ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

Posted by Vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ರೈಲಿನಲ್ಲಿ ಪ್ರಯಾಣಿಕನಿಗೆ ಥಳಿಸಿದ ಟಿಕೆಟ್ ತಪಾಸಕನ ಅಮಾನತು

Posted by Vidyamaana on 2024-01-20 16:10:24 |

Share: | | | | |


ರೈಲಿನಲ್ಲಿ ಪ್ರಯಾಣಿಕನಿಗೆ ಥಳಿಸಿದ ಟಿಕೆಟ್ ತಪಾಸಕನ ಅಮಾನತು

ಲಕ್ನೋ: ಬರೌನಿ-ಲಕ್ನೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ವ್ಯಕ್ತಿಯೊಬ್ಬನಿಗೆ ಭಾರತೀಯ ರೈಲ್ವೇಯ ಉಪ ಮುಖ್ಯ ಟಿಕೆಟ್ ತಪಾಸಕರೊಬ್ಬರು ಥಳಿಸುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ.ಈ ಘಟನೆಯು ಗುರುವಾರ ಉತ್ತರಪ್ರದೇಶದ ಗೊಂಡ ಮತ್ತು ಬಾರಾಬಂಕಿ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.ಟಿಕೆಟ್ ತಪಾಸಕನನ್ನು ಅಮಾನತುಗೊಳಿಸಿರುವುದನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಖಚಿತ ಪಡಿಸಿದ್ದಾರೆ. ಇಂಥ ದುರ್ವರ್ತನೆಗಳನ್ನು ನಾವು ಸಹಿಸುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಸಂದೇಶವೊಂದರಲ್ಲಿ ವೈಷ್ಣವ್ ಹೇಳಿದ್ದಾರೆ.


ಅಮಾನತಾಗಿರುವ ಟಿಕೆಟ್ ತಪಾಸಕನನ್ನು ಲಕ್ನೋ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪ್ರಕಾಶ್ ಎಂಬುದಾಗಿ ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.


ಟಿಕೆಟ್ ತಪಾಸಕನು ಪ್ರಯಾಣಿಕನಿಗೆ ಹೊಡೆಯುವುದನ್ನು ಇತರ ಪ್ರಯಾಣಿಕರು ಆಕ್ಷೇಪಿಸುವುದನ್ನು 30 ಸೆಕೆಂಡ್ ಗಳ ವೀಡಿಯೊ ತೋರಿಸುತ್ತದೆ

ಹಾಸನ :ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ದೀಪಾ ಆತ್ಮಹತ್ಯೆ

Posted by Vidyamaana on 2024-05-09 21:39:05 |

Share: | | | | |


ಹಾಸನ :ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ದೀಪಾ ಆತ್ಮಹತ್ಯೆ

ಹಾಸನ : ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿಯನ್ನು ದೀಪಾ (34) ಎಂದು ಗುರುತಿಸಲಾಗಿದೆ. ದೀಪಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಅಪಘಾತಕ್ಕೀಡಾದ ಕಾರ್​ನಲ್ಲೇನಿತ್ತು? ಜನ ಮುಗಿಬಿದ್ದು ದೋಚಿದ್ದೇಕೆ?

Posted by Vidyamaana on 2023-11-02 15:53:12 |

Share: | | | | |


ಅಪಘಾತಕ್ಕೀಡಾದ ಕಾರ್​ನಲ್ಲೇನಿತ್ತು? ಜನ ಮುಗಿಬಿದ್ದು ದೋಚಿದ್ದೇಕೆ?

ಪಾಟ್ನಾ: ಅಲ್ಲೊಂದು ಕಾರ್​ ಅಪಘಾತಕ್ಕೀಡಾಗಿತ್ತು. ಕೆಲವರು ಏನಾಯಿತೆಂದು ರಕ್ಷಣೆಗೆ ದಾವಿಸಿ ಬಂದಿದ್ದರು. ಒಳಗೇನಿದೆ ಎಂದು ಹಲವರು ಇಣುಕಿ ನೋಡಿದರು. ಅಲ್ಲಿ ಅದೇನೋ ಕಾಣಿಸಿದೆ. ಕೂಡಲೇ ಜಾಗೃತರಾದಜನ ಕಾರ್​ನ ಗ್ಲಾಸ್​ ಹೊಡೆದು ಕೈಗೆ ಸಿಕ್ಕಿದಷ್ಟು ಬಾಚಿಕೊಂಡು ಹೋಗಿದ್ದಾರೆ.ಇಷ್ಟಕ್ಕೂ ಆ ಕಾರ್​ನಲ್ಲಿ ಇದ್ದಿದ್ದಾದರೂ ಏನು?….ಮುಂದೆ ಓದಿ…


ಮಂಗಳವಾರ ಸಂಜೆ ಬಿಹಾರದ ಗಯಾ ಜಿಲ್ಲೆಯ ದೋಭಿ ಬಳಿ ಮದ್ಯ ತುಂಬಿದ್ದ ಕಾರ್​ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ಮದ್ಯವನ್ನು ಕದಿಯಲು ಜನ ಮುಗಿಬಿದ್ದಿದ್ದರು. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್​ ಆಗಿದೆ.ಜನರು ಕಾರಿನ ಗಾಜು ಒಡೆದು ಮದ್ಯದ ಬಾಟಲಿಗಳೊಂದಿಗೆ ಓಡಿ ಹೋಗುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಜನರು ಕಾರಿನೊಳಗೆ ಇದ್ದ ಮದ್ಯವನ್ನು ಲೂಟಿ ಮಾಡಿದ್ದರು.


ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಇದರ ವೀಡಿಯೊ ವೈರಲ್ ಆಗಿದ್ದು, ಇರುವೆಗಳು ಬೆಲ್ಲಕ್ಕೆ ಮುತ್ತಿಕೊಂಡಂತೆ ಜನರು ಕಾರ್​ನಲ್ಲಿ ತುಂಬಿದ್ದ ಮದ್ಯಕ್ಕಾಗಿ ಸುತ್ತುವರಿದಿದ್ದಾರೆ.


ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿರುವುದರಿಂದ ಕಾರ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳು ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಶಾಖಪಟ್ಟಣಂನಿಂದ ಅಕ್ರಮವಾಗಿ 1.5ಲಕ್ಷ ರೂ.ಮೌಲ್ಯದ ನಕಲಿ ಮದ್ಯವನ್ನು ತರಿಸಲಾಗುತ್ತಿತ್ತು. ಆದರೆ ಮದ್ಯ ಸಾಗಿಸುತ್ತಿದ್ದವರು ಪರಾರಿಯಾಗಿದ್ದೇ ತಡ, ಜನ ಸಿಕ್ಕಿದ್ದೇ ಚಾನ್ಸ್​ ಎಂದು ಮದ್ಯದ ಬಾಟಲಿಗಳನ್ನು ಹೊತ್ತೊಯ್ದರು.

ಬಿಜೆಪಿ ಸಂಸದ ಅನಂತ ಅಪ್ಪುಗೆಗೆ ಕೈ ಶಾಸಕ ಸತೀಶ್ ಸ್ಮೈಲ್

Posted by Vidyamaana on 2023-06-23 13:56:31 |

Share: | | | | |


ಬಿಜೆಪಿ ಸಂಸದ ಅನಂತ ಅಪ್ಪುಗೆಗೆ ಕೈ ಶಾಸಕ ಸತೀಶ್ ಸ್ಮೈಲ್

ಕಾರವಾರ: ದಿಶಾ ಸಭೆಗೆ ಬಂದಿದ್ದ ಸಂಸದ ಅನಂತ ‌ಕುಮಾರ‌ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದಿಸಿದ ಘಟನೆ ಶುಕ್ರವಾರ ನಡೆಯಿತು.ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ದಿಶಾ ಸಭೆ ನಡೆದಿತ್ತು. ಸಭೆಯ ನಂತರ ಶಾಸಕ ಸೈಲ್ , ಸಂಸದ ಹೆಗಡೆ ಮುಖಾಮುಖಿ ಆದರು. ತತ್ ಕ್ಷಣ ಸಂಸದರು ತಮ್ಮ ಸ್ನೇಹಿತ ಸೈಲ್ ಬಳಿ ತೆರಳಿ ಬಿಗಿದಪ್ಪಿ ಅಭಿನಂದಿಸಿದರು. ವಿಧಾನಸಭೆ ಚುನಾವಣೆ ಗೆಲುವಿನ ನಂತರ ಇಬ್ಬರ ಭೇಟಿ ಇಂದೇ ಮೊದಲಾಗಿತ್ತು. ಈ ಅಪ್ಪುಗೆಯನ್ನು ಕೃಷ್ಣಾರ್ಜುನರ‌ ಅಪ್ಪುಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಣ್ಣಿಸಲಾಗಿದೆ. ಹಾಗೂ ಇದು ಹೊಸ ಮನ್ವಂತರ ಎಂದೂ, ಆಂಜನೇಯನನ್ನು ಅಭಿನಂದಿಸಿದ ರಾಮ ಎಂದು ಅನಂತ ಕುಮಾರ್ ಅವರನ್ನು ‌ಹೊಗಳಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಸಂಸದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ‌ ಪ್ರಚಾರಕ್ಕೆ ಬಂದಿರಲಿಲ್ಲ. ಪ್ರಧಾನಿ ಮೋದಿ ಕಾರವಾರ ಸಮೀಪದ ಸಭೆಗೆ ಬಂದರೂ ,‌ಸಂಸದ ಅನಂತ ಹೆಗಡೆ ಗೈರಾಗಿದ್ದರು. ಸಂಸದರು ಹೇಳಿದ ಅಭ್ಯರ್ಥಿ ಗಳಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಕೊಡದೇ ಹೋದುದು ಸಂಸದರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿತ್ತು. ಈಗ ಕಾಂಗ್ರೆಸ್ ನಲ್ಲಿನ ಸ್ನೇಹಿತ ಶಾಸಕ ಸೈಲ್ ರನ್ನು ಅಭಿನಂದಿಸುವ ಮೂಲಕ ಹೆಗಡೆ ಸುದ್ದಿ ಮಾಡಿದ್ದಾರೆ. ಶಾಸಕ ಸೈಲ್ ರ‌ನ್ನು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಪ್ಪುಗೆಯನ್ನು ” ಟುಡೇ ಬಿಗ್ ಪೋಟೋ” ಎಂದು ಬ್ಲಾಕ್ ಕಾಂಗ್ರೆಸ್ ಬಣ್ಣಿಸಿದೆ.

ಬೆಳ್ತಂಗಡಿ : ಹೃದಯಾಘಾತದಿಂದ ಪ್ರದೀಪ್ ಮೃತ್ಯು

Posted by Vidyamaana on 2023-09-09 14:51:49 |

Share: | | | | |


ಬೆಳ್ತಂಗಡಿ : ಹೃದಯಾಘಾತದಿಂದ ಪ್ರದೀಪ್ ಮೃತ್ಯು

ಬೆಳ್ತಂಗಡಿ : ಯುವಕನೊಬ್ಬನಿಗೆ ಮನೆಯಲ್ಲಿರುವ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ.


ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಗಳ ಪುತ್ರ ಪ್ರದೀಪ್ (25)ಗೆ ಹೃದಯಾಘಾತವಾದ ಘಟನೆ ಸೆಪ್ಟೆಂಬರ್ 8 ರಂದು ರಾತ್ರಿ ನಡೆದಿದೆ. ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಧಿಸಿದರು ಬದುಕುಳಿಯಲಿಲ್ಲ.


ಮೃತರಿಗೆ ಸಹೋದರಿ ಪದ್ಮಾವತಿ, ಸಹೋದರ ನಿತೇಶ್ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

Recent News


Leave a Comment: