ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ತುಂಬಿರಬೇಕು: ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

Posted by Vidyamaana on 2023-08-10 02:52:36 |

Share: | | | | |


ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ತುಂಬಿರಬೇಕು: ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಕೆ 6 ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.


2025-26ನೇ ಸಾಲಿಗೆ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅನಿಕೇತ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಪುತ್ರಿಗೆ ಎಲ್‌ಕೆಜಿಗೆ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ, ಸರ್ಕಾರದ ಅಧಿಸೂಚನೆ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿದೆ. ಇದರ ಹಿಂದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ. ತಜ್ಞರ ವರದಿ ಆಧರಿಸಿದ ನೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.


ರಸ್ತೆ ಅಪಘಾತ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕಾಗಿ ಇನ್ಸೂರೆನ್ಸ್ ಡಿಪಾರ್ಟ್ಮೆಂಟ್ ಮತ್ತು ಫಾರೆನ್ಸಿಕ್  ಪ್ರಯೋಗಾಲಯಗಳನ್ನು ಪೊಲೀಸ್ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಜೊತೆಗೆ ಸಂಯೋಜನೆಗೊಳಿಸಬೇಕು ಎಂದು ಕೋರ್ಟ್ ಹೇಳಿದೆ. ಪರಿಹಾರ ಕೋರಿ ಅರ್ಜಿ ಸಲ್ಲಿಕೆ ವಿಳಂಬವಾಗಿದೆ ಎಂದು ಆಕ್ಷೇಪಿಸಿ ಇನ್ಸೂರೆನ್ಸ್ ಕಂಪನಿಯೊಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ನಿರ್ದೇಶನ ನೀಡಿದೆ

ಬ್ಲೂಟೂತ್ ಬಳಸಿ ಕೆಪಿಎಸ್ ಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ

Posted by Vidyamaana on 2023-10-28 16:07:26 |

Share: | | | | |


ಬ್ಲೂಟೂತ್ ಬಳಸಿ ಕೆಪಿಎಸ್ ಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ

ಯಾದಗಿರಿ: ಇಂದು ರಾಜ್ಯಾದ್ಯಂತ ಕೆಪಿಎಸ್ ಸಿಯ ವಿವಿಧ ಇಲಾಖೆಗಳ ಪರೀಕ್ಷೆ ನಡೆಯುತ್ತಿದೆ. ಯಾದಗಿರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಓರ್ವ ಅಭ್ಯರ್ಥಿ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆದಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಕಲು ಅಭ್ಯರ್ಥಿಯೇ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಬಂದಿದ್ದಾಗಿ ಮಾಹಿತಿ ಸಿಕ್ಕಿದೆ.

ಪೊಲೀಸರು ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಟಿ ನೂರ್ ಮಾಲಾಬಿಕಾ ದಾಸ್ ಆತ್ಮಹತ್ಯೆ

Posted by Vidyamaana on 2024-06-10 19:13:11 |

Share: | | | | |


ನಟಿ ನೂರ್ ಮಾಲಾಬಿಕಾ ದಾಸ್ ಆತ್ಮಹತ್ಯೆ

ಮುಂಬೈ: ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ಮುಂಬೈನ ಅಪಾರ್ಟ್ ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ಬಿಡುಗಡೆಗೊಂಡಿದ್ದ ದಿ ಟ್ರಯಲ್ ವೆಬ್ ಸರಣಿಯಲ್ಲಿ ನಟಿ ಕಾಜೋಲ್ ಜತೆ ಮಾಲಾಬಿಕಾ ದಾಸ್ ನಟಿಸಿದ್ದರು.

ಸಜಿಪ ಮೂಡ: ತವರು ಮನೆಯಲ್ಲಿ ನೇಣಿಗೆ ಶರಣಾದ ನವ ವಿವಾಹಿತೆ

Posted by Vidyamaana on 2023-10-30 21:25:08 |

Share: | | | | |


ಸಜಿಪ ಮೂಡ: ತವರು ಮನೆಯಲ್ಲಿ ನೇಣಿಗೆ ಶರಣಾದ ನವ ವಿವಾಹಿತೆ

ಬಂಟ್ವಾಳ, ಅ.30: ಗಂಡನ ಮನೆಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತ ತರುಣಿ ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಸಜೀಪ ಮೂಡದಲ್ಲಿ ನಡೆದಿದೆ. 


ಬಂಟ್ವಾಳ ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನಾ (22) ಮೃತಪಟ್ಟ ಯುವತಿ. ನೌಸೀನಾ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಪ್ರೇಮವಿವಾಹ ಆಗಿದ್ದರೂ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಲವ್ ಮಾಡಿ ಮದುವೆಯಾಗಿದ್ದರಿಂದ ಒಳ್ಳೆ ಹುಡುಗಿ ಸಿಗಲಿಲ್ಲ, ಇಲ್ಲದಿದ್ದರೆ ಒಳ್ಳೆಯ ಹುಡುಗಿ ಸಿಗಬಹುದಿತ್ತು ಎಂದು ಅತ್ತೆ ಝುಬೈದಾ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿ, ಮಾನಸಿಕ ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತ ನೌಸೀನ್ ಉಳ್ಳಾಲದ ಗಂಡನ ಮನೆಯಿಂದ ಸಜೀಪ ಗ್ರಾಮದ ತಾಯಿ ಮನೆಗೆ ಬಂದಿದ್ದಳು. ಮಾನಸಿಕವಾಗಿ ನೊಂದಿದ್ದ ನೌಸೀನಾ ಅ.25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿಯ ಅಣ್ಣ ನಾಸೀರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಲವ್ ಮ್ಯಾರೇಜ್, ಚಿನ್ನಾಭರಣ ಮಾರಿದ್ದ ಗಂಡ 


ಸಜೀಪ ಮೂಡ ನಿವಾಸಿ ಕೆ.ಎಮ್ ಬಾವ ಅವರ ಮಗಳು ನೌಸೀನಾ ಉಳ್ಳಾಲ ಮೂಲದ ಯುವಕ ಅಜ್ಮಾನ್ ಎಂಬಾತನಿಗೆ ಇನ್ಸ್ಟಾ ಗ್ರಾಂ ಮೂಲಕ ಪರಿಚಯವಾಗಿದ್ದಳ. ಬಳಿಕ ಇವರು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಆಗಸ್ಟ್ 14 ರಂದು ಮದುವೆಯಾಗಿದ್ದರು. ಆದರೆ ಅಜ್ಮಾನ್ ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್ ಬಳಿಯಿದ್ದ ಒಡವೆಗಳನ್ನು ಮಾರಿದ್ದಾನೆ. ಜೊತೆಗೆ ಇನ್ನಷ್ಟು ಒಡೆವೆಗಳನ್ನು ತರುವಂತೆ ಪೀಡಿಸುತ್ತಿದ್ದ. ಇದಲ್ಲದೆ ಅತ್ತೆ ಮತ್ತು ನಾದಿನಿಯವರು ಲವ್ ಮ್ಯಾರೇಜ್ ಆಗಿರುವ ಕಾರಣಕ್ಕಾಗಿ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದರೆಂದು ತಾಯಿ ಮನೆಯಲ್ಲಿ ಮಗಳು ತಿಳಿಸಿದ್ದಳು.


ಗಂಡನ ಮನೆಯವರ ಕಿರುಕುಳ ತಾಳಲಾರದೆ ನೌಸೀನ್ ಅ.24 ರಂದು ತಾಯಿ ಮನೆಗೆ ಬಂದಿದ್ದಳು. ಮರುದಿನ ಮನೆಯವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇವಳು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

BREAKING : ಬಿಟ್ ಕಾಯಿನ್ ಹಗರಣ ಕೇಸ್ : ಪ್ರಮುಖ ಆರೋಪಿ ಶ್ರೀಕಿ ಬಂಧನ

Posted by Vidyamaana on 2024-05-07 20:39:29 |

Share: | | | | |


BREAKING : ಬಿಟ್ ಕಾಯಿನ್ ಹಗರಣ ಕೇಸ್ : ಪ್ರಮುಖ ಆರೋಪಿ ಶ್ರೀಕಿ ಬಂಧನ

ಬೆಂಗಳೂರು : ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಅಲ್ಲಿ ಶ್ರೀಕಿಯನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

2017ರಲ್ಲಿ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್​ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 1.14 ಲಕ್ಷ ಮೌಲ್ಯದ 60.6 ಬಿಟ್ ಕಾಯಿನ ಕಳುವು ಆಗಿರುವ ಕುರಿತು ಆರೋಪ ಕೇಳಿಬಂದಿತ್ತು. ಪ್ರೀತಿ ಲ್ಯಾಪ್ಟಾಪ್ ಪರಿಶೀಲನೆ ವೇಳೆ ಬಿಟ್ ಕಾಯಿನ್ ಕಳುವಾಗಿರುವುದು ದೃಢವಾಗಿದೆ.

ಚಾರ್ಮಾಡಿ ಘಾಟ್ ಇಳಿಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್ – ಸಮಯ ಪ್ರಜ್ಞೆ ಮೆರೆದ ಚಾಲಕ ಸಂತೋಷ್ ಮಾಡಿದ್ದೇನು?

Posted by Vidyamaana on 2024-03-09 08:55:21 |

Share: | | | | |


ಚಾರ್ಮಾಡಿ ಘಾಟ್ ಇಳಿಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್ – ಸಮಯ ಪ್ರಜ್ಞೆ ಮೆರೆದ ಚಾಲಕ ಸಂತೋಷ್ ಮಾಡಿದ್ದೇನು?


ಮೂಡಿಗೆರೆ: ಸದಾ ಅಪಘಾತಗಳು ಸಂಭವಿಸುತ್ತಿರುವ ಚಾರ್ಮಾಡಿ ಘಾಟ್‌ನಲ್ಲಿ ಶುಕ್ರವಾರ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಚಾರ್ಮಾಡಿ ಘಾಟ್‌ನಲ್ಲಿ ಬ್ರೇಕ್‌ ಫೇಲ್ ಆಗಿತ್ತು.


ಕಡಿದಾದ ರಸ್ತೆ ಹಾಗೂ ತಿರುವುಗಳಿರುವ ಈ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್‌ ನಿಯಂತ್ರಿಸೋದು ಕಷ್ಟವಾಗಿತ್ತು. ಆದ್ರೆ, ಬ್ರೇಕ್‌ ಫೇಲ್ ಆಗಿರೋದು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಬಸ್ ನಿಲ್ಲಿಸಲು ಕೇವಲ ಯಾವುದಾದರು ತಡೆಗೋಡೆಗೆ ಗುದ್ದುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.


ಹೀಗಾಗಿ ಬಸ್ ಬ್ರೇಕ್‌ ಫೇಲ್ ಆಗಿರುವ ವಿಚಾರವನ್ನು ಪ್ರಯಾಣಿಕರ ಗಮನಕ್ಕೆ ತಂದು ಯಾರೂ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಎಲ್ಲರಿಗೂ ಗಟ್ಟಿಯಾಗಿ ಕುಳಿತುಕೊಳ್ಳುವಂತೆ ಸೂಚನೆ ನೀಡಿ ರಸ್ತೆಯಲ್ಲಿ ಸಿಗುವ ಯಾವುದಾದರೂ ಕಿರು ಸೇತುವೆಯ ತಡೆ ಗೋಡೆಗೆ ಡಿಕ್ಕಿ ಹೊಡೆಯುವುದಾಗಿ ಹೇಳಿದ್ದಾರೆ.


ಚಾರ್ಮಾಡಿ ಘಾಟ್‌ನ 6 ನೇ ತಿರುವು ಬಳಿ ಸ್ವಲ್ಪ ನೇರವಾಗಿರುವ ರಸ್ತೆಯಲ್ಲಿ ಇದ್ದ ಕಿರು ಸೇತುವೆಗೆ ಬಸ್ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಚಾರ್ಮಾಡಿ ಘಾಟ್‌ನಂತಹ ರಸ್ತೆಯಲ್ಲಿ ಬ್ರೇಕ್‌ ಫೇಲ್‌ ಆದ್ರೆ, ಕೈಕಾಲು ಬಿಡುವ ಚಾಲಕರ ನಡುವೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಂತೋಷ್‌ ಅವರ ಸಮಯ ಪ್ರಜ್ಞೆ ನಿಜಕ್ಕೂ ಮೆಚ್ಚತಕ್ಕದು.


ಪ್ರಯಾಣಿಕರೂ ಕೂಡಾ ಚಾಲಕ ಸಂತೋಷ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಸಮಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recent News


Leave a Comment: