ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ದುರಂತ ಅಂತ್ಯ ಕಂಡ ಲವ್​ ಮ್ಯಾರೇಜ್​: ಮೊದಲ ರಾತ್ರಿಯಂದೇ ಪತ್ನಿಯ ಮದ್ವೆ ಸೀರೆಗೆ ಕೊರಳೊಡ್ಡಿದ ಯುವಕ

Posted by Vidyamaana on 2023-09-22 07:36:36 |

Share: | | | | |


ದುರಂತ ಅಂತ್ಯ ಕಂಡ ಲವ್​ ಮ್ಯಾರೇಜ್​: ಮೊದಲ ರಾತ್ರಿಯಂದೇ ಪತ್ನಿಯ ಮದ್ವೆ ಸೀರೆಗೆ ಕೊರಳೊಡ್ಡಿದ ಯುವಕ

ಚೆನ್ನೈ: ಮದುವೆಯಾದ ಎರಡೇ ದಿನದಲ್ಲಿ 27 ವರ್ಷದ ಯುವಕನೊಬ್ಬ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ಬುಧವಾರ ನಡೆದಿದೆ.ಮೃತ ವ್ಯಕ್ತಿಯನ್ನು ಸರವಣನ್​ ಎಂದು ಗುರುತಿಸಲಾಗಿದೆ. ಈತ ಓಚೇರಿ ನಿವಾಸಿಯಾಗಿದ್ದು, ಸುಂಗುವಚತಿರಂನಲ್ಲಿರುವ ಸ್ಯಾಮ್​ಸಂಗ್​ ಮೊಬೈಲ್​ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಬಾಲ್ಯದಿಂದಲೇ ಸ್ನೇಹಿತೆಯಾಗಿ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು.


ಮದುವೆಯನ್ನು ಎರಡೂ ಕುಟುಂಬದವರು ಅದ್ಧೂರಿಯಾಗಿ ಏರ್ಪಡಿಸಿದ್ದರು. ಮಂಗಳವಾರ (ಸೆ.19) ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ಬಂದರು ಮತ್ತು ಆ ದಿನ ಅವರ ಮೊದಲ ರಾತ್ರಿಯಾಗಿತ್ತು.


ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಕೋಣೆಯಿಂದ ಹೊರಗೆ ಓಡಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.


ಚೆಂಗಲ್ಪಟ್ಟು ತಾಲೂಕು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್‌ಗೆ ಕಳುಹಿಸಿದೆ.ಮಂಗಳವಾರ ರಾತ್ರಿ ಸರವಣನ್ ತನ್ನ ಪಾಲಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹನಿಮೂನ್‌ ಪ್ರವಾಸಕ್ಕಾಗಿ ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರದಿಂದಲೇ ಹನಿಮೂನ್​ ಪ್ರವಾಸ ಆರಂಭಿಸಬೇಕಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಮೊದಲ ರಾತ್ರಿ ಸರವಣನ್​ ಮುಖದಲ್ಲಿ ಯಾವುದೇ ಆತಂಕ ಅಥವಾ ದುಃಖದ ಲಕ್ಷಣಗಳು ಇರಲಿಲ್ಲ ಎಂದು ಪಾಲಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸರವಣನ್​ ಸಾವು ತುಂಬಾ ನಿಗೂಢವಾಗಿದೆ. ಚೆಂಗಲಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಆಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ

ಲೋಕಸಭಾ ಚುನಾವಣೆ :ಪುತ್ತೂರು ಬಿಜೆಪಿಯಿಂದ ಚುನಾವಣಾ ನಿರ್ವಹಣಾ ಸಮಿತಿ ಸಭೆ

Posted by Vidyamaana on 2024-03-29 21:42:01 |

Share: | | | | |


ಲೋಕಸಭಾ ಚುನಾವಣೆ :ಪುತ್ತೂರು ಬಿಜೆಪಿಯಿಂದ ಚುನಾವಣಾ ನಿರ್ವಹಣಾ ಸಮಿತಿ ಸಭೆ

ಪುತ್ತೂರು :ಲೋಕಸಭಾ ಚುನಾವಣೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಛೇರಿಯಲ್ಲಿ ನಡೆಯಿತು.ವಿವಿಧ ವಿಭಾಗಗಳ ಪ್ರಮುಖರಿಂದ ಒಟ್ಟು ಕ್ಷೇತ್ರದ ಚುನಾವಣೆಯ ಕೆಲಸಗಳ ಪ್ರಗತಿಯ ವಿವರಣೆಯನ್ನು ಚುನಾವಣಾ ನಿರ್ವಹಣ ಸಮಿತಿ ಸಂಚಾಲಕರಾದ ಚನಿಲ ತಿಮ್ಮಪ್ಪ ಶೆಟ್ಟಿಯವರು ಅವಲೋಕಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ಚುನಾವಣೆಯ ಪ್ರಭಾರಿ ಸುಲೋಚನ ಜಿ.ಕೆ ಭಟ್,ಪಕ್ಷದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುನೀಲ್ ಆಳ್ವಾ,ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ,ಚುನಾವಣಾ ನಿರ್ವಹಣಾ ಸಹ ಸಂಚಾಲಕರಾದ ಉಮೇಶ್ ಗೌಡ, ಪ್ರಸನ್ನ ಮಾರ್ತ, ಪ್ರ.ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, 

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ; ನಾಳೆಯೂ(ಜೂ.28) ಶಾಲೆಗಳಿಗೆ ರಜೆ

Posted by Vidyamaana on 2024-06-27 19:16:25 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ; ನಾಳೆಯೂ(ಜೂ.28) ಶಾಲೆಗಳಿಗೆ ರಜೆ

ಮಂಗಳೂರು; ಜೂ.27: ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ (ಜೂ.28) ಶುಕ್ರವಾರ ಶಾಲೆಗಳಿಗೆ ರಜೆ ನೀಡಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಮುಕ್ವೆ ನಿವಾಸಿ ಎ.ಕೆ.ಮಮ್ಮುಂಞ ನಿಧನ

Posted by Vidyamaana on 2023-10-23 13:14:43 |

Share: | | | | |


ಮುಕ್ವೆ ನಿವಾಸಿ ಎ.ಕೆ.ಮಮ್ಮುಂಞ ನಿಧನ

ಪುತ್ತೂರು: ಮುಕ್ವೆ ನಿವಾಸಿ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ ಸದಸ್ಯಎ.ಕೆ.ಮಮ್ಮುಂಞ (70 ವ.) ಅಲ್ಪಕಾಲದ ಅನಾರೋಗ್ಯದಿಂದ ಅ. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮುಕ್ವೆ ನಿವಾಸಿ ರೋಯಲ್ ಉಮ್ಮರ್ ಹಾಜಿ ಮತ್ತು M A ಅಬೂಬಕ್ಕರ್ ಹಾಜಿ ಪುರುಷರ ಕಟ್ಟೆ  ಅವರ ಸಹೋದರಿಯ ಗಂಡ.

ಮೃತರು ಪತ್ನಿ, ಮಕ್ಕಳಾದ ನಾಸೀರ್, ಸಲೀಮ್, ಮನ್ಸೂರ್ ಮತ್ತು ರಿಯಾಝ್ ಅವರನ್ನು ಅಗಲಿದ್ದಾರೆ.

ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

Posted by Vidyamaana on 2023-09-22 08:43:11 |

Share: | | | | |


ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

ಪುತ್ತೂರು :"ಡೈಮಂಡ್ ಫೆಸ್ಟ್” ಸೆ.18ರಂದು ಆರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ ವಜ್ರಾಭರಣಗಳನ್ನು ಬಿಡುಗಡೆಗೊಳಿಸಿ ಫೆಸ್ಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮುಳಿಯ ಜ್ಯುವೆಲ್ಸ್ ನಲ್ಲಿ ವಜ್ರಾಭರಣಗಳ ವಿಶೇಷ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಅಚ್ಚುಮೆಚ್ಚಿನ ವಜ್ರದ ಆಭರಣಗಳನ್ನು ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ರಿಯಾಯಿತಿ ದರದಲ್ಲಿ ವಜ್ರಗಳ ಆಭರಣ ಖರೀದಿಸಬಹುದು. ವೇದಾಂತ್ ಮತ್ತು ಕಿಸ್ನ ಎಂಬ ಎರಡು ವಿಧದ ಆಭರಣಗಳು ಫೆಸ್ಟ್‌ನಲ್ಲಿದೆ. ಗ್ರಾಹಕರು ಈ ಫೆಸ್ಟ್‌ನೊಂದಿಗೆ ಪಾಲ್ಗೊಳ್ಳಿ ಎಂದರು.ಮುಳಿಯ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮಾತನಾಡಿ ವಜ್ರಾದಪಿ ಕಠೋರಾನಿ ಎಂಬ ಮಾತಿನಂತೆ ವಜ್ರ ಕಾಠಿಣ್ಯತೆಯನ್ನು ಹೊಂದಿದ ವಸ್ತು. ವಜ್ರಾಭರಣ ಧರಿಸಿದ ಮಹಿಳೆ ವಜ್ರದ ಮೌಲ್ಯವನ್ನು ತನ್ನಲ್ಲಿ ಪ್ರತಿಬಿಂಬಿಸುತ್ತಾಳೆ. ಮಿಷನ್ ತಂತ್ರಜ್ಞಾನದಲ್ಲಿಯೂ ವಜ್ರವನ್ನು ಬಳಸಲಾಗುತ್ತದೆ. ಆಭರಣ ಚಿನ್ನ, ವಜ್ರಗಳ ಆಭರಣ ಖರೀದಿಗೆ ಪ್ರತೀ ಸಮಯವೂ ಸಕಾಲವಾಗಿದೆ. ವಜ್ರವನ್ನು ಯಾರೂ ಕೂಡ ಖರೀದಿಸಬಹುದು ಎಂದು ಹೇಳಿದರು.ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕ ಮಾತನಾಡಿ ಕಳೆದ ಕೆಲವು ವರುಷಗಳಿಂದ ಮುಳಿಯ ಡೈಮಂಡ್ ಫೆಸ್ಟ್ ಆಯೋಜಿಸಲಾಗುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ಹಾಗೆ ಫೆಸ್ಟ್ ಮಾಡಲಾಗಿದೆ. ಇದು ಕೈಗೆಟುಕುವ ವೈಭವವಾಗಿದೆ. ಇಲ್ಲಿ ಎಲ್ಲರಿಗೂ ವಜ್ರವನ್ನು ಖರೀದಿಸುವ ಅವಕಾಶಗಳಿವೆ. ಮಿತದರದಲ್ಲಿ ವಜ್ರಾಭರಣ ಪಡೆಯಬಹುದು. ವಜ್ರದ ಆಭರಣಕ್ಕೆ ಕೂಡ ಮಾರುಕಟ್ಟೆ ದರದ ಪ್ರಕಾರ ವಿನಿಮಯ ಆಫರ್ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದರು.

ಪ್ರಥಮ ಖರೀದಿ:

ಡೈಮಂಡ್ ಫೆಸ್ಟ್‌ನಲ್ಲಿ ಆರಂಭದ ದಿನವೇ ಗ್ರಾಹಕರಾದ ಗಣೇಶ್ ಮತ್ತು ಸವಿತಾ ಕೇದಗಡಿ ದಂಪತಿ ವಜ್ರಾಭರಣ ಖರೀದಿ ಮಾಡಿದರು. ಈ ಮೂಲಕ ಈ ಫೆಸ್ಟ್‌ನ ಪ್ರಥಮ ಖರೀದಿದಾರರಾದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಉಪಸ್ಥಿತರಿದ್ದರು. ಸಿಬಂದಿ ಸಂದೇಶ್ ಪ್ರಾರ್ಥಿಸಿದರು. ಶೋರೂಮ್ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಪ್ರವಿಣ ಕಾರ್ಯಕ್ರಮ ನಿರೂಪಿಸಿದರು. ಸ್ಟೋರ್ ಮ್ಯಾನೇಜರ್ ಯತೀಶ್ ವಂದಿಸಿದರು.

ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ: ಪೊಲೀಸರ ಎಚ್ಚರಿಕೆ

Posted by Vidyamaana on 2023-06-04 13:54:44 |

Share: | | | | |


ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ: ಪೊಲೀಸರ ಎಚ್ಚರಿಕೆ

ಬಾಲಾಸೋರ್ : ಶುಕ್ರವಾರ ನಡೆದ ಭೀಕರ ರೈಲು ದುರಂತಕ್ಕೆ ಕೆಲವರು ಕೋಮು ಬಣ್ಣ ನೀಡಲು ಮುಂದಾಗಿದ್ದು ಒಡಿಶಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದ್ದಾರೆ.ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿತನದಿಂದ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಕುರಿತು ಒಡಿಶಾದ ಜಿಆರ್‌ಪಿಯಿಂದ ತನಿಖೆ ನಡೆಯುತ್ತಿದೆ ಎಂದು ಒಡಿಶಾ ಪೊಲೀಸರು ಟ್ವೀಟ್ ಮಾಡಿದ್ದಾರೆಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹಬ್ಬಿಸಿ ಕೋಮು ಸೌಹಾರ್ದತೆ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ಎಚ್ಚರಿಕೆ ನೀಡಿದ್ದಾರೆ.

   ಮೃತ ಪಟ್ಟವರ ಸಂಖ್ಯೆ 275 ಆಗಿದ್ದು 288 ಅಲ್ಲ. ದತ್ತಾಂಶವನ್ನು ಡಿಎಂ ಪರಿಶೀಲಿಸಿದ್ದಾರೆ ಮತ್ತು ಕೆಲವು ದೇಹಗಳನ್ನು ಎರಡು ಬಾರಿ ಎಣಿಸಲಾಗಿದೆ ಎಂದು ಕಂಡುಬಂದಿದೆ, ಆದ್ದರಿಂದ ಸಾವಿನ ಸಂಖ್ಯೆಯನ್ನು 275 ಕ್ಕೆ ಪರಿಷ್ಕರಿಸಲಾಗಿದೆ. 275 ರಲ್ಲಿ 88 ದೇಹಗಳನ್ನು ಗುರುತಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ತಿಳಿಸಿದ್ದಾರೆ.ಪುರಿ, ಭುವನೇಶ್ವರ, ಕಟಕ್‌ನಿಂದ ಕೋಲ್ಕತಾಗೆ ಉಚಿತ ಬಸ್ ಸೇವೆಯನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ ಬಹನಾಗಾ ರೈಲು ದುರಂತದಿಂದ ಉಂಟಾದ ರೈಲು ಸೇವೆಗಳ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಉಚಿತ ಬಸ್ ಸೇವೆಯನ್ನು ಘೋಷಿಸಿದ್ದಾರೆ. ಸಂಪೂರ್ಣ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಮತ್ತು ಬಲೇಶ್ವರ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಗಳನ್ನು ಮರುಸ್ಥಾಪಿಸುವವರೆಗೆ ವ್ಯವಸ್ಥೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.



Leave a Comment: