ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಮಂಡ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಪೊಲೀಸ್ ವಶ

Posted by Vidyamaana on 2024-03-05 17:06:22 |

Share: | | | | |


ಮಂಡ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಪೊಲೀಸ್ ವಶ

ಮಂಡ್ಯ: 2022ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ 2022ರಲ್ಲಿ ಮಂಡ್ಯದ ಸಂಜಯ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತ ರುಪಾಕಿಸ್ತಾನ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದರು. ಘೋಷಣೆ ಕೂಗುವ ಬರದಲ್ಲಿ ಕಾರ್ಯಕರ್ತ ರವಿ ಎನ್ನುವವರು ಗೊಂದಲದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ.

ತಕ್ಷಣ ಅರವಿಂದ ಎಂಬ ಕಾರ್ಯಕರ್ತ ರವಿ ಬಾಯಿ ಮುಚ್ಚಿದ್ದರು. ಎರಡು ವರ್ಷಗಳ ಬಳಿಕ ಈ ಘಟನೆ ಸಂಬಂಧ ಕಾಂಗ್ರೆಸ್ ರವಿ ಮೇಲೆ ದೂರು ಸಲ್ಲಿಸಿದೆ. ದೂರಿನ ಹಿನ್ನೆಲೆಯಲ್ಲಿ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಿಜೆಪಿ ಕಾರ್ಯಕರ್ತ ರವಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಡ್​​ರೂಮ್​ನಲ್ಲಿ ದುರಂತ ಸಾವಿಗೀಡಾದ ನವ ವಿವಾಹಿತ ದಂಪತಿ! ಅಂತ್ಯಕ್ರಿಯೆಯನ್ನು ತಡೆದ ಪೊಲೀಸರು

Posted by Vidyamaana on 2023-09-02 02:55:57 |

Share: | | | | |


ಬೆಡ್​​ರೂಮ್​ನಲ್ಲಿ ದುರಂತ ಸಾವಿಗೀಡಾದ ನವ ವಿವಾಹಿತ ದಂಪತಿ! ಅಂತ್ಯಕ್ರಿಯೆಯನ್ನು ತಡೆದ ಪೊಲೀಸರು

ಭುವನೇಶ್ವರ್​: ನವ ವಿವಾಹಿತ ದಂಪತಿ ಬೆಡ್​ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಬಂಕಿ ಬ್ಲಾಕ್​ ವ್ಯಾಪ್ತಿಯಲ್ಲಿ ಬರುವ ಭೇದರಾಮಚಂದ್ರಾಪುರ ಗ್ರಾಮದಲ್ಲಿ ಗುರುವಾರ (ಆ.31) ನಡೆದಿದೆ.ಮೃತ ದಂಪತಿಯನ್ನು ಧರಣಿಧರ್​ ಸಾಹು ಮತ್ತು ನಿರುಪಮಾ ಸಾಹು ಎಂದು ಗುರುತಿಸಲಾಗಿದೆಇಬ್ಬರು 7 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಧರಣಿಧರ್​, ಜೀವನೋಪಾಯಕ್ಕಾಗಿ ಭುವನೇಶ್ವರದ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅದರಂತೆಯೇ ಬುಧವಾರ ಊರಿಗೆ ಬಂದಿದ್ದ. ಆದರೆ, ಗುರುವಾರ ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಬೆಡ್​ರೂಮ್​ನ ಸೀಲಿಂಗ್​ ಫ್ಯಾನ್​ಗೆ ಧರಣಿಧರ್​ ಮತ್ತು ನಿರುಪಮಾ ನೇಣು ಬಿಗಿದುಕೊಂಡಿದ್ದಾರೆಇದಾದ ಬಳಿಕ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಿದರು. ಆದರೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದುಕೊಂಡರು.


ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕಾರಣ ತಿಳಿಯಬಹುದು. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಸಮಸ್ಯೆಗಳಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ

ಪುತ್ತಿಲ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪ್ ನಲ್ಲಿ ತೇಜೋವಧೆ, ಕೋಮು ಪ್ರಚೋದನಕಾರಿ ಸಂದೇಶ : ಗೌರವಾಧ್ಯಕ್ಷರಿಂದ ಬಂಟ್ವಾಳ ನಗರ ಠಾಣೆಗೆ ದೂರು

Posted by Vidyamaana on 2023-06-01 16:23:14 |

Share: | | | | |


ಪುತ್ತಿಲ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪ್ ನಲ್ಲಿ ತೇಜೋವಧೆ, ಕೋಮು ಪ್ರಚೋದನಕಾರಿ ಸಂದೇಶ : ಗೌರವಾಧ್ಯಕ್ಷರಿಂದ ಬಂಟ್ವಾಳ  ನಗರ ಠಾಣೆಗೆ ದೂರು

ಬಂಟ್ವಾಳ : ಅರುಣ್ ಪುತ್ತಿಲ ಅಭಿಮಾನಿ ಬಳಗ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಅದರ ಗ್ರೂಪ್ ಲಿಂಕನ್ನು ಬಳಸಿಕೊಂಡು ಗ್ರೂಪ್ ಸೇರಿದ ವ್ಯಕ್ತಿಯೋರ್ವ ಪುತ್ತೂರಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಅರುಣ್ ಪುತ್ತಿಲರ ತೇಜೋವಧೆಯ ಜೊತೆಗೆ ಕೋಮು ಪ್ರಚೋದನೆಗೆ ಪ್ರೇರೆಪಿಸಿರುವುದಾಗಿ ಆರೋಪಿಸಿ ಬಂಟ್ವಾಳ ನಗರಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.ಅರುಣ್ ಪುತ್ತಿಲ ಅಭಿಮಾನಿ ಸಂಘದ ಗೌರವಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.ಬಂಟ್ವಾಳ ತಾಲೂಕಿನಲ್ಲಿ ಅರುಣ್ ಕುಮಾರ್ ಪುತ್ತಿಲರ ಅಸಂಖ್ಯಾತ ಅಭಿಮಾನಿ ಬಳಗವಿದ್ದು, ಇದಕ್ಕೆ ಪೂರಕವಾಗಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಬಂಟ್ವಾಳ ಎಂಬ ವಾಟ್ಸಪ್ ಗ್ರೂಪ್ ಇದ್ದು, ಈ ಗ್ರೂಪ್ನಲ್ಲಿ ಸಮಾಜದ ಅಶಕ್ತರ ಏಳಿಗೆಗೆ ದುಡಿಯುವ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಸದ್ರಿ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳಲ್ಲಿ ಒಬ್ಬನಾಗಿರುತ್ತೇನೆ.

ಅದರಂತೆ ಸದ್ರಿ ಗ್ರೂಪ್ ನ ಇನ್ ವೈಟ್ ಲಿಂಕನ್ನು ಬಳಸಿಕೊಂಡು “ಯಾ ಅಲ್ಲಾಹ್” ಎಂಬ ನಾಮಾಂಕಿತ ಹೊಂದಿರುವ ವ್ಯಕ್ತಿಯು ಮೊಬೈಲ್ ನಂಬರ್ ನಿಂದ ಇತ್ತೀಚಿಗೆ ಪುತ್ತೂರಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಖಾಸಗಿ ಭಾಗಗಳ ಫೋಟೋಗಳನ್ನು ಬಳಸಿಕೊಂಡು ಅರುಣ್ ಕುಮಾರ್ ಪುತ್ತಿಲರಿಗೆ ಅವಮಾನವಾಗುವ ರೀತಿಯಲ್ಲಿ ಹಾಗೂ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಸಾರುವ ಭಗವಾಧ್ವಜದ ಚಿತ್ರವನ್ನು ಜೋಡಿಸಿ ಸದ್ರಿ ಫೋಟೋಗಳ ಜೊತೆ ನಿಂದನಾತ್ಮಕ ಬರಹಗಳನ್ನು ನಮೂದಿಸಿ ಗ್ರೂಪ್ ಗೆ ಕಳುಹಿಸಿದ್ದು, ಅಲ್ಲದೆ ಕೆಲವೊಂದು ಸ್ವರ ಸಂದೇಶಗಳನ್ನು ಕಳುಹಿಸಿ ಹಿಂದೂ ಧರ್ಮಕ್ಕೆ ಧಕ್ಕೆಯನ್ನುಂಟು ಮಾಡುವ ಹಾಗೂ ಕೋಮು ಪ್ರಚೋದನೆಯನ್ನು ಉಂಟು ಮಾಡಿರುತ್ತಾರೆ. ಈ ರೀತಿ ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ವಕೀಲರಾದ ಶಿವಾನಂದ್, ಸುಮಿತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ಮಹಮ್ಮದ್ ಆಲಿ ಉಪಾಧ್ಯಕ್ಷರಾಗಿ ಸುರೇಂದ್ರ ರೈ ಆಯ್ಕೆ

Posted by Vidyamaana on 2024-01-15 21:47:52 |

Share: | | | | |


ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ಮಹಮ್ಮದ್ ಆಲಿ ಉಪಾಧ್ಯಕ್ಷರಾಗಿ ಸುರೇಂದ್ರ ರೈ   ಆಯ್ಕೆ

ಪುತ್ತೂರು: ತಾಲೂಕಿನ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಮೂರನೇ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುರೇಂದ್ರ ರೈ ಬಳ್ಳಮಜಲು ಅವರು ಆಯ್ಕೆಗೊಂಡರು. ಇಬ್ಬರ ಆಯ್ಕೆಯು ಅವಿರೋಧವಾಗಿ ನಡೆಯಿತು.


ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಹಕಾರಿ ಇಲಾಖೆಯ ಅಧೀಕ್ಷಕ ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಸಂಘದ ನಿರ್ದೇಶಕರಾದ ಸಂಶುದ್ದೀನ್, ರಂಜಿತ್ ಬಂಗೇರಾ, ಗಣೇಶ್ ರೈ ಸದಾನಂದ ಶೆಟ್ಟಿ ಕೂರೇಲು, ಚಂದ್ರಕಲಾ ಪಿ, ತೆರೆಜಾ ಎಂ ಸಿಕ್ವೆರಾ, ಇಸ್ಮಾಯಿಲ್ ಎಂ, ಗಣೇಶ್ ರೈ ಶೀನಪ್ಪ ಮತ್ತು ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.

ಕಾಪು : ಕಾಲೇಜು ವಿದ್ಯಾರ್ಥಿನಿ ಶೈನಾಜ್ ನಾಪತ್ತೆ

Posted by Vidyamaana on 2024-02-28 04:26:48 |

Share: | | | | |


ಕಾಪು : ಕಾಲೇಜು ವಿದ್ಯಾರ್ಥಿನಿ ಶೈನಾಜ್ ನಾಪತ್ತೆ

ಕಾಪು: ರಾತ್ರಿ ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿ, ಕಟಪಾಡಿ ಏಣಗುಡ್ಡೆ ಗ್ರಾಮದ ಜೆ. ಎನ್‌. ನಗರ ನಿವಾಸಿ ಶೈನಾಜ್‌ (20) ಫೆ. 26 ರಿಂದ ನಾಪತ್ತೆಯಾಗಿದ್ದಾರೆ.ಉಡುಪಿ ಅಜ್ಜರಕಾಡು ಸರಕಾರಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಶೈನಾಜ್‌ ಫೆ.25 ರಂದು ರಾತ್ರಿ ತನ್ನ ಅಜ್ಜಿಯೊಂದಿಗೆ ಮಲಗಿದ್ದು ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು.

ಈ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿ, ಉಡುಪಿ ಬಸ್‌ ನಿಲ್ದಾಣ, ಅಜ್ಜರಕಾಡು ಮಹಿಳಾ ಕಾಲೇಜು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಆಕೆಯ ತಾಯಿ ನೂರ್‌ ಜಹಾನ್‌ ಕಾಪು ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಶೈನಾಜ್‌ 20 ವರ್ಷ ಪ್ರಾಯದವರಾಗಿದ್ದು 5 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು ಮನೆಯಿಂದ ತೆರಳುವಾಗ ನೇವಿ ಬ್ಲೂ ಬಣ್ಣದ ಬುರ್ಕಾ ಧರಿಸಿದ್ದಳು. ಕನ್ನಡ, ತುಳು, ಹಿಂದಿ, ಉರ್ದು ಭಾಷೆ ಬಲ್ಲವಳಾಗಿದ್ದು ಈಕೆಯನ್ನು ಗುರುತಿಸಿದವರು ಕಾಪು ಪೊಲೀಸ್‌ ಠಾಣೆ 0820-2551033 ಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಲಿಫ್ಟ್​ನಲ್ಲಿ ಸಿಲುಕಿಕೊಂಡ ಅಂಪೈರ್​, ತಡವಾಗಿ ಆರಂಭಗೊಂಡ ಪಂದ್ಯ

Posted by Vidyamaana on 2023-12-28 16:58:38 |

Share: | | | | |


ಲಿಫ್ಟ್​ನಲ್ಲಿ ಸಿಲುಕಿಕೊಂಡ ಅಂಪೈರ್​, ತಡವಾಗಿ ಆರಂಭಗೊಂಡ ಪಂದ್ಯ

ಸಿಡ್ನಿ: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಅಂಪೈರ್​ ಲಿಫ್ಟ್​ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಇದರಿಂದ ಪಂದ್ಯ ಕೆಲ ಕಾಲ ತಡವಾಗಿ ಆರಂಭಗೊಂಡಿದೆ. ರಿಚರ್ಡ್ ಇಲಿಂಗ್‌ವರ್ತ್(Richard Illingworth) ಲಿಫ್ಟ್‌ನಲ್ಲಿ ಸಿಲುಕಿಕೊಂಡ ಅಂಪೈರ್​ ಆಗಿದ್ದಾರೆ.

ಈ ವಿಡಿಯೊ ವೈರಲ್​(Viral Video) ಆಗಿದೆ.

ಈ ವಿಡಿಯೊ ವೈರಲ್​(Viral Video) ಆಗಿದೆ.

ಮಳೆ, ಮಂದ ಬೆಳಕು ಹೀಗೆ ಹಲವು ಕಾರಣಗಳಿಂದ ಪಂದ್ಯ ವಿಳಂವವಾಗುವು ಸರ್ವೇ ಸಾಮಾನ್ಯ ಆದರೆ, ಅಂಪೈರ್​ ಅವರಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿದ್ದು ಇದೇ ಮೊದಲು. ಸುಮಾರು 5 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು.ಭೋಜನ ವಿರಾಮದ ಬಳಿಕ ಮತ್ತೆ ಕಾರ್ಯ ನಿರ್ವಹಿಸಲು ಮುಂದಾಗಿದ್ದ ಮೂರನೇ ಅಂಪೈರ್​ ಇಲ್ಲಿಂಗ್​ವರ್ತ್ ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ತಾಂತ್ರಿಕ ಕಾರಣದಿಂದಾಗಿ ಲಿಫ್ಟ್‌ ಕೆಟ್ಟುಹೋಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಲಿಫ್ಟ್‌ ಸರಿಪಡಿಸಿ ಇಲಿಂಗ್‌ವರ್ತ್ ಅವರನ್ನು ಹೊರಬರುವಂತೆ ಮಾಡಿದ್ದಾರೆ. ಲಿಫ್ಟ್​ನಿಂದ ಹೊರ ಬಂದ ಬಳಿಕ ಅವರು ನಗುತ್ತಲೇ ಮೈದಾನದತ್ತ ಕೈ ಬೀಸಿದರು.


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 318 ರನ್ ಗಳಿಸಿ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ಪಾಕ್​ 264 ಸರ್ವಪತನ ಕಂಡಿತು. ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿರುವ ಆಸ್ಟ್ರೇಲಿಯಾ 6 ವಿಕೆಟ್​ಗೆ 187 ರನ್​ಗಳಿಸಿದೆ. 241 ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ 2 ದಿನದ ಆಟ ಬಾಕಿ ಇದ್ದು ಆಸೀಸ್​ ಗೆಲ್ಲುವ ಎಲ್ಲ ಸೂಚನೆಯೂ ಲಭ್ಯವಾಗಿದೆ. ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಆಗ ಪಾಕ್​ ಹೋರಾಟವನ್ನು ಮೆಚ್ಚಲೇ ಬೇಕು.ಪಾಕಿಸ್ತಾನದ ಕ್ರಿಕೆಟಿಗರು (Pakistan Cricket Team) ಮೈದಾನದಲ್ಲಿ ಮಾಡುವ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇಂಥ ಘಟನೆಗಳಿಗೆ ಛೀಮಾರಿ ಹಾಕಿಸಿಕೊಂಡ ಬಳಿಕವೂ ಅವರು ಪಾಠ ಕಲಿಯುವುದಿಲ್ಲ. ಮೊಸದಾಟ ಹಾಗೂ ಇನ್ನಿತರ ಅಕ್ರಮಗಳ ವಿಚಾರಕ್ಕೆ ಬಂದಾಗಲೂ ಆ ದೇಶದ ಕ್ರಿಕೆಟ್​ ಕುಖ್ಯಾತಿ ಪಡೆದುಕೊಂಡಿದೆ. ಮೊದಲೇ ಪ್ರಾಮಾಣಿಕತೆ ಮತ್ತು ಪಾಕಿಸ್ತಾನದ ಕ್ರಿಕೆಟ್​ಗೆ ಎಣ್ಣೆ- ಸೀಗೆಕಾಯಿ ಸಂಬಂಧವಾಗಿರುವ ಕಾರಣ ಅಲ್ಲಿನ ಆಟಗಾರರ ಬಗ್ಗೆ ಅಂಪೈರ್​ಗಳು ಹಾಗೂ ರೆಫರಿಗಳಿಗೆ ಒಂದಿಷ್ಟು ಹೆಚ್ಚು ಅನುಮಾನ. ಅಂಥದ್ದೇ ಒಂದು ಅನುಮಾನಾಸ್ಪದ ಪ್ರಸಂಗ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್​ ಪಂದ್ಯದ ವೇಳೆ ನಡೆದಿತ್ತು.


ಪರ್ತನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್ ಪಾಕಿಸ್ತಾನದ ಆಟಗಾರ ಅಗಾ ಸಲ್ಮಾನ್ ಅವರ ತೋಳುಗಳು ಮತ್ತು ಮಣಿಕಟ್ಟುಗಳನ್ನು ಪರೀಕ್ಷಿಸಿದ ಘಟನೆ ನಡೆದಿತ್ತು. ಅವರು ತೋಳಿನಲ್ಲಿ ಏನೂ ಬಚ್ಚಿಟ್ಟುಕೊಂಡಿದ್ದಾರೆ ಹಾಗೂ ಅದನ್ನು ಮೋಸದಾಟಕ್ಕೆ ಬಳಸುತ್ತಿದ್ದಾರೆ ಎಂಬುದೇ ಅಂಪೈರ್​​ ಅನುಮಾನವಾಗಿತ್ತು. ಬಳಿಕ ಅದು ರಿಸ್ಟ್​ ಬ್ಯಾಂಡ್​ ಎಂಬುದು ಗೊತ್ತಾಗಿತ್ತು.



Leave a Comment: