ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಸೈಬರ್ ವಂಚಕರಿಂದ ಪ್ರಾಧ್ಯಾಪಕರಿಗೆ ಪಂಗನಾಮ!

Posted by Vidyamaana on 2024-01-31 15:20:24 |

Share: | | | | |


ಸೈಬರ್ ವಂಚಕರಿಂದ ಪ್ರಾಧ್ಯಾಪಕರಿಗೆ ಪಂಗನಾಮ!

ಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಬಳಿ ಇರುವ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಎಂ.ಶಂಕರ್ ಸೈಬರ್ ವಂಚಕರನ್ನು ನಂಬಿ ಮೋಸ ಹೋಗಿದ್ದಾರೆ. ಪೇಸ್‍ಬುಕ್ ಖಾತೆಯಲ್ಲಿದ್ದ ಲಿಂಕ್‍ನ್ನು ತೆರೆದು ಕ್ರೆಡಿಟ್ ಕಾರ್ಡ್‍ಗೆ ಅಪ್ಲೈ ಮಾಡಿದ್ದಾರೆ.ಟ್ಯಾಕ್ಸ್ ಮತ್ತು ಬ್ಯಾಂಕಿನ ಇತರೆ ಫೀಗಳೆಂದು 40,776 ರೂಪಾಯಿಗಳನ್ನು ಆನ್‍ಲೈನ್‍ನಲ್ಲಿ ಪಡೆದು ನಂತರ ಕ್ರೆಡಿಟ್ ಕಾರ್ಡ್ ನೀಡದೆ, ಹಣವನ್ನು ವಾಪಸ್ಸು ನೀಡದೆ, ಪ್ರಾಧ್ಯಾಪಕರಿಗೆ ಸೈಬರ್ ವಂಚಕರು ಪಂಗನಾಮ ಹಾಕಿದ್ದಾರೆ. ಇದರಿಂದ ಪ್ರಾಧ್ಯಾಪಕರಿಂದ ಶಂಕರ್ ಎಂ, ಚಿಕ್ಕಬಳ್ಳಾಪುರದ ಸಿಇಎನ್ ಪೊಲಸ್​ ಠಾಣೆಯಲ್ಲಿ ಐಪಿಸಿ ಕಲಂ 419, 420 ಸೇರಿದಂತೆ ಐ.ಟಿ.ಆಕ್ಟ್ 66ಡಿ ರಡಿ ದೂರು ದಾಖಲಿಸಿದ್ದಾರೆ.

ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೊಂದು ಗುಡ್ ನ್ಯೂಸ್ ಇಲ್ಲಿದೆ

Posted by Vidyamaana on 2023-09-12 10:40:54 |

Share: | | | | |


ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೊಂದು ಗುಡ್ ನ್ಯೂಸ್ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ ಮಾಡಿದ್ದರು. ಈ ಆಯವ್ಯಯದಲ್ಲಿ ಗಿಗ್​ ಕೆಲಸಗಾರರಿಗೆ ಅಂದರೇ ಸ್ವಿಗ್ಗಿ, ಜೊಮಾಟೊ ಮತ್ತು ಅಮೆಜಾನ್​​ನಂತಹ ಇ-ಕಾಮರ್ಸ್​​ ಡೆಲಿವರಿ ಬಾಯ್​​ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 4 ಲಕ್ಷ ರೂ. ಜೀವ ಮತ್ತು ಅಪಘಾತ ವಿಮೆಯನ್ನು ಘೋಷಿಸಿದ್ದರು. ಇದೀಗ ಸರ್ಕಾರ ಸೆ.08 ರಂದು ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಿದೆ.


2022 ರ ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಅಂದಾಜು 2.3 ಲಕ್ಷ ಗಿಗ್ ಕೆಲಸಗಾರರಿದ್ದಾರೆ. ಆದರೆ ರಾಜ್ಯ ಕಾರ್ಮಿಕ ಇಲಾಖೆಯು ಈ ಬಗ್ಗೆ ಯಾವುದೇ ನಿಖರ ಅಂಕಿ-ಸಂಖ್ಯೆ ಹೊಂದಿಲ್ಲ. ಸರಕು ಮತ್ತು ಸೇವೆಗಳನ್ನು ನಿಗದಿತ ಸಮಯದಲ್ಲಿ ತಲುಪಿಸಲು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಕಾರ್ಮಿಕರ ಭದ್ರತೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೇ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಅವು ಈ ಕೆಳಗಿನಂತಿದೆ.


ಜೀವ, ಅಪಘಾತ ಜೀವ ವಿಮೆ ಷರತ್ತುಗಳು


►18-60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮತ್ತು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರಬೇಕು.


►ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ. ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯರಾದರೆ ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.


►ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.


►ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಹಂತವರು ಯೋಜನೆಗೆ ಅರ್ಹರಾಗಿರುವುದಿಲ್ಲ.


►ಕೆಲಸದಲ್ಲಿರುವಾಗ ಗಿಗ್  ಕಾರ್ಮಿಕ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತ ಅಥವಾ ಮೃತಪಟ್ಟರೆ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.


►ಗಿಗ್ ಕಾರ್ಮಿಕ ಆತ್ಮಹತ್ಯೆಯಿಂದ ಸತ್ತರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಯೋಜನೆಯ ಪ್ರಯೋಜನೆ ಪಡೆಯಲು ಸಾಧ್ಯವಿಲ್ಲ.


►ಅಪಘಾತ ಅಥವಾ ಸಾವಿನ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸುವುದು ಹೇಗೆ?


►ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.


►ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಿ ನೋಂದಾಯಿಸಿಬೇಕು.

538 ಕೋಟಿ ರೂ. ವಂಚನೆ: ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

Posted by Vidyamaana on 2023-09-02 02:04:57 |

Share: | | | | |


538 ಕೋಟಿ ರೂ. ವಂಚನೆ: ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

ಮುಂಬೈ : 538 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.ಕೆನರಾ ಬ್ಯಾಂಕ್ ಗೆ 538 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನರೇಶ್ ಗೋಯಲ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಬಂಧಿಸಿದೆ.ಕಳೆದ ಮೇ ನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.


ಗೋಯಲ್ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಪ್ರೀತೂರಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಸಿಬಿಐ ಅಧಿಕಾರಿಗಳು ನರೇಶ್ ಗೊಯಲ್ ಅವರ ನಿವಾಸ, ಕಚೇರಿ ಸೇರಿ ಮುಂಬೈನ 7 ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಈ ನಡುವೆ ಗೋಯಲ್ ಎರಡು ಬಾರಿ ಸಮನ್ಸ್ ಸ್ವೀಕರಿಸಿರಲಿಲ್ಲ. ಕೆನರಾ ಬ್ಯಾಂಕ್ ನಿಂದ 848 ಕೋಟಿ ರೂ. ಸಾಲ ಪಡೆದಿದ್ದ ಜೆಟ್ ವೇಸ್ ನ ನರೇಶ್ ಗೋಯಲ್ 538 ಕೋಟಿ ರೂ. ಸಾಲ ಮರುಪಾವತಿಸಿರಲಿಲ್ಲ. ಈ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈ ಸಂಬಂಧ ಕೆನರಾ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.

ರೈಲ್ವೆ ಮಂಡಳಿಯ CEO ಆಗಿ ಜಯ ವರ್ಮಾ ಸಿನ್ಹಾ ನೇಮಕ

Posted by Vidyamaana on 2023-09-01 01:56:48 |

Share: | | | | |


ರೈಲ್ವೆ ಮಂಡಳಿಯ CEO ಆಗಿ ಜಯ ವರ್ಮಾ ಸಿನ್ಹಾ ನೇಮಕ

ಹೊಸದಿಲ್ಲಿ: ಭಾರತೀಯ ರೈಲ್ವೇ ಮಂಡಳಿಯ ನೂತನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.


ರೈಲ್ವೆ ಇತಿಹಾಸದಲ್ಲಿ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಆಗಸ್ಟ್ 31 ರ ದಿನಾಂಕದ ಆದೇಶದಲ್ಲಿ, ಜಯ ಸಿನ್ಹಾ ಅವರು ಸೆಪ್ಟೆಂಬರ್ 1ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳಿದೆ. ಅವರ ಅಧಿಕಾರಾವಧಿಯು ಆಗಸ್ಟ್ 31, 2024 ರಂದು ಕೊನೆಗೊಳ್ಳಲಿದೆ. ಈ ಹಿಂದೆ ಅಧ್ಯಕ್ಷರು ಮತ್ತು ಸಿಇಒ ಆಗಿದ್ದ ಅನಿಲ್ ಕುಮಾರ್ ಲಹೋಟಿ ಅಧಿಕಾರವಧಿಯ ನಂತರ ಸಿನ್ಹಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಜಯ ವರ್ಮಾ ಸಿನ್ಹಾ ಅವರು ಭಾರತೀಯ ರೈಲ್ವೆ ಸಂಚಾರ ಸೇವೆಯ 1986 ರ ಬ್ಯಾಚ್ ಅಧಿಕಾರಿ. ಅವರು ಪ್ರಸ್ತುತ ರೈಲ್ವೆ ಮಂಡಳಿಯಲ್ಲಿ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಸ್ಥಾನವನ್ನು ಹೊಂದಿದ್ದಾರೆ. ಸಿನ್ಹಾ ಅವರು ರೈಲ್ವೇ ಮಂಡಳಿಯ (ಸಂಚಾರ ಸಾರಿಗೆ) ಹೆಚ್ಚುವರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಸಿನ್ಹಾ 35 ವರ್ಷಗಳಿಂದ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿಜಿಲೆನ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಭಾರತೀಯ ರೈಲ್ವೆಯ ಕಾರ್ಯಾಚರಣೆಯ ಅಂಶಗಳನ್ನು ಒಳಗೊಂಡಂತೆ ರೈಲ್ವೆಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಬಾಲಸೋರ್ ರೈಲು ಅಪಘಾತದ ನಂತರ ಜಯಾ ಅವರು ಸದಸ್ಯರಾಗಿ (ಕಾರ್ಯಾಚರಣೆಗಳು ಮತ್ತು ವ್ಯವಹಾರ ಅಭಿವೃದ್ಧಿ) ರೈಲ್ವೆಯ ಮಾಧ್ಯಮ ತೊಡಗಿಸಿಕೊಳ್ಳುವಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಸುಮಾರು 300 ಜನರ ಸಾವಿಗೆ ಕಾರಣವಾದ ರೈಲು ಅಪಘಾತದ ನಂತರದ ಸಂಕೀರ್ಣ ಸಿಗ್ನಲಿಂಗ್ ವ್ಯವಸ್ಥೆಯನ್ನು ಅವರು ವಿವರಿಸಿದ್ದರು.


ಸಿನ್ಹಾ ಅವರು ಬಾಂಗ್ಲಾದೇಶದ ಢಾಕಾದಲ್ಲಿರುವ ಭಾರತದ ಹೈ ಕಮಿಷನ್‌ನಲ್ಲಿ ರೈಲ್ವೇ ಸಲಹೆಗಾರರ ಪಾತ್ರವನ್ನು ವಹಿಸಿಕೊಂಡು ಅಲ್ಲಿ ಅವರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಕೋಲ್ಕತ್ತಾ ಮತ್ತು ಢಾಕಾ ನಡುವೆ ಕಾರ್ಯನಿರ್ವಹಿಸುವ ಮೈತ್ರೀ ಎಕ್ಸ್‌ಪ್ರೆಸ್‌ನ ಉದ್ಘಾಟನೆಯು ಬಾಂಗ್ಲಾದೇಶದಲ್ಲಿ ಅವರ ಅಧಿಕಾರಾವಧಿಯಲ್ಲಿ ನಡೆಯಿತು. ಹೆಚ್ಚುವರಿಯಾಗಿ, ಅವರು ಪೂರ್ವ ರೈಲ್ವೆಯೊಳಗಿನ ಸೀಲ್ದಾ ವಿಭಾಗಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸ್ಥಾನವನ್ನು ಹೊಂದಿದ್ದರು.


2017 ರಲ್ಲಿ, ಜಯ ವರ್ಮ ಸಿನ್ಹಾ ಅವರು ಆಗ್ನೇಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು, ಅವರು ಆಗ್ನೇಯ ರೈಲ್ವೆಯ ಹಿರಿಯ ಉಪ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿದ್ದರು.

ಕುಮಾರಧಾರೆಯ ಒಡಲಿಂದ ಅಕ್ರಮ ಮರಳು ತೆಗದು ಸಾಗಾಟದ ಆರೋಪ

Posted by Vidyamaana on 2024-05-11 22:37:29 |

Share: | | | | |


ಕುಮಾರಧಾರೆಯ ಒಡಲಿಂದ ಅಕ್ರಮ ಮರಳು ತೆಗದು ಸಾಗಾಟದ ಆರೋಪ

ಕಾಣಿಯೂರು: ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಟಿಪ್ಪರ್‌ಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ವಿವಿಧ ಕಡೆಗಳಲ್ಲಿ ಪತ್ತೆ ಮಾಡಿರುವ ಬೆಳ್ಳಾರೆ ಪೊಲೀಸರು ಈ ಸಂಬಂಧ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 70 ಲಕ್ಷ ರೂ.ಮೌಲ್ಯದ 6 ಟಿಪ್ಪರ್, 1 ಇಟಾಚಿ ಮತ್ತು 60 ಸಾವಿರ ರೂ.ಮೌಲ್ಯದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.



ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ?: ಸ್ಪಷ್ಟನೆ ನೀಡಿದ ಕೇಂದ್ರ ಸಚಿವೆ

Posted by Vidyamaana on 2023-10-23 11:39:49 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ?: ಸ್ಪಷ್ಟನೆ ನೀಡಿದ ಕೇಂದ್ರ ಸಚಿವೆ

ಮೈಸೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.ಇನ್ನು ಬಗ್ಗೆ ಸ್ವತಃ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ. ನನಗೆ ಒಳ್ಳೇ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೇ ಕೆಲಸ ಮಾಡುತ್ತಿದ್ದೇನೆ. ನನಗೆ ವರಿಷ್ಠರಿಂದಲೂ ಯಾವ ಸೂಚನೆ ಬಂದಿಲ್ಲ. ಇಂತಹ ಸುದ್ದಿ ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ

Recent News


Leave a Comment: