ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿದ ರಿಕ್ಷಾ ಡ್ರೈವರ್

Posted by Vidyamaana on 2023-11-15 05:38:10 |

Share: | | | | |


ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿದ ರಿಕ್ಷಾ ಡ್ರೈವರ್

ಉಳ್ಳಾಲ, ನ.15: ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿ ಎಸ್ಕೇಪ್ ಆಗಿದ್ದ ಕುಂಪಲದ ಸೈಕೋ ರಿಕ್ಷಾ ಚಾಲಕನನ್ನ ಉಳ್ಳಾಲ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ. 


ಕಳೆದ ಆದಿತ್ಯವಾರ ಸಂಜೆ ಕುಂಪಲ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿದ್ದ ರಿಕ್ಷಾ ಚಾಲಕ ಸುಶಾಂತ್(31) ಎಂಬವರಿಗೆ ಅದೇ ಪಾರ್ಕಿನಲ್ಲಿ ರಿಕ್ಷಾ ಚಾಲನೆ ಮಾಡುತ್ತಿರುವ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ ಪರಿಣಾಮ ಸುಶಾಂತ್ ಅವರ ಎರಡು ಹಲ್ಲುಗಳು ಉದುರಿ ಹೋಗಿದೆ. ತೀವ್ರ ಗಾಯಗೊಂಡಿದ್ದ ಸುಶಾಂತ್ ರವರು  ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಹಲ್ಲೆಗೈದ ಆರೋಪಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರೋಕೇಶ್ ತಲೆಮರೆಸಿಕೊಂಡಿದ್ದ.

ಉಳ್ಳಾಲ ಪೊಲೀಸ್ ಠಾಣೆಯ ಪಿಐ ಬಾಲಕೃಷ್ಣ ರವರು ಸೋಮವಾರವೇ ತನ್ನ ಸಿಬ್ಬಂದಿಗಳೊಂದಿಗೆ ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.


ಬಂಧಿತ ಆರೋಪಿ ರೋಕೇಶ್ ಯಾನೆ ಸೈಕೊ ರೋಸ್ ಕುಂಪಲ ನಿವಾಸಿಯಾಗಿದ್ದು ಅಮಲು ಪದಾರ್ಥಗಳಿಗೆ ದಾಸನಾಗಿ ಪ್ರದೇಶಕ್ಕೆ ಕಂಟಕಪ್ರಾಯನಾಗಿದ್ದ. ಈತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸ್ಥಳೀಯ ಹೆಣ್ಮಕ್ಕಳಿಗೆ ಲೈಗಿಂಕ ಕಿರುಕುಳ ನೀಡಿ ಸಾರ್ವಜನಿಕರಿಂದ ಶಾಸ್ತಿ ಮಾಡಿಸಿಕೊಂಡಿದ್ದ. ಆರೋಪಿಯ ಸಹೋದರ ವೃತ್ತಿಪರ ವಕೀಲನಾಗಿದ್ದು ಆತನ ಧೈರ್ಯದಿಂದಲೇ ಸೈಕೋ ರೋಸ್ ನಿರಂತರ ಅಪರಾಧ ಕೃತ್ಯ ಎಸಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.


ದಿನ ನಿತ್ಯವೂ ನಶೆಯಲ್ಲೇ ರಿಕ್ಷಾ ಚಾಲನೆ ನಡೆಸುತ್ತಿರುವ ರೋಕೇಶನ ನಡವಳಿಕೆಯ ಬಗ್ಗೆ ಬೈಪಾಸಿನ ರಿಕ್ಷಾ ಚಾಲಕರು, ಮಾಲಕರೇ ಒಟ್ಟಾಗಿ ಉಳ್ಳಾಲ ಠಾಣೆಗೆ ಬರವಣಿಗೆಯಲ್ಲಿ ಮಾಹಿತಿ  ಕೊಟ್ಟಿದ್ದು ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದರು.

ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

Posted by Vidyamaana on 2023-09-15 09:58:06 |

Share: | | | | |


ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

ಬೆಂಗಳೂರು : ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.


ವಿಚಾರಣೆ ವೇಳೆ ಮೂರ್ಛ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛ ರೋಗದಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.

ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-09-06 13:34:11 |

Share: | | | | |


ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ಸಮಿತಿ ಅಸ್ತಿತ್ವಕ್ಕೆ

ಪುತ್ತೂರು: ವಿಮೆನ್ ಇಂಡಿಯಾ  ಮೂವ್ ಮೆಂಟ್ WIM ಪುತ್ತೂರು ತಾಲೂಕು ಸಮಿತಿ ರಚನೆಯನ್ನು ಉಪ್ಪಿನ೦ಗಡಿ ಯಲ್ಲಿ ನಡೆಸಲಾಯಿತು


ವಿಮೆನ್ ಇ೦ಡಿಯಾ -ಮೂವ್ ಮೆಂಟ್

ಜಿಲ್ಲಾಧ್ಯಕ್ಷರಾದ ನೌರೀನ್‌ ಅಲಂಪಾಡಿ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು. ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಝಾಹಿದ ಸಾಗರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝರಿನಾ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸೌದಾ ಮಠ, ಜೊತೆ ಕಾರ್ಯದರ್ಶಿಯಾಗಿ ಘಾತಿಮಾ ನಿರ್ಮ ಕೋಶಾಧಿಕಾರಿಯಾಗಿ ಫಾಹಿನ ನಝೀರ್ ಆಯ್ಕೆಯಾದರು. ಸದಸ್ಯರುಗಳಾಗಿ ಝುಹರ ಬನ್ನೂರು, ಫೌಝಿಯಾ, ಅಸ್ಟೆ, ನಫೀಸ ಮಠ, ಸಫೀನಾ ಉಪ್ಪಿನಂಗಡಿ, ಮುಂತಾಝ್ ಇಕ್ವಾಲ್, ಶಂನಾಝ್, ಶಾಹಿದ, ನಸೀಮಾ ಕೆ ಎಂ, ನುಸ್ರತ್‌ ಕುದ್ರಡ್ಕ ಆಯ್ಕೆಯಾದರು.


ಸಭೆಯನ್ನುದ್ದೇಶಿಸಿ ವಿಮೆನ್ ಇಂಡಿಯಾ ಮೂವೆಂಟ್ ಜಿಲ್ಲಾದ್ಯಕ್ಷರಾದ ನೌರಿನ್‌ ಅಲಂಪಾಡಿ ಮಾತಾಡಿದರು. ಝಾಹಿದ ಸಾಗರ್ ಸ್ವಾಗತಿಸಿ ವಂದಿಸಿದರು.

OK ಎಂಬ ಪದದ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಮಾಹಿತಿ

Posted by Vidyamaana on 2023-10-11 16:02:52 |

Share: | | | | |


OK ಎಂಬ ಪದದ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಮಾಹಿತಿ

     ನಮ್ಮ ದೈನಂದಿನ ಜೀವನದಲ್ಲಿ ನಾವು ಬಹಳಷ್ಟು ಪದಗಳನ್ನು ಬಳಸುತ್ತೇವೆ, ಅದು ಮಹತ್ವವನ್ನು ಹೊಂದಿರಬಹುದು ಆದರೆ ಅವುಗಳ ನಿಜವಾದ ಅರ್ಥದ ಬಗ್ಗೆ ನಮಗೆ ತಿಳಿದಿಲ್ಲದಿರಬಹುದು. ಇಂದು ನಾವು ಮಾತನಾಡುತ್ತಿರುವ ಈ ಒಂದು ನಿರ್ದಿಷ್ಟ ಪದವು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸುವ ಪದಗಳಲ್ಲಿ ಒಂದಾಗಿದೆ ಅದುವೆ ಒಕೆ ಎನ್ನುವುದು.ನಾವು OK ಎಂಬ ಪದದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಪದದ ಹಿನ್ನೆಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಮೊದಲನೆಯದಾಗಿ, OK ಎಂಬುದು ಒಂದು ಪದವಲ್ಲ ಆದರೆ ಎರಡು ಪದಗಳಿಗೆ ಸಂಕ್ಷಿಪ್ತ ರೂಪವಾಗಿದೆ. ಈಗ ಆ ಎರಡು ಪದಗಳು ಯಾವುವು? ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಓಕೆಯ ಪೂರ್ಣ ರೂಪವೆಂದರೆ ಒಲ್ಲಾ ಕಲ್ಲಾ ಅಥವಾ ಓಲ್ ಕೊರೆಕ್ಟ್. ಓಲ್ಲಾ ಕಲ್ಲಾ ಎಂದರೆ ಗ್ರೀಕ್ ಭಾಷೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದರ್ಥ.

ಈ ಪದದ ಮೂಲವು ಸ್ಪಷ್ಟವಾಗಿಲ್ಲ, ಆದರೆ ಇದು 1830 ರ ದಶಕದಲ್ಲಿ ಬೋಸ್ಟನ್ ನಿಂದ ಬಂದಿತು ಎಂದು ಹೇಳಲಾಗುತ್ತದೆ, ಮತ್ತು ಇದನ್ನು 1960 ರ ದಶಕದಲ್ಲಿ ಭಾಷಾಶಾಸ್ತ್ರಜ್ಞ ಅಲೆನ್ ವಾಕರ್ ರೀಡ್ ವಿವರಿಸಿದ್ದಾರೆ.ಅಂತೆಯೇ, ಸಾಮಾನ್ಯವಾಗಿ ಬಳಸಲಾಗುವ ಇತರ ಸಂಕ್ಷೇಪಣಗಳೂ ಇವೆ, ಅವುಗಳೆಂದರೆ - i.e ಮತ್ತು e.g. ಈ ಎರಡೂ ಸಂಕ್ಷೇಪಣಗಳು ಲ್ಯಾಟಿನ್ ಮೂಲದವು. ಇದರ ಪೂರ್ಣ ರೂಪವು ಲ್ಯಾಟಿನ್ ಭಾಷೆಯಲ್ಲಿ "ಅಂದರೆ" ("that is" ) ಎಂಬ ಅರ್ಥವನ್ನು ನೀಡುತ್ತದೆ, ಮತ್ತು ಉದಾ. ಲ್ಯಾಟಿನ್ ಭಾಷೆಯಲ್ಲಿ "ಉದಾಹರಣೆಗೆ" ಎಂದು ಭಾಷಾಂತರಿಸುವ ಎಕ್ಸೆಂಪ್ಲಿ ಗ್ರೇಟಿಯಾ ಆಗುತ್ತದೆ.

ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು, ಮರೀಲ್, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಆಟಗಾರರ `ಸಿಪಿಎಲ್ ಸೀಸನ್-2′ ಸಂಭ್ರಮದ ತೆರೆ , ಲೂವಿಸ್ ಕ್ರಿಕೆಟರ್‍ಸ್ ಸೀಸನ್ 2 ಚಾಂಪಿಯನ್, ಸಿಝ್ಲರ್ ಸ್ಟ್ರೈಕರ್‍ಸ್ ರನ್ನರ್‍ಸ್.

Posted by Vidyamaana on 2023-01-12 08:35:41 |

Share: | | | | |


ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು, ಮರೀಲ್, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಆಟಗಾರರ `ಸಿಪಿಎಲ್ ಸೀಸನ್-2′ ಸಂಭ್ರಮದ ತೆರೆ , ಲೂವಿಸ್ ಕ್ರಿಕೆಟರ್‍ಸ್ ಸೀಸನ್ 2 ಚಾಂಪಿಯನ್, ಸಿಝ್ಲರ್ ಸ್ಟ್ರೈಕರ್‍ಸ್ ರನ್ನರ್‍ಸ್.

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2023-ಸೀಸನ್ 2 ‘ ಜ.8  ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಕ್ರಿಕೆಟ್ ಪಂದ್ಯಾಟವು ಇದೀಗ ಸಂಭ್ರಮದ ತೆರೆ ಕಂಡಿದೆ.


ಸಂಜೆ ಜರಗಿದ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್‍ಸ್ ತಂಡವು ಸಿಪಿಎಲ್ 2023, ಸೀಸನ್ 2 ಚಾಂಪಿಯನ್ ಆಗಿ ಮೂಡಿ ಬಂದಿದ್ದು ಚೊಚ್ಚಲ ಟ್ರೋಫಿ(ರೂ.23,333/-)ಯನ್ನು ಮುಡಿಗೇರಿಸಿಕೊಂಡಿದೆ. ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ರನ್ನರ್ಸ್ ಪ್ರಶಸ್ತಿ(ರೂ.18,888/-)ಯನ್ನು ಪಡೆದುಕೊಂಡಿತು.


ಸಿಪಿಎಲ್ ಸೀಸನ್-1 ರಲ್ಲಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ಚಾಂಪಿಯನ್ ಆಗಿತ್ತು ಮತ್ತು ಪ್ರಸ್ತುತ ವರ್ಷ ಚಾಂಪಿಯನ್ ಆಗಿರುವ ಲೂವಿಸ್ ಕ್ರಿಕೆಟರ್‍ಸ್ ತಂಡವು ಲೀಗ್ ಹಂತದಲ್ಲಿಯೇ ಹೊರ ಬಿದ್ದಿತ್ತು. ಪಂದ್ಯದ ಪಂದ್ಯಶ್ರೇಷ್ಟರಾಗಿ ಲೂವಿಸ್ ಕ್ರಿಕೆಟರ್‍ಸ್ ತಂಡದ ಐವನ್ ಡಿ’ಸಿಲ್ವ, ಪಂದ್ಯ ಪುರುಷೋತ್ತಮರಾಗಿ ಸಿಝ್ಲರ್ ಸ್ಟ್ರೈಕರ್‍ಸ್ ತಂಡದ ಪ್ರೀತಂ ಮಸ್ಕರೇನ್ಹಸ್‌ರವರು ಹೊರ ಹೊಮ್ಮಿದ್ದಾರೆ.


ಲೂವಿಸ್ ಕ್ರಿಕೆಟರ್‍ಸ್ ಹಾಗೂ ಸಿಝ್ಲರ್ ಸ್ಟ್ರೈಕರ್‍ಸ್ ನಡುವಣ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಝ್ಲರ್ ಸ್ಟ್ರೈಕರ್‍ಸ್ ತಂಡವು ನಿಗದಿತ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ 29 ರನ್‌ಗಳನ್ನು ಪೇರಿಸಲು ಶಕ್ತವಾಗಿತ್ತು. ವಿಜಯಿಯಾಗಲು ಓವರಿಗೆ ಆರು ರನ್‌ಗಳ ಸರಾಸರಿ ಹೊಂದಿದ ಲೂವಿಸ್ ಕ್ರಿಕೆಟರ್‍ಸ್ ತಂಡವು ಕೇವಲ 3.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 31 ರನ್‌ಗಳನ್ನು ಬಾರಿಸಿ ಗೆಲುವಿನ ಕೇಕೆ ಹಾರಿಸಿ ಸಿಪಿಎಲ್ ಸೀಸನ್-2ರ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಪವರ್ ಮ್ಯಾನ್ ಗಳಿಂದ ಪವರ್ ಫುಲ್ ಗಣೇಶ ಚತುರ್ಥಿ ಆಚರಣೆ

Posted by Vidyamaana on 2023-09-23 12:43:50 |

Share: | | | | |


ಪವರ್ ಮ್ಯಾನ್ ಗಳಿಂದ ಪವರ್ ಫುಲ್ ಗಣೇಶ ಚತುರ್ಥಿ ಆಚರಣೆ

ಪುತ್ತೂರು: ಇಲ್ಲಿನ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಕ್ವಾಟರ್ಸ್’ನಲ್ಲಿ ಇದೇ ಮೊದಲ ಬಾರಿಗೆ ಗಣೇಶ ಚತುರ್ಥೀಯನ್ನು ಆಚರಿಸಲಾಯಿತು.

ಪವರ್ ಮ್ಯಾನ್’ಗಳು ಸೇರಿಕೊಂಡು ಗಣೇಶ ಚೌತಿಯನ್ನು ಆಚರಿಸಿದ್ದು, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಾ ವಿಧಿಗಳನ್ನು ನೆರವೇರಿಸಿ, ಬಳಿಕ ವಿಗ್ರಹ ಜಲಸ್ಥಂಭನ ಮಾಡಲಾಯಿತು.

ಸಂತೋಷ ಜಾಧವ್, ನಾಭಿಸಾಬ್ ನದಾಫ್, ಶೇಖರ ಪೂಜಾರ, ಮಲ್ಲು ಹಲಗಲಿ, ನವಾಜ್, ಸದಾನಂದ,  ಗಂಧಪ್ಪ, ದೇವರಾಜ, ನೀಲಪ್ಪ, ಉಮೇಶ, ಧರೇಶ್, ಆದಿ,ಸಂತೋಷ ಮಳೆಯಪ್ಪನವರ ಮತ್ತು ಬಸವರಾಜ ಮೊದಲಾದವರು ಉಪಸ್ಥಿತರಿದ್ದರು.



Leave a Comment: