ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

Posted by Vidyamaana on 2023-10-14 16:43:53 |

Share: | | | | |


ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

ಬೆಂಗಳೂರು: ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಸ್ಪಷ್ಟನೆ ನೀಡಿದ್ದಾರೆ.



ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.



ಶನಿವಾರ ತಮ್ಮ ಮನೆಗೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾತನಾಡಿದ ಪಂ. ತಾರಾನಾಥ ಅವರು, ‘ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ. ಅದೊಂದು ತಪ್ಪು ಹೇಳಿಕೆ. ಸಮಿತಿ ಕಡೆಯಿಂದಲೂ ಯಾರೂ ಬಂದಿಲ್ಲ’ ಎಂದಿದ್ದಾರೆ.



ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿಂದೆ ಜಿಲ್ಲಾಡಳಿತ ಕೋರಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ನಿಮ್ಮ ಆರೋಗ್ಯ ಉತ್ತಮವಾಗಿದ್ದು, ಕಾರ್ಯಕ್ರಮ ನೀಡುತ್ತೀರಾ ಎಂಬ ಅಧಿಕಾರಿಗಳ ಕೋರಿಕೆಗೆ ಸಮ್ಮತಿಸಿದ ಪಂ. ತಾರಾನಾಥ, ‘ಬಂದು ಡಾನ್ಸ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

Posted by Vidyamaana on 2023-12-20 17:11:58 |

Share: | | | | |


ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಮೆಷಿನ್ ಅಯತಪ್ಪಿ ಕೆಳಗೆ ಬುದ್ದಿದ್ದು.ಚಾಲನ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.



ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ಎಂಬಲ್ಲಿ ತನ್ನ ಮನೆಯ ಬಳಿ ಡಿ.19 ರಂದು ಬೆಳಗ್ಗೆ 11:30 ರ ಸಮಯಕ್ಕೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಜೊತೆ ಮರ ಕಡಿಯುವ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಜೊತೆಗೆ ಹಿಡಿತ ತಪ್ಪಿ ನೆಲಕ್ಕೆ ಬಿದ್ದಾಗ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಯ ಬಳಿ ತಾಗಿ, ತೀವ್ರ ರಕ್ತ ಗಾಯಗಳಾಗಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ತಕ್ಷಣ ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಚಿಕಿತ್ಸೆ ಫಲಿಸದೆ ಪ್ರಶಾಂತ್ ಪೂಜಾರಿ (36) ಎಂಬವರು ಡಿ.20ರಂದು(ಇಂದು) ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ (33) ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಿಜೆಪಿಯನ್ನು ಕುಲಗೆಡಿಸೋರು ಬಿಜೆಪಿ ಒಳಗಿನವರೇ

Posted by Vidyamaana on 2023-12-28 07:25:01 |

Share: | | | | |


ಬಿಜೆಪಿಯನ್ನು ಕುಲಗೆಡಿಸೋರು ಬಿಜೆಪಿ ಒಳಗಿನವರೇ

ಬೆಂಗಳೂರು : ಬಿಜೆಪಿಯಲ್ಲಿ (Karnataka BJP) ಆಂತರಿಕ ಕಲಹ ಮಿತಿ ಮೀರುತ್ತಿರುವ ಹೊತ್ತಿನಲ್ಲೇ ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಡಿವಿ ಸದಾನಂದ ಗೌಡ (DV S

non

ananda Gowda) ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ನಾನು ತುಂಬಾ ಬೇಸರದಿಂದ ಈ ಸುದ್ದಿಗೋಷ್ಟಿ ಕರೆದು ಮಾತನಾಡುತ್ತಿದ್ದೇನೆ.ಕರ್ನಾಟಕ ಬಿಜೆಪಿ ಘಟಕಕ್ಕೆ ಪದಾಧಿಕಾರಿಗಳ ಬಿಡುಗಡೆ ಆಗಿದೆ. ಒಂದು ಪಕ್ಷದ ಆಂತರಿಕ ವ್ಯವಸ್ಥೆ ಇನ್ನೂ ಸರಿ ಆಗಿಲ್ಲ ಯಾಕೆ? ಡಜನ್ ಗಟ್ಟಲೆ ಪ್ರಮುಖ ಸ್ಥಾನದಲ್ಲಿರುವ ನಾಯಕರು ಪಕ್ಷದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯನ್ನ ಕುಲಗೇಡಿಸೋರು ಬಿಜೆಪಿಯ ಒಳಗಿನವರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೆಂಬ ದೃಷ್ಟಿಯಿಂದ ಹೇಳುತ್ತಿದ್ದೇನೆ ಎಂದ ಡಿವಿಎಸ್, ನಾನು ನಿನ್ನೆ ಕಡಬ ಒಕ್ಕಲಿಗರ ಭವನ ಕಾರ್ಯಕ್ರಮಕ್ಕೆ ಹೋಗಿದ್ದೆ. ಸುಳ್ಯ ವಿಧಾನಸಭಾ ಕ್ಷೇತ್ರ ಸಂಘಟನೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಕ್ಷೇತ್ರ. ಆಗ ಕಾರ್ಯಕರ್ತರು ಬಂದು ನಿಮ್ಮಂತಹ ಹಿರಿಯರು ಇದ್ದು ಈ ರೀತಿ ಆಗಿದ್ಯಲ್ಲ‌ ಅಂತ ಕೇಳಿದ್ರು, ಗಂಭೀರವಾಗಿ ಬೇಸರದಿಂದ ಪ್ರಶ್ನೆ ಮಾಡಿದ್ರು ಎಂದು ನೋವು ತೋಡಿಕೊಂಡರು.ಕೇಂದ್ರ ಅಥವಾ ರಾಜ್ಯ ನಾಯಕರು ಬುದ್ದಿ ಹೇಳುತ್ತಿಲ್ಲ, ಕರ್ನಾಟಕ ಬಿಜೆಪಿಯಲ್ಲಿ ಯಾರೂ ಹೇಳುವವರಿಲ್ಲ, ಕೇಳೋರಿಲ್ಲ ಎಂದ ಡಿವಿ ಸದಾನಂದ ಗೌಡ, ನಾವು ಹೇಳಿದಂತೆ ನಡೆಯುತ್ತೆ ಅಂತ ತಿಳಿದಿದ್ದಾರೆ. ಕುಲಗೆಟ್ಟ ವ್ಯವಸ್ಥೆ ಈ ರೀತಿ ಎಂದೂ ನೋಡಿರಲಿಲ್ಲ. ಕರ್ನಾಟಕ ವಿಕಸಿತ ಬಿಜೆಪಿ ಬಗ್ಗೆ ಯಾರೂ ಯೋಚನೆ ಮಾಡಲ್ವಾ? ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರ ಬಾಯಿಗೆ ಬೀಗ ಹಾಕುವ ಕೆಲಸ ಅಗಬೇಕಿದೆ. ಪಕ್ಷ ಚಟುವಟಿಕೆ ಹೇಗೆ ಆರಂಭಿಸೋದು ಅಂತ ನನ್ನಂತಹ ಹಿರಿಯ ನಾಯಕನಿಗೆ ಅನಿಸಿದೆ. ನಮ್ಮ ತಂಡದ ಬಗ್ಗೆ ನಾವೇ ಮಾತನಾಡುವುದು ಬಾರೀ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತೆ ಎಂದರು.ಕಾರ್ಯಕರ್ತರು ಪಕ್ಷದ ನಾಯಕರನ್ನ ಪ್ರಶ್ನಿಸುವ ಸ್ಥಿತಿ ಬಂದೊದಗಿದೆ. ಹೀಗಾಗಿ ಅರಿತುಕೊಳ್ಳದಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಎಚ್ಚರಿಕೆ ನೀಡಿದ ಸದಾನಂದ ಗೌಡ, ಹೊಸ ಟೀಂ ಮಾಡುವಾಗ ನಿಮ್ಮನ್ನ ಪರಿಗಣಿಸಿದ್ರಾ ಅಂತ ಕಾರ್ಯಕರ್ತರು ನನ್ನನ್ನ‌ ಕೇಳಿದ್ರು. ಅದಕ್ಕೆ ಏನು ಉತ್ತರ ಕೊಡಲಿ ಹೇಳಿ ನಾನು? ಅದಕ್ಕೆ ನಾನು ಹೇಳಿದೆ, ಇಲ್ಲ ಬಂದಿಲ್ಲ. ಹೊಸ ಟೀಂ ರಚನೆ ಮಾಡುವಾಗಲೂ ಸಮಾಲೋಚನೆ ಮಾಡಿಲ್ಲ. ತುಂಬಾ ನೋವಾಗ್ತಿರೋದು ನನಗೆ ಮಾದ್ಯಮಗಳ ಮೂಲಕವೇ ಈ ಎಲ್ಲ ಬೆಳವಣಿಗೆಗಳು ತಿಳಿಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.


ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರ ನಾಯಕರು ಯಾರೂ ಬಂದು ಮಾತನಾಡುತ್ತಿಲ್ಲ, ವಿಪಕ್ಷ ನಾಯಕರು, ಪಕ್ಷದ ಅಧ್ಯಕ್ಷರ ನೇಮಕದ ವಿಳಂಬವೇ ಪಕ್ಷಕ್ಕೆ ದೊಡ್ಡ ಹಿನ್ನಡೆ ಆಗಿದೆ. ಪಕ್ಷದಲ್ಲಿ ಅಧಿಕಾರ ಅನುಭವಿಸಿ ಮಾತನಾಡುತ್ತಿರುವುದು ಒಳ್ಳೆಯದಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೋದಿ ಪ್ರಧಾನಿ ಮಾಡುವ ದೃಷ್ಟಿಯಿಂದ ಸುಮ್ಮನಿರಬೇಕು ಎಂದರು.ಇನ್ನು, ಪಕ್ಷ ವಿರೋಧಿ ಹೇಳಿಕೆ ಕೊಟ್ಟ ಜನಾರ್ಧನ ರೆಡ್ಡಿಯನ್ನ ನಾನು ಕೂಡಲೇ ಸಸ್ಪೆಂಡ್ ಮಾಡಿದ್ದೆ ಎಂದ ಡಿ.ವಿ ಸದಾನಂದಗೌಡ, ಯತ್ನಾಳ್‌ರನ್ನೂ ಅಮಾನತ್ತು ಮಾಡಿದ್ದೆ. ಆಮೇಲೆ ಬಿಎಸ್‌ವೈ ಬಸನಗೌಡ ಪಾಟೀಲ ಯತ್ನಾಳ್ ಅಮಾನತು ಆದೇಶ ವಾಪಾಸ್ ಪಡೆಯಿರಿ ಅಂದ್ರು. ಅದರ ಪರಿಣಾಮ ಇವತ್ತು ಅನುಭವಿಸ್ತಾ ಇದ್ದೀವಿ. ನನ್ನ ಕಾಲಘಟ್ಟದಲ್ಲಿ ಈ ರೀತಿ ನಡೆದಿರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಕ್ರಮ‌ ಕೈಗೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.


ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್‌ ಸಂದರ್ಭದಲ್ಲಿ 40,000 ಕೋಟಿ ಮೌಲ್ಯದ ಹಗರಣದ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಗಂಭೀರ ಆರೋಪದ ಬಗ್ಗೆಯೂ ಮಾತನಾಡಿದ ಡಿವಿ ಸದಾನಂದ ಗೌಡ, ನಾನು ಯತ್ನಾಳ್‌ರನ್ನ ಅಮಾನತ್ತು ಮಾಡಿದ್ದೆ, ಬಿಎಸ್‌ವೈ ವಾಪಾಸ್ ಪಡೆಸಿದ್ದರ ಪರಿಣಾಮ ಇವತ್ತು ಅನುಭವಿಸ್ತಿದ್ದೀವಿ.ಯತ್ನಾಳ್‌ಗೆ ಕನಿಷ್ಠ ನೋಟೀಸ್ ಆದರೂ ಜಾರಿ ಮಾಡಬೇಕು. ಇಲ್ಲದಿದ್ದರೆ ಪಕ್ಷವನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

Posted by Vidyamaana on 2023-05-21 11:14:43 |

Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ.ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಂಡನ ಅಗಲಿಕೆಯ ನೋವು: ನೇಣು ಬಿಗಿದುಕೊಂಡು ತಾಯಿ, ಮಗ ಆತ್ಮಹತ್ಯೆ

Posted by Vidyamaana on 2024-07-13 18:43:13 |

Share: | | | | |


ಗಂಡನ ಅಗಲಿಕೆಯ ನೋವು: ನೇಣು ಬಿಗಿದುಕೊಂಡು ತಾಯಿ, ಮಗ ಆತ್ಮಹತ್ಯೆ

ಬೆಂಗಳೂರು : ಬೆಂಗಳೂರಿನಲ್ಲಿ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್.ಎನ್.ಝೆಡ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮೃತರನ್ನು ಪುಲಿವರ್ತ (13) ವರ್ಷ ಹಾಗೂ ರಮ್ಯಾಜಿ (40) ಎಂದು ಗುರುತಿಸಲಾಗಿದೆ.

ಮನೆಯ ಫ್ಯಾನಿಗೆ ಸೀರೆಯನ್ನು ಬಿಗಿದು ಮೊದಲು 13 ವರ್ಷದ ಮಗನನ್ನು ನೇಣಿನ ಕುಣಿಕೆಗೆ ಹಾಕಿ ಕೊಲೆ ಮಾಡಿದ್ದಾಳೆ. ಮಗ ಸತ್ತ ನಂತರ ಆತನ ಹೆಣವನ್ನು ಕೆಳಗಿಳಿಸಿ, ನಂತರ ತಾನು ಅದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಜೀವ ಬಿಟ್ಟಿದ್ದಾಳೆ. ಈ ಘಟನೆಯ ಬಗ್ಗೆ ನೋಡುಗರು ಹಾಗೂ ಕೇಳುಗರಿಗೆ ಕರುಳು ಕಿವುಚುವಂತಹ ವಾತಾವರಣ ನಿರ್ಮಿಸಿದೆ.

ಪುತ್ತೂರು: ಮೆಸ್ಕಾಂ ಕಛೇರಿಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Posted by Vidyamaana on 2024-08-15 22:59:53 |

Share: | | | | |


ಪುತ್ತೂರು: ಮೆಸ್ಕಾಂ ಕಛೇರಿಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು :ಮೆಸ್ಕಾಂ ಪುತ್ತೂರು ವಿಭಾಗ ಕಛೇರಿಯಲ್ಲಿ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರಾಮಚಂದ್ರ. ಎ ಇವರು ದ್ವಜಾರೋಹಣ ಮಾಡುವುದರೊಂದಿದೆ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 

ಈ ಕಾರ್ಯಕ್ರಮಕ್ಕೆ ಶ್ರೀಮತಿ ವಿಜಯಲಕ್ಹ್ಮೀ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಮೆಸ್ಕಾಂ ಪುತ್ತೂರು ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಘಟಕದ ಅಧ್ಯಕ್ಷರಾದ ಸೂರ್ಯನಾಥ ಆಳ್ವ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿರುತ್ತಾರೆ.  

Recent News


Leave a Comment: