ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಹಿಂದೂ ಹಿತಾಸಕ್ತಿಗೆ ಬದ್ಧವಾದ ಪುತ್ತಿಲ ಪರಿವಾರ

Posted by Vidyamaana on 2023-05-23 06:24:47 |

Share: | | | | |


ಹಿಂದೂ ಹಿತಾಸಕ್ತಿಗೆ ಬದ್ಧವಾದ ಪುತ್ತಿಲ ಪರಿವಾರ

ಪುತ್ತೂರು: ಸ್ವಾರ್ಥರಹಿತವಾದ ಹಿಂದೂ ಪರವಾದ ಮತ್ತು ಹಿಂದೂಗಳ ಹಿತಾಸಕ್ತಿಗೆ ಬದ್ಧವಾಗಿ ನಡೆಸಲ್ಪಡುವ ಸ್ವತಂತ್ರವಾದ ಹಿಂದೂ ಕಾರ್ಯಕರ್ತರನ್ನೊಳಗೊಂಡ ಸಮೂಹವೇ ಪುತ್ತಿಲ ಪರಿವಾರ. ಹೊರತಾಗಿ, ಯಾವುದೇ ಸಂಘಟನೆಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಸಂಘಟನೆಯಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಅಪಪ್ರಚಾರಗಳಿಗೆ ಉತ್ತರವಾಗಿ ಈ ಹೇಳಿಕೆ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.

ಇದು ಹಿಂದುಗಳಿಗಾಗಿ ಕೆಲಸ ಮಾಡುವ ಸಮೂಹವೇ ಹೊರತು ಯಾವುದೇ ರಾಜಕೀಯ ಸ್ವಹಿತಾಸಕ್ತಿಯಿಂದ ಉದ್ದೇಶಿತಗೊಂಡ ಸಮೂಹವಲ್ಲ.

ಎಲ್ಲರೂ ಗಮನಿಸಬೇಕು ಯಾವುದೇ ರಾಜಕೀಯ ಪಕ್ಷಕ್ಕಾಗಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಾಗಲಿ ಪರ್ಯಾಯವಾಗಿ ಉದ್ದೇಶಿಸಿದ ಸಮೂಹವಲ್ಲ.

ಹಿಂದೆಯೂ ಹೇಳಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾ.ಜ.ಪಾ.ಕ್ಕೆ ಪ್ರತಿರೋಧವಾಗಿ ಈ ಸಮೂಹ ಕೆಲಸ ಮಾಡುವುದಿಲ್ಲ.

ಮಾತಿನ ಬದ್ಧತೆ, ಮೌಲ್ಯ, ಧರ್ಮ ಮತ್ತು ಸಿದ್ಧಾಂತದ ಪ್ರತಿಪಾದನೆಯ ತಳಹದಿಯಲ್ಲಿ ಜನಸೇವಾ ಕಾರ್ಯಕ್ರಮಗಳನ್ನು ಈ ಸಮೂಹ (ಪರಿವಾರ) ಮಾಡಲಿದೆ.

ಯಾರ್ಯಾರೋ ಕೊಡುವ ಉತ್ಪ್ರೇಕ್ಷೆಯ, ದ್ವೇಷ ಹುಟ್ಟು ಹಾಕುವ ಮಾದರಿಯ ಹೇಳಿಕೆಗಳಾಗಲಿ, ಮಾಧ್ಯಮ ಪ್ರಚಾರಕ್ಕಾಗಲಿ ನಮ್ಮದು ವಿರೋಧವಿದೆ ಮತ್ತು ಅದಕ್ಕೂ ನಮ್ಮ ಪರಿವಾರದ ಉದ್ದೇಶಕ್ಕೂ ಯಾವುದೇ ಸಂಬಂಧವಿರುವುದಿಲ್ಲ.

ಆದುದರಿಂದ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದು ವಿನಮ್ರವಾಗಿ ಪ್ರಾರ್ಥಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

BREAKING: ದೇವಸ್ಥಾನದಲ್ಲಿ ಕಾಲು ಜಾರಿಬಿದ್ದು ಪಕ್ಕೆಲುಬಿಗೆ ಪೆಟ್ಟು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು

Posted by Vidyamaana on 2024-07-17 15:28:58 |

Share: | | | | |


BREAKING: ದೇವಸ್ಥಾನದಲ್ಲಿ ಕಾಲು ಜಾರಿಬಿದ್ದು ಪಕ್ಕೆಲುಬಿಗೆ ಪೆಟ್ಟು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು

ಹಾಸನ: ದೇವಸ್ಥಾನಕ್ಕೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಗಾಯವಾಗಿದೆ.ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದ ಹೊಳೆನರಸೀಪುರದಲ್ಲಿ ದೇವಸ್ಥಾನಕ್ಕೆ ತೆರಳಿದ್ದಾಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಾಲು ಜಾರಿ ಬಿದ್ದಿದ್ದಾರೆ

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಸಾಗಾಟದ ಲಾರಿ ಪಲ್ಟಿ

Posted by Vidyamaana on 2023-10-07 20:19:14 |

Share: | | | | |


ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಸಾಗಾಟದ ಲಾರಿ  ಪಲ್ಟಿ

ಬಂಟ್ವಾಳ : ಅಕ್ಕಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು ಕಡೂರು 73 ರ ರಾಜ್ಯ ಹೆದ್ದಾರಿಯ ಬಂಟ್ವಾಳ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ.


    ಮಂಗಳೂರಿನಿಂದ ಬೆಳ್ತಂಗಡಿಗೆ ಅಕ್ಕಿ ಸಾಗಾಟದ ಈ ಲಾರಿ  ಬಡಗುಂಡಿ ಅಂಚಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನನ್ನು ಲಾರಿಯ ಗಾಜು ಪುಡಿ ಮಾಡಿ ಹೊರಕ್ಕೆ ತರಲಾಗಿದೆ. ಚಾಲಕ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


   ಲಾರಿ ಪಲ್ಟಿಯಾಗುವ ವೇಳೆ ರಸ್ತೆ ಬದಿಯ ವಿದ್ಯುತ್ ‌ಕಂಬಕ್ಕೆ ಡಿಕ್ಕಿಯಾಗಿ, ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಅಲ್ಲೇ ಸಮೀಪದಲ್ಲಿ ಹೈ ಟೆನ್ಸನ್ ವಿದ್ಯುತ್ ವಯರ್ ಗಳಿದ್ದು ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದೆ. 

ಘಟನೆಯ ವೇಳೆ ವಿದ್ಯುತ್ ತಂತಿಗೆ ತಾಗುತ್ತಿದ್ದರೆ, ಅನೇಕ ಜೀವಹಾನಿಯಾಗುವ ಬೀಕರ ದುರಂತಕ್ಕೆ ಕಾರಣವಾಗುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.


ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

Posted by Vidyamaana on 2024-07-16 08:19:28 |

Share: | | | | |


ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

ಬಂಟ್ವಾಳ : ಬಿ.ಸಿ.ರೋಡು - ಸರಪಾಡಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.

ಭಾರೀ ಮಳೆಯಿಂದ ಮುಖ್ಯ ರಸ್ತೆ ಹದಗೆಟ್ಟಿದ್ದು, ಬಸ್‌ ಒಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

25000 ಬೆಂಬಲಿಗರೊಂದಿಗೆ ಅಶೋಕ್ ರೈ ನಾಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 13:49:46 |

Share: | | | | |


25000 ಬೆಂಬಲಿಗರೊಂದಿಗೆ ಅಶೋಕ್ ರೈ ನಾಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಪುತ್ತೂರು: ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಏ. 19ರಂದು ದರ್ಬೆ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಮಪತ್ರ ಸಲ್ಲಿಸಿ, ಬಳಿಕ ದರ್ಬೆ ವೃತ್ತಕ್ಕೆ ತೆರಳಲಿದ್ದಾರೆ. ಅಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಸುಮಾರು 25000 ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದ್ದರು.

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

Posted by Vidyamaana on 2023-07-30 23:17:54 |

Share: | | | | |


ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಗರದ ಪಡೀಲ್ ಅಳಪೆ ಪಡ್ಡು ಬಳಿ ನಡೆದಿದೆ.


ಅಳಪೆ ಪಡ್ಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.


ಇಂದು ಸಂಜೆ 5 ಗಂಟೆಯ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು.


ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ತೀವ್ರ ಹುಡುಕಾಟದ ಬಳಿಕ ಮೃತದೇಹ ವನ್ನು ಹೊರತೆಗೆಯಲಾಗಿದೆ.

Recent News


Leave a Comment: