ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬೆಂಗಳೂರು: ಸಹಜೀವನ ಸಾಗಿಸುತ್ತಿದ್ದ ಪ್ರೇಮಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Posted by Vidyamaana on 2023-11-07 16:34:52 |

Share: | | | | |


ಬೆಂಗಳೂರು: ಸಹಜೀವನ ಸಾಗಿಸುತ್ತಿದ್ದ ಪ್ರೇಮಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಬೆಂಗಳೂರು: ಕೊತ್ತನೂರು ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಬೆಂಕಿ ಹಚ್ಚಿಕೊಂಡು ಸೌಮಿನಿ ದಾಸ್ (20) ಹಾಗೂ ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


‘ಪಶ್ಚಿಮ ಬಂಗಾಳದ ಸೌಮಿನಿ ದಾಸ್ ಹಾಗೂ ಕೇರಳದ ಅಬಿಲ್, ಪರಸ್ಪರ ಪ್ರೀತಿಸುತ್ತಿದ್ದರೆಂದು ಗೊತ್ತಾಗಿದೆ. ಒಂದೇ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಇಬ್ಬರೂ ಭಾನುವಾರ ಸಂಜೆ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.ವಿವಾಹಿತರಾಗಿದ್ದ ಸೌಮಿನಿ, ನರ್ಸಿಂಗ್ ವ್ಯಾಸಂಗ ಮಾಡಲು ನಗರಕ್ಕೆ ಬಂದಿದ್ದರು. ನರ್ಸಿಂಗ್ ಮುಗಿಸಿದ್ದ ಅಬಿಲ್, ಸ್ಥಳೀಯ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು’ ಎಂದು ತಿಳಿಸಿವೆ.


‘ಮೂರು ತಿಂಗಳ ಹಿಂದೆಯಷ್ಟೇ ತಮ್ಮೂರಿಗೆ ಹೋಗಿದ್ದ ಸೌಮಿನಿ, ಪುನಃ ಬೆಂಗಳೂರಿಗೆ ವಾಪಸು ಬಂದಿದ್ದರು. ಇತ್ತೀಚೆಗೆ ಪತಿ ಜೊತೆ ಮಾತನಾಡಿದ್ದ ಅವರು, ‘ಮದುವೆಯಾದ ದಿನದಿಂದಲೂ ನೀನು ನನಗೆ ಕಿರುಕುಳ ನೀಡುತ್ತಿದ್ದಿಯಾ. ನಿನ್ನ ಜೊತೆ ನಾನು ಇರುವುದಿಲ್ಲ. ನನ್ನ ತಂಟೆಗೆ ಬರಬೇಡ. ನಾನು ಊರಿಗೂ ಬರುವುದಿಲ್ಲ’ ಎಂದಿದ್ದರೆಂದು ಹೇಳಲಾಗುತ್ತಿದೆ.’


‘ಸೌಮಿನಿ ಬಗ್ಗೆ ಅನುಮಾನಗೊಂಡಿದ್ದ ಪತಿ, ಅವರ ಬಗ್ಗೆ ವಿಚಾರಿಸಿದ್ದರು. ಅಬಿಲ್ ಜೊತೆ ಸೌಮಿನಿ ಸಹಜೀವನ ನಡೆಸುತ್ತಿದ್ದ ಸಂಗತಿ ಗೊತ್ತಾಗಿತ್ತು. ಈ ಬಗ್ಗೆ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ನಮ್ಮ ಪ್ರೀತಿಯ ವಿಷಯ ಬೇರೆಯವರಿಗೆ ಗೊತ್ತಾಗಿದೆ. ನಮ್ಮನ್ನು ಬದುಕಲು ಬಿಡುವುದಿಲ್ಲ’ ಎಂದು ತಿಳಿದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.


‘ಬೆಂಕಿ ಹಚ್ಚಿಕೊಂಡಿದ್ದ ಸಂದರ್ಭದಲ್ಲಿ ಇಬ್ಬರೂ ಕೂಗಾಡಿದ್ದರು. ಸ್ಥಳೀಯರು ಸಹಾಯಕ್ಕೆ ಹೋಗಿದ್ದರು. ಅಷ್ಟರಲ್ಲೇ ಇಬ್ಬರ ದೇಹ ಬಹುಪಾಲು ಸುಟ್ಟಿತ್ತು. ಸೌಮಿನಿ ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದರು. ಉಸಿರಾಡುತ್ತಿದ್ದ ಅಬಿಲ್ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಯೇ ಅವರು ಮೃತಪಟ್ಟರು’ ಎಂದು ತಿಳಿಸಿವೆ.

ನಾನು ಭ್ರಷ್ಟನಲ್ಲ ಇಲ್ಲಿ ಲಂಚ ಸ್ವೀಕರಿಸುವುದಿಲ್ಲ

Posted by Vidyamaana on 2023-11-09 19:40:40 |

Share: | | | | |


ನಾನು ಭ್ರಷ್ಟನಲ್ಲ ಇಲ್ಲಿ ಲಂಚ ಸ್ವೀಕರಿಸುವುದಿಲ್ಲ

ಹಾಸನ, ನ 09: ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ತಮ್ಮ ಮೇಜಿನ ಮೇಲೆ ಹಾಕಿರುವ ಫಲಕದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


ಹಾಸನ ನಗರದ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್‌ ಅವರೇ ಈ ಫಲಕ ಹಾಕಿಕೊಂಡಿರುವ ಅಧಿಕಾರಿ.


ಈ ಹಿಂದೆ ಲೋಕೇಶ್‌ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ಆ ಬಳಿಕ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್‌ ಅವರು ಬಡ್ತಿ ಹೊಂದಿದ್ದಾರೆ. 


ಸದ್ಯ ಲೋಕೇಶ್‌ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ ಯಶಸ್ಸಿಗೆ ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳಿಂದ ಮದೀನಾದಲ್ಲಿ ವಿಶೇಷ ಪ್ರಾರ್ಥನೆ

Posted by Vidyamaana on 2023-08-23 11:47:14 |

Share: | | | | |


ಚಂದ್ರಯಾನ ಯಶಸ್ಸಿಗೆ  ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳಿಂದ ಮದೀನಾದಲ್ಲಿ  ವಿಶೇಷ ಪ್ರಾರ್ಥನೆ

ಸೌದಿ : ಪವಿತ್ರ ಉಮ್ರಾ ನಿರ್ವಹಣೆಯಲ್ಲಿರುವ ಆಗಸ್ಟ್ ತಿಂಗಳ ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳ ತಂಡವು ಭಾರತದ  ಬಹು ನಿರೀಕ್ಷಿತ್ ಚಂದ್ರಯಾನ _3  ವಿಕ್ರಮ್ ಲ್ಯಾಂಡರ್  ಗುರಿ ತುಲಪುವಂತಾಗಳು ವಿಶೇಷ ಪ್ರಾರ್ಥನೆ ನಡೆಸಿತು.

ಯಾತ್ರಾ ತಂಡದ ಚೀಫ್ ಅಮೀರ್ ಉಸ್ತಾದ ಸಿರಾಜುದ್ದೀನ್ ಫೈಝಿ ಈ ಸಂದರ್ಭದಲ್ಲಿ

ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು.

 ಟೂರ್ಸ್ ಮಾಲಕರಾದ ಸುಲೈಮಾನ್ ಹಾಜಿ,ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ,ಅಬ್ಬಾಸ್ ದಾರಿಮಿ ಕೆಲಿಂಜ,ಅಬ್ದುರ್ರಹ್ಮಾನ್ ಪೈಝಿ ಫಲಿಮಾರ್,ಖಾಲಿದ್ ಸಅದಿ ಬೇಂಗಿಲ,ಸೈದಾಲಿ ಮುಸ್ಲಿಯಾರ್, ಹಲವಾರು ಮೊಹಲ್ಲಾಗಳಿಂದ ಯಾತ್ರಾರ್ಥಿಗಳಾಗಿ ಬಂದ ಜಮಾಅತ್ ಸಮಿತಿ ಸಾರಥಿ ಗಳು, ವಿವಿಧ ಸಂಘ ಸಂಸ್ಥೆಗಳ ಯುವ ಕಾರ್ಯಕರ್ತರು ಸೇರಿದಂತೆ ಎರಡು ಯಾತ್ರಾ ತಂಡಗಳಲ್ಲಿದ್ದ ಸುಮಾರು ತೊಂಭತ್ತರಷ್ಟು ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.

ಅತ್ತೆ-ಅಳಿಯನ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

Posted by Vidyamaana on 2024-03-22 21:57:17 |

Share: | | | | |


ಅತ್ತೆ-ಅಳಿಯನ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ರಾಮನಗರ, ಮಾರ್ಚ್​​ 22: ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಥೆ ಕಟ್ಟಿ ಹಣ ಸುಲಿಗೆ ಮಾಡಲು ಮಂತ್ರವಾದಿ (mantrav

non

i) ಮುಂದಾಗಿದ್ದು, ಆತನ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾರ್ಚ್​ 9ರಂದು ಕನಕಪುರದ ಟಿ ಬೇಕುಪ್ಪೆ ಸರ್ಕಲ್​​ನ‌ ಅರ್ಕಾವತಿ ನದಿ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುತ್ತುರಾಜು (25) ಮೃತ ‌ಯುವಕ. ಮೊದಲಿಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಮೃತ ಯುವಕನ ಮೊಬೈಲಿನಲ್ಲಿ ಮಂತ್ರವಾದಿಯ ಬೆದರಿಕೆ ವಾಯ್ಸ್ ನೋಟ್ ಪತ್ತೆ ಬಳಿಕ ಮಂತ್ರವಾದಿಯೇ ಕಾರಣವೆನ್ನಲಾಗುತ್ತಿದೆ. ಪಂಡಿತ್ ಸರಕಾರ​ ಪ್ರಸಾದ್ ಹೆಸರಿನ ಫೇಸ್ಬುಕ್ ಪೇಜ್ ಹೊಂದಿದ್ದ ವಿಷ್ಣು ಎಂಬಾತನನ್ನು ಬಂಧಿಸಿದ್ದು, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಯುಡಿಆರ್​​​ ಅಡಿ ಪ್ರಕರಣ ದಾಖಲಿಸಿದ್ದಾರೆ.ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್ ಸಂಪರ್ಕ​​


ದೊಡ್ಡ ಆಲಹಳ್ಳಿಯಲ್ಲಿ ಸಾಮಿಲ್ ನಡೆಸುತ್ತಿದ್ದ ಮುತ್ತುರಾಜ್​, ಕಳೆದ ಕೆಲ ದಿನಗಳಿಂದ ಉದ್ಯೋಗದಲ್ಲಿ ನಷ್ಟ ಉಂಟಾಗಿದೆ. ಹೀಗಾಗಿ ಇದರಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್​ ಎಂಬ ಹೆಸರಿನ ಮಂತ್ರವಾದಿಯ ಸಮಸ್ಯೆ ನಾಶ, ವಶೀಕರಣ,‌ ಜಿಗುಪ್ಸೆಗೆ ಪರಿಹಾರ ಎಂಬ ಪ್ರೊಫೈಲ್​​ ನೀಡಿ ಸಂಪರ್ಕ ಮಾಡಿದ್ದಾನೆ.ಸಾಮಿಲ್ ನಡೆಯುತ್ತಿಲ್ಲ. ಜಿಗುಪ್ಸೆ ಆಗುತ್ತಿದೆ‌ ಎಂದು ಮುತ್ತುರಾಜ್​ ಕಷ್ಟ ಹೇಳಿಕೊಂಡಿದ್ದ. ನಿನಗೆ ಒಳ್ಳೆಯ ಯೋಗವಿದೆ. ನಾನು ಹೇಳಿದಂತೆ ಮಾಡು. ನಿನ್ನ ಮನೆಯವರೆಲ್ಲರ ಫೋಟೋ ಕಳುಹಿಸಿಕೊಡು ಎಂದು ಮಂತ್ರವಾದಿ ಹೇಳಿದ್ದಾನೆ. ಅದಕ್ಕೆ ತನ್ನ ಹಾಗೂ ಪತ್ನಿ, ಮಗಳು, ಹಾಗೂ ಅತ್ತೆಯ ಫೋಟೋವನ್ನು ಮುತ್ತುರಾಜ್ ಕಳುಹಿಸಿದ್ದಾನೆ. ಇತ್ತ ಫೋಟೋ ಕಳುಹಿಸಿದ ಬಳಿಕ ಮಂತ್ರವಾದಿ ತನ್ನ ಕುಕೃತ್ಯ ಶುರು ಮಾಡಿಕೊಂಡಿದ್ದಾನೆ.


ಮಂತ್ರವಾದಿಯ ಬೆದರಿಕೆ


ಅತ್ತೆಯ ಹಾಗೂ ನಿನ್ನ ಮಧ್ಯೆ ಅನೈತಿಕ‌ ಸಂಬಂಧದ ಬಗ್ಗೆ ಪೋಸ್ಟ್ ಹಾಕ್ತೀನಿ ಅಂತ‌ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಒಂದು ಕಡೆ ಮುತ್ತುರಾಜ್,‌ ಇನ್ನೊಂದು ಕಡೆ ಅತ್ತೆಯ ಫೋಟೋ ಹಾಕಿ ಎಡಿಟ್ ಮಾಡಿದ್ದಾನೆ. ತನ್ನ ಸ್ವಂತ ಅತ್ತೆಯನ್ನು ಲೈಂಗಿಕವಾಗಿ ಬಳಿಸಿಕೊಳ್ಳಲು 15 ಸಾವಿರ ರೂ. ಕೊಟ್ಟಿದ್ದಾನೆ ಅಂತ ಮಂತ್ರವಾದಿ ಪೊಸ್ಟ್ ಕ್ರಿಯೆಟ್ ಮಾಡಿದ್ದಾನೆ. ಅದನ್ನು ಮುತ್ತುರಾಜ್​​ಗೆ ಕಳುಹಿಸಿ ಬ್ಲ್ಯಾಕ್​ಮೇಲ್​​ ಮಾಡಿದ್ದಾನೆ. ನೀನು ಹಣ ಕೊಡು, ಇಲ್ಲದಿದ್ರೆ ಇದನ್ನು ಫೇಸ್​​ಬುಕ್​​ನಲ್ಲಿ ಹಾಕುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.ಪದೇ ಪದೇ ಮಂತ್ರವಾದಿಯ ವಾಟ್ಸಪ್ ಮೆಸೆಜ್, ವಾಯ್ಸ್ ನೋಟ್​ಗಳ ಬೆದರಿಕೆಗೆ ಕುಗ್ಗಿ ಹೋಗಿದ್ದ ಮುತ್ತುರಾಜ್​​, ಮಾರ್ಚ್​ 9ರಂದು ಅರ್ಕಾವತಿ ನದಿ ಬಳಿ ಬೈಕ್‌ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಮಿಲ್ ನಷ್ಟದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಮಾರ್ಚ್​ 18 ಎಂದು ಮುತ್ತುರಾಜ್ ಮೊಬೈಲ್ ಗಮನಿಸಿದ ಬಾಮೈದ ಶಶಿಕುಮಾರ್​​, ಈ‌ ವೇಳೆ ಮುತ್ತುರಾಜ್ ಮೊಬೈಲಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಂತ್ರವಾದಿ ವಾಯ್ಸ್ ನೋಟ್, ಆತ್ಮಹತ್ಯೆಗೂ ಮುನ್ನ ಮಾತನಾಡಿದ್ದು, ಮುತ್ತುರಾಜ್ ಹಾಗೂ ಅತ್ತೆಯ ಮಧ್ಯೆ ಕಟ್ಟಿದ್ದ ಸುಳ್ಳು ಸಂಬಂಧದ ಕಥೆಯ ಗುಟ್ಟು ರಟ್ಟಾಗಿತ್ತು.ಕೂಡಲೇ ಕನಕಪುರ ಪೊಲೀಸರಿಗೆ ಮುತ್ತುರಾಜ್ ಪತ್ನಿ ಶಿಲ್ಪಾ ಮಾಹಿತಿ ನೀಡಿದ್ದು, ತನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾರಣ ಮಂತ್ರವಾದಿ ಎಂದು ದೂರು ನೀಡಿದ್ದಾರೆ. ಮುತ್ತುರಾಜ್ ಮೊಬೈಲ್ ಪಡೆದುಕೊಂಡು ವಿಚಾರಣೆ ಕೈಗೆತ್ತಿಕೊಂಡ ಕನಕಪುರ ಪೊಲೀಸರು, ಕೇಸ್ ವಿಚಾರಣೆ ಮಾಡುತ್ತಿದ್ದಂತೆ ಶಾಕ್​ ಆಗಿದ್ದಾರೆ. ಕಾರಣ ಆ ಮಂತ್ರವಾದಿ ‌22 ವರ್ಷದ ಪದವಿ ಓದುತ್ತಿದ್ದ ಯುವಕ. ಆತನ ಹೆಸರು ವಿಷ್ಣು ಶಾಸ್ತ್ರಿ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮುತ್ತುರಾಜ್​​ಗೆ ಬ್ಲ್ಯಾಕ್​​ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

Posted by Vidyamaana on 2024-03-21 20:21:00 |

Share: | | | | |


ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

ಬೆಂಗಳೂರು, (ಮಾರ್ಚ್ 21): ಇತ್ತೀಚೆಗೆ ನಮ್ಮ ಮೆಟ್ರೋ (Namma Metro )ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈ ಹಿಂದೆ ಮೆಟ್ರೋ ಹಳಿಗೆ ಹಾರಿದ ಪ್ರಕರಣಗಳು ನಡೆದಿದ್ದವು. ಆದ್ರೆ, ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದ್ರೆ, ಇಂದು (ಮಾರ್ಚ್ .21) ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ (Athiguppe Metro) ರೈಲು ಬರುವಾಗ ಯುವಕ ಹಳಿಗೆ ಜಿಗಿದಿದ್ದಾನೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದೆ. ಇದರಿಂದ ಯುವಕನ ದೇಹ ಎರಡು ತುಂಡಾಗಿದೆ. ಸದ್ಯ ಯುವಕನ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವಕನನನ್ನು ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದ್ದು, ಆತನ ಕುಟುಂಬಕ್ಕೆ ಮತ್ತು ಕಾಲೇಜಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.ಮಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವ್ ಟಕ್ಕರ್ ಜೊತೆಗೆ ಒರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದ. ಹಾಗೇ ಮೂವರು ಮಾತನಾಡುತ್ತಾ ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ಸಮಯದಲ್ಲಿ . ಧ್ರುವ್ ಟ್ರಾಕ್ ಮೇಲೆ ಹಾರಿದ್ದಾನೆ. ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರೈಲು ಹತ್ತಿರ ಬಂದಾಗ ಸ್ಥಳದಿಂದ ಓಡಿ ಹೋಗಿದ್ದಾರೆ. ಪರಿಣಾಮ ರೈಲು ಸ್ವಲ್ಪ ದೂರ ಎಳೆದೊಯ್ದಿದ್ದು, ರುಂಡ-ಮುಂಡ ಬೇರೆ-ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಡಿಸಿಪಿ ಎಸ್‌.ಗಿರೀಶ್‌ ಹೇಳಿದ್ದಿಷ್ಟು

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 19 ರಿಂದ 20 ವರ್ಷದ ಹುಡುಗನ ಸಾವಾಗಿದೆ. ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನು. ಈತ ನ್ಯಾಷನಲ್ ಲಾ ಕಾಲೇಜ್ ಫಸ್ಟ್ ಇಯರ್ ವಿದ್ಯಾರ್ಥಿ ಎಂದು ಮಾಹಿತಿ ನೀಡಿದರು.

ಸದ್ಯ ವಿದ್ಯಾರ್ಥಿ ಸಾವಿನ ಬಗ್ಗೆ ಕಾಲೇಜು ಮತ್ತು ಆತನ ಕುಟುಂಬಕ್ಕೆ ಪೊಲೀಸರು ಮಾಹಿತಿ ರವಾನಿಸಿದ್ದು, ಧ್ರುವ್ ಟಕ್ಕರ್ ಏಕೆ ಆತ್ಮಹತ್ಯೆ ಮಾಡಿಕೊಂಡ? ಆತ್ಮಹತ್ಯೆಗೆ ಕಾರಣವೇನು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಪುನಾರಂಭವಾಗಿದೆ.

ಅಪಘಾತದಲ್ಲಿ ಮೃತಪಟ್ಟ ಹನಾ ಮನೆಗೆ ಭೇಟಿ ನೀಡಿದ ಅಶೋಕ್ ರೈ

Posted by Vidyamaana on 2023-07-08 12:48:10 |

Share: | | | | |


ಅಪಘಾತದಲ್ಲಿ ಮೃತಪಟ್ಟ ಹನಾ ಮನೆಗೆ ಭೇಟಿ ನೀಡಿದ ಅಶೋಕ್ ರೈ

ಪುತ್ತೂರು: ತುಂಬೆಯ ರಾಮಲ್ ಕಟ್ಟೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಹನಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿದರು.

ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಅವರು, ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭ ಪ್ರಸನ್ನ ರೈ ಸಿಝ್ಲರ್, ಮೃತ ಹನಾ ಅವರ ತಂದೆ ಮಜೀದ್ ಹಾಗೂ ಮನೆಯವರು ಉಪಸ್ಥಿತರಿದ್ದರು.

Recent News


Leave a Comment: