ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ವಿಮಾನ ಪತನ: ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸಹಿತ 10 ಮಂದಿ ಮೃತ್ಯು

Posted by Vidyamaana on 2024-06-11 17:30:29 |

Share: | | | | |


ವಿಮಾನ ಪತನ: ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸಹಿತ 10 ಮಂದಿ ಮೃತ್ಯು

ಹೊಸದಿಲ್ಲಿ: ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್‌ ಚಿಲಿಮಾ ಹಾಗೂ ಒಂಬತ್ತು ಮಂದಿ ಇತರರು ಇಂದು ವಿಮಾನ ದುರಂತವೊಂದರಲ್ಲಿ ಮೃತಪಟ್ಟಿದ್ದಾರೆಂದು ದೇಶದ ಅಧ್ಯಕ್ಷರ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.ಸೌಲೋಸ್‌ ಮತ್ತಿತರರು ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿತ್ತೆಂದು ಈ ಹಿಂದೆ ವರದಿಯಾಗಿತ್ತು.

ಆಶೀರ್ವಾದ ತಂದಿದೆ ತುಳುನಾಡಿನ ಮನೆ ಮನೆಗೆ ಸಂತಸದ ಸುದ್ದಿ!

Posted by Vidyamaana on 2024-02-08 16:48:29 |

Share: | | | | |


ಆಶೀರ್ವಾದ ತಂದಿದೆ ತುಳುನಾಡಿನ ಮನೆ ಮನೆಗೆ ಸಂತಸದ ಸುದ್ದಿ!

ಪುತ್ತೂರು: ಸ್ವಂತ ಮನೆ ಹೊಂದುವ ನಿಮ್ಮ ಕನಸನ್ನು ನನಸು ಮಾಡುವ ಆಶೀರ್ವಾದ ಲಕ್ಕಿ ಸ್ಕೀಂನ ಮೊದಲ ಕಂತಿನ ಡ್ರಾ ಇಂದು (ಗುರುವಾರ) ಸಂಜೆ ನಡೆಯಲಿದೆ.

ವಿದ್ಯಮಾನ ಈ ಡ್ರಾ ಫಲಿತಾಂಶದ ನೇರ ಪ್ರಸಾರ ನಡೆಸಿಕೊಡಲಿದೆ.


ಹೌದು,ಸ್ವಂತ ಮನೆ, ಕಾರು ,ಎಲೆಕ್ಟ್ರಾನಿಕ್ಸ್ ವಸ್ತುಗಳು ಇದೆಲ್ಲವನ್ನೂ  ಅತೀ ಕಡಿಮೆ  ಕಂತಿನಲ್ಲಿ ಪಡೆಯುವ ಆಶೀರ್ವಾದ ಲಕ್ಕಿ ಸ್ಕೀಂ,ಕೈಗೆಟುಕುವ ಕಂತಿನಲ್ಲಿ ಪ್ರತಿ ತಿಂಗಳು ಮನೆಗೆ ಬೇಕಾಗುವ ವಸ್ತುಗಳನ್ನು ಗೆಲ್ತಾ ಇರಿ, ಇನ್ನು

ವಿಜೇತರಲ್ಲದವರು ತಲೆಗೆ ಕೈ ಹೊತ್ತು ಕುಳಿತುಕೊಳ್ಳುವ ಮಾತೇ ಇಲ್ಲ,ಯಾಕೆಂದರೆ , ಪ್ರತೀ ಸದಸ್ಯರಿಗೂ ಖಚಿತ ಉಡುಗೊರೆಯಾಗಿ, ಇನ್ವರ್ಟರು,ಸೋಫಾ ಸೆಟ್,ಟಿವಿ,ಫ್ರಿಡ್ಜ್, ವಾಷಿಂಗ್ ಮೆಷಿನ್ ಇನ್ನೂ ಅನೇಕ ಬಹುಮಾನಗಳು ಖಂಡಿತ..

ಇಷ್ಟು ಮಾತ್ರವಲ್ಲ,ಪ್ರತೀ ತಿಂಗಳು 50 ಸರ್ಪ್ರೈಸ್ ಚಿನ್ನದ ನಾಣ್ಯಗಳನ್ನು 50 ಸದಸ್ಯರಿಗೆ ನೀಡಲಾಗುತ್ತದೆ.


ಇದೀಗ ಆಶೀರ್ವಾದ 1,500 ಕ್ಕಿಂತಲೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದ್ದು ಪ್ರತಿಯೊಬ್ಬ ಗ್ರಾಹಕರಿಗೂ 24/7 ಗ್ರಾಹಕ ಸೇವೆಯನ್ನು ಕೂಡ ಒದಗಿಸುತ್ತಾ ಬಂದಿದೆ.

ನಿಮ್ಮ ತಿಂಗಳ ದುಡಿಮೆಯ ಕೇವಲ ಒಂದು ಸಾವಿರ ರೂ ಹೂಡಿಕೆ ಮಾಡಿ ತಿಂಗಳ ಪ್ರತಿ ಡ್ರಾ ವಿಜೇತರಾಗಿ ಹಾಗೂ ಕನಸಿನ ಮನೆಯನ್ನು ಜೊತೆಗೆ ಎಲ್ಲಾ ಬಹುಮಾನಗಳನ್ನು ಗೆಲ್ಲಿ....ಹಾಗಾದರೆ ಇನ್ಯಾಕೆ ತಡ,ಒಂದು ಕೈ ನೋಡೇ ಬಿಡೋಣ ,ಏನಂತೀರಿ.....


ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನಲ್ಲಿರುವ ಆಶೀರ್ವಾದ ಸಂಸ್ಥೆಗೆ ಭೇಟಿ ನೀಡಿ ಮತ್ತು ಮಾಹಿತಿಗಳನ್ನು ತಿಳಿದುಕೊಳ್ಳಿ


7022645143

7022646143


*⚡ಜೈ ತುಳುನಾಡ್ ❤️⚡*

*🚩ಮಾತ ತುಳುವಪ್ಪೆನ ಜೋಕುಳೆಗ್ ಉಡಲ್ ದಿಂಜಿ ಸೋಲ್ಮೇಲು*


*🙏🏻ಆತ್ಮೀಯರೇ,ಗೌರವ ಸೂಚಕವಾಗಿ ಮೊದಲ ಪತ್ರವನ್ನು ನಿಮ್ಮ ಮಡಿಲಿಗೆ ಅರ್ಪಿಸಿದ್ದೇನೆ ❤️*


*⚡ತುಳುನಾಡಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮನೆ ಮಾತಾಗಿರುವ ಆಶೀರ್ವಾದ⚡*


⚡ಕೊನೆಯ *3 ಬಂಪರ್ ಡ್ರಾ ಗಳಲ್ಲಿ 2bhkಯ 3 ಮನೆಗಳನ್ನು* ಗೆಲ್ಲುವ ಸುವರ್ಣಾವಕಾಶ...

⚡ಕನಸಿನ ಕಾರು *ಮಹೀಂದ್ರ ಥಾರ್ ಗೆಲ್ಲಿ...*

⚡ಚಿನ್ನದ *ನೆಕ್ಲೆಸ್* ನಿಮ್ಮದಾಗಿಸಿಕೊಳ್ಳಿ

⚡ಹಿಮಾಲಯನ್ ಬೈಕ್ ಮತ್ತು ಡಾಮಿನಾರ್ ಕೂಡ ನಿಮ್ಮದಾಗಿಸಿ


🤩 ಪ್ರತೀ ಸದಸ್ಯರಿಗೂ ಕೊನೆಯ ಖಚಿತ ಉಡುಗೊರೆಯಾಗಿ, *ಇನ್ವರ್ಟರು,ಸೋಫಾ ಸೆಟ್,ಟಿವಿ,ಫ್ರಿಡ್ಜ್, ವಾಷಿಂಗ್ ಮೆಷಿನ್* ಇನ್ನೂ ಅನೇಕ ಬಹುಮಾನಗಳು ಖಂಡಿತ..


📢ಇಷ್ಟು ಮಾತ್ರವಲ್ಲ,ಪ್ರತೀ ತಿಂಗಳು 50 ಸರ್ಪ್ರೈಸ್ ಚಿನ್ನದ ನಾಣ್ಯಗಳನ್ನು 50 ಸದಸ್ಯರಿಗೆ ನೀಡಲಾಗುತ್ತದೆ.


*📡ಫೆಬ್ರವರಿ 15 ಕ್ಕೆ ಮೊದಲ ಡ್ರಾ ,ನಿಮ್ಮ ಸ್ಥಳೀಯ ನ್ಯೂಸ್ ಚಾನೆಲ್ ನಲ್ಲಿ ನೇರ ಪ್ರಸಾರ ಇರುತ್ತದೆ📡*


*📍ನಮ್ಮ ಸಂಪೂರ್ಣ ವಿಳಾಸ ಇಲ್ಲಿದೆ,*

Opposite Shubha book store,1st floor,moideen complex Darbe,PUTTUR,D.K

574202


*ಹೆಸರು ಮತ್ತು ವಿಳಾಸ ಇಂದೇ ನೀಡಿ,*

*ನಿಮ್ಮ ಒಳ್ಳೆಯತನಕ್ಕೆ ಅದೃಷ್ಟ,* *ಇಂದಲ್ಲಾ ನಾಳೆ ಬಂದೇ ಬರುತ್ತದೆ....ಅದು ಖಂಡಿತ...*

💥ಆಶೀರ್ವಾದ ವಾಟ್ಸಪ್ ಗ್ರೂಪ್ ಸೇರಲು ಕ್ಲಿಕ್ ಮಾಡಿ 

https://chat.whatsapp.com/EQZfSXbJ3Z2CjEcoHGk8ax

ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣದ ಚುನಾವಣೆಗೆ ತೆಗೆದಿಟ್ಟ ಹಣ ; ನಳಿನ್ ಕುಮಾರ್ ಆರೋಪ

Posted by Vidyamaana on 2023-10-14 12:10:54 |

Share: | | | | |


ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣದ ಚುನಾವಣೆಗೆ ತೆಗೆದಿಟ್ಟ ಹಣ ; ನಳಿನ್ ಕುಮಾರ್ ಆರೋಪ

ಮಂಗಳೂರು: ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ 42 ಕೋಟಿ ರೂಪಾಯಿ ನಗದು ಕಮಿಷನ್ ನೀಡಲು ತಂದಿಟ್ಟಿದ್ದ ಹಣ ಎಂಬ ಮಾಹಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಅಲ್ಲಿ ಸಿಕ್ಕಿರುವುದು ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. 


ಇದು ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರಕಾರ ಅಂದಿದ್ದೆವು ಎಂದರು. 


ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಅನ್ನೋದಕ್ಕೆ ಸಾಕ್ಷಿ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿಯವರು ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುವುದಿಲ್ಲ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಹಣ ಸಿಕ್ಕಿರೋದು ಅನುಮಾನ ಹುಟ್ಟಿಸಿದೆ ಎಂದರು.


ಇದೊಂದು ಭ್ರಷ್ಟಾಚಾರಿಗಳ ಬೆಂಗಾವಲಿಗಿರುವ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ. ಸುಳ್ಳು ಹೇಳಿ, ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಅವರು, ಇಡೀ ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ ಎಂದು ಕಿಡಿ ಕಾರಿದರು.

ಬಂಡಾಯ ಅಭ್ಯರ್ಥಿ ಕೆಎಸ್​ ಈಶ್ವರಪ್ಪ ನಾಮಪತ್ರ ಸಲ್ಲಿಕೆ

Posted by Vidyamaana on 2024-04-12 16:06:24 |

Share: | | | | |


ಬಂಡಾಯ ಅಭ್ಯರ್ಥಿ ಕೆಎಸ್​ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆಎಸ್​ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಅವರು ನಾಮಪತ್ರ ಸಲ್ಲಿಸಲು ಬಂದಿದ್ದರು.


ಸಾವಿರಾರು ಬೆಂಬಲಿಗರೊಂದಿಗೆ ಶಿವಮೊಗ್ಗದ ರಾಮಣ್ಣಶ್ರೇಷ್ಟಿ ಪಾರ್ಕ್ ನಿಂದ ಮೆರವಣಿಗೆ ಮೂಲಕ ಗೋಪಿ ಸರ್ಕಲ್‌ವರೆಗೂ ತೆರಳಿದ ಬಳಿಕ ನಾಮಪತ್ರ ಸಲ್ಲಿಸಿಸಿದರು. ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಕೆ ಎಸ್ ಈಶ್ವರಪ್ಪ ಪತ್ನಿ ವಿಜಯಲಕ್ಷ್ಮಿ, ಪುತ್ರ ಕಾಂತೇಶ್​ ಹಾಗೂ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಆಪ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು.

ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

Posted by Vidyamaana on 2023-07-05 10:45:16 |

Share: | | | | |


ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ತುಂಬೆ ಎಂಬಲ್ಲಿ ನಡೆದಿದೆ.ಬೆಳ್ತಂಗಡಿ ನಿವಾಸಿ ನವಾಜ್ ಎಂಬವರು ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ತುಂಬೆಯಲ್ಲಿ ಈ ಘಟನೆ ನಡೆದಿದೆ.ಕಾರು ಡಿವೈಡರ್ ಮೇಲೆ ಹತ್ತಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ

ಇಂದು ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ನಿಮ್ಮದೇ ಕಾರ್ಯಕ್ರಮ ಎಂದು ಭಾವಿಸಿ ಎಲ್ಲರೂ ಭಾಗವಹಿಸಿ: ಅಶೋಕ್ ಕುಮಾರ್ ರೈ

Posted by Vidyamaana on 2023-11-13 08:49:21 |

Share: | | | | |


ಇಂದು ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮವನ್ನು  ನಿಮ್ಮದೇ ಕಾರ್ಯಕ್ರಮ ಎಂದು ಭಾವಿಸಿ ಎಲ್ಲರೂ ಭಾಗವಹಿಸಿ: ಅಶೋಕ್ ಕುಮಾರ್ ರೈ

ಪುತ್ತೂರು : ಇಂದು (ನ.13) ಟ್ರಸ್ಟ್ ಮೂಲಕ ನಡೆಯುವ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮ ನಿಮ್ಮದೇ ಕಾರ್ಯಕ್ರಮವಾಗಿದ್ದು, ರಾಜಕೀಯ, ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ಭಾಗವಹಿಸುವ ಮೂಲಕ ನಮಗೆ ಹರಸಬೇಕು ಎಂದು ಶಾಸಕರು, ರೈ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ನಾನು ಟ್ರಸ್ಟ್‌ನ ಅಧ್ಯಕ್ಷನಾಗಿ, ಶಾಸಕನಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ, ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಅವರು ಆಹ್ವಾನ ನೀಡಿದ್ದಾರೆ.

ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಟೋಕನ್ ವ್ಯವಸ್ಥೆ ಇಲ್ಲ: ಸುದೇಶ್ ಶೆಟ್ಟಿ 


ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲಿರುವ ವಸ್ತ್ರ ವಿತರಣಾ ಕಾರ್ಯಕ್ತಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಯಾವುದೇ ಟೋಕನ್ ವ್ಯವಸ್ಥೆ ಇರುವುದಿಲ್ಲ. ಕಾರ್ಯಕ್ರಮದಲ್ಲಿ‌ಭಾಗವಹಿಸಿ ವಸ್ತ್ರ ಪಡೆದುಕೊಳ್ಳಬಹುದಾಗಿದೆ. ಸುಮಾರು 15 ಕೌಂಟರುಗಳನ್ನು ಮಾಡಲಾಗಿದ್ದು ನೇರವಾಗಿ ಬಂದು ವಸ್ತ್ರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ. ಟೋಕನ್ ಪಡೆದುಕೊಳ್ಳಬೇಕು ಎಂಬ ಯಾವುದೇ ನಿಮಯವನ್ನು ಮಾಡಿಲ್ಲ ಸಾರ್ವಜನಿಕರು ಹೆಚ್ಚಿನ‌ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.




Leave a Comment: