ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ; ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಸುದ್ದಿಗಳು News

Posted by vidyamaana on 2024-06-30 21:58:04 |

Share: | | | | |


ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ;  ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.

ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.

ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ

ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

 Share: | | | | |


ವಿಜಯಪುರ ಲೈವ್ ಮರ್ಡರ್: ಎಂಗೇಜ್ಮೆಂಟ್ ಆದವಳೊಂದಿಗೆ ಅನೈತಿಕ ಸಂಬಂಧಕ್ಕಾಗಿ ಬಿತ್ತು ಹೆಣ

Posted by Vidyamaana on 2023-12-26 07:24:32 |

Share: | | | | |


ವಿಜಯಪುರ ಲೈವ್ ಮರ್ಡರ್: ಎಂಗೇಜ್ಮೆಂಟ್ ಆದವಳೊಂದಿಗೆ ಅನೈತಿಕ ಸಂಬಂಧಕ್ಕಾಗಿ ಬಿತ್ತು ಹೆಣ

ವಿಜಯಪುರ: ಕರ್ನಾಟಕದ ವಿಜಯಪುರದ ಹುಡುಗ ಪುಣೆ ಮೂಲದ ಹುಡುಗಿಯನ್ನು ನೋಡಿ ಮದುವೆ ಆಗುವುದಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದನು. ಆದರೆ, ಈ ಹುಡುಗಿಯೊಂದಿಗೆ ಮತ್ತೊಬ್ಬ ಯುವಕ ಅಕ್ರಮ ಸಂಬಂಧ ಹೊಂದಿದ್ದನು. ನೀನು ಆ ಹುಡುಗಿಯನ್ನು ಬಿಟ್ಟುಬಿಡು ಎಂದು ಎಷ್ಟೇ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ, ಆತನನ್ನು ವಿಜಯಪುರಕ್ಕೆ ಮದುವೆಗೆ ಕರೆಸಿಕೊಂಡು ಕಲ್ಯಾಣ ಮಂಟದ ಧಾರಾ ಮಂಟಪದಲ್ಲಿ ಚಾಕು ಇರಿದು ಬರ್ಬರವಾಗಿ ಲೈವ್ ಮರ್ಡರ್ ಮಾಡಿರುವ ದುರ್ಘಟನೆ ನಡೆದಿದೆ.ಮಹಾರಾಷ್ಟ್ರದ ಪುಣೆಯಿಂದ ವಿಜಯಪುರಕ್ಕೆ ಮದುವೆಗೆ ಬಂದಿದ್ದ ಅಯಾನ್ ಶೇಖ್ ಹತ್ಯೆಯಾದ ಯುವಕ ಆಗಿದ್ದಾನೆ. ಈತನನ್ನು ಕೊಲೆ ಮಾಡಿದ ಆರೋಪಿ ವಿಜಯಪುರದ ಚಪ್ಪಬಂದ್ ಕಾಲೋನಿಯ ಯುವಕ ಹುಸೇನ್‌ ನಂದಿಹಾಳ ಆಗಿದ್ದಾನೆ. ಮದುವೆ ಮಂಟಪದಲ್ಲಿ ಎಲ್ಲರ ಮುಂದೆಯೇ ಅಟ್ಟಾಡಿಸಿಕೊಂಡು ಹೋಗಿ ಮಹಾರಾಷ್ಟ್ರದ ಆಯಾನ್‌ ಶೇಕ್‌ಗೆ ಮುಖ, ಹೊಟ್ಟೆ, ಎದೆ ಹಾಗೂ ದೇಹದ ವಿವಿಧ ಭಾಗಗಳಿಗೆ ಚಾಕು ಚುಚ್ಚಿ ಲೈವ್ ಆಗಿ ಮರ್ಡರ್ ಮಾಡಿದ್ದಾನೆ. ಇನ್ನು ಕೊಲೆ ಮಾಡಿದ ಆರೋಪಿಯನ್ನು ಘಟನೆ ನಡೆದ 6 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ಪುಣೆ ಮೂಲದ ಪೋಷಕರು ತಮ್ಮ ಮಗಳು ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವುದನ್ನು ಮುಚ್ಚಿಟ್ಟು ಕರ್ನಾಟಕ ವಿಜಯಪುರದ ಯುವಕನಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ತರಾತುರಿಯಲ್ಲಿ ಮೊದಲು ಫೋಟೋ ಕಳಿಸಿ, ಹೆಣ್ಣು ನೋಡುವ ಶಾಸ್ತ್ರ ಮುಗಿಸಿ, ಎಂಗೇಜ್ಮೆಂಟ್ ಕೂಡ ಮಾಡಿದ್ದಾರೆ. ಆದರೆ, ತಮ್ಮ ಮಗಳು ಮಾತ್ರ ಅಕ್ರಮ ಸಂಬಂಧವನ್ನು ಮಾತ್ರ ಮುಂದುವರೆಸಿದ್ದಳು. ಇನ್ನು ಮದುವೆ ಆಗುತ್ತಿರುವ ಮಗಳಿಗೂ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಯುವಕನಿಗೂ ಬುದ್ಧಿ ಹೇಳಿ ದೂ ಆಗುವಂತೆ ಹೇಳಿದ್ದಾರೆ. ಯಾರ ಮಾತನ್ನೂ ಕೇಳದ ಪ್ರೇಮಿಗಳು ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ.ತಾನು ಮದುವೆ ಆಗುವ ಹುಡುಗಿಯ ಸಹವಾಸ ಬಿಡದ ಯುವಕನಿಗೆ ಮದುವೆ ಆಗುವ ಹುಡುಗನೂ ಕೂಡ ಬುದ್ಧಿ ಹೇಳಿದ್ದಾನೆ. ಆದರೂ, ಆತ ಮಾತ್ರ ಯಾರ ಮಾತನ್ನೂ ಕೇಳಿಲ್ಲ. ಇದರಿಂದ ಸಿಟ್ಟಿಗೆದ್ದ ವಿಜಯಪುರದ ಯುವಕ ತನ್ನ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡಿದ್ದಾನೆ. ಇಷ್ಟಾದರೂ ತಮಗೆ ಒಳ್ಳೆಯದೇ ಆಗಿದೆ ಎಂದು ಪುಣೆಯಲ್ಲಿ ಮದುವೆ ಮುರಿದುಕೊಂಡ ಯುವತಿ ಹಾಗೂ ಆಕೆಯ ಪ್ರೇಯಸಿ ಸಂತಸದಿಂದ ತಮ್ಮ ಸಂಬಂಧ ಮುಂದುವರೆಸಿದ್ದಾರೆ. ಆದರೆ, ವಿಜಯಪುರದ ಯುವಕ ತನ್ನ ಮದುವೆ ಮುರಿದು ಹೋಗಿದ್ದಕ್ಕೆ ತೀವ್ರ ಕುಪಿತಗೊಂಡಿದ್ದನು. ಇದರಿಂದ ತನ್ನನ್ನು ಮದುವೆ ಆಗುವ ಹುಡುಗಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದವನನ್ನು ಕೊಲೆ ಮಾಡುವುದಕ್ಕೆ ನಿರ್ಧರಿಸಿದ್ದಾನೆ. ಪುಣೆಯ ಯುವಕ ತಮ್ಮ ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಆಗಮಿಸಿದ್ದನು. ಈ ವೇಳೆ ವಿಜಯಪುರದ ಯುವಕ ಆತನನ್ನು ಭೇಟಿಯಾಗಿ ಕೊಲೆ ಮಾಡಿದ್ದಾನೆ.

ಮುಕ್ವೆ ನಿವಾಸಿ, ಪಿ.ಎಚ್.ಡಿ. ವಿದ್ಯಾರ್ಥಿನಿ ಚೈತ್ರಾ ನಾಪತ್ತೆ!!

Posted by Vidyamaana on 2024-02-20 16:27:26 |

Share: | | | | |


ಮುಕ್ವೆ ನಿವಾಸಿ, ಪಿ.ಎಚ್.ಡಿ. ವಿದ್ಯಾರ್ಥಿನಿ ಚೈತ್ರಾ ನಾಪತ್ತೆ!!

ಉಳ್ಳಾಲ: ಪುತ್ತೂರು ಮೂಲದ ವಿದ್ಯಾರ್ಥಿನಿಯೋರ್ವಳು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.


ಕೋಟೆಕಾರು ಬಳಿಯ ಮಾಡೂರಿನ ಪಿಜಿಯಲ್ಲಿದ್ದು, ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ, ಪುತ್ತೂರು ಮುಕ್ವೆ ನಿವಾಸಿ ಚೈತ್ರಾ (27) ನಾಪತ್ತೆಯಾದ ವಿದ್ಯಾರ್ಥಿನಿ. 


ಚೈತ್ರಾ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್ ಡಿ ಅಧ್ಯಯನ ನಡೆಸುತ್ತಿದ್ದಳು. ಕೋಟೆಕಾರು ಮಾಡೂರಿನ ಅಹನಾ ಎಂಬ ಪಿಜಿಯಲ್ಲಿ ಚೈತ್ರಾ ನೆಲೆಸಿದ್ದಳು. 


ಚೈತ್ರಾಳ ತಂದೆ ಮೃತರಾಗಿದ್ದು ಮಂಗಳೂರಿನ ಸಂಬಂಧಿಕರ ಆಶ್ರಯದಲ್ಲಿದ್ದುಕೊಂಡು ಎಂಎಸ್ಸಿ ಪೂರೈಸಿದ್ದಳು. ಕಳೆದ ಫೆ.17ರಂದು ಬೆಳಗ್ಗೆ 9 ಗಂಟೆಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಕದ್ರಿಯ ಮನೆಗೂ ತೆರಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು ಎಂದು ದೂರಲಾಗಿದೆ.


 ಫೆ.17 ರಂದು ಚೈತ್ರಾ ನಾಪತ್ತೆಯಾದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿ ಮೂರು ದಿನ ಕಳೆದರೂ ಚೈತ್ರಾ ಮರಳಿ ಬಂದಿಲ್ಲ.

ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-14 16:27:29 |

Share: | | | | |


ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ವೋಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನಿದೆ ಎಂದು ಶಾಸಕರಾದ ಅಶೋಕ್ ರೈ ಯವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಅವರು ಪುಣಚಾ ದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಗ್ಯಾರಂಟಿಯ ಬಗ್ಗೆ ಅಪಹಾಸ್ಯ‌ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ವ್ಯಂಗ್ಯವಾಡಿದರು.

ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀ‌ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮ‌ಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಭೀತು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಯದ್ದು ಶೂನ್ಯ ಸಾಧನೆಯಾಗಿದೆ ಎಂದು ಹೇಳಿದರು.

ಜನರಲ್ಲಿ‌ಭಯ ಹುಟ್ಟಿಸುವುದು ಬಿಜೆಪಿ ಹುಟ್ಟು ಗುಣ

ಪ್ರತೀ ಚುನಾವಣೆ ಬಂದಾಗ ಮನೆ ಮನೆಗೆ ತೆರಳಿ ಜನರಲ್ಲಿ‌ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು‌ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ, ಗಂಡು‌ಮಕ್ಕಳನ್ನು ಜೈಲಿಗೆ ಹಾಕುತ್ತಾರೆ ಎಂದು ಅಫ್ರಚಾರ ಮಾಡುತ್ತಾರೆ. ಸಮಾಜದಲ್ಲಿ‌ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದು ಹೆಣ್ಣು‌ಮಕ್ಕಳು ಸ್ವಾಭಿಮಾನದಿಂದ ಬದಕುವಂತಾಗಿದೆ ಇದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಹೇಳಿದರು.


ಆಶೀರ್ವಾದ್ ಗಿಫ್ಟ್ ಸ್ಕೀಂನ ಡ್ರಾ ಫಲಿತಾಂಶ

Posted by Vidyamaana on 2024-05-28 12:59:39 |

Share: | | | | |


ಆಶೀರ್ವಾದ್ ಗಿಫ್ಟ್ ಸ್ಕೀಂನ ಡ್ರಾ ಫಲಿತಾಂಶ

ಪುತ್ತೂರು: ಇಲ್ಲಿನ ದರ್ಬೆ ಮೊಯಿದ್ದೀನ್ ಬಿಲ್ಡಿಂಗಿನಲ್ಲಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಗಿಫ್ಟ್ ಸ್ಕೀಂನ‌ ಡ್ರಾ ಫಲಿತಾಂಶದ ಬಹುಮಾನವನ್ನು ವಿಜೇತ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.

ಪ್ರತಿ ತಿಂಗಳು 15ನೇ ತಾರೀಕಿನಂದು ಈ ಡ್ರಾ ಮಾಡಲಾಗುತ್ತದೆ. ಪಾರದರ್ಶಕತೆ ಹಾಗೂ ಗ್ರಾಹಕರಿಗೆ ನೇರ ವೀಕ್ಷಣೆಗೆ ಸುಲಭವಾಗುವ ನಿಟ್ಟಿನಲ್ಲಿ ಡ್ರಾದ ನೇರ ಪ್ರಸಾರ ವಿದ್ಯಮಾನದಲ್ಲಿ ನಡೆಯುತ್ತದೆ.

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

Posted by Vidyamaana on 2023-12-01 07:03:23 |

Share: | | | | |


ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

ಪುತ್ತೂರು: ಬಡ ಜನರ ಸೇವೆಗೆಂದು ಕಳೆದ 11 ವರ್ಷಗಳಿಂದ ರೈ ಎಸ್ಟೇಟ್  ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಚನೆ ಮಾಡಲಾಗಿದ್ದು ಮುಂದೆಯೂ ಟ್ರಸ್ಟ್ ನ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಹೇಳಿದರು.

ಅವರು ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಮಿಕರಬಕಾರ್ಡ್ ವಿತರಿಸಿ ಮಾತನಾಡಿದರು.

ಒಟ್ಟು 5400 ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಗಿದೆ.‌ಕಾರ್ಮಿಕರಬಕಾರ್ಡು ನೀಡುವ ಮೂಲಕ ಬಡವರ ಬದುಕಿನಲ್ಲಿ‌ಭರವಸೆ ಮೂಡಿಸುವ ಕೆಲಸ ಟ್ರಸ್ಟಿನಿಂದ ನಡೆಯುತ್ತಿದೆ.

ಮುಂದಿನ‌ದಿನಗಳಲ್ಲಿ‌ಇನ್ನಷ್ಟು ಸಮಾಜ ಸೇವೆಗಳು ಟ್ರಸ್ಟ್ ವತಿಯಿಂದ ನಡೆಯಲಿದ್ದು ಜನರ ಸಹಕಾರವನ್ನು ಬಯಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ನಿಹಾಲ್ ಶೆಟ್ಟಿ ಕಲ್ಲಾರೆ, ಉಪಸ್ಥಿತರಿದ್ದರು. 

ರಚನಾ ರೈ ಸ್ವಾಗತಿಸಿ ಕಾರ್ಯಕ್ರಮ‌ನಿರೂಪಿಸಿದರು.

ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ ; ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Posted by Vidyamaana on 2023-11-03 04:24:27 |

Share: | | | | |


ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ ; ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ಮಂಗಳೂರು: ಸುಳ್ಯದ ಬೆಳ್ಳಾರೆಯಲ್ಲಿ 2022 ರ ಜುಲೈ ತಿಂಗಳಲ್ಲಿ ನಡೆದ ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. 


ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ಮಸೂದ್ ಕೊಲೆ ಕೃತ್ಯ ನಡೆದಿತ್ತು. ಎಂಟು  ಆರೋಪಿಗಳ ಪೈಕಿ ಅಭಿಲಾಷ್ ಮತ್ತು ಸುನಿಲ್ ಇವರಿಗೆ ಈಗ ಜಾಮೀನು ಲಭಿಸಿದೆ. ಆರು ಮಂದಿಗೆ ಈ ಮೊದಲೇ ಜಾಮೀನು ಸಿಕ್ಕಿತ್ತು. 


ಜಾಮೀನು ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ, ಒಂದು ವರ್ಷದ ಮೇಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆಂಬ ವಾದಕ್ಕೆ ಪುರಸ್ಕರಿಸಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ವಕೀಲ ಅರುಣ್ ಶಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿದ್ದರು. 


ಮಸೂದ್ ಕೊಲೆಗೆ ಪ್ರತೀಕಾರ ಎನ್ನುವಂತೆ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಎರಡೂ ಕೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಕಾರಣವಾಗಿತ್ತು.



Leave a Comment: