ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಸುದ್ದಿಗಳು News

Posted by vidyamaana on 2024-06-28 19:01:49 |

Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಹಾವೇರಿ : ಇಂದು ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಸಾವನಪ್ಪಿದು ಇದೀಗ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಹಾವೇರಿಯ ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಇಬ್ಬರು ಪುರುಷರು ಸೇರಿದಂತೆ 9 ಮಹಿಳೆಯರು ಸಾವನಪ್ಪಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಪಡೆದು ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪಪ್ಪಿದ್ದಾರೆ ಎಂದು ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ.ಮೃತರು ಶಿವಮೊಗ್ಗ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ. ಪರಶುರಾಮ, ಭಾಗ್ಯ, ನಾಗೇಶ್, ವಿಶಾಲಾಕ್ಷಿ,ಅರ್ಪಿತ,ಸುಭದ್ರ, ಬಾಯಿ, ಪುಣ್ಯ, ಮಂಜುಳಾಬಾಯಿ, ಆದರ್ಶ, ಮಾನಸ, ಅಪರೂಪ, ಮಂಜುಳಾ ಮೃತಪಟ್ಟವರ ಎಂದು ಗುರುತಿಸಲಾಗಿದೆ.

ಟಿಟಿಯಲ್ಲಿ ಸುಮಾರು 16 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಇದೀಗ 13 ಜನರು ಸಾವನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಂತವರನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾಸ್ಥಳಕ್ಕೆ ಬ್ಯಾಡಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 Share: | | | | |


ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

Posted by Vidyamaana on 2024-04-07 10:42:15 |

Share: | | | | |


ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

ಉಳ್ಳಾಲ, ಎ.7: ಗುಜರಿ ವ್ಯಾಪಾರಿಯೋರ್ವನನ್ನ ತನ್ನ ಬಾಡಿಗೆ ಮನೆಗೆ ಕರೆಸಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಹಾತ್ಮ ಗಾಂಧಿ ರಂಗಮಂದಿರ ಬಳಿ ಶನಿವಾರ ಸಂಜೆ ನಡೆದಿದೆ.


ಮಂಗಳೂರಿನ‌ ಕಾವೂರು ಪಂಜಿಮೊಗರು ನಿವಾಸಿ ಹಮೀದ್ ಇರಿತಕ್ಕೊಳಗಾದ ಗುಜರಿ ವ್ಯಾಪಾರಿ. ಮೂಲತಃ ತಣ್ಣೀರುಬಾವಿ ನಿವಾಸಿ ಸದ್ರಿ ಉಳ್ಳಾಲದ ಮಹಾತ್ಮಗಾಂಧಿ ರಂಗಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಮೊಹಮ್ಮದ್ ಜಾವೇದ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ.

ಜಾವೇದ್ ಇಂದು ಸಂಜೆ ಹಮೀದ್ ನನ್ನು ಹಣಕಾಸಿನ ವಿಚಾರದಲ್ಲಿ ಮಾತುಕತೆ ನಡೆಸಲು ಉಳ್ಳಾಲದ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಹಮೀದ್ ಎದೆಯ ಭಾಗಕ್ಕೆ ಜಾವೇದ್ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಹಮೀದ್ ಹೇಗೋ ತಪ್ಪಿಸಿಕೊಂಡು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹಮೀದ್ ಬಾಡಿಗೆ ಮನೆಯಿಂದ ತಪ್ಪಿಸಿ ಓಡಿದ ರಭಸಕ್ಕೆ ರಸ್ತೆಯಲ್ಲೆಲ್ಲಾ ರಕ್ತ ಹರಿದಿದೆ. ಗಂಭೀರ ಗಾಯಗೊಂಡಿದ್ದ ಹಮೀದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

Posted by Vidyamaana on 2024-02-13 11:08:34 |

Share: | | | | |


ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಮಂಚಿ ಗ್ರಾಮ ಕುಕ್ಕಾಜೆ ನಿವಾಸಿ ಮಹಮ್ಮದ್ ಸಮೀವುಲ್ಲಾ, ಮಂಚಿ ಗ್ರಾಮ ಕಂಚಿಲ ನಿವಾಸಿ ಇಬ್ರಾಹಿಂ ಬಂಧಿತರು.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ 04/2004 ಕಲಂ: 147,148,504,447,427, 435, 324,326,307,506 r/w 149 ಐಪಿಸಿ ಪ್ರಕರಣದಲ್ಲಿ ಆರೋಪಿಗಳಾದ ಮಹಮ್ಮದ್ ಸಮೀವುಲ್ಲಾ (34) ಹಾಗೂ ಇಬ್ರಾಹಿಂ (35) ಎಂಬವರುಗಳು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಅವರನ್ನು ಫೆ.12 ರಂದು ಪೊಲೀಸ್ ಉಪನಿರೀಕ್ಷರಾದ ಮೂರ್ತಿ, ಸಿಬ್ಬಂದಿಗಳಾದ ಹೆಚ್ ಸಿ ಕೃಷ್ಣ ಮತ್ತು ಪಿ ಸಿ ಯೋಗೇಶ್ ಡಿ ಎಲ್ , ಪುನೀತ್ ರವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.


ನ್ಯಾಯಾಲಯವು ಸದ್ರಿ ಆರೋಪಿಗಳಿಗೆ ನ್ಯಾಯಾಂಗ ಬಂಧನದ ವಿಧಿಸಿರುತ್ತದೆ.

ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

Posted by Vidyamaana on 2023-09-26 20:28:29 |

Share: | | | | |


ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

ಲಕ್ನೋ, ಸೆ.26: ಐಷಾರಾಮಿ ಕಾರುಗಳ ಬಗ್ಗೆ ತಪ್ಪಾದ ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆಂದು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಇತರ 12 ಮಂದಿಯ ವಿರುದ್ಧ ಉತ್ತರ ಪ್ರದೇಶದ ಖಾನ್ ಪುರದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.


ರಾಜೇಶ್ ಮಿಶ್ರಾ ಎಂಬವರು ದೂರು ನೀಡಿದ್ದು, ತನ್ನ ಮಗ ಡಾ.ಅಪೂರ್ವ ಮಿಶ್ರಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಅದಕ್ಕೆ ಕಂಪನಿಯ ನಿರ್ಲಕ್ಷ್ಯ ಕಾರಣ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ರಾಜೇಶ್ ಮಿಶ್ರಾ ತನ್ನ ಮಗನಿಗೆ 17.40 ಲಕ್ಷ ಮೌಲ್ಯದ ಐಷಾರಾಮಿ ಕಪ್ಪು ಸ್ಕಾರ್ಪಿಯೋ ಕಾರನ್ನು ಗಿಫ್ಟ್ ನೀಡಿದ್ದರು. 2022ರ ಜನವರಿ 14ರಂದು ಮಗ ಮತ್ತು ಆತನ ಸ್ನೇಹಿತರು ಲಕ್ನೋದಿಂದ ಖಾನ್ ಪುರಕ್ಕೆ ಹಿಂತಿರುಗುತ್ತಿದ್ದಾಗ ಮಂಜಿನಲ್ಲಿ ಕಾಣಿಸದೆ ಕಾರು ಅಪಘಾತಕ್ಕೀಡಾಗಿತ್ತು. ಕಾರು ಪಲ್ಟಿ ಹೊಡೆದು ಅದರಲ್ಲಿದ್ದ ತನ್ನ ಏಕೈಕ ಮಗ ಅಪೂರ್ವ ಮಿಶ್ರಾ ಸ್ಥಳದಲ್ಲೇ ಮೃತಪಟ್ಟಿದ್ದ. ಕಾರಿನಲ್ಲಿ ಬೆಲ್ಟ್ ಹಾಕ್ಕೊಂಡಿದ್ದು, ಒಳಗಡೆ ಸೇಫ್ಟಿ ಬ್ಯಾಗ್ ಇದ್ದರೂ ಮಗನ ಜೀವ ಉಳಿಯಲಿಲ್ಲ. ಹೀಗಾಗಿ ಕಾರಿನ ಬಗ್ಗೆ ಕಂಪನಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸೇಫ್ಟಿ ಇದೆಯೆಂಬ ಕಾರಣಕ್ಕೆ ಈ ಕಾರನ್ನು ಖರೀದಿಸಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


BS6 Mahindra Scorpio: Price, variant-wise features explained


ಕಾರು ಕಂಪೆನಿ ಮತ್ತು ಡೀಲರ್ ಗಳು ಸೇಫ್ಟಿ ಬಗ್ಗೆ ಎಡ್ವರ್ಟೈಸ್ ನೀಡಿದ್ದರಿಂದ ಕಾರು ಖರೀದಿಸಿದ್ದೆ. ಇಲ್ಲದಿದ್ದರೆ ಇಂತಹ ಕಾರು ಖರೀದಿ ಮಾಡುತ್ತಿರಲಿಲ್ಲ. ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರಲಿಲ್ಲ. ಅದೇ ಕಾರಣದಿಂದ ಮಗನಿಗೆ ತೀವ್ರ ಪೆಟ್ಟಾಗಿತ್ತು. ಕಂಪನಿಯವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಖಾನ್ ಪುರದ ಸ್ಥಳೀಯ ಕೋರ್ಟಿನಲ್ಲಿ ರಾಜೇಶ್ ಮಿಶ್ರಾ ದಾವೆ ಹೂಡಿದ್ದರು. ಕೋರ್ಟ್ ಸೂಚನೆಯಂತೆ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.


ಐಪಿಸಿ ಸೆಕ್ಷನ್ 420(ಮೋಸ), 287(ಮೆಶಿನರಿ ವರ್ಕ್ ನಲ್ಲಿ ನಿರ್ಲಕ್ಷ್ಯ ಮಾಡಿರುವುದು), 304-ಎ( ಸಾವಿಗೆ ಕಾರಣವಾಗಿರುವುದು), 504(ಉದ್ದೇಶಪೂರ್ವಕ ಅಗೌರವ ಸೂಚಿಸಿ ಶಾಂತಿ ಭಂಗ), 506 ಮತ್ತು 102 ಬಿ (ಕ್ರಿಮಿನಲ್ ಕೂಟ ರಚನೆ) ಇತ್ಯಾದಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ: ಚಾರ್ಮಾಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಾರು ತಪಾಸಣೆ ನಡೆಸಿದ ಅಧಿಕಾರಿಗಳು

Posted by Vidyamaana on 2023-04-13 16:24:20 |

Share: | | | | |


ಚುನಾವಣಾ ನೀತಿ ಸಂಹಿತೆ ಹಿನ್ನೆಲೆ: ಚಾರ್ಮಾಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಾರು ತಪಾಸಣೆ ನಡೆಸಿದ ಅಧಿಕಾರಿಗಳು

ಬೆಳ್ತಂಗಡಿ : ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಸಿ.ಎಂ. ಬೊಮ್ಮಾಯಿಯವರು ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಅವರ ವಾಹನ ತಪಾಸಣೆಗೆ ಒಳಪಡಿಸಿದ ಘಟನೆಯ ಬೆನ್ನಲ್ಲೇ ಎ.13 ರಂದು ಚುನಾವಣಾ ಅಧಿಕಾರಿಗಳು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧ್ಯಕ್ಷ ಸುದರ್ಶನ ಅವರ ಕಾರನ್ನು ತಪಾಸಣೆ ನಡೆಸಿದ್ದಾರೆ.ಅಧಿಕಾರಿ ಜಯಕೀರ್ತಿ ಹೆಚ್.ಬಿ. ಅವರಿದ್ದ ತಂಡವು ಐದು ಪೊಲೀಸ್ ಭದ್ರತಾ ವಾಹನದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಚಾರ್ಮಾಡಿ ಘಾಟ್ ರಸ್ತೆ ಮೂಲಕ ಬರುತ್ತಿದ್ದಾಗ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಕಾರು ಪರಿಶೀಲನೆ ನಡೆಸಿ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಎಸ್.ಎಸ್.ಟಿ. ಅಧಿಕಾರಿ ಜಯಕೀರ್ತಿ ಹೆಚ್.ಬಿ., ಸುಖೇಶ್ ಜಿ, ಧರ್ಮಸ್ಥಳ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್, ಸುನಿಲ್ ಹಾಗೂ ಸಿ.ಆರ್.ಪಿ.ಎಫ್. ಪಡೆ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸಿದರು.

ಬೆಳ್ತಂಗಡಿ : ಹಳೇಕೋಟೆ ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

Posted by Vidyamaana on 2024-06-01 18:09:41 |

Share: | | | | |


ಬೆಳ್ತಂಗಡಿ : ಹಳೇಕೋಟೆ  ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಹಳೆಕೋಟೆ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ   ಘಟನೆ ನಡೆದಿದೆ.

ಬೆಳ್ತಂಗಡಿಯ ಹಳೇಕೋಟೆ ಬಳಿಯ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಲಾರಿಯಡಿ ಸಿಲುಕಿ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಕೃಷಿಕ ವಿನೋದ್ ಗೌಡ(45) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಶಾಸಕ‌ ಅಶೋಕ್ ರೈ ಇಂದಿನ (ಮೇ 25) ಕಾರ್ಯಕ್ರಮ

Posted by Vidyamaana on 2023-05-24 16:08:33 |

Share: | | | | |


ಶಾಸಕ‌ ಅಶೋಕ್ ರೈ ಇಂದಿನ (ಮೇ  25) ಕಾರ್ಯಕ್ರಮ

ಪುತ್ತೂರು: ಶಾಸಕ ಅಶೋಕ್ ಕುಮಾರ್ ಅವರ ಮೇ 25ರ ಕಾರ್ಯಕ್ರಮ ಈ ರೀತಿ ಇದೆ.

ಬೆಳಿಗ್ಗೆ 9.30 ಕ್ಕೆ ಪುತ್ತೂರು- ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಣೆ.

ಸಂಜೆ 4 ಗಂಟೆಗೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಸಂಬಂದಪಟ್ಟ ಅಧಿಕಾರಿಗಳ ಸಭೆ.



Leave a Comment: