ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

ಸುದ್ದಿಗಳು News

Posted by vidyamaana on 2024-07-08 08:23:43 |

Share: | | | | |


ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

 ಮಂಗಳೂರು : ಮಂಗಳೂರಿನಲ್ಲಿ ಒಂದೆಡೆ ಮುಂಗಾರು ಮಳೆ ಅಬ್ಬರವಿದ್ದರೆ ಇನ್ನೊಂದೆಡೆ ಕಳ್ಳರ ಭಯ ಪ್ರಾರಂಭವಾಗಿದ್ದು, ಕಳ್ಳತನಕ್ಕೆ ಹೆಸರು ಮಾಡಿರುವ ಚೆಡ್ಡಿ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.

ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.

 Share: | | | | |


ಪುತ್ತೂರಿನಲ್ಲಿ ನೂರುಲ್ ಹುದಾ ರಿವೈವ್ ಸ್ನೇಹಕೂಟ, ಪ್ರಾರ್ಥನಾ ಮಜ್ಲಿಸ್

Posted by Vidyamaana on 2024-06-27 17:14:01 |

Share: | | | | |


ಪುತ್ತೂರಿನಲ್ಲಿ ನೂರುಲ್ ಹುದಾ ರಿವೈವ್ ಸ್ನೇಹಕೂಟ, ಪ್ರಾರ್ಥನಾ ಮಜ್ಲಿಸ್

ಪುತ್ತೂರು, ಜೂನ್ ೨೧: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ವಲಯ ಮಟ್ಟದ ರಿವೈವ್ ಸ್ನೇಹ ಕೂಟ ಹಾಗೂ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಪ್ರಾರ್ಥನಾ ಮಜ್ಲಿಸ್  ಜೂನ್ ೨೬ರಂದು ಬುಧವಾರ ರಾತ್ರಿ ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್‌ನಲ್ಲಿ ನಡೆಯಿತು.

ಪ್ರಾರ್ಥನಾ ಮಜ್ಲಿಸ್‌ಗೆ ಸೈಯ್ಯದ್ ಎಸ್.ಎಂ. ಯಹ್ಯಾ ತಂಳ್ ಪೋಲ್ಯ ನೇತೃತ್ವ ನೀಡಿದರು. ಸ್ನೇಹಕೂಟವನ್ನು ಪುತ್ತೂರು ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರು ಮಾತನಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಬೆಳ್ತಂಗಡಿ : ಹಳೇಕೋಟೆ ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

Posted by Vidyamaana on 2024-06-01 18:09:41 |

Share: | | | | |


ಬೆಳ್ತಂಗಡಿ : ಹಳೇಕೋಟೆ  ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಹಳೆಕೋಟೆ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ   ಘಟನೆ ನಡೆದಿದೆ.

ಬೆಳ್ತಂಗಡಿಯ ಹಳೇಕೋಟೆ ಬಳಿಯ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಲಾರಿಯಡಿ ಸಿಲುಕಿ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಕೃಷಿಕ ವಿನೋದ್ ಗೌಡ(45) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಬನ್ನೂರು ತಡೆಗೋಡೆ ಜರಿದು ಹಾನಿಗೀಡಾದ ಮನೆಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಭೇಟಿ ಶಾಸಕರಿಂದ ಸರಕಾರದ ಪರಿಹಾರದ ಭರವಸೆ

Posted by Vidyamaana on 2024-06-27 16:42:16 |

Share: | | | | |


ಬನ್ನೂರು ತಡೆಗೋಡೆ ಜರಿದು ಹಾನಿಗೀಡಾದ ಮನೆಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಭೇಟಿ ಶಾಸಕರಿಂದ ಸರಕಾರದ ಪರಿಹಾರದ ಭರವಸೆ

ಪುತ್ತೂರು : ನಗರ ಸಭಾ ವ್ಯಾಪ್ತಿಯ ಬನ್ನೂರು ಜೈನರಗುರಿ ಎಂಬಲ್ಲಿ ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಪಕ್ಕದ ಮನೆಯವರು ಕಟ್ಟಿದ ಕಳ್ಳಿನ ತಡೆಗೋಡೆ ಮಜೀದ್ ಎಂಬವರ ಮನೆಗೆ ಜರಿದು ಬಿದ್ದಿದ್ದು ಸಣ್ಣ ಮಗುವಿಗೆ ಗಾಯವಾಗಿದ್ದು ಉಳಿದವರು ಅದ್ರಷ್ಟವಷಾತ್ ಪ್ರಾಣಹಾನಿಯಾಗದೆ ,ದೊಡ್ಡ ಅನಾಹುತದಿಂದ ಪಾರಾಗಿರುತ್ತಾರೆ

ಸ್ವಂತ ಮನೆಯ ಕನಸನ್ನು ನನಸಾಗಿಸಲು ನಿಮಗಿದೋ ಸುವರ್ಣಾವಕಾಶ:ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ

Posted by Vidyamaana on 2023-11-03 12:27:34 |

Share: | | | | |


ಸ್ವಂತ ಮನೆಯ ಕನಸನ್ನು ನನಸಾಗಿಸಲು ನಿಮಗಿದೋ ಸುವರ್ಣಾವಕಾಶ:ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ

ಪುತ್ತೂರು: ಪುತ್ತೂರು ಸುಳ್ಯ ಮಡಿಕೇರಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ.


ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ.


*ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!?*

ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು +91 8310880814 ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.


*ಏನಿದು ಬ್ರೈಟ್ ಭಾರತ್!?*

ಬ್ರೈಟ್ ಭಾರತ್ ಅನ್ನುವುದು, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಪುತ್ತೂರು ಸುಳ್ಯ ಮಡಿಕೇರಿ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ನಾಲ್ಕು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಲಕ್ಷಾಂತರ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಬ್ರೈಟ್ ಭಾರತ್.


*ಈ ಯೋಜನೆಯ ಪೂರ್ಣ ಮಾಹಿತಿ*

ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ.


*ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು!?*

ಈ ಸ್ಕೀಮ್ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ.


*ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದವರಿಗೆ ಏನಿದೆ!?*

ಒಟ್ಟು ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ, ಸಂಸ್ಥೆಯ ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು.


*ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!?*

ಬ್ರೈಟ್ ಭಾರತ್ ಈ ಸ್ಕೀಮ್ ಯೋಜನೆಗೆ, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಲು ಸಾಧ್ಯವಿರುವ ಯಾರಿಗೆ ಬೇಕಾದರೂ ಸದಸ್ಯರಾಗಬಹುದು. ಸದಸ್ಯರಾಗಬಯಸುವವರು, ನಿಮ್ಮ ಹೆಸರು, ಸ್ಥಳ, ಮೊಬೈಲ್ ಸಂಖ್ಯೆ, ಇಷ್ಟು ಮಾಹಿತಿಯನ್ನು +91 8310880814 ಈ ಸಂಪರ್ಕ ಸಂಖ್ಯೆಗೆ ಕರೆಮಾಡಿ ತಿಳಿಸಬಹುದು ಅಥವಾ ವಾಟ್ಸಾಪ್ ಮಾಡಬಹುದು.


*ಸರ್ಫ್ರೈಸ್ ಗಿಫ್ಟ್ ಏನು!? ಮತ್ತು ಅದಕ್ಕೆ ಯಾರೆಲ್ಲ ಅರ್ಹರಾಗುತ್ತಾರೆ!?*

ಈ ಸ್ಕೀಮ್ ಯೋಜನೆಯಲ್ಲಿ, ಪ್ರತಿ ತಿಂಗಳು ಕೂಡ ಹತ್ತು ಸರ್ಫ್ರೈಸ್ ಗಿಫ್ಟ್ ಇರುತ್ತದೆ. ಪ್ರತಿ ತಿಂಗಳ ಡ್ರಾದ ಒಂದು ವಾರ ಮುಂಚೆ, ಅಂದರೆ ಪ್ರತಿ ತಿಂಗಳು ಒಂಬತ್ತನೇ ತಾರೀಕಿನಂದು ನಡೆಯುವ ಡ್ರಾದ ಹಣವನ್ನು, ಎರಡನೇ ತಾರೀಕಿಗಿಂತ ಮುಂಚೆ ಪಾವತಿಸಿದ ಪ್ರತಿಯೊಬ್ಬರೂ, ಈ ಸರ್ಫ್ರೈಸ್ ಗಿಫ್ಟ್ ಬಹುಮಾನಕ್ಕೆ ಅರ್ಹರಾಗುತ್ತಾರೆ. ಈ ಸರ್ಫ್ರೈಸ್ ಗಿಫ್ಟ್ ಗೆ ಅರ್ಹರಾದ ಸದಸ್ಯರಲ್ಲಿ, ಹತ್ತು ಮಂದಿ ವಿಜೇತ ಸದಸ್ಯರು, ಬೋನಸ್ ಸರ್ಪ್ರೈಸ್ ಗಿಫ್ಟನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ಬ್ರೈಟ್ ಭಾರತ್ ಕಂಪೆನಿಯೂ, ಪ್ರಥಮ ತಿಂಗಳ ಸರ್ಫ್ರೈಸ್ ಗಿಫ್ಟನ್ನು ಘೋಷಿಸಿದ್ದು, ಅದ್ರಷ್ಟ ಹತ್ತು ಮಂದಿ ಚಿನ್ನದ ಉಂಗುರವನ್ನು, ಬೋನಸ್ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು ಅಥವಾ ವಾಟ್ಸಾಪ್ ಮಾಡಬಹುದು ಎಂದು ಬ್ರೈಟ್ ಭಾರತ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Call&Whatsapp: +91 8310880814


ಅಥವಾ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪಿಗೆ ಸೇರಬಹುದು.

https://chat.whatsapp.com/LfruZyWP0DK7QaDk67bvjd

ಕೊಡಗು: ಕರ್ನಾಟಕದ 32 ಮೀ. ಉದ್ದದ ಗಾಜಿನ ಸೇತುವೆ ಉದ್ಘಾಟನೆ: ದ.ಭಾರತದ 2ನೇ ಸ್ಕಯ್ ವಾಕ್ ಬ್ರಿಡ್ಜ್

Posted by Vidyamaana on 2023-06-13 02:18:12 |

Share: | | | | |


ಕೊಡಗು: ಕರ್ನಾಟಕದ 32 ಮೀ. ಉದ್ದದ ಗಾಜಿನ ಸೇತುವೆ ಉದ್ಘಾಟನೆ: ದ.ಭಾರತದ 2ನೇ ಸ್ಕಯ್ ವಾಕ್ ಬ್ರಿಡ್ಜ್

ಮಡಿಕೇರಿ ಜೂ.12 : ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್‌ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಸೇತುವೆಯಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ನಿಸರ್ಗಕ್ಕೆ ಧಕ್ಕೆಯಾಗದ ವಿಚಾರವನ್ನು ಹೊರತುಪಡಿಸಿ ಅಭಿವೃದ್ಧಿ ಪಡಿಸಬೇಕು ಎಂದರು.

ಈ ಅಪರೂಪದ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಭಾರತದ ಸ್ಟ್ರಾಟ್ ಲ್ಯಾಂಡ್ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಅದ್ಭುತ ಯೋಜನೆ ಸ್ಥಾಪಿತವಾಗಿರುವುದು ಪ್ರವಾಸೋದ್ಯಮಕ್ಕೆ ಅಶೋದಯಕ ಬೆಳವಣಿಗೆ ಎಂದು ತಿಳಿಸಿದರು.ಟಿಕೆಟ್ ಕೌಂಟರನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಪ್ಲೆಂಟೇಷನ್‌ನ ವಾಕ್ ಪಾಟ್‌ಅನ್ನು ಕೇಕಡ ಗಣಪತಿ ಹಾಗೂ ದೇವಯ್ಯ ಉದ್ಘಾಟಿಸಿದರು. ಫೋಟೋ ಪಾಯಿಂಟನ್ನು ಉದ್ಯಾಮಿ ಗ್ರೀನ್ ಲ್ಯಾಂಡ್ ಶರಿನ್ ಉದ್ಘಾಟಿಸಿದರು.

ಈ ಸಂದರ್ಭ ಓಂಕಾರೇಶ್ವರ ದೇವಾಲಯದ ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್, ತುಳುವೆರ ಒಕ್ಕೂಟದ ಜಿಲ್ಲಾ ಖಜಾಂಚಿ ಪ್ರಭುರೈ, ಬೆಟ್ಟಗೇರಿ ಗ್ರಾ.ಪಂ ಸದಸ್ಯ ಗೋಪಾಲ, ಪ್ರಮುಖರಾದ ಮುಂಜಂದಿರ ಚಿಕ್ಕು ಕಾರ್ಯಪ್ಪ, ಅಜ್ಜಿಕುಟೀರ ನರೇನ್ ಕಾರ್ಯಪ್ಪ, ಮಿದೇರಿರ ನವೀನ್ ಹಾಜರಿದ್ದರು.

ಸುಳ್ಯ : ವಾಹನ ಅಡ್ಡ ಗಟ್ಟಿ ಯುವಕರಿಂದ ಹಲ್ಲೆ ಆರೋಪ

Posted by Vidyamaana on 2023-08-13 08:32:23 |

Share: | | | | |


ಸುಳ್ಯ : ವಾಹನ ಅಡ್ಡ ಗಟ್ಟಿ   ಯುವಕರಿಂದ ಹಲ್ಲೆ ಆರೋಪ

ಸುಳ್ಯ : ಪರಿಚಯದ ಯುವತಿಯೋರ್ವಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋದ ವಿಷಯವಾಗಿ ಯುವಕರ ತಂಡವೊಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಸುಳ್ಯ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.


ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್ (39) ನೀಡಿದ ದೂರಿನ ಮೇರೆಗೆ ಲತೀಶ್ ಗುಂಡ್ಯ, ವರ್ಷಿತ್, ಪುನೀತ್ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.


ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್ ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಕಳೆದ 3 ತಿಂಗಳ ಹಿಂದೆ ಗುತ್ತಿಗೆ ಪಡೆದು ಅರಂತೋಡಿನಲ್ಲಿ ವಾಸವಾಗಿದ್ದು, ಆ.12 ರಂದು ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು, ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಕೇಳಿಕೊಂಡ ಮೇರೆಗೆ ಜಲೀಲ್ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕು ತೋಡಿಕಾನಕ್ಕೆ ತೆರಳಿದ್ದಾಗ 5 ಜನರು ಕಾರು ಮತ್ತು ಸ್ಕೂಟರ್ ಮೂಲಕ ಜಲೀಲ್ ಕಾರನ್ನು ಪಡೆದು ಜಲೀಲ್ ರವರಿಗೆ ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಸದರಿ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 87/2023 ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ..



Leave a Comment: