ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ವಿದ್ಯಾರ್ಥಿ ನಾಪತ್ತೆ

Posted by Vidyamaana on 2024-01-23 14:23:13 |

Share: | | | | |


ವಿದ್ಯಾರ್ಥಿ ನಾಪತ್ತೆ

ಸುಳ್ಯ ; ಕಾಣಿಯೂರು ಖಾಸಗಿ   ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್   (15 ವ ) ಜ .23 ರಂದು


 ಬೆಳಿಗ್ಗೆ 7.45 ಗಂಟೆಗೆ ಮನೆಯಿಂದ ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುತ್ತಾನೆ.    ಎತ್ತರ 5 ಅಡಿ ,ಸಪೂರ ಶರೀರ, ಗೋಧಿ ಮೈಬಣ್ಣ.    ಗುಲಾಬಿ ಬಣ್ಣದ ಶರ್ಟು, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್, ಕೈಯಲ್ಲಿ ಕೇಸರಿ ಬಣ್ಣದ ದಾರ ,ವಾಚ್, ಉಂಗುರ ಧರಿಸಿರುತ್ತಾನೆ


 ಈ ವಿದ್ಯಾರ್ಥಿಯ ಗುರುತು ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಸ್ಥಳೀಯ ಪೊಲೀಸ್‌ ಠಾಣೆ  ಸಂಪರ್ಕಿಸಲು ಕೋರಲಾಗಿದೆ

ನಾಳೆ (ಜೂನ್ 3)ಪುತ್ತೂರು ಕಿಲ್ಲೆ ಮೈದಾನದ ಸಂತೆಗೆ ಹಿಂಬಾಗಿಲಿನಿಂದ ಪ್ರವೇಶಿಸಿ- ತಹಸೀಲ್ದಾ‌ರ್ ಕುಂಞ ಅಹಮ್ಮದ್

Posted by Vidyamaana on 2024-06-02 23:35:39 |

Share: | | | | |


ನಾಳೆ (ಜೂನ್ 3)ಪುತ್ತೂರು ಕಿಲ್ಲೆ ಮೈದಾನದ ಸಂತೆಗೆ ಹಿಂಬಾಗಿಲಿನಿಂದ ಪ್ರವೇಶಿಸಿ- ತಹಸೀಲ್ದಾ‌ರ್ ಕುಂಞ ಅಹಮ್ಮದ್

ಪುತ್ತೂರು: ಕರ್ನಾಟಕ ವಿಧಾನಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿ ಮತಗಟ್ಟೆ ಸಮೀಪ ಪುತ್ತೂರು ಕಿಲ್ಲೆ ಮೈದಾನದ ಸೋಮವಾರದ ಸಂತೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂತೆಯನ್ನು ರದ್ದುಗೊಳಿಸದೆ ಸಂತೆಯ ಪ್ರವೇಶದ ಮುಖ್ಯ ದ್ವಾರವನ್ನು ಬಂದ್ ಮಾಡಲಾಗುವುದು.

ಹಿಂಬಂದಿಯ ಗೇಟಿನ ಮೂಲಕ ಸಾರ್ವಜನಿಕರಿಗೆ ಸಂತೆಗೆ ಆಗಮಿಸಲು ಅವಕಾಶ ಮಾಡಲಾಗಿದೆ ಎಂದು ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮತದಾನ ಪ್ರಕ್ರಿಯೆ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಮುಕ್ತ ಹಾಗು ನ್ಯಾಯೋಚಿತ ನಿಷ್ಪಕ್ಷವಾಗಿ ಚುನಾವಣೆಯನ್ನು ನಡೆಸುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಿಲ್ಲೆ ಮೈದಾನದ ಸೋಮವಾರ ಸಂತೆಯು ಕೂಡಾ ಚುನಾವಣೆ ಸಂದರ್ಭದಲ್ಲಿ ನಡೆಯುತ್ತದೆ.

ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

Posted by Vidyamaana on 2024-04-21 08:44:30 |

Share: | | | | |


ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

ಪುತ್ತೂರು: ಕಲ್ಲಾರೆ ಶಿವಬ್ರಾಹ್ಮಣ್ಯ (ಸ್ಥಾನಿಕ) ಸಮಾಜ ಸೇವಾ ಸಂಘ ೧೯೩೬ರಲ್ಲಿ ಸ್ಥಾಪನೆಗೊಂಡು, ಕಳೆದ೮೮ ವರ್ಷಗಳಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ನೂತನವಾಗಿ ಸುಮಾರು ೧.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.೨೪ರಂದು ಸಾಯಂಕಾಲ ೬.೩೦ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಕೆ. ಜಗನ್ನಿವಾಸ ರಾವ್ ಹೇಳಿದರು.

ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

Posted by Vidyamaana on 2023-03-30 06:23:29 |

Share: | | | | |


ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ನೆಲ್ಯಾಡಿ ಸಮೀಪದ ಜ್ಞಾನೋದಯ ಬೆಥನಿ ಕಾಲೇಜು ಸಮೀಪ ಕರ್ಬಸಂಕ ಎಂಬಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಪತಿ ಮತ್ತು ಪುತ್ರ ಗಂಭೀರ ಗಾಯಗೊಂಡ ಘಟನೆ ಮಾ.30ರಂದು ಬೆಳಿಗ್ಗೆ ನಡೆದಿದೆ.ಅನ್ನಪೂರ್ಣ(50ವ.) ಮೃತ ಮಹಿಳೆ. ಇವರ ಪುತ್ರ ಅಶ್ವಿನ್(25ವ)ಹಾಗೂ ಪತಿ ಭಾಸ್ಕರ(56)ಗಂಭೀರ ವಾಗಿ ಗಾಯಗೊಂಡವರು. ಕಾರನ್ನು ಅಶ್ವಿನ್ ಚಲಾಯಿಯಿಸುತ್ತಿದ್ದು ಕಾರು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಚಲಿಸುತಿತ್ತು ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆಕರೆದುಕೊಂಡು ಹೋಗಲಾಗಿದೆ.

ಅಪಘಾತವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಹಾಗೂ ಸೇತುವೆ ಕಾಮಾಗಾರಿ ನಡೆಯುತ್ತಿರುವ ಹಿನ್ನಲೆ ಡಿವೈಡರ್ ಆಳವಡಿಸಲಾಗಿದೆ. ಇದಕ್ಕೆ ಚಾಲಕ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸೆಕ್ಟರ್ ರಾಜೇಶ್ ಕೆ.ವಿ., ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ನಾಯ್ಕರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು ಮೂಲದ ಶ್ರುತಿ ಬೆಂಗಳೂರಿನಲ್ಲಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ..!!

Posted by Vidyamaana on 2023-05-03 07:04:05 |

Share: | | | | |


ಪುತ್ತೂರು ಮೂಲದ ಶ್ರುತಿ ಬೆಂಗಳೂರಿನಲ್ಲಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ..!!

ಪುತ್ತೂರು ಮೂಲದ ಯುವತಿಯೋರ್ವರು ಬೆಂಗಳೂರಿನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಸೋಮಾವತಿ ರೈ ದಂಪತಿಯ ಪುತ್ರಿ ಶ್ರುತಿ ಸಿ.ರೈ (22) ಮೃತ ಯುವತಿ.ಶ್ರುತಿ ಕಳೆದೆರಡು ವರುಷಗಳಿಂದ ಬೆಂಗಳೂರಿನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದು, ಅಲ್ಲಿಯೇ ವಾಸ್ತವ್ಯ ಹೊಂದಿದ್ದರು. ಕೋರ್ಸ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು.

ಬಾಡಿಗೆ ರೂಂ ನಲ್ಲಿ ಕೆಲ ದಿನಗಳ ಹಿಂದೆ ಅವರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ.30 ರಂದು ಮೃತಪಟ್ಟಿದ್ದು, ಮೇ.1 ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ತಿಳಿದು ಬಂದಿದೆ..

ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

Posted by Vidyamaana on 2024-02-20 07:33:57 |

Share: | | | | |


ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ರಾಜಸ್ಥಾನ ಜೆ.ಜೆ.ಟಿ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊರವರು ಡಾ.ಬಾಪು ನರಸಿಂಗ ಚೌಗುಲೆರವರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲೆಯ ಜನರ ಮನರಂಜನಾ ಚಟುವಟಿಕೆಗಳು ಮತ್ತು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅವರ ಬಿಡುವಿನ ವೇಳೆಯ ಚಟುವಟಿಕೆಗಳು (A Study on the Recreational Activities of People In Dakshina Kann

non

a District and their leisure time activities during Covid-19 Pandamic)"ಕುರಿತಾಗಿ ಮಂಡಿಸಿದ ಮಹಾ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಎಲ್ಯಾಸ್ ಪಿಂಟೋರವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ್ಯಾಂಕಿನೊಂದಿಗೆ ಎಂ.ಪಿ.ಎಡ್ ಪದವಿಯನ್ನು ಗಳಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಕೆ.ಎಸ್.ಇ.ಟಿ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ. ಎಲ್ಯಾಸ್ ಪಿಂಟೋರವರು ಯೋಗದ ಆಯಾಮಗಳು ಮತ್ತು ಆರೋಗ್ಯಕರ ಜೀವನ ಎಂಬ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ ಜೊತೆಗೆ ಖಿನ್ನತೆಗೆ ಯೋಗ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಎಂಬ ಪುಸ್ತಕವೂ ಪ್ರಕಟವಾಗಿದೆ. ಇದರೊಂದಿಗೆ 3 ಅಂತರಾಷ್ಟ್ರೀಯ ಸೆಮಿನಾರ್ ಗಳು 4 ರಾಷ್ಟ್ರೀಯ ವಿಚಾರ ಸಂಕಿರಣಗಳು, ಹಲವಾರು ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾರೆ.


ಎಲ್ಯಾಸ್ ಪಿಂಟೋರವರು ಪೂರ್ವ ಮತ್ತು ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ 5 ಬಾರಿ ರಾಜ್ಯ ಮಟ್ಟದ ವಿಜೇತರಾಗಿ, ಜಿಲ್ಲಾ ಮಟ್ಟದ ಫಿಲ್ಮ ಡ್ಯಾನ್ಸ್ ಸ್ಪರ್ಧೆಯಲ್ಲಿ 10 ಬಾರಿ ವಿಜೇತರಾಗಿ, ಜಿಲ್ಲೆಯಲ್ಲಿ 1990 ರಿಂದ 2000ರ ವರಗೆ ನಂಬರ್‌ವನ್ ಡ್ಯಾನ್ಸ್ ಗ್ರೂಪ್ ಪಿಂಟೋ ಬ್ರದರ್ಸ್ ಇದರ ಸಂಯೋಜಕರಾಗಿ ಮನ ಸೆಳೆದಿದ್ದರು.

Recent News


Leave a Comment: