ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಸುದ್ದಿಗಳು News

Posted by vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಪೊಲೀಸ್ ಗಂಡನ ವಿರುದ್ಧ ದೂರು ನೀಡಲೆಂದು ಪತ್ನಿ ಮಮತಾ(37) ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ, ಹಿಂಬಾಲಿಸಿ ಬಂದಿದ್ದ ಲೋಕನಾಥ್ ಹಾಸನ ಎಸ್ಪಿ ಕಚೇರಿ ಎದುರಲ್ಲೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.‌

ಮಹಿಳೆಯನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾಳೆ.‌ ಆರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 Share: | | | | |


ಮಂಗಳೂರು - ಮಡ್ಗಾಂವ್ ವಂದೇ ಭಾರತ್ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ

Posted by Vidyamaana on 2023-12-26 12:55:18 |

Share: | | | | |


ಮಂಗಳೂರು - ಮಡ್ಗಾಂವ್ ವಂದೇ ಭಾರತ್ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ

ಮಂಗಳೂರು :ಕರಾವಳಿಗರ ಹಲವು ಸಮಯಗಳ ಬೇಡಿಕೆ ಕೊನೆಗೂ ಈಡೇರಿಕೆಯಾಗಿದೆ. ಮಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಆಗಮಿಸಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ.


 ಮೂರು ದಿನಗಳ ಕಾಲ ಪ್ರಾಯೋಗಿಕ ಓಡಾಟದ ನಂತರ ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.


ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರು, ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.


ರೈಲು ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟಿದ್ದು, ಮಧ್ಯಾಹ್ನ 1:15ರ ವೇಳೆಗೆ ಮಡ್ತಾಂವ್ ತಲುಪುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 1:45ಕ್ಕೆ ಮಡ್ಡಾಂವ್‌ನಿಂದ ಮತ್ತೆ ಹೊರಡಲಿರುವ ರೈಲು, ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಮಂಗಳೂರು ಗೋವಾ ನಡುವೆ ಓಡಾಟ ನಡೆಸಲಿದೆ.

ಉಪ್ಪಿನಂಗಡಿ | ಇಂಡಿಯಲ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿ ಸಹದ್ ನಿಧನ

Posted by Vidyamaana on 2023-08-22 03:26:32 |

Share: | | | | |


ಉಪ್ಪಿನಂಗಡಿ | ಇಂಡಿಯಲ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿ ಸಹದ್ ನಿಧನ

ಪುತ್ತೂರು : ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿ ಅಹ್ಮದ್ ಸಹದ್(15) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದಿದ್ದಾರೆ.


ಮೃತ ಸಹದ್ ಉಪ್ಪಿನಂಗಡಿ ಪೆದಮಲೆಯ ನಿವಾಸಿ ಸಮದ್ ಹಾಜಿ ಹಾಗೂ ಬೆದ್ರೋಡಿಯ ರೇಷ್ಮಾ ದಂಪತಿಯ ಮೊದಲ ಪುತ್ರನಾಗಿದ್ದು, ಇಂಡಿಯನ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.


ಸಂತಾಪ ಸೂಚಕವಾಗಿ ಆ 22ರಂದು ಇಂಡಿಯನ್ ಸ್ಕೂಲಿಗೆ ರಜೆ ಘೋಷಿಸಲಾಗಿದ್ದು, ಆ 22 ರಂದು ನಡೆಯಬೇಕಿದ್ದ  ಪರೀಕ್ಷೆ ಮುಂದೂಡಲಾಗಿದೆ. ಬುಧವಾರದ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ

ಹಾಡಹಗಲೇ ವಕೀಲರೊಬ್ಬರ ಬರ್ಬರ ಹತ್ಯೆ

Posted by Vidyamaana on 2023-12-07 13:25:48 |

Share: | | | | |


ಹಾಡಹಗಲೇ ವಕೀಲರೊಬ್ಬರ ಬರ್ಬರ ಹತ್ಯೆ

ಕಲಬುರಗಿ: ನಗರದ ಸಾಯಿ ಮಂದಿರ ಬಳಿಯಿರುವ ಗಂಗಾ ಅಪಾರ್ಟ್ಮೆಂಟ್ ಬಳಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಹತ್ಯೆಯಾದ ವಕೀಲನನ್ನು ಈರಣ್ಣಗೌಡ ಪಾಟೀಲ್ (40) ಎಂದು ಗುರುತಿಸಲಾಗಿದೆ.

ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

Posted by Vidyamaana on 2024-05-23 13:54:45 |

Share: | | | | |


ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪಧವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೇ.23ರಂದು ಉಡುಪಿಯ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಸುವರ್ಣ

ತಮಿಳುನಾಡು: ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಸ್ಥಳದಲ್ಲೇ ಏಳು ಮಂದಿ ಸಾವು

Posted by Vidyamaana on 2023-10-25 15:06:16 |

Share: | | | | |


ತಮಿಳುನಾಡು: ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ  ಸ್ಥಳದಲ್ಲೇ ಏಳು ಮಂದಿ ಸಾವು

ತಮಿಳುನಾಡು, ಅ 24: ಅಣ್ಣಾಮಲೈಯರ್​ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.


ಮೃತರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇವರು ತಿರುವಣ್ಣಾಮಲೈ ಅಣ್ಣಾಮಲೈಯರ್​ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿದೆ.


ಇಲ್ಲಿನ ಚೆಂಗಾಮ್​ನ ಪಕ್ಕಿರಿಪಾಲಯಂ​ ಬಳಿ ಧರ್ಮಪುರಿಯಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್​ ಮತ್ತು ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಾಟಾ ಸುಮೋದಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್​ನಲ್ಲಿದ್ದ 10 ಮಂದಿ ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆ ಮತ್ತು ಚೆಂಗಾಮ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಚೆಂಗಾಮ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇನ್ನೋರ್ವ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನರೆ .

ಸ್ವ ಗ್ರಾಮದ ಕೋಡಿಂಬಾಡಿ ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕರು

Posted by Vidyamaana on 2023-12-23 09:16:57 |

Share: | | | | |


ಸ್ವ ಗ್ರಾಮದ ಕೋಡಿಂಬಾಡಿ ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕರು

ಪುತ್ತೂರು: ಶಾಸಕರಾದ ಅಶೋಕ್ ರೈ ಯವರ ಸ್ವಗ್ರಾಮ ಕೋಡಿಂಬಾಡಿಗೆ ಮೊದಲ ಬಾರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಗ್ರಾಮದ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು ೫೫ ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಅದರ ಶಿಲಾನ್ಯಾಸ ಕಾಮಗಾರಿ ಡಿ. ೨೨ ರಂದು ನಡೆಯಿತು.


ಕೋಡಿಂಬಡಿ ಗ್ರಾಮದ ಕೆದಿಕಂಡೆ-ಪುಣ್ಕೆತ್ತಡಿ ರಸ್ತೆ, ಕಲ್ಪನೆ -ಪಿಲಗುಂಡ ರಸ್ತೆ೧೦ ಲಕ್ಷ , ಬೆಳ್ಳಿಪ್ಪಾಡಿ ಕೊಡಿಮರ ಕಠಾರ ರಸ್ತೆ೧೦ ಲಕ್ಷ . ಕೊಡಿಮರ ಬಾರ್ತೋಲಿ ರಸ್ತೆ, ಕಜೆ ಬೆಳ್ಳಿಪ್ಪಾಡಿ ರಸ್ತೆಗೆ ೧೦ ಲಕ್ಷ , ದಾರಂದ ಕುಕ್ಕು ಬದಿನಾರು ರಸ್ತೆಗೆ ೧೦ ಲಕ್ಷ  ಒಟ್ಟು ೫೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಚುನಾವಣಾ ಪೂರ್ವದಲ್ಲಿ ತನ್ನ ಗ್ರಾಮಸ್ಥರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.


ಅನುದಾನಗಳ ಭರಪೂರವೇ ಬರುತ್ತಿದೆ

ಗ್ಯಾರಂಟಿ ಯೋಜನೆ ಮಾಡಿ ಸರಕಾರದಿಂದ ಅನುದಾನ ಬರುತ್ತಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರು ಕೋಡಿಂಬಡಿಗೆ ಬಂದು ನೋಡಲಿ, ಇಂದಿನಿಂದ ಪ್ರತೀ ದಿನ ಶಿಲಾನ್ಯಾಸ ಕಾರ್ಯ ನಡೆಯುತ್ತಲೇ ಇರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯ ನಡೆಯಲಿದೆ. ಎಲ್ಲಾ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡುತ್ತೇನೆ. ಕ್ಷೇತ್ರದಲ್ಲಿ ಮುಂದೆ ಅಭಿವೃದ್ದಿ ಕಾರ್ಯಗಳು ನಡೆಯಲಿದ್ದು ಅಪಪ್ರಚಾರ ಮಾಡುವವರು ಒಮ್ಮೆ ಇದನ್ನು ತಿಳಿದುಕೊಳ್ಳಲಿ. ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಕೆಎಂಎಫ್ ಡೈರಿ ಶಿಫ್ಟ್ ಆಗಲಿದೆ ಇದರಿಂದ ಆ ಬಾಗದ ಸಂಪೂರ್ಣವಾಗಿ ಅಭಿವೃದ್ದಿಯಾಗಲಿದೆ, ಅಲ್ಲಿನ ರಸ್ತೆಗಳಿಗೂ ಕಾಂಕ್ರೀಟ್ ಭಾಗ್ಯ ದೊರೆಯಲಿದೆ ಎಂದು ಶಾಸಕರು ಹೇಳಿದರು.


ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ


ಪುತ್ತೂರು ವಿಧಾನಸಭಾ ಕ್ಷೆತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಈಗಾಗಲೇ ಕುಡಿಯುವ ನೀರು, ಕೆಎಂಎಫ್, ಕಬಕದಲ್ಲಿ ಕ್ರಿಕೆಟ್ ಮೈದಾನ, ಪುತ್ತೂರು ನಗರದಲ್ಲಿ ಚರಂಡಿ ಕಾಮಗಾರಿ, ಉಪ್ಪಿನಂಗಡಿ ದೇವಳದ ವಠಾರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಚುನವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಒಂದೊಂದಾಗಿ ಈಡೇರಿಸುವ ಕೆಲಸವನ್ನು ಮಾಡಲಿದ್ದೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಬಿಜೆಪಿಯವರು ಮಂಗವೇ ಮಾಡಿದ್ದು

ನಮ್ಮ ರಸ್ತೆಯನ್ನು ಕಾಂಕ್ರೀಟ್ ಮಾಡಿಲ್ಲ, ನಾವು ಬಿಜೆಪಿ ಶಾಸಕರಿರುವಾಗ ಮನವಿ ಮಾಡಿದ್ದೆವು ಆದರೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ, ನಾವೇನು ಪಾಕಿಸ್ತಾನದಲ್ಲಿದ್ದೇವಾ ಎಂಬ ಭಾವನೆ ನಮ್ಮಲ್ಲಿತ್ತು ಎಂದು ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ ಗುತ್ತು ಆರೋಪ ಮಾಡಿದರು. ಕೊಡ್ತೇವೆ, ಇಡ್ತೇವೆ ಎಂದು ಹೇಳಿ ನಮ್ಮನ್ನು ಬಿಜೆಪಿಯವರು ಮಂಗವೇ ಮಾಡಿದ್ದಾರೆ, ಬೆಳ್ಳಿಪ್ಪಾಡಿ -ಕಜೆ ರಸ್ತೆ ಭಾರತದಲ್ಲಿದೆ ಎಂಬುದು ಈಗ ನಮಗೆ ಅನುಭವವಾಯಿತು ಎಂದು ಹೇಳಿದರು. ಕೇಶವ ಭಂಡಾರಿ ಕೈಪ ಮಾತನಾಡಿ ನಾವು ಈ ಹಿಂದೆ ಅನುದಾನ ಕೇಳಲು ಹೋದಾಗ ನಿಮ್ಮ ಏರಿಯದಲ್ಲಿ ಓಟು ಕಮ್ಮಿ ಇದೆ , ಸ್ವಲ್ಪ ಓಟು ಹೆಚ್ಚು ಮಾಡಿಸಿ ಅನುದಾನ ಇಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು, ಆದರೆ ಇಂದು ಅದಾವುದನ್ನು ಕೇಳದೆ ನಮ್ಮ ರಸ್ತೆಗೆ ಅನುದಾನ ಇಡುವ ಮೂಲಕ ಶಾಸಕರಾದ ಅಶೋಕ್ ರೈಯವರು ಅನುದಾನ ಹಂಚಿಕೆಯಲ್ಲಿ ಅಥವಾ ಅಭಿವೃದ್ದಿ ಯಲ್ಲಿ ರಾಜಕೀಯ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇನ್ನು ಅಭಿವೃದ್ದಿ ಪರ್ವ ಆರಂಭ: ಡಾ.ರಾಜಾರಾಂ


ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರ ನಿರಂತರ ಅಭಿವೃದ್ದಿ ಹೊಂದಲಿದೆ. ಅಶೋಕ್ ರೈಯವರು ಶಾಸಕರಾಗಿ ಕೇವಲ ಏಳು ತಿಂಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದಾರೆ ಇದು ಯಾರಿಗೂ ಸಾಧ್ಯವಾಗಿಲ್ಲ. ಕ್ಷೇತ್ರದ ಗಲ್ಲಿಗಲ್ಲಿಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಬಹು ಅಪೇಕ್ಷಿತ ಕಾಮಗಾರಿಗಳು ಮುಂದೆ ನಡೆಯಲಿದೆ. ಅಭಿವೃದ್ದಿ ಆಗಬೇಕಾದರೆ ಕಾಂಗ್ರೆಸ್ ಶಾಸಕರಿರಬೇಕು, ಕಾಂಗ್ರೆಸ್ ಸರಕಾರ ಇರಬೇಕು ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅದ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಹೇಳಿದರು.

ದಾರಂದಕುಕ್ಕು ಅಂಗನವಾಡಿ ಇಂಟರ್‌ಲಾಕ್ ಉದ್ಘಾಟನೆ


ದಾರಂದ ಕುಕ್ಕು ಅಂಗನವಾಡಿಯ ಅಂಗಳಕ್ಕೆ ಹಾಕಿರುವ ಇಂಟರ್ ಲಾಕ್ ವ್ಯವಸ್ಥೆಯನ್ನು ಶಾಸಕರು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮತನಾಡಿದ ಶಾಸಕರು ಪುಟ್ಟ ಮಕ್ಕಳಿಗೆ ಎಳವೆಯಲ್ಲೇ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಸಣ್ಣ ಪ್ರಾಯದಲ್ಲೇ ಮಕ್ಕಳು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಮುಂದೆ ದೊಡ್ಡವರಾದಾಗ ಅದು ಜೀವನದಲ್ಲಿ ಅಳವಡಿಕೆಯಗುತ್ತದೆ. ಅಂಗನವಾಡಿ ಕೇಂದ್ರಗಳು ಪುಟ್ಟ ಹೃದಯಗಳ ಸಮ್ಮಿಲನ ಕೇಂದ್ರವಾಗಿದೆ. ಮಕ್ಕಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಪೋಷಕರು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು ಇದೇ ಸಂದರ್ಬದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರು ಗೌರವಿಸಿದರು.


ವಾರದಲ್ಲಿ ಮೂರು ದಿನ ಕ್ಯಾಂಪ್


ಸರಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಾರದೇ ಇರುವ ಅನೇಕ ಕುಟುಂಬಗಳಿದ್ದು ಅವರಿಗೆ ಅವರವರ ಗ್ರಾಮದಲ್ಲೇ ಕ್ಯಾಂಪ್ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಪ್ರಭಾರ ಸಿಡಿಪಿಒ ಮಂಗಳಾರವರು ತಿಳಿಸಿದರು. ಕ್ಯಾಂಪ್ ನಡೆಸಿ ಸಮಸ್ಯೆ ಪರಿಹಾರ ಶಾಸಕರು ಇಲಾಖೆಗೆ ಸೂಚನೆಯನ್ನು ನೀಡಿದ್ದರು. ಅದರಂತೆ ಡಿ.೨೭,೨೮ ಮತ್ತು ೨೯ ರಂದು ಮೂರು ದಿನ ಎಲ್ಲಾ ಗ್ರಾಪಂ ಕಚೇರಿಗಳಲ್ಲಿ ಕ್ಯಾಂಪ್ ನಡೆಯಲಿದೆ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಕರು ಇದೇ ಸಂದರ್ಬದಲ್ಲಿ ಮನವಿ ಮಾಡಿದರು.


ಕೇಳಿಕೇಳಿ ಸಾಕಾಗಿ ಹೋಗಿದೆ

ದಾರಂದಕುಕ್ಕು ಬದಿನಾರು ರಸ್ತೆಗೆ ಕಾಂಕ್ರೀಟ್ ಮಾಡಿಸಿ ಎಂದು ನಮಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಕಳೆದ ೧೫ ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ ಈ ಬರಿ ನಮಗೆ ಯೋಗ ಕೂಡಿ ಬಂದಿದೆ. ನಮ್ಮ ರಸ್ತೆಗೆ ೧೦ ಲಕ್ಷ ಅನುದಾನ ಇಡುವ ಮೂಲಕ ೧೫ ವರ್ಷಗಳ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ ಎಂದು ಬದಿನಾರು ನಿವಾಸಿಗಳು ಶಾಸಕರಲ್ಲಿ ತಿಳಿಸಿದರು.


ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆಮಲ್ಲಿಕಾ ಅಶೋಕ್ ಪೂಜರಿ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಮಠಂತಬೆಟ್ಟು, ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶಿವಪ್ರಸಾದ್ ರೈ ಮಟಂತಬೆಟ್ಟು, ವಿಕ್ರಂ ಶೆಟ್ಟಿಕೋಡಿಂಬಾಡಿ, ಕೇಶವ ಗೌಡ ಬರಮೇಲು, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ರಾಜಶೇಖರ್ ಜೈನ್ ನೀರ್ಪಾಜೆ, ನೆಕ್ಕಿಲಾಡಿ ವಲಯ ಅಧ್ಯಕ್ಷೆ ಅನಿಮಿನೇಜಸ್, ಇಬ್ರಾಹಿಂ ಸೇಡಿಯಾಪು, ಅಶ್ರಫ್ ಬಸ್ತಿಕ್ಕಾರ್, ಮೋನಪ್ಪ ಶೆಟ್ಟಿ ಕಠಾರ, ಶ್ರೀನಿವಾಸ ಶೆಟ್ಟಿ ಕಠಾರ, ಗ್ರಾಪಂ ಸದಸ್ಯೆ ಪುಷ್ಪಾವತಿ, ಪದ್ಮಪ್ಪ ಪೂಜಾರಿ ಪರನೀರು, ಹರೀಶ್ ಕಜೆ,  ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಗುರು ಯಶೋಧ, ಗ್ರಾಪಂ ಸದಸ್ಯೆ ಭವ್ಯ ವಿದ್ಯಾಪ್ರಸಾದ್, ಪುಷ್ಪಾ ಲೋಕಯ್ಯ ನಾಯ್ಕ, ಪ್ರೇಮ ಈಶ್ವರ ನಾಯ್ಕ, ಗಣೇಶ್ ಶೆಟ್ಟಿ ಕಠಾರ, ಉಮೇಶ್ ಶೆಟ್ಟಿ ಕಠಾರ, ವಾಸುದೇಶವ ಆಚಾರ್ಯ ಕೊಡಪಡ್ಯ,ಶೀಲಾ ಲೋಕನಾಥ ಶೆಟ್ಟಿ, ಸಂತೋಷ್ ರೈ ಕೆದಿಕಂಡೆ ಗುತ್ತು,ಚಂಧ್ರಶೇಖರ್ ರೈ ಕೆದಿಕಂಡೆ ಗುತ್ತು, ಮಾಜಿ ಮಂಡಲ ಪಂಚಾಯತ್ ಸದಸ್ಯೆ ಗಿರಿಜಾ ರೈ ಕೆದಿಕಂಡೆ ಮತ್ತಿತರರು ಉಪಸ್ಥಿತರಿದ್ದರು. ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು.ಸುದೇಶ್ ಶೆಟ್ಟಿ ವಂದಿಸಿದರು. ವಲಯ ಕಾರ್ಯದರ್ಶಿ ಯೋಗೀಶ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು.



Leave a Comment: