ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಗೆಲುವಿನ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದವರ ಕೈವಾಡ

Posted by Vidyamaana on 2023-05-15 23:19:46 |

Share: | | | | |


ಗೆಲುವಿನ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದವರ ಕೈವಾಡ

ಬೆಂಗಳೂರು : ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ರಾಜಕೀಯದ ಪ್ರಸ್ತುತತೆ, ಧ್ರುವೀಕರಣ ಅನೇಕ ನಿರೂಪಣೆಗಳು ಮತ್ತು ತೀರ್ಮಾನಗಳನ್ನು ಹುಟ್ಟುಹಾಕಿದ್ದು, ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಪಾತ್ರವೂ ಗಮನಾರ್ಹವಾಗಿದೆ.ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥರಾಗಿ ಸಸಿಕಾಂತ್ ಸೆಂಥಿಲ್ ಅವರು ತನ್ನದೇ ಆದ ದೊಡ್ಡ ಕೊಡುಗೆಯನ್ನು ಕಾಂಗ್ರೆಸ್ ಗೆಲುವಿನಲ್ಲಿ ಕೊಟ್ಟು ಯಶಸ್ಸನ್ನು ಸಂಭ್ರಮಿಸಿದ್ದಾರೆ. ಸೆಂಥಿಲ್ ಮತ್ತು ಅನುಭವಿ ಯುವ ತಂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ಸು ‘ಕೈ’ಗೆ ತಂದು ಕೊಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ (ಕರ್ನಾಟಕ ಕೇಡರ್) ಸಸಿಕಾಂತ್ ಸೆಂಥಿಲ್ ಅವರು ನಾಗರಿಕ ಸೇವೆಯನ್ನು ತೊರೆದು 2019 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು

ಕೊಲೆ ಬೆದರಿಕೆ ಆರೋಪ: ವಿಷ ಸೇವಿಸಿ ವಿದ್ಯಾರ್ಥಿನಿ ಆಶಾ ಆತ್ಮಹತ್ಯೆ

Posted by Vidyamaana on 2023-10-14 13:13:40 |

Share: | | | | |


ಕೊಲೆ ಬೆದರಿಕೆ ಆರೋಪ: ವಿಷ ಸೇವಿಸಿ ವಿದ್ಯಾರ್ಥಿನಿ ಆಶಾ ಆತ್ಮಹತ್ಯೆ

ಹಾಸನ: ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಹೆದರಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ನಡೆದಿದೆ.

       ಆಶಾ (20) ಮೃತ ಯುವತಿ. ಬೇಲೂರು ಪಟ್ಟಣದ ಕಾಲೇಜುವೊಂದರಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾಳನ್ನು ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಆಲೂರು ತಾಲೂಕು ಕಾಟೀಹಳ್ಳಿ ಗ್ರಾಮದ ಮಂಜುನಾಥ ಎಂಬಾತ ಪ್ರೀತಿಸುತ್ತಿದ್ದ. ಇತ್ತೀಚೆಗೆ ಇದೇ ಮಂಜುನಾಥ ಬೇರೊಂದು ಹುಡುಗಿ ಜೊತೆ ಸುತ್ತಾಡುತ್ತಿದ್ದ. ಇದನ್ನು ಗಮನಿಸಿದ ಆಶಾ ಮಂಜುನಾಥನನ್ನು ಹೀಗೇಕೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಳು. ನೀನು ನನ್ನನ್ನು ಹೀಗೆಲ್ಲಾ ಪ್ರಶ್ನೆ ಮಾಡಬೇಡ. ಪ್ರಶ್ನಿಸಿದರೆ ಕೊಲೆ ಮಾಡುತ್ತೇನೆ. ಅಷ್ಟೇ ಅಲ್ಲ, ನೀನು ನನ್ನೊಂದಿಗೆ ಸುತ್ತಾಡಿರುವ ಫೋಟೋ, ಮೆಸೇಜ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ, ನಿಂದಿಸಿದ್ದ ಎಂದ ಆರೋಪಿಸಲಾಗಿದೆ.

ಅವ್ರು ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ : ಬಿಜೆಪಿ ಸೇರ್ಪಡೆ ವರದಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

Posted by Vidyamaana on 2024-04-04 19:50:39 |

Share: | | | | |


ಅವ್ರು ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ : ಬಿಜೆಪಿ ಸೇರ್ಪಡೆ ವರದಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ನವದೆಹಲಿ : ಪ್ರಕಾಶ್ ರಾಜ್ ತಮ್ಮ ವಿಚಿತ್ರ ಶೈಲಿ ಮತ್ತು ಬಲವಾದ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಪ್ರಕಾಶ್ ರಾಜ್ ಯಾವಾಗಲೂ ಬಿಜೆಪಿ ವಿರುದ್ಧವಾಗಿದ್ದು, ತಮ್ಮ ನೀತಿಗಳ ಬಗ್ಗೆ ಮತ್ತೆ ಮತ್ತೆ ಪ್ರಶ್ನೆಗಳನ್ನ ಎತ್ತುತ್ತಲೇ ಇರುತ್ತಾರೆ. ಆದ್ರೆ, ಈ ನಡುವೆ ಪ್ರಕಾಶ್ ರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತಿಗೆ ಹಾವು ಕಡಿತ: ಪತ್ನಿ ಹೃದಯಾಘಾತದಿಂದ ಸಾವು

Posted by Vidyamaana on 2023-08-08 11:45:16 |

Share: | | | | |


ಪತಿಗೆ ಹಾವು ಕಡಿತ: ಪತ್ನಿ ಹೃದಯಾಘಾತದಿಂದ ಸಾವು

ಕಡಬ; ಪತಿಗೆ ವಿಷ ತಾಗಿದ ಸುದ್ದಿ ಕೇಳಿದ ಪತ್ನಿ ಹೃದಯಾಘಾತದಿಂದ ನಿಧನವಾಗಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.


ಕೌಕ್ರಾಡಿ ಗ್ರಾಮದ ತೋಟ ಮನೆ ನಿವಾಸಿ, ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ ಪದ್ಮಯ್ಯ ಗೌಡರವರ ಪತ್ನಿ ದೇವಕಿ(ಸೇಸಮ್ಮ)(60) ಮೃತ ದುರ್ದೈವಿ.


ಪದ್ಮಯ್ಯ ಗೌಡ(66.) ಅವರಿಗೆ ಆ.5ರಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷ ಜಂತುವೊಂದು ಕಡಿದಿತ್ತು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅಘಾತಗೊಂಡ ಅವರ ಪತ್ನಿ ಅದೇ ದಿನ ರಾತ್ರಿ 12 ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದ ದೇವಕಿಯವರನ್ನು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಪತ್ನಿ ಸಾವನ್ನಪ್ಪಿದ ವಿಚಾರ ತಿಳಿದ ಪದ್ಮಯ್ಯ ಗೌಡ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕೋವಿ ಅಡ ಇಡುವುದರಿಂದ ತೊಂದರೆಯೇ

Posted by Vidyamaana on 2023-07-11 08:51:53 |

Share: | | | | |


ಕೋವಿ ಅಡ ಇಡುವುದರಿಂದ ತೊಂದರೆಯೇ

ಬೆಂಗಳೂರು: ನೀತಿ ಸಂಹಿತೆ ಸಂದರ್ಭ ಕೋವಿಯನ್ನು ಅಡ ಇಡಬೇಕಾದ ಪ್ರಸಂಗ ಎದುರಾಗುತ್ತದೆ. ಇದರಿಂದ ರೈತರಿಗೆ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ರೈತರಿಗೆ ಪರಿಹಾರ ಸೂಚಿಸಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸದನದಲ್ಲಿ ಕೇಳಿದ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದ್ದಾರೆ.

ಚುನಾವಣೆ ಎದುರಾದಾಗ ನೀತಿ ಸಂಹಿತೆ ಜಾರಿ ಮಾಡಲಾಗುತ್ತದೆ. ಹೀಗೆ ನೀತಿ ಸಂಹಿತೆ ಜಾರಿ ಮಾಡಿದಾಗ ರೈತರು ಪರವಾನಿಗೆ ಪಡೆದ ತಮ್ಮ ಕೋವಿಗಳನ್ನು ಠಾಣೆಯಲ್ಲಿ ಅಡ ಇಡಬೇಕಾದ ಕಾನೂನು ಇದೆ. ಕಳೆದ ಕೆಲ ಸಮಯಗಳಿಂದ ಬೇರೆ ಬೇರೆ ಚುನಾವಣೆಗಳ ಹಿನ್ನೆಲೆಯಲ್ಲಿ ವರ್ಷಕ್ಕೆ 2-3 ಬಾರಿ ಚುನಾವಣಾ ನೀತಿ ಸಂಹಿತೆ ಘೋಷಿಸಲಾಗುತ್ತಿದೆ. ಈ ಸಂದರ್ಭ ಕೋವಿಗಳನ್ನು ಠಾಣೆಯಲ್ಲಿ ಅಡ ಇಡಬೇಕಾಗುತ್ತದೆ. ಇದಕ್ಕೆ ಶುಲ್ಕವನ್ನು ವಿಧಿಸುವುದೂ ಇದೆ. 

ಹೀಗೆ ಕೋವಿಯನ್ನು ಠಾಣೆಯಲ್ಲಿ ಇಡುವುದಾದರೆ, ತಮ್ಮ ತೋಟವನ್ನು ರಕ್ಷಣೆ ಮಾಡುವುದಾದರೂ ಹೇಗೆ? ಈಗಿನ ಮಂಗಗಳು ಅಟಿಕೆ ಕೋವಿಗಳಿಗೆ ಹೆದರುವುದಿಲ್ಲ. ಅವು ತುಂಬಾ ಮುಂದುವರಿದಿದ್ದಾವೆ. ಆದ್ದರಿಂದ ತಮ್ಮ ಕೃಷಿಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕೋವಿಯನ್ನೇ ಬಳಸಬೇಕಾದ ಅಗತ್ಯವಿದೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ವಿನಂತಿಸಿದರು.

ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಕೋವಿ ಅಡ ಇಡಲು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಅಂತಹ ಪ್ರಕರಣಗಳಿದ್ದರೆ ಗಮನಕ್ಕೆ ತನ್ನಿ. ಅಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿ ಅಡ ಇಡುವ ವಿಚಾರದಲ್ಲಿ ಎಕ್ಸೆಂಪ್ಷನ್ ಸಮಿತಿ ಚಾಲ್ತಿಯಲ್ಲಿದೆ. ಕೃಷಿಕರು, ಕೋವಿಯನ್ನು ಅಡ ಇಡುವುದರಿಂದ ಏನು ಸಮಸ್ಯೆ ಎದುರಾಗುತ್ತದೆ ಎನ್ನುವ ವಿವರಣೆಯೊಂದಿಗೆ ಈ ಸಮಿತಿಗೆ ಅರ್ಜಿ ಸಲ್ಲಿಸಬಹುದು. ಸಮಿತಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ ಎಂದು ಉತ್ತರಿಸಿದರು.


ದಕ್ಷಿಣಕನ್ನಡದಲ್ಲಿ 11200 ಕೋವಿ ಪರವಾನಿಗೆ:

ದಕ್ಷಿಣ ಕನ್ನಡ ಒಂದೇ ಜಿಲ್ಲೆಯಲ್ಲಿ 11 ಸಾವಿರದ 200ರಷ್ಟು ಕೋವಿ ಪರವಾನಿಗೆಗಳಿವೆ ಎನ್ನುವ ಮಾಹಿತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಸದನಕ್ಕೆ ನೀಡಿದರು. ಪ್ರತಿ ಬಾರಿ ಚುನಾವಣೆ ಬಂದಾಗಲೂ ಇಷ್ಟು ಕೋವಿಗಳನ್ನು ಠಾಣೆಗಳಲ್ಲಿ ಅಡ ಇಡುವ ಪ್ರಸಂಗ ಎದುರಾಗುತ್ತದೆ. ಅಂದರೆ ಇಷ್ಟು ಮಂದಿ ಕೃಷಿಕರು ಚುನಾವಣೆ ಸಂದರ್ಭ ತಮ್ಮ ಕೃಷಿಯನ್ನು ರಕ್ಷಿಸಿಕೊಳ್ಳಲು, ಕೋವಿಗೆ ಪರ್ಯಾಯ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಕಷ್ಟ ಎದುರಿಸುತ್ತಿದ್ದಾರೆ.

ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

Posted by Vidyamaana on 2023-05-21 05:19:54 |

Share: | | | | |


ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

ನವದೆಹಲಿ: ಇಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಅಂಗವಾಗಿ ದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪುಷ್ಪನಮನ ಸಲ್ಲಿಸಿದರು.ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಮ್ಮ ತಂದೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಆಗಸ್ಟ್ 20, 1944 ರಂದು ಜನಿಸಿದ ರಾಜೀವ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಸಂಸದೀಯ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಭಾರತ ರತ್ನ ಪುರಸ್ಕೃತರಾದ ರಾಜೀವ್ ಗಾಂಧಿ ಅವರು 1984 ರಿಂದ 1989 ರವರೆಗೆ ಭಾರತದ ಆರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1984 ರಲ್ಲಿ ಅವರ ತಾಯಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅವರು ಅಧಿಕಾರ ವಹಿಸಿಕೊಂಡರು.



Leave a Comment: