ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಅರಿಯಡ್ಕ ಗ್ರಾ.ಪಂ. ಸದಸ್ಯ ಶಂಕರ್ ಆತ್ಮಹತ್ಯೆ

Posted by Vidyamaana on 2023-12-03 19:41:12 |

Share: | | | | |


ಅರಿಯಡ್ಕ ಗ್ರಾ.ಪಂ. ಸದಸ್ಯ ಶಂಕರ್ ಆತ್ಮಹತ್ಯೆ

ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.


ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆ ಮಾಡಿಕೊಂಡವರು.


ಬಂಗ್ಲೆಗುಡ್ಡೆ ಮನೆಯ ಶಂಕರ ಅವರು ಸುಮಾರು 5 ವರ್ಷಗಳ ಹಿಂದೆ ದೋಳಂತೋಡಿ ಎಂಬಲ್ಲಿ ಜಾಗ ಖರೀದಿ ಮಾಡಿ ಸೊಸೈಟಿ ಮತ್ತು ಇತರ ಸಂಘಗಳಲ್ಲಿ ಸಾಲ ಮಾಡಿದ್ದರು. ಇತ್ತೀಚೆಗೆ ಸಾಲದ ಬಗ್ಗೆ ಹಾಗೂ ಅದನ್ನು ಕಟ್ಟುವ ಬಗ್ಗೆ ಯೋಚನೆ ಮಾಡುತ್ತಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಡಿ.3ರಂದು ಮನೆಯವರು ಮಲಗಿದ್ದಾಗ ಮನೆಯ ಒಳಗಡೆಯೇ ಬೈರಸನ್ನೇ ನೇಣಾಗಿ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮರುದಿನ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ಕ್ಷಮಿಸು ವನಿತಾ:

ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ, ನನ್ನ ಸಾವಿಗೆ ನಾನೇ ಕಾರಣ. ಕ್ಷಮಿಸು ವನಿತಾ. ಮಕ್ಕಳನ್ನು ನೋಡಿಕೋ ಎಂಬುದಾಗಿ ಬರೆದಿದ್ದರು. ಮೃತರ ಪತ್ನಿ ವನಿತಾ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಪಿಲಿ ಕೋಲ ಸಂಪನ್ನ ಓರ್ವನನ್ನು ಸ್ಪರ್ಶಿಸಿದ ಪಿಲಿ!

Posted by Vidyamaana on 2024-05-05 17:20:58 |

Share: | | | | |


ಕಾಪು : ಪಿಲಿ ಕೋಲ ಸಂಪನ್ನ ಓರ್ವನನ್ನು ಸ್ಪರ್ಶಿಸಿದ ಪಿಲಿ!

ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಮೇ 4ರಂದು ಸಂಪನ್ನಗೊಂಡಿತು.2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಹುಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.

ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನಲ್ಲಿ ಆಳದ ಕಂದಕಕ್ಕೆ ಉರುಳಿದ ಕಾರು

Posted by Vidyamaana on 2023-04-10 05:39:52 |

Share: | | | | |


ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನಲ್ಲಿ ಆಳದ ಕಂದಕಕ್ಕೆ ಉರುಳಿದ ಕಾರು

ಬೆಳ್ತಂಗಡಿ: ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಕಂದಕಕ್ಕೆ ಉರುಳಿ ಗಾಯಗೊಂಡಿದ್ದ ಗಾಯಾಳುಗಳ ಪೈಕಿ ಸರೋಜಿನಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಹಾಗೂ ಕುಟುಂಬಸ್ಥರು ಶೃಂಗೇರಿಯ ಕೊಪ್ಪ ಎಂಬಲ್ಲಿ ಮರಣದ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ರವಿವಾರ ರಾತ್ರಿ ಈ ಅವಘಡ ನಡೆದಿತ್ತು.ಕಾರಿನಲ್ಲಿ ಪ್ರಯಣಿಸುತ್ತಿದ್ದ ಪುಷ್ಪಾವತಿ ಆರ್.ಶೆಟ್ಟಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್, ಸಾಕ್ಷಿ, ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ ಹಾಗೂ ಕಾರು ಚಾಲಕರಾಗಿದ್ದ ಅರುಣ್ ಗಾಯಗೊಂಡಿದ್ದರು. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಮತ್ತು ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರು ಉಜಿರೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಮಾನಕ ಜ್ಯುವೆಲ್ಸ್ ನ ನೂತನ ಮಳಿಗೆ ಉದ್ಘಾಟನೆ

Posted by Vidyamaana on 2023-05-28 09:07:50 |

Share: | | | | |


ಮಾನಕ ಜ್ಯುವೆಲ್ಸ್ ನ ನೂತನ ಮಳಿಗೆ ಉದ್ಘಾಟನೆ

ಪುತ್ತೂರು: ಸ್ವರ್ಣೋದ್ಯಮಕ್ಕೆ ಸಮ್ಮಾನ ಮಾಡಿದಂತೆ ವ್ಯವಹಾರದಲ್ಲಿ ಯಶಸ್ಸನ್ನು ಗಿಟ್ಟಿಸಿಕೊಂಡಿರುವ ಮಾನಕ ಜ್ಯುವೆಲ್ಸ್ ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿಪಿಸಿ ಪ್ಲಾಜ್ಹಾದ ಮುಂಭಾಗದ ಸ್ವಂತ ಕಟ್ಟಡದಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ಪುತ್ತೂರಿನ ಪ್ರಸಿದ್ಧ ಜವಳಿ ಮಳಿಗೆ ಸಂಜೀವ ಶೆಟ್ಟಿ ಪಾಲುದಾರರಾದ ಗಿರಿಧರ್ ಅವರು ಮಾನಕ ಜ್ಯುವೆಲ್ಸ್ ನ ನೂತನ ಮಳಿಗೆಯನ್ನು ಉದ್ಘಾಟಿಸಿದರು.


ಹೆಚ್ಚು ಶಾಖೆ ತೆರೆಯುವಂತಾಗಲಿ: ವಿದ್ಯಾ ಗಿರಿಧರ್

ಸಂಜೀವ ಶೆಟ್ಟಿ ಜವಳಿ ಮಳಿಗೆಯ ವಿದ್ಯಾ ಗಿರಿಧರ್ ಮಾತನಾಡಿ, ಉದ್ಯಮ ಬೆಳೆದಂತೆ ಪಟ್ಟಣ ಬೆಳೆಯುತ್ತದೆ. ಪಟ್ಟಣದ ಬೆಳವಣಿಗೆಗೆ ತಕ್ಕಂತೆ ಉದ್ಯಮವೂ ಅಭಿವೃದ್ಧಿ ಕಡೆ ಸಾಗಬೇಕು. ಇದಕ್ಕೆ ಪೂರಕ ಎಂಬಂತೆ ಮಾನಕ ಜ್ಯುವೆಲ್ಸ್ ಸಾಗುತ್ತಿದೆ. ಮಾನಕ ಜ್ಯುವೆಲ್ಸ್ ಸಂಸ್ಥೆಯ 2ನೇ ಶಾಖೆಯನ್ನು ಸಂಜೀವ ಶೆಟ್ಟಿ ಸಂಸ್ಥೆಯ ಸಹೋದರರೇ ಉದ್ಘಾಟಿಸಿದ್ದು, ಮಾನಕ ಜ್ಯುವೆಲ್ಸ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಹೆಚ್ಚು ಶಾಖೆಗಳನ್ನು ತೆರೆಯಲಿ ಎಂದು ಶುಭಹಾರೈಸಿದರು.

ಲಾಭದಲ್ಲಿ ಸಮಾಜಕ್ಕೆ ಒಂದಿಷ್ಟು: ರಾಜೇಶ್ ಬನ್ನೂರು

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ವ್ಯಾಪಾರ ಎಂದರೆ ಲಾಭವೇ ಉದ್ದೇಶ. ಆದರೆ ಲಾಭದ ಜೊತೆಗೆ ಸಮಾಜಕ್ಕೆ ಒಂದಿಷ್ಟು ನೀಡುವ ಶಕ್ತಿಯನ್ನು ಮಹಾಲಿಂಗೇಶ್ವರ ದೇವರು ನೀಡಿದ್ದಾನೆ. ಆದ್ದರಿಂದ ಪುತ್ತೂರಿಗೆ ಕಲಶಪ್ರಾಯದಂತಿರುವ ಮಾನಕ ಜ್ಯುವೆಲ್ಸ್ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಮಾನಕ ಜ್ಯುವೆಲ್ಸ್ ನ 2ನೇ ಮಳಿಗೆ : ಧೈರ್ಯವರ್ಧನ್ ಕದಮ್

ಧೈರ್ಯವರ್ಧನ್ ಕದಮ್ ಮಾತನಾಡಿ, ಕಲಾಯಿ ಕೆಲಸದಿಂದ ಪುತ್ತೂರಿನಲ್ಲಿ ಜೀವನ ಕಂಡುಕೊಂಡವರು ಶಂಕರ್ ಶೇಟ್. ಇಂದು ಅವರ ಮಕ್ಕಳು ತಾಯಿಯ ಆಶೀರ್ವಾದದಿಂದ 2ನೇ ಮಳಿಗೆಯನ್ನು ತೆರೆದಿದ್ದಾರೆ. ಕಳೆದ 18 ವರ್ಷಗಳಲ್ಲಿ ಮಾನಕ ಜ್ಯುವೆಲ್ಸ್ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದರು.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಜಾಕ್ ಮಾತನಾಡಿ, ಶುಭಹಾರೈಸಿದರು.

ಸಂಸ್ಥೆಯ ಮಾಲಕರ ಸಹೋದರ ಶಿವಶಂಕರ್, ಪುರಸಭೆ ಮಾಜಿ ಅಧ್ಯಕ್ಷ ಗಣೇಶ್ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲಾಸ್ ಪೈ, ಸಂಸ್ಥೆಯ ಮಾಲಕರ ತಾಯಿ ಮಾನಕ ಕಂದಾರೆ, ಮಾನಕ ಜ್ಯುವೆಲ್ಸ್ ಮಾಲಕರ ಸಹೋದರರಾದ ಸಿದ್ದನಾಥ್ ಕಂದಾರೆ ಹಾಗೂ ಪತ್ನಿ ಪದ್ಮಿನಿ, ಸಹದೇವ್ ಕಂದಾರೆ ಹಾಗೂ ಪತ್ನಿ ಅಪರ್ಣ, ಸನದ್ ಕುಮಾರ್ ಹಾಗೂ ಪತ್ನಿ ಮಧುರ ಮತ್ತು ಮಕ್ಕಳಾದ ಶ್ರೀವರ್ಧನ್, ಶೌರ್ಯವರ್ಧನ್, ಮನಸ್ವಿ, ಸಮರ್ಥ್ ಮೊದಲಾದವರು ಉಪಸ್ಥಿತರಿದ್ದರು.

ಅರ್ಚಕ ಜಗದೀಶ್ ಭಟ್ ಅವರು ವೈದಿಕ ವಿಧಿವಿಧಾನ ನೆರವೇರಿಸಿದರು.ಮಾನಕ ಜ್ಯುವೆಲ್ಲರ್ಸ್ ನ ನೂತನ ಸರ್ವಸುಸಜ್ಜಿತ ಶೋರೂಂ ಉದ್ಘಾಟನೆಯ ದಿನ ಬೆಳಿಗ್ಗಿನಿಂದಲೇ ಅಪಾರ ಪ್ರಮಾಣದ ಜನ ಭೇಟಿ ನೀಡಿ ಮಾಲಕರಿಗೆ ಶುಭ ಹಾರೈಸುತ್ತಿದ್ದ ದೃಶ್ಯ ಕಂಡುಬಂತು. ಬೆಳಿಗ್ಗಿನಿಂದ ಸಾಯಂಕಾಲದವರೆಗೆ ಸಾಲುಸಾಲಾಗಿ ಬರ್ತಿದ್ದ ಜನರಿಂದಾಗಿ ಜ್ಯುವೆಲ್ಲರ್ಸ್ ಶೋರೂಂ ಎದುರು ಅಪಾರ ಪ್ರಮಾಣದ ಜನಜಂಗುಳಿಯೇ ಉಂಟಾಗಿದ್ದು ವಿಶೇಷವಾಗಿತ್ತು ಮತ್ತು ತಮ್ಮ ಹೊಸ ವಿಸ್ತೃತ ಸಂಸ್ಥೆಗೆ ಸಿಕ್ಕ ಜನಬೆಂಬಲವನ್ನು ಕಂಡು ಮಾಲಕರು ಫುಲ್ ಖುಷ್ ಆಗಿದ್ದಾರೆ.


ಉದ್ಘಾಟನೆ ಹಿನ್ನೆಲೆಯಲ್ಲಿ ಆಫರ್ಗಳು:

ಮೇ 27ರಿಂದ ಜೂನ್ 31ರವರೆಗೆ 10 ಸಾವಿರ ರೂ. ಮಿಕ್ಕಿದ ಖರೀದಿಗೆ ಕೂಪನ್ ನೀಡಿ, ಅದರ ಮೂಲಕ ಬಹುಮಾನ ಘೋಷಿಸಲಾಗುವುದು. ಇದರಲ್ಲಿ ಪ್ರಥಮ ಬಹುಮಾನ ರೆಫ್ರಿಜರೇಟರ್, ದ್ವಿತೀಯ ಬಹುಮಾನ ವಾಷಿಂಗ್ಮೆಷಿನ್, ತೃತೀಯ ಬಹುಮಾನ ಸ್ಮಾರ್ಟ್ ಟಿವಿ ದೊರೆಯಲಿದೆ. ಐದು ಆಕರ್ಷಕ ಬಹುಮಾನ ಲಭ್ಯ. ಇದರೊಂದಿಗೆ ಗ್ರಾಹಕರಿಗೆ ಮಾಸಿಕ 500 ರೂ., 1000 ರೂ. ಹಾಗೂ 2000 ರೂ. ಪಾವತಿಯ ಕಂತುಗಳ ಮೂಲಕ ಚಿನ್ನ ಖರೀದಿಸುವ ಅವಕಾಶ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಫೆ. 28ರಂದು ವಿಜ್ಡಮ್ ಸಂಸ್ಥೆಗಳ ನೆಟ್ ವರ್ಕ್ ಸೆಂಟರ್ ಪುತ್ತೂರಿನಲ್ಲಿ ಶುಭಾರಂಭ

Posted by Vidyamaana on 2024-02-27 17:43:19 |

Share: | | | | |


ಫೆ. 28ರಂದು ವಿಜ್ಡಮ್ ಸಂಸ್ಥೆಗಳ ನೆಟ್  ವರ್ಕ್ ಸೆಂಟರ್ ಪುತ್ತೂರಿನಲ್ಲಿ ಶುಭಾರಂಭ

ಪುತ್ತೂರು: ವಿಜ್ಡಮ್ ಸಂಸ್ಥೆಗಳ ನೆಟ್ ವರ್ಕ್ ಸೆಂಟರ್ ಫೆ. 28ರಂದು ಬೆಳಿಗ್ಗೆ 10ಕ್ಕೆ ದರ್ಬೆ ಸಂತ ಫಿಲೋಮಿನಾ ಕಾಲೇಜು ಎದುರುಭಾಗದಲ್ಲಿರುವ ಆರಾಧ್ಯ ಆರ್ಕೇಡಿನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಶಾಸಕ ಅಶೋಕ್ ಕುಮಾರ್ ರೈ ಮುಖ್ಯಅತಿಥಿಯಾಗಿರುವರು. ಮಾಜಿ ಶಾಸಕ ಸಂಜೀವ ಮಠಂದೂರು ವಿಶೇಷ ಅತಿಥಿಯಾಗಿರುವರು. ವಿಸ್ಡಮ್ ಸಂಸ್ಥೆಯ ಸ್ಥಾಪಕ, ಎಂಡಿ, ಅಧ್ಯಕ್ಷ ಡಾ. ಫ್ರಾನ್ಸಿಸ್ಕಾ ತೇಜ್, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಫಾ.ಸ್ಟ್ಯಾನಿ ಪಿಂಟೊ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್, ಪ್ರೇರಣಾದ ಕಾರ್ಯನಿರ್ವಾಹಕ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಆರಾಧ್ಯ ಆರ್ಕೇಡಿನ ಮಾಲಕ ಕರುಣಾಕರ್ ರೈ ಅತಿಥಿಯಾಗಿರುವರು.

ಅಕ್ಷಯ ಎಜ್ಯುಕೇಷನ್ ಚಾರಿಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಜಯಂತ್ ನಡುಬೈಲು, ವಿಜ್ಡಮ್ ಇನ್’ಸ್ಟಿಟ್ಯೂಷನ್ ನೆಟ್ ವರ್ಕ್ ನ ಹ್ಯೂಮನ್ ರಿಸೋರ್ಸಸ್ ಗ್ಲೋಬಲ್ ಡೈರೆಕ್ಟರ್ ದೀಪಕ್ ಬೋಳೂರ್, ವಿಸ್ಡಮ್ ಇನ್’ಸ್ಟಿಟ್ಯೂಷನ್ಸ್ ನೆಟ್’ವರ್ಕಿನ ವ್ಯವಹಾರ ಪಾಲುದಾರ ವಿನಿತ್ ಕುಂದರ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ದ.ಕ. ಜಿಲ್ಲೆಯಲ್ಲಿ ಎ.24 ರಿಂದಲೇ ನಿಷೇಧಾಜ್ಞೆ ಜಾರಿ ; ಒಟ್ಟು 18.18 ಲಕ್ಷ ಮತದಾರರು - ಎರಡು ದಿನ ಮದ್ಯ ನಿಷೇಧ -ಇಲ್ಲಿದೆ ಸಂಪೂರ್ಣ ಮಾಹಿತಿ

Posted by Vidyamaana on 2024-04-24 03:29:16 |

Share: | | | | |


ದ.ಕ. ಜಿಲ್ಲೆಯಲ್ಲಿ ಎ.24 ರಿಂದಲೇ ನಿಷೇಧಾಜ್ಞೆ ಜಾರಿ ; ಒಟ್ಟು 18.18 ಲಕ್ಷ ಮತದಾರರು - ಎರಡು ದಿನ ಮದ್ಯ ನಿಷೇಧ -ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು, ಏ.23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಬಾರಿ ಜಿಲ್ಲೆಯಲ್ಲಿ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿಗಳು ಕಾರ್ಯ‌ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ. ‌


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್ ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ. ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 1,876 ಮತಗಟ್ಟೆಗಳ ಪೈಕಿ 1,005 ಬೂತ್ ಗಳು ನಿರ್ದಿಷ್ಟ ಪ್ರದೇಶದಲ್ಲಿವೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 50 ಲೊಕೇಶನ್ ಗಳಲ್ಲಿ 132 ಪೋಲಿಂಗ್ ಸ್ಟೇಷನ್ ಬರಲಿದ್ದು, 200 ಮೈಕ್ರೋ ಒಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ,  186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ.

Recent News


Leave a Comment: