ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕುಡಿದು ತೇಲಾಡಿದ ಉರ್ಫಿ ಜಾವೇದ್‌; ವಿಡಿಯೊ ವೈರಲ್

Posted by Vidyamaana on 2024-07-17 16:19:56 |

Share: | | | | |


ಕುಡಿದು ತೇಲಾಡಿದ ಉರ್ಫಿ ಜಾವೇದ್‌; ವಿಡಿಯೊ ವೈರಲ್

ಬೆಂಗಳೂರು : ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ತುಂಬ ಕುಡಿದ್ದಿದ್ದೇನೆ ಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಈಶ್ವರ ಮಲ್ಪೆ ತಂಡದಿಂದ ಮತ್ತೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ

Posted by Vidyamaana on 2024-08-04 06:41:01 |

Share: | | | | |


ಈಶ್ವರ ಮಲ್ಪೆ ತಂಡದಿಂದ ಮತ್ತೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ

ಮಲ್ಪೆ: ನದಿಯ ನೀರಿನ ಹರಿವಿನ ಪ್ರಮಾಣ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ, ಸಮುದ್ರದ ಉಬ್ಬರವನ್ನು ಅವಲಂಬಿಸಿ ಕೆಲವು ಸಲ ಇಳಿಮುಖಗೊಳ್ಳುವ ಸಾಧ್ಯತೆ ಇರುವುದರಿಂದ ಆ. 4ರ ಅಮಾವಾಸ್ಯೆಯಂದು ಈಶ್ವರ ಮಲ್ಪೆ ಅವರು ಅಂಕೋಲ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮೃತದೇಹದ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಜಿಪಂ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ.ವಂಚನೆ; ಡ್ರೋನ್‌ ಪ್ರತಾಪ್‌ ವಿರುದ್ಧ ಕೇಸ್

Posted by Vidyamaana on 2024-02-03 18:18:08 |

Share: | | | | |


ಜಿಪಂ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ.ವಂಚನೆ; ಡ್ರೋನ್‌ ಪ್ರತಾಪ್‌ ವಿರುದ್ಧ ಕೇಸ್

ಬೆಂಗಳೂರು: ಬಿಗ್‌ ಬಾಸ್‌ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ  ಹೇಳಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್‌ ಕೊಡಿಸುವುದಾಗಿ ತನ್ನಿಂದ 2 ಲಕ್ಷ ರೂ.ಪಡೆದುಕೊಂಡು ವಂಚಿಸಿರುವುದಾಗಿ ಚಂದನ್‌ ಕುಮಾರ್‌ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್‌ ತನ್ನಿಂದ 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ತನಗೆ ಹೆಚ್‌.ಡಿ. ಕುಮಾರಸ್ವಾಮಿ ಅವರ ಪರಿಚಯವಿದೆ. ಆಗಾಗ ನಾನು ಅವರ ಫಾರ್ಮ್‌ ಹೌಸ್‌ ಗೆ ಭೇಟಿ ನೀಡುತ್ತೇನೆ ಎಂದಿದ್ದಾನೆ. ಇದರೊಂದಿಗೆ ತಾನು ಬಿಗ್‌ ಬಾಸ್‌ ಮನೆಯಲ್ಲಿರುವ ವೇಳೆ ಪ್ರಚಾರಬೇಕೆಂದು  ನನ್ನಿಂದ ಸಹಾಯ ಕೇಳಿದ್ದಾನೆ. ನಾನು ನನ್ನಿಂದಾಗುವಷ್ಟು ಸಹಾಯವನ್ನು ಮಾಡಿದ್ದು, ಅವನ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದೇನೆ. ಬಿಗ್‌ ಬಾಸ್‌ ರನ್ನರ್‌ ಅಪ್‌ ಆದ ಬಳಿಕ ಪ್ರತಾಪ್‌ ನನ್ನ ಕರೆ ಹಾಗೂ ಮೆಸೇಜ್‌ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ತನಗೆ ಆಗಿರುವ ಮೋಸಕ್ಕೆ ನ್ಯಾಯ ಒದಗಿಸಬೇಕೆಂದು ಚಂದನ್‌ ದೂರಿನಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಚಂದನ್‌ ಕುಮಾರ್‌ ರೊಂದಿಗೆ ಪ್ರತಾಪ್ ಮಾತನಾಡಿರುವ ಎನ್ನಲಾದ ಆಡಿಯೋವನ್ನು ಕೂಡ ರಿಲೀಸ್‌ ಮಾಡಲಾಗಿದೆ.ಆಡಿಯೋದಲ್ಲಿ ಏನಿದೆ?: ನನ್ನನ್ನು ಕಾಂಗ್ರೆಸ್‌ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆನು. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಅವರು ಕೆಟ್ಟ ಪದದಿಂದ ಬೈಯಬಹುದು, ಆದರೆ ತುಂಬಾ ಒಳ್ಳೆಯ ಮನುಷ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂದು ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

Posted by Vidyamaana on 2023-10-15 22:13:34 |

Share: | | | | |


ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

ರಾಯಚೂರು (ಅ.15): ರಾಜ್ಯದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ರಾಯಚೂರು ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಕಾಲು ಉಳುಕಿದೆ. ಹೆಲಿಕಾಪ್ಟರ್‌ ಹತ್ತುವಾಗ ಕಾಲು ಉಳುಕಿದ್ದು, ನಂತರ ಹೆಲಿಕಾಪ್ಟರ್‌ ಇಳಿಯಲಾಗದೇ ಪರದಾಡಿದ ಪ್ರಸಂಗ ನಡೆದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ದೂರದ ಪ್ರಯಾಣವನ್ನೂ ಮಾಡುವುದಿಲ್ಲ. ವಯೋಸಹಜವಾಗಿ ಸ್ನಾಯು ಹಾಗೂ ಕೀಲು- ಮೂಳೆಗಳಲ್ಲಿ ಶಕ್ತಿ ಕುಂದಿದ್ದು ಮೊದಲಿನಂತೆ ಸಕ್ರಿಯವಾಗಿ ರಾಜಕೀಯದಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ರಾಜ್ಯ ಸಂಚಾರ ಮಾಡಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಅದೇ ರೀತಿ ಇಂದು ಮಧ್ಯಾಹ್ನ ಭದ್ರತಾ ಸಿಬ್ಬಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ಹೆಲಿಕಾಪ್ಟರ್‌ನಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳುವಾಗ ಘಟನೆ ನಡೆದಿದೆ. ಶಿಕಾರಿಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಯಡಿಯೂರಪ್ಪ ಅವರ ಕಾಲು ಉಳುಕಿದೆ. ಇದಾದ ನಂತರ ಹೆಲಿಕಾಪ್ಟರ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದಿದ್ದಾರೆ. ನಂತರ ಲಿಂಗಸಗೂರಿನಲ್ಲಿ ಇಳಿಯುವಾಗ ಕಾಲಿಗೆ ಪೆಟ್ಟು ಆಗಿದೆ ಎಂದು ತಿಳಿಸಿದ್ದಾರೆ. ಆಗ ಸಹಾಯಕರೊಂದಿಗೆ ಇಳಿಯಲು ಪ್ರಯತ್ನಿಸಿದರೂ ತೀವ್ರ ನೋವಿನಿಂದ ಕಾಲೂರಲೂ ಸಾಧ್ಯವಾಗದೇ ಪರದಾಡಿದ್ದಾರೆ.

ಕರಾವಳಿ ಭಾಗದಿಂದ ಸೂಪರ್ ಸಿಂಗಂ ಸ್ಪರ್ಧೆ.. ಅಣ್ಣಾಮಲೈಗೆ ಗೆಲುವಿನ ಮಾಲೆ ತೊಡಿಸಲು ಬಿಜೆಪಿ ಹೈಕಮಾಂಡ್ ಮೆಘಾ ಪ್ಲ್ಯಾನ್!

Posted by Vidyamaana on 2024-03-06 21:17:28 |

Share: | | | | |


ಕರಾವಳಿ ಭಾಗದಿಂದ ಸೂಪರ್ ಸಿಂಗಂ ಸ್ಪರ್ಧೆ..  ಅಣ್ಣಾಮಲೈಗೆ ಗೆಲುವಿನ ಮಾಲೆ ತೊಡಿಸಲು ಬಿಜೆಪಿ ಹೈಕಮಾಂಡ್ ಮೆಘಾ ಪ್ಲ್ಯಾನ್!

ನವದೆಹಲಿ :2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಅದರಲ್ಲೂ, ಈ ಬಾರಿ ಲೋಕಸಭೆಗೆ ಬಿಜೆಪಿ & ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. ಕೆಲ ತಿಂಗಳಿಂದ, ಎರಡೂ ಪಕ್ಷಗಳ ನಾಯಕರ ನಡುವೆ ಮಾತಿನ ಮಹಾಯುದ್ಧ ಕೂಡ ನಡೆಯುತ್ತಿದೆ. ಹೀಗೆ ಫೈಟಿಂಗ್ ಜೋರಾದ ಸಮಯಕ್ಕೇ, ಬಿಜೆಪಿ ವರಿಷ್ಠರ ಪಡೆ ರಣತಂತ್ರಗಳ ಮೇಲೆ ರಣತಂತ್ರ ಹೆಣೆಯುತ್ತಿದ್ದಾರೆ. ಈಗ ಕೆ. ಅಣ್ಣಾಮಲೈ ಅವರನ್ನು ಬಿಜೆಪಿ ವರಿಷ್ಠರು, ಕರ್ನಾಟಕದಿಂದ ಚುನಾವಣೆ ಅಖಾಡಕ್ಕೆ ಇಳಿಸುತ್ತಾರಾ? ಮುಂದೆ ಓದಿ.ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಹವಾ ಇದೆ. ಇನ್ನು ಕರ್ನಾಟಕ ರಾಜ್ಯದಲ್ಲೂ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ.


ಯಾಕಂದ್ರೆ ಇದೇ ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಚಿಕ್ಕಮಗಳೂರು ಭಾಗದಲ್ಲಿ ಇವರ ಹೆಸರಿನ ಬದಲು ಸಿಂಗಂ ಅಣ್ಣಾಮಲೈ ಅಂತಾನೆ ಜನರು ಕರೆಯುತ್ತಿದ್ದರು. ಈಗ ಇದೆ ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.


ಕರ್ನಾಟಕಕ್ಕೆ ಅಣ್ಣಾಮಲೈ ಎಂಟ್ರಿ?ಅಣ್ಣಾಮಲೈ ಅವರ ಹೆಸರು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಹೀಗಾಗಿಯೇ ಈ ಬಾರಿ ಕೆ. ಅಣ್ಣಾಮಲೈ ಅವರನ್ನು ಕರ್ನಾಟಕದ ಕರಾವಳಿ ಭಾಗದ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ಸಾಗಿವೆ ಎಂಬ ಮಾತು ಹರಿದಾಡಿದೆ. ಇನ್ನೊಂದು ಕಡೆ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಇದೀಗ ದಕ್ಷಿಣ ಕನ್ನಡದಲ್ಲಿ ಅಸಮಾಧಾನ ಇದೆ ಎಂಬ ಆರೋಪ ಕೇಳಿಬರುತ್ತಿದೆ.


ಹೀಗಾಗಿಯೇ ಕಟೀಲ್ ಬದಲು ಈಗ ಅಣ್ಣಾಮಲೈ ಅವರನ್ನ ದಕ್ಷಿಣ ಕನ್ನಡದಿಂದ ಲೋಕಸಭೆಗೆ ಇಳಿಸಲು ಚರ್ಚೆ ನಡೆದಿಯಂತೆ. ಹಾಗಾದರೆ ಇದರ ಹಿಂದಿನ ತಂತ್ರ ಏನು?ಬಿ.ಎಲ್. ಸಂತೋಷ್ ಅವರ ಆಪ್ತರುಕೆ. ಅಣ್ಣಾಮಲೈ ಅವರನ್ನು ಕಂಡರೆ ಪ್ರಧಾನಿ ಮೋದಿ ಅವರಿಂದ ಹಿಡಿದು, ಆರ್‌ಎಸ್‌ಎಸ್ ಮುಖಂಡರ ತನಕ ಪ್ರತಿಯೊಬ್ಬರಿಗೂ ಭಾರಿ ಗೌರವ.


ಬಿಜೆಪಿಗೆ ಬಂದು ಕೆಲವೇ ವರ್ಷದಲ್ಲಿ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ. ಅದ್ರಲ್ಲೂ ಕೆಲವು ದಿನಗಳ ಹಿಂದೆ ಅಷ್ಟೇ ಪ್ರಧಾನಿ ಮೋದಿ ಅವರು ಅಣ್ಣಾಮಲೈ ಅವರನ್ನು ಹೊಗಳಿದ್ದರು. ಇದರ ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್‌ರ, ಹೊಸ ರಣತಂತ್ರದ ಪ್ರಕಾರ ಅಣ್ಣಾಮಲೈಗೆ ದಕ್ಷಿಣ ಕನ್ನಡ ಲೋಕಸಭೆ ಟಿಕೆಟ್ ಸಿಗುತ್ತದೆ ಎನ್ನಲಾಗುತ್ತಿದೆ.


ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಒಟ್ನಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗೆ 2024ರ ಲೋಕಸಭೆ ಚುನಾವಣೆಯು ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ಕಡಿಮೆ ಸಮಯ ಇದ್ದು. ಹೀಗಾಗಿಯೇ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತೀವ್ರ ಪೈಪೋಟಿ ಶುರುಮಾಡಿವೆ. ಬಿಜೆಪಿಗೆ ಈ ಗೆಲುವು ದೊಡ್ಡ ಬಲ ತಂದುಕೊಡುವ ನಿರೀಕ್ಷೆ ಇದ್ದು, ಹೀಗಾಗಿ ಕಮಲ ಪಡೆ ಅಭ್ಯರ್ಥಿ ಆಯ್ಕೆಯಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿದೆ.

ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

Posted by Vidyamaana on 2023-03-17 04:42:27 |

Share: | | | | |


ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

ಕಲ್ಲಡ್ಕ: ರೈಲಿನಡಿಗೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಮಾ 17 ರಂದು  ಬೆಳಗ್ಗೆ ಗೋಳ್ತಮಜಲು ಎಂಬಲ್ಲಿ ನಡೆದಿದೆ. ಮಾಣಿ ಮಜಲು ನಿವಾಸಿ ಅರ್ಜುನ್ (26) ಮೃತಪಟ್ಟ ದುರ್ದೈವಿ.

ಈ ಅಪಘಾತಕ್ಕೆ ಮೂಲ ಕಾರಣ ಏನೆಂದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.

Recent News


Leave a Comment: