ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಖ್ಯಾತ ತಮಿಳುನಟ ವಿಜಯ್ ಪುತ್ರಿ ಮೀರಾ ಆತ್ಮಹತ್ಯೆ

Posted by Vidyamaana on 2023-09-19 08:54:10 |

Share: | | | | |


ಖ್ಯಾತ ತಮಿಳುನಟ ವಿಜಯ್  ಪುತ್ರಿ ಮೀರಾ ಆತ್ಮಹತ್ಯೆ

ಚೆನ್ನೈ:ಖ್ಯಾತ ತಮಿಳು ನಟ ವಿಜಯ್ ಆಂಟನಿ ಮಗಳು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.ಸಂಗೀತ ಸಂಯೋಜಕ, ನಟ ಮತ್ತು ನಿರ್ಮಾಪಕ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಅವರು ಸೆಪ್ಟೆಂಬರ್ 19 ರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 16 ವರ್ಷ ವಯಸ್ಸಾಗಿತ್ತುವರದಿಗಳ ಪ್ರಕಾರ, ಮೀರಾ ಅವರ ಚೆನ್ನೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ವರದಿಗಳ ಪ್ರಕಾರ, ಅವರು ಒತ್ತಡದಲ್ಲಿದ್ದರು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದರು.


ಚೆನ್ನೈನ ಜನಪ್ರಿಯ ಶಾಲೆಯಲ್ಲಿ ಓದುತ್ತಿದ್ದಳು. ದೃಢೀಕರಿಸದ ವರದಿಗಳ ಪ್ರಕಾರ ಬಾಲಕಿ ಖಿನ್ನತೆಯಿಂದ ಬಳಲುತ್ತಿದ್ದಳು.


ಮನೆಯ ಸಹಾಯಕರು ಕೋಣೆಯಲ್ಲಿದ್ದ ಮೀರಾ ಅವರನ್ನು ಚೆನ್ನೈನ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ವಿಜಯ್ ಆಂಟೋನಿ ತಮಿಳಿನ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

Posted by Vidyamaana on 2023-06-03 23:22:27 |

Share: | | | | |


ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಒಡಿಶಾ ರೈಲು ದುರಂತದ ಬಗ್ಗೆ ಟ್ವಿಟ್ ಮಾಡಲು ಹೋಗಿ ನಳೀನ್ ಕುಮಾರ್ ಕಟೀಲ್ ಯಡವಟ್ಟು ಮಾಡಿಕೊಂಡಿದ್ದಾರೆ.ಟ್ವಿಟ್ ನಲ್ಲಿ ರೈಲು ಬೋಗಿಗಳು ಹೊತ್ತಿ ಉರಿಯುತ್ತಿರುವಂತ ಯಾವುದೋ ಪೋಟೋ ಹಾಕಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಈ ಘಟನೆ ಸಂಬಂಧ ಟ್ವಿಟ್ ಮಾಡಿದ್ದಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಒಡಿಶಾದಲ್ಲಿ ಸರಣಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕ ಬಂಧುಗಳ ಆತ್ಮಕ್ಕೆ ಸದ್ಗತಿ ಕೋರುತ್ತಾ ಗಾಯಗೊಂಡಿರುವ ಪ್ರಯಾಣಿಕರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಎಂದಿದ್ದರು. ಆದ್ರೇ ಹೀಗೆ ಟ್ವಿಟ್ ಗೆ ಹಾಕಿದ್ದಂತ ಪೋಟೋ ನಿನ್ನೆಯ ಘಟನೆ ಪೋಟೋ ಆಗಿರಲಿಲ್ಲ.

ಈ ಬಗ್ಗೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮಾಡಿದ್ದಂತ ಟ್ವಿಟ್ಟರ್ ವಿಷಯದ ಪೋಟೋ ಕಂಡು ಹೌಹಾರಿದ್ದರು. ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿ, ಇದು ಒಡಿಶಾದಲ್ಲಿನ ರೈಲುಗಳ ಅಪಘಾತದ ಪೋಟೋವಲ್ಲ. ಬದಲಾಗಿ ವಿದೇಶದಲ್ಲಿ ನಡೆದಿದ್ದಂತ ರೈಲುಗಳ ಮುಖಾಮುಖಿ ಡಿಕ್ಕಿಯ ಪೋಟೋ ಇರಬೇಕು ಎಂಬುದಾಗಿ ಕಮೆಂಟ್ ಮಾಡಿದ್ದರು. ಕೊನೆಗೆ ಎಚ್ಚೆತ್ತುಕೊಂಡು ಫೋಟೋ ಬದಲಾಯಿಸಿದ್ದಾರೆ.

ಬಂಟ್ವಾಳ : ಕಂಟೈನರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸೋನು ಮೃತ್ಯು , ಸಹಸವಾರ ಗಂಭೀರ

Posted by Vidyamaana on 2024-05-15 04:46:58 |

Share: | | | | |


ಬಂಟ್ವಾಳ : ಕಂಟೈನರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ  ಸೋನು ಮೃತ್ಯು , ಸಹಸವಾರ ಗಂಭೀರ

ಬಂಟ್ವಾಳ : ಬೈಕಿಗೆ ಲಾರಿ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಸವಾರರ ಮೇಲೆ ಅದೇ ಲಾರಿ ಹರಿದ ಪರಿಣಾಮ ಸವಾರ ದಾರುಣವಾಗಿ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ನಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಪ್ರದೇಶ ರಾಜ್ಯದ ನಿವಾಸಿ, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಸೋನು (19) ಹಾಗೂ ಗಾಯಾಳು ಸಹಸವಾರನನ್ನು ಕಾರ್ಕಳ ನಿವಾಸಿ ಪ್ರಸಾದ್ (22) ಎಂದು ಹೆಸರಿಸಲಾಗಿದೆ

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಬಸ್ - ಸ್ಕೂಟರ್ ಅಪಘಾತ: ಇರ್ಫಾನ್ ಸ್ಥಳದಲ್ಲೇ ಮೃತ್ಯು-ಅವಿನ್ ಗಂಭೀರ

Posted by Vidyamaana on 2023-06-05 14:58:38 |

Share: | | | | |


ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಬಸ್ - ಸ್ಕೂಟರ್ ಅಪಘಾತ: ಇರ್ಫಾನ್ ಸ್ಥಳದಲ್ಲೇ ಮೃತ್ಯು-ಅವಿನ್ ಗಂಭೀರ

ಚಾರ್ಮಾಡಿ : ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಮೂರನೇ ತಿರುವಿನಲ್ಲಿ ಬಸ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಜೂ.5ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಮೂಲಕವಾಗಿ ಚಿಕ್ಕಮಗಳೂರು ಕಡೆ ಹೋಗುತ್ತಿದ್ದ ಸರಕಾರಿ ಬಸ್ ಹಾಗೂ ಚಾರ್ಮಾಡಿ ಕಡೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್‌ನಲ್ಲಿದ್ದ ಬಾಳೆಹೊನ್ನೂರಿನ ಮಹಾಗುಂಡಿ ನಿವಾಸಿ ಇರ್ಫಾನ್(21ವ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಬಾಳೆಹೊನ್ನೂರು ನಿವಾಸಿ ಅವಿನ್ (22ವ) ಗಂಭೀರ ಗಾಯಗೊಂಡಿದ್ದಾರೆ.

ಇವರನ್ನು ಚಾರ್ಮಾಡಿಯ ಸಮಾಜ ಸೇವಕ ಸಿನಾನ್ ತಂಡ ಅಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಹಿನ್ನೆಲೆ ಪತ್ತೆಗೆ ಡಿಜಿಟಲ್ ಟಚ್.

Posted by Vidyamaana on 2023-02-19 07:55:08 |

Share: | | | | |


ಅಪರಾಧ ಹಿನ್ನೆಲೆ ಪತ್ತೆಗೆ ಡಿಜಿಟಲ್ ಟಚ್.

ಪುತ್ತೂರು: ರಾತ್ರಿ ವೇಳೆ ಜರಗುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ನೂತನ MCCTNS ( Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಗೆ ದ.ಕ. ಜಿಲ್ಲಾ ಪೊಲೀಸರು ಚಾಲನೆ ನೀಡಿದ್ದಾರೆ.

ರಾತ್ರಿ ಗಸ್ತು ಕರ್ತವ್ಯದ ವೇಳೆ ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಚಟುವಟಿಕೆಯನ್ನು ತಿಳಿದುಕೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ. ಆ ವ್ಯಕ್ತಿಯ ಬೆರಳಚ್ಚನ್ನು ತೆಗೆದುಕೊಳ್ಳುವ ಈ ಪೋರ್ಟಬಲ್ ಸ್ಕ್ಯಾನರ್, ಆತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಅದರ ಸಂಪೂರ್ಣ ವಿವರವನ್ನು ತಕ್ಷಣದಲ್ಲೇ ನೀಡಲಿದೆ. ಮೌಖಿಕ ವಿಚಾರಣೆಯ ಜೊತೆಗೆ ತಂತ್ರಾಂಶದ ಮೂಲಕ ಪರಿಶೀಲಿಸಿದಾಗ ದೊರೆಯುವ ಮಾಹಿತಿ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯಣ.

ಇಂತಹ ನೂತನ ತಂತ್ರಜ್ಞಾನ ವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ  ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾರ್ ನಲ್ಲಿ ತಲವಾರ್ ಝಲಪಿಸಿದ ಪ್ರಜ್ವಲ್-ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

Posted by Vidyamaana on 2023-06-10 23:24:13 |

Share: | | | | |


ಬಾರ್ ನಲ್ಲಿ ತಲವಾರ್ ಝಲಪಿಸಿದ ಪ್ರಜ್ವಲ್-ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

ಪುತ್ತೂರು:ತನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕರೆ ಕಟ್ ಮಾಡಲು ಹೇಳಿದ್ದನ್ನು ಕೇಳಲೆಂದು ಯುವಕನೋರ್ವ ತಲ್ವಾರ್, ಝಳಪಿಸಿಕೊಂಡು ಬಂದು, ಬರ್‌ಡೇ ಪಾರ್ಟಿ ಆಚರಿಸುತ್ತಿದ್ದ ಯವಕರ ತಂಡದಲ್ಲಿದ್ದ ಓರ್ವನ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಇಲ್ಲಿನ ದರ್ಬೆಯಲ್ಲಿ ಜೂ.9ರ ರಾತ್ರಿ ನಡೆದಿದೆ. ಆರೋಪಿ ತಲ್ವಾರ್ ಬೀಸಿಕೊಂಡು ಯುವಕನನ್ನು ಅಟ್ಟಾಡಿಸುತ್ತಿರುವ ದೃಶ್ಯ  ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಘಟನೆ ಮಾಹಿತಿ ತಿಳಿದು ಜಿಲ್ಲಾ ಪ್ರಭಾರ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ಆಗಮಿಸಿ | ವಿಚಾರಿಸಿದ ಬಳಿಕ ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ದರ್ಬೆಯಲ್ಲಿರುವ ಮಂಗಳಾ ಲಾಡ್ಜ್‌ ಕಟ್ಟಡದ ಮೇಲಂತಸ್ತಿನಲ್ಲಿ ಈ ಘಟನೆ ನಡೆದಿದೆ.ದರ್ಜೆ ನಿರೀಕ್ಷಣಾ ಮಂದಿರ ತಿರುವು ರಸ್ತೆಯ ಬಳಿ ಬಾರ್ ಹೊಂದಿರುವ ಮಂಗಳಾ ಲಾಡ್ ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ರೂಂ ನಂಬ್ರ 402ರಲ್ಲಿ ಗಾಡ್ರಿನ್ ದಿನಕರ್, ಅವರ ಗೆಳೆಯರಾದ ರಕ್ಷಿತ್, ಭವಿತ್, ಹೇಮಂತ್ ಮತ್ತು ಸಂದೇಶ್‌ ಎಂಬವರು ಸೇರಿಕೊಂಡು ರಕ್ಷಿತ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ ನಂತರ ಡಿನ್ನರ್ ಪಾರ್ಟಿ ಮಾಡಿದ್ದರು.ಅಲ್ಲಿಗೆ ಹೊರಗಿನಿಂದ ಬಂದ ಪ್ರಜ್ವಲ್ ಎಂಬಾತ ಕೈಯಲ್ಲಿ ತಲ್ವಾರ್ ಝಳಪಿಸಿಕೊಂಡು ಬರ್ತ್‌ಡೇ ಪಾರ್ಟಿಯಲ್ಲಿದ್ದ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾಗಿ ಆರೋಪಿಸಲಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆ: ಯುವಕನೋರ್ವ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಯುವಕನನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಸಂದರ್ಭ ತನ್ನ ಜೀವ ಕಾಪಾಡಲು ಅಡ್ಡಾದಿಡ್ಡಿ ಓಡಿದ ಯುವಕ ಆಯತಪ್ಪಿ ಮಹಡಿಯ ಮೆಟ್ಟಿಲುಗಳಿ೦ದ ಬೀಳುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಘಟನೆಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದರು.ಬರ್ತಡೇ ಪಾರ್ಟಿ | ಮಾಡುತ್ತಿದ್ದವರ ಪೈಕಿ ಓರ್ವ ಪ್ರಜ್ವಲ್ ಎಂಬಾತನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಇದನ್ನು ನೋಡಿದ ಇನ್ನೋರ್ವ ಯುವಕ ಕರೆ ಕಟ್ ಮಾಡುವಂತೆ ಹೇಳಿದ್ದು ಕರೆ ಕಟ್ ಮಾಡಿದ್ದರು.ಆ ಕಡೆಯಿಂದ ಇದನ್ನು ಕೇಳಿಸಿಕೊಂಡ ಪ್ರಜ್ವಲ್ ಬಳಿಕ ಅಲ್ಲಿಗೆ ಬಂದು ಈ ಬಗ್ಗೆ ಪ್ರಶ್ನಿಸಿ ಹೊರಟು ಹೋಗಿದ್ದು ಸಲ್ಪ ಹೊತ್ತಿನ ಬಳಿಕ ತಲಾ‌ ತಂದು, ಫೋನ್ ಕರೆ ಕಟ್ ಮಾಡಲು ಹೇಳಿದ್ದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದರೆನ್ನಲಾಗಿದೆ.ಘಟನೆ ಕುರಿತು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿದ್ದಂತೆ ದ.ಕ.ಜಿಲ್ಲಾ ಪ್ರಭಾರ ಮೈ ಸಿ.ಬಿ.ರಿಷ್ಯಂತ್ ಅವರು ಈ ಕುರಿತು ವಿಚಾರಣೆ ಮಾಡಿ ಮಾಹಿತಿ ನೀಡುವಂತೆ ಪುತ್ತೂರು ಪೊಲೀಸರಿಗೆ ಸೂಚಿಸಿದ್ದರು.ಸಂಜೆ ವೇಳೆಗೆ ಪತ್ತೂರು ನಗರ ಪೊಲೀಸ್‌ ಠಾಣೆಗೆ ಆಗಮಿಸಿದ ಎಸ್ಪಿಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ಸೂಚನೆ ನೀಡಿದ್ದರು.ಅದರಂತೆ ರಾತ್ರಿ ವೇಳೆ ಪ್ರಕರಣ ದಾಖಲಾಗಿದೆ.

ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು: ದರ್ಬೆಯ ಹರ್ಷ ಶೋ | ರೂಮ್‌ನಲ್ಲಿ ಸೇಲ್ಸ್‌ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಬಪ್ಪಳಿಗೆ ಕರ್ಕು೦ಜದ ಗಾಡಿನ್  ದಿನಕರ್ ಎಂಬವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಜ್ವಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾನು ಹಾಗೂ ಗೆಳೆಯರಾದ ರಕ್ಷಿತ್, ಭವಿತ್, ಹೇಮಂತ್ ಮತ್ತು ಸಂದೇಶ್‌ ಎಂಬವರು ಸೇರಿ ಮಂಗಳಾ ಲಾಡ್ಜ್‌ನ ಎರಡನೇ ಅಂತಸ್ತಿನಲ್ಲಿರುವ ರೂಮ್ ನಂ.402ರಲ್ಲಿ ರಕ್ಷಿತ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ ಬಳಿಕ ಡಿನ್ನರ್ ಪಾರ್ಟಿ ಮಾಡಿದ್ದೆವು.ಆ ಸಮಯ ರಾತ್ರಿ ಸುಮಾರು 1 ಗಂಟೆಗೆ ನಾನು ಪರಿಚಯದ ಪ್ರಜ್ವಲ್ ಎಂಬಾತನಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ ಸಂದರ್ಭ ಸ್ನೇಹಿತ ರಕ್ಷಿತ್, ಫೋನ್ ಕಾಲ್ ಕಟ್ ಮಾಡು.ನೀನು ಹುಟ್ಟು ಹಬ್ಬದ ಪಾರ್ಟಿಗೆ ಬಂದವ, ಹುಚ್ಚೆ ನೀನು ಇಲ್ಲಿ ಏನು ಫೋನ್ ಮಾಡುತ್ತೀಯಾ ಎಂದು ಕೇಳಿದ್ದರು.ಆವೇಳೆ ನಾನು ಫೋನ್ ಕಾಲ್ ಕಟ್ ಮಾಡಿದ್ದೆ. ಇದನ್ನು ಕೇಳಿಸಿಕೊಂಡಿದ್ದ ಪ್ರಜ್ವಲ್ ಸ್ವಲ್ಪ ಸಮಯದ ನಂತರ ಏಕಾಏಕಿಯಾಗಿ ನಾವಿರುವ ರೂಮ್‌ಗೆ ಬಂದು, ನನಗೆ ಫೋನ್‌ನಲ್ಲಿ ಬೈದವರು ಯಾರು? ಎಂದು ಕೇಳಿದಾಗ, ನಿನಗೆ ಬೈದದ್ದಲ್ಲ. ಅದು ನನಗೆ ಫೋನ್ ಇಡುವಂತೆ ಜೋರು ಮಾಡಿರುವುದು ಎಂದು ನಾನು ಹೇಳಿದೆ.ಅನಂತರ ಅಲ್ಲಿಂದ ಹೊರಗಡೆ ಹೋದ ಪ್ರಜ್ವಲ್ ಸ್ವಲ್ಪ ಸಮಯದ ನಂತರ ವಾಪಸ್ ಕೈಯಲ್ಲಿ ಕತ್ತಿಯಂತಹ ಆಯುಧವನ್ನು ಹಿಡಿದುಕೊಂಡು ಬಂದು ಲಾಡ್ಜ್‌ನ ಬಾಲ್ಕನಿಯಲ್ಲಿ ರಕ್ಷಿತ್ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ನಿನಗೆ ಎಷ್ಟು ಧೈರ್ಯ, ನನ್ನನ್ನೇ ಕೀಳಾಗಿ ಮಾತನಾಡುತ್ತೀಯಾ? ಎಂದು ಹೇಳಿದಾಗ ಪ್ರಜ್ವಲ್‌ನ ಕೈಯಲ್ಲಿದ್ದ ಆಯುಧವನ್ನು ನೋಡಿದ ರಕ್ಷಿತ್ ಅಲ್ಲಿಂದ ಓಡಿ ಹೋಗಲು ಮುಂದಾದಾಗ ತಡೆದ ಪ್ರಜ್ವಲ್ ಆತನ ಮೇಲೆ ಹಲ್ಲೆ ಮಾಡಲು ಮುಂದಾದ ಆವೇಳೆ ರಕ್ಷಿತ್, ಪ್ರಜ್ವಲ್‌ ನಿಂದ ತಪ್ಪಿಸಿಕೊಂಡು ಕೆಳಗಡೆ ಓಡುವ ಸಂದರ್ಭ ಲಾಡ್‌ನ ಮೆಟ್ಟಿಲಿನಲ್ಲಿ ಕಾಲು ಜಾರಿ ಬಿದ್ದಿದ್ದು ಬಳಿಕ ಎದ್ದು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು.ಆ ಬಳಿಕ ಪ್ರಜ್ವಲ್, ನನ್ನ ತಂಟೆಗೆ ಯಾರು ಬಂದರೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ನನಗೆ ಮತ್ತು ಸ್ನೇಹಿತರಿಗೆ ಕೆಟ್ಟ ಪದಗಳಿಂದ ಬೈಯುತ್ತಾ ಬೆದುಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾಗಿ ಗಾಡ್ರಿನ್‌ ದಿನಕರ್, ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.ಕಾಲು ಜಾರಿ ಬಿದ್ದ ರಭಸಕ್ಕೆ ರಕ್ಷಿತ್ ಅವರ ಎದುರಿನ ಮೇಲ್ಬಾಗದ ಎರಡು ಹಲ್ಲು ತುಂಡಾಗಿರುತ್ತದೆ. ಗಾಯಗೊಂಡ ರಕ್ಷಿತ್ `ರನ್ನು ಭವಿತ್ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.ತನಗೆ ಹಾಗೂ ಸ್ನೇಹಿತರಿಗೆ ತೊಂದರೆ ನೀಡಿ ಬೆದರಿಕೆ ಹಾಕಿ, ರಕ್ಷಿತ್ ಮೇಲೆ ಹಲ್ಲೆ ಮಾಡಲು ಬಂದ ಪ್ರಜ್ವಲ್ ಬಗ್ಗೆ ಪೊಲೀಸ್ ದೂರು ನೀಡಲು ತೀರ್ಮಾನಿಸಿ ಜೂ.10ರಂದು ದೂರು ನೀಡಿರುವುದಾಗಿ ಗಾಲ್ವಿನ್ ದಿನಕರ್ ದೂರಿನಲ್ಲಿ ತಿಳಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಆರೋಪಿ ಪ್ರಜ್ವಲ್ ವಿರುದ್ಧ ಕಲಂ 341,504,506,324 ಐಪಿಸಿ ಹಾಗೂ 25(ಬಿ)(ಬಿ) ಆರ್ಮ್ಸ್ ಆಕ್ ನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಆರೋಪಿ ಪೊಲೀಸ್‌ ವಶಕ್ಕೆ: ಆರೋಪಿ ಪ್ರಜ್ವಲ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Recent News


Leave a Comment: