕ್ ಅಧ್ಯಕ್ಷರು ಇದು ಪ್ರತಿಭಟನೆಗೋಸ್ಕರ ನಡೆದ ಪ್ರತಿಭಟನೆಯಾಗಿದೆ, ಪುತ್ತೂರಿನಲ್ಲಿ ಬಿಜೆಪಿಗೆ ಉಳಿಗಾಲವಿಲ್ಲದಂತ ಪರಿಸ್ಥಿತಿ ಇದೆ, ಕಾರ್ಯಕರ್ತರಿಲ್ಲದೆ ಬಿಜೆಪಿ ಕಂಗಾಲಾಗಿದೆ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಈ ಪ್ರತಿಭಟನಾ ನಾಟಕ ಇಂದು ಪ್ರದರ್ಶನವಾಗಿದೆ ವಿನ ಅವರು ಮಡಿದ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕರದ ಗ್ಯಾರಂಟಿ ಯೋಜನೆಯ ಫಲವಾಗಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಯಗುತ್ತಿದ್ದಾರೆ ಇದೆಲ್ಲವೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿಗರು ಬೆಚ್ಚಿ ಬಿದ್ದಿದ್ದಾರೆ ಅದರ ಪರಿಣಾಮವೇ ಇಂದು ನಡೆದ ಪ್ರತಿಭಟನೆಯಾಗಿದೆ ಎಂದು ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

Recent News


Leave a Comment: