ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

ಸುದ್ದಿಗಳು News

Posted by vidyamaana on 2024-06-28 23:59:46 |

Share: | | | | |


  ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೀಗ ಕೊಡಗಿನಲ್ಲಿ ಹೊಸ ಟ್ರೆಂಡ್ ಆಗಿ ಪ್ರವಾಸಿಗರನ್ನು ಸೆಳೆಯಲು ಹಲವು ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗುತ್ತಿದೆ.

ಆದರೆ, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ.

ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ. ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ.

ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ. ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ.

ಘಟನಾ ಸ್ಥಳಕ್ಕೆ ಕೊಡಗು ಡಿಸಿ ವೆಂಕಟ್ ರಾಜ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗ್ಲಾಸ್ ಬ್ರಿಡ್ಜ್ ಲಾಕ್ ಮಾಡಿದ್ದು, ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಇದು ಅಧಿಕೃತ ಗಾಜಿನ ಸೇತುವೆಯಲ್ಲ. ಏಕೆಂದರೆ ಸಂಬಂಧಪಟ್ಟವರು ಯಾವುದೇ ಅಗತ್ಯ ಅನುಮತಿಯನ್ನು ಪಡೆದಿಲ್ಲ. ಈ ಸೇತುವೆಗೆ ಅರಣ್ಯ ಅನುಮತಿ ಇಲ್ಲ. ಸೇತುವೆಯನ್ನು ನಿರ್ಮಿಸುವ ಮುನ್ನ ಮಣ್ಣು ಪರೀಕ್ಷೆ ಸೇರಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಗ್ರಾಮ ಪಂಚಾಯಿತಿಯ ಏಕಮಾತ್ರ ನಿರ್ಣಯದ ಮೇರೆಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಂದ್ ಮಾಡಲಾಗುತ್ತಿದೆ ಎಂದು ಡಿಸಿ ವೆಂಕಟ್ ರಾಜ ಅವರು ತಿಳಿಸಿದ್ದಾರೆ.

ಇದೇ ವೇಳೆ ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂಚಾಯಿತಿಯೇ ಈ ಗ್ಲಾಸ್ ಬ್ರಿಡ್ಜ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪ್ರದೇಶದಲ್ಲಿ 5 ಇಂಚುಗಳಷ್ಟು ಮಳೆಯಾಗಿದೆ ಮತ್ತು ಗಾಜಿನ ಸೇತುವೆಯ ಪಿಲ್ಲರ್‌ಗಳನ್ನು ಹಾಕಲಾದ ಸ್ಥಳದಲ್ಲಿ ಮಣ್ಣು ಕೆಳಕ್ಕೆ ಜಾರಿದೆ. ಹೀಗಾಗಿ, ಸಾರ್ವಜನಿಕರವೀಕ್ಷಣೆಗೆ ನಾವು ಸೇತೆವೆಯನ್ನು ಬಂದ್ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.ಗೇಟ್ ಲಾಕ್ ಮಾಡಿರುವುದು

ಅನುಮತಿ ಕುರಿತು ಪ್ರಶ್ನಿಸಿದಾಗ, ಖಾಸಗಿಯವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಪಂಚಾಯಿತಿ ಅನುಮತಿ ನೀಡಿದೆ.

ಸರ್ವೆ ಸಂಖ್ಯೆ 62 ಮತ್ತು 51/1 ಇಬ್ಬರು ನಿವಾಸಿಗಳ ಒಡೆತನದಲ್ಲಿದೆ ಮತ್ತು ಗಾಜಿನ ಸೇತುವೆಯ ಮಾಲೀಕರು ಸೇತುವೆಯನ್ನು ನಿರ್ಮಿಸಲು ಭೂ ಮಾಲೀಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಸುಮಾರು ಎಂಟು ತಿಂಗಳ ಹಿಂದೆ ಸೇತುವೆಗೆ ಪಂಚಾಯಿತಿ ಅನುಮತಿ ನೀಡಿತ್ತು. ಆದರೆ, ಭೂ ಪರಿವರ್ತನೆಯ ದಾಖಲೆ ಸಲ್ಲಿಸಿಲ್ಲ ಮತ್ತು ಸುಮಾರು ಮೂರು ವರ್ಷಗಳಿಂದ ಯಾವುದೇ ಭೂ ಪರಿವರ್ತನೆ ಅರ್ಜಿಗಳಿಗೆ ಅನುಮತಿ ನೀಡಿಲ್ಲ ಎಂದು ಅವರು ವಿವರಿಸಿದರು.

 Share: | | | | |


ಬಂಟ್ವಾಳ : ಮಧ್ವದಲ್ಲಿ ಬಳಿ ಬೈಕ್ ಕಾರು ಅಪಘಾತ ಬೈಕ್ ಸಾವರ ಬೆಳ್ತಂಗಡಿಯ ಪ್ರದೀಶ್ ಶೆಟ್ಟಿ ಮೃತ್ಯು

Posted by Vidyamaana on 2024-02-01 20:44:55 |

Share: | | | | |


ಬಂಟ್ವಾಳ : ಮಧ್ವದಲ್ಲಿ ಬಳಿ ಬೈಕ್ ಕಾರು ಅಪಘಾತ   ಬೈಕ್ ಸಾವರ ಬೆಳ್ತಂಗಡಿಯ ಪ್ರದೀಶ್ ಶೆಟ್ಟಿ ಮೃತ್ಯು

ಬೆಳ್ತಂಗಡಿ : ಕಾರು ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಬೆಳ್ತಂಗಡಿಯ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಂಟ್ವಾಳ ತಾಲೂಕಿನ ಮಧ್ವದಲ್ಲಿ ನಡೆದಿದೆ.


ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು. ಇದರಲ್ಲಿ ಬೈಕ್ ಸವಾರ ಬೆಳ್ತಂಗಡಿಯ ರಮೇಶ್ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಪ್ರದೀಶ್ ಶೆಟ್ಟಿ(27) ಎಂಬಾತ ಸಾವನ್ನಪ್ಪಿದ ಯುವಕ.


ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ಕಿನಲ್ಲಿ  ಬರುತಿದ್ದ ವೇಳೆ ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ  ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. 


ಪ್ರದೀಶ್ ಶೆಟ್ಟಿ ಬೆಳ್ತಂಗಡಿಯ ಮುತ್ತೂಟ್ಟು ಫೈನಾನ್ಸ್ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದು. ಸಂಸ್ಥೆಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

Posted by Vidyamaana on 2024-02-22 20:42:50 |

Share: | | | | |


ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬ ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿರು ಆಘಾತಕಾರಿ ಘಟನೆ ನಡೆದಿದೆ. ಚಿಕಿತ್ಸೆಯ ಮಧ್ಯದಲ್ಲಿ ಆಸ್ಪತ್ರೆಯಿಂದ ಹೊರಬಂದು ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದಾನೆ. ಆತ ರೋಗಿಗಳ ಬಟ್ಟೆಗಳನ್ನ ಧರಿಸಿದ್ದು, ಕೈಯಲ್ಲಿ IV ಇತ್ತು.ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


ಈ ಪ್ರಕರಣವು ಅಮೆರಿಕದ ವರ್ಜೀನಿಯಾದಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ರಾತ್ರಿ 9: 30 ಕ್ಕೆ ಇನ್ನೋವಾ ಫೈಫಾಕ್ಸ್ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.


ಫೇರ್ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಆಸ್ಪತ್ರೆಯ ಹೊರಗೆ ತೆಗೆದ ಶಂಕಿತನ ಫೋಟೋವನ್ನು ಹಂಚಿಕೊಂಡಿದ್ದು, "ಆತ ಇನ್ನೂ ಡಿಸ್ಚಾರ್ಜ್ ಆಗಿರಲಿಲ್ಲ. ಆತನ ಕೈಯಲ್ಲಿ IV ಇತ್ತು. ಚಿಕಿತ್ಸೆ ನಡೆಯುತ್ತಿತ್ತು" ಎಂದು ಅವರು ಹೇಳಿದರು.ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು 32 ವರ್ಷದ ರಿಕಿ ಲೆವೆ ಎಂದು ಗುರುತಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

Posted by Vidyamaana on 2024-05-10 15:14:17 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

ಪುತ್ತೂರು: ಮಿತ್ತೂರು ರೈಲ್ವೇ ಓವರ್ ಬ್ರಿಡ್ಜ್ ಸಮೀಪ ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಆಟೋ ಚಾಲಕ, ಮಿತ್ತಪಡ್ಪು ಪಾಟ್ರಕೋಡಿ ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

Posted by Vidyamaana on 2024-05-23 13:54:45 |

Share: | | | | |


ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪಧವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೇ.23ರಂದು ಉಡುಪಿಯ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಸುವರ್ಣ

ಸುಳ್ಯ - ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಶಾಲೆ ಆವರಣದಲ್ಲಿ ಪತ್ತೆ

Posted by Vidyamaana on 2024-06-17 13:51:17 |

Share: | | | | |


ಸುಳ್ಯ - ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಶಾಲೆ ಆವರಣದಲ್ಲಿ ಪತ್ತೆ

ಸುಳ್ಯ ಜೂನ್ 17: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಸುಳ್ಯ ಸಮೀಪದ ಶಾಲೆಯ ಜಗಲಿಯಲ್ಲಿ ಪತ್ತೆಯಾಗಿದೆ.

ಸುಳ್ಯದ ಕಾಂತಮಂಗಲ ಸರಕಾರಿ ಶಾಲೆಯ ಬಳಿ ಮೃತದೇಹ ಪತ್ತೆಯಾಗಿದೆ. ಸುಮಾರು 25-30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ.

ಮಂಗಳೂರು : ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ

Posted by Vidyamaana on 2024-01-01 21:35:09 |

Share: | | | | |


ಮಂಗಳೂರು : ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ

ಮಂಗಳೂರು: ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಇಂದು (ಸೋಮವಾರ) ಅಧಿಕಾರ ಸ್ವೀಕರಿಸಿದರು.ಈ ಕುರಿತು ಮಾತನಾಡಿದ ಅವರು ಡ್ರಗ್ಸ್, ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ. ಸೈಬರ್ ಕ್ರೈಂ ಬಗ್ಗೆ ಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.ಈ ಮೊದಲು ಡಿಐಜಿಯಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.


ದಕ್ಷಿಣಕನ್ನಡ ಎಸ್ ಪಿಸಿಬಿ ರಿಷ್ಯಂತ್, ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಉಪಸ್ಥಿರಿದ್ದರು.



Leave a Comment: