ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

ಸುದ್ದಿಗಳು News

Posted by vidyamaana on 2024-07-08 08:23:43 |

Share: | | | | |


ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

 ಮಂಗಳೂರು : ಮಂಗಳೂರಿನಲ್ಲಿ ಒಂದೆಡೆ ಮುಂಗಾರು ಮಳೆ ಅಬ್ಬರವಿದ್ದರೆ ಇನ್ನೊಂದೆಡೆ ಕಳ್ಳರ ಭಯ ಪ್ರಾರಂಭವಾಗಿದ್ದು, ಕಳ್ಳತನಕ್ಕೆ ಹೆಸರು ಮಾಡಿರುವ ಚೆಡ್ಡಿ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.

ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.

 Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 10

Posted by Vidyamaana on 2023-09-10 05:57:57 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 10

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 10 ರಂದು


8.45 ಕ್ಕೆ ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಸಭಾಭವನ ಶಿಲ್ಯಾನಾಸ, ಸನ್ಮಾನ



11 ಗಂಟೆ ಮೂಡಬಿದ್ರೆ ದ ಕ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ


4.30 ಕ್ಕೆ ಮಹಿಷಮರ್ಧಿನಿ ದೇವಸ್ಥಾನ ಕೋಡಿಂಬಾಡಿಯಲ್ಲಿ ಸಭೆ


5.30 ಯುವ ಶಕ್ತಿ ಗೆಳೆಯರ ಬಳಗದ ವತಿಯಿಂದ ಕೋಡಿಂಬಾಡಿ ಶಾಲೆಯಲ್ಲಿ‌ ಅಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ನಟಿ ನೂರ್ ಮಾಲಾಬಿಕಾ ದಾಸ್ ಆತ್ಮಹತ್ಯೆ

Posted by Vidyamaana on 2024-06-10 19:13:11 |

Share: | | | | |


ನಟಿ ನೂರ್ ಮಾಲಾಬಿಕಾ ದಾಸ್ ಆತ್ಮಹತ್ಯೆ

ಮುಂಬೈ: ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ಮುಂಬೈನ ಅಪಾರ್ಟ್ ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ಬಿಡುಗಡೆಗೊಂಡಿದ್ದ ದಿ ಟ್ರಯಲ್ ವೆಬ್ ಸರಣಿಯಲ್ಲಿ ನಟಿ ಕಾಜೋಲ್ ಜತೆ ಮಾಲಾಬಿಕಾ ದಾಸ್ ನಟಿಸಿದ್ದರು.

ಅಕ್ಕನ ಮನೆಯಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳಿ ತಂಗಿ ಅಂದರ್!

Posted by Vidyamaana on 2024-05-08 07:16:07 |

Share: | | | | |


ಅಕ್ಕನ ಮನೆಯಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳಿ ತಂಗಿ ಅಂದರ್!

ಬೆಂಗಳೂರು, ಮೇ.07: ತನ್ನ ಅಕ್ಕನ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ಕ್ಯಾಶ್ ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಬಂಧಿತ ಆರೋಪಿಯಿಂದ 65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. 

ಚೌಡೇಶ್ವರಿ ದೇವರ ಹಬ್ಬ ಎಂದು ಉಮಾಳ ಅಕ್ಕ ಊರಿಗೆ ಹೋಗಿದ್ದರು. ಹೋಗುವ ಮುನ್ನ ಸಂಬಂಧಿಗೆ ಮನೆಯ ಕೀ‌ ಕೊಟ್ಟು ಹೋಗಿದ್ದರು. ನಂತರ ಕಳೆದ ಏ. 24ರ ರಾತ್ರಿ ಆಕೆಯ ಸಂಬಂಧಿ ಮನೆಗೆ ಮಲಗಲು ಹೋಗಿದ್ದಾಗ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಳು. ಉಮಾ 182 ಗ್ರಾಂ ಚಿನ್ನಾಭರಣ ಹಾಗು 52 ಲಕ್ಷ ನಗದು ಕಳ್ಳತನ ಮಾಡಿದ್ದಳು.

ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

Posted by Vidyamaana on 2023-08-18 02:52:08 |

Share: | | | | |


ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

ಪುತ್ತೂರು : ಕೆಎಸ್‌ಆರ್‌ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ ಚಾಲಕ ಹುದ್ದೆಗೆ ಸುಮಾರು 70 ಮಂದಿ ಅರ್ಜಿ ಸಲ್ಲಿಸಿದ್ದರು.


ಈ ಪೈಕಿ ತರಬೇತಿಗೆ ಹಾಜರಾಗಿ ಮೊದಲ ಪರೀಕ್ಷೆಯಲ್ಲಿ 55 ಮಂದಿ ತೇರ್ಗಡೆಹೊಂದಿದ್ದರು, ಈ ಪೈಕಿ 49 ಮಂದಿಗೆ ಮೊದಲ ಹಂತದಲ್ಲಿ ಚಾಲಕ ಹುದ್ದೆಗೆ ನೇಮಕವಾಗಿದ್ದು ಶಾಸಕರು ಪಟ್ಟ ಶ್ರಮ ಸಾರ್ಥಕವಾಗಿದೆ.



ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಸಕರು ತನ್ನ ಸ್ವಂತ ಖರ್ಚಿನಿಂದ ಎಲ್ಲಾ ಚಾಲಕ ಆಕಾಂಕ್ಷಿಗಳನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ತರಬೇತಿಯನ್ನು ಕೊಡಿಸಿದ್ದರು. ಮೊದಲ ಹಂತದ ತರಬೇತಿಯಲ್ಲಿ ೨೭ ಮಂದಿ ಮತ್ತು ಎರಡನೆ ತಂಡದಲ್ಲಿ ೨೮ ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಈ ಪೈಕಿ ಕೆಲವು ಮಂದಿ ತರಬೇತಿಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ಮುಂದಿನ ತರಬೇತಿ ಅವಧಿಗೆ ಕಾಯ್ದಿರಿಸಲಾಗಿತ್ತು.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಆ.10 ರಂದು ಪ್ರಾದೇಶಿಕ ತರಬೇತಿ ಕೇಂದ್ರ ಹಾಸದಲ್ಲಿ ಚಾಲಕರ ಆಯ್ಕೆ ಯನ್ನು ಮಾಡಿರುತ್ತಾರೆ. ಇದರಲ್ಲಿ ಟ್ರಸ್ಟ್ ಮೂಲಕ ತರಬೇತಿ ಪಡಕೊಂಡ ೪೬ ಮಂದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಠೆಯ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಆಯ್ಕೆಯಾಗಿರುತ್ತಾರೆ.


ನಮ್ಮ ಜನರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಹುದ್ದೆ ದೊರೆಯಬೇಕೆಂಬ ಉದ್ದೇಶದಿಂದ ನಾನು ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಹುದ್ದೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಅವರನ್ನು ತನ್ನ ಸ್ವಂತ ಖರ್ಚಿನಲ್ಲೇ ಹಾಸಕನಕ್ಕೆ ಕರೆದೊಯ್ದು ಚಾಲನಾ ತರಬೇತಿಯನ್ನು ಕೊಡಿಸಿದ್ದು ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ೪೬ ಮಂದಿ ಚಾಲಕ ಹುದ್ದೆಗೆ ನೇಮಕವಾಗಿದ್ದಾರೆ.


ಸರಕಾರಿ ಹುದ್ದೆಗೆ ಈ ಭಾಗದವರು ಅರ್ಜಿ ಹಾಕುವುದು ಬಹಳ ಕಡಿಮೆ. ನಮ್ಮವರಿಗೂ ಸರಕಾರಿ ಹುದ್ದೆ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಶಾಸನೆಂಬ ನೆಲೆಯಲ್ಲಿ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಪೂರಕ ಎಂಬಂತೆ ಚಾಲಕರು ಸಹಕಾರ ನೀಡಿದ್ದು ಇದೀಗ ೪೭ ಮಂದಿಗೆ ಉದ್ಯೋಗ ಲಭಿಸಿದ್ದು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-05-22 13:24:27 |

Share: | | | | |


ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ವಿಧಾನಸೌಧ ಶಾಸನ ರಚಿಸುವ ಪುಣ್ಯ ಸ್ಥಳ. ಅಂತಹ ವಿಧಾನಸೌಧಕ್ಕೆ ಶಾಸಕನಾಗಿ ಪ್ರವೇಶ ಮಾಡುವುದೇ ದೊಡ್ಡ ಸಂತೋಷದ ಭಾವನೆ. ಅದಕ್ಕೆ ಕಾರಣರು ನನ್ನ ಕ್ಷೇತ್ರದ ಜನರು. ಅವರಿಗೆ ಇದನ್ನು ಅರ್ಪಿಸಲು ಬಯಸುತ್ತೇನೆ.

ಇದು ಅಶೋಕ್ ಕುಮಾರ್ ರೈ ಅವರ ಫಸ್ಟ್ ರಿಯಾಕ್ಷನ್...

ಶಾಸಕನಾಗಿ ಸೋಮವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿದ್ಯಮಾನಕ್ಕೆ ಫಸ್ಟ್ ರಿಯಾಕ್ಷನ್ ನೀಡಿದರು.

ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಅಶೋಕ್ ಕುಮಾರ್ ರೈ ಅವರು, ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಮೆಟ್ಟಿಲುಗಳಿಗೆ ನಮಿಸಿ, ಮುಂದಡಿ ಇಟ್ಟರು.

ಗಣಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮಹಿಳಾ ಅಧಿಕಾರಿಯನ್ನು ಕತ್ತು ಕೊಯ್ದು ಭೀಕರ ಕೊಲೆ ; ಮನೆಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ

Posted by Vidyamaana on 2023-11-05 15:11:03 |

Share: | | | | |


ಗಣಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮಹಿಳಾ ಅಧಿಕಾರಿಯನ್ನು ಕತ್ತು ಕೊಯ್ದು ಭೀಕರ ಕೊಲೆ ; ಮನೆಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ

ಬೆಂಗಳೂರು, ನ.5: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಮಹಿಳಾ ಅಧಿಕಾರಿಯೊಬ್ಬರನ್ನು ಬೆಂಗಳೂರಿನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ಪ್ರತಿಮಾ (45) ಎಂಬ ಅಧಿಕಾರಿಯನ್ನು ಅವರ ಮನೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. 


ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್‌ ಅಪಾರ್ಟ್ಮೆಂಟ್‌ ನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರತಿಮಾ ಅವರು ಬೆಂಗಳೂರಿನ  ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 


ಗಂಡ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು. ರಾತ್ರಿ 8 ಗಂಟೆಗೆ ಕಚೇರಿಯಿಂದ ಸರ್ಕಾರಿ ವಾಹನದಲ್ಲಿಯೇ ಮನೆಗೆ ಬಂದಿದ್ದು ಆಬಳಿಕ ಮನೆಗೆ ನುಗ್ಗಿದ ಆಗಂತುಕರು ಕೊಲೆ ಮಾಡಿ ಹೋಗಿದ್ದಾರೆ. ಪರಿಚಿತರೇ ಈ ಕೃತ್ಯ  ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶನಿವಾರ ರಾತ್ರಿ ಪ್ರತಿಮಾ ಅವರಿಗೆ ಅಣ್ಣ ಕರೆ ಮಾಡಿದ್ದು, ಕರೆ ಸ್ವೀಕರಿಸಿರಲಿಲ್ಲ. ಬೆಳಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ. 


18 ವರ್ಷಗಳ ಹಿಂದೆ ಪ್ರತಿಮಾ ಹಾಗೂ ತೀರ್ಥಹಳ್ಳಿಯ ಸತ್ಯನಾರಾಯಣ ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಪ್ರತಿಮಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೌಕರಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಎಸ್ಸೆಸ್ಸೆಲ್ಸಿ ಓದುವ ಮಗನಿದ್ದಾನೆ. ತೀರ್ಥಹಳ್ಳಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು ಅಲ್ಲಿ ಎರಡು ಎಕರೆ ಅಡಿಕೆ ತೋಟವೂ ಇದ್ದುದರಿಂದ ತಂದೆ, ಮಗ ಅಲ್ಲಿಗೆ ತೆರಳಿದ್ದರು. ಇತ್ತ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಪ್ರತಿಮಾ ಒಂಟಿಯಾಗಿಯೇ ನೆಲೆಸಿದ್ದರು.

Recent News


Leave a Comment: