ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಮುಂದಿನ ಪ್ರಧಾನಿ ಆಗುವ ಅವಕಾಶ ಮಹಿಳೆಯ ಪಾಲಿಗೆ – ಕಾಲಜ್ಞಾನ ಭವಿಷ್ಯದಲ್ಲೇನಿದೆ

Posted by Vidyamaana on 2023-08-09 12:50:25 |

Share: | | | | |


ಮುಂದಿನ ಪ್ರಧಾನಿ ಆಗುವ ಅವಕಾಶ ಮಹಿಳೆಯ ಪಾಲಿಗೆ – ಕಾಲಜ್ಞಾನ ಭವಿಷ್ಯದಲ್ಲೇನಿದೆ

     ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಭವಿಷ್ಯವೊಂದು ಹೊರಬಿದ್ದಿದ್ದು ದೇಶದ ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಯ ಪಾಲಾಗಿದೆಯಂತೆ. ಹೌದು, ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಅವರು ಈ ಸ್ಪೋಟಕ ಭವಿಷ್ಯ ನುಡಿದಿದ್ದು, ಮುಂದಿನ ಬಾರಿ ಒಂದು ‘ಸ್ತ್ರೀ ಶಕ್ತಿ’ ಅಂದರೆ ಮಹಿಳೆಯೊಬ್ಬರಿಗೆ ದೇಶದ ಪ್ರಧಾನಿ ಆಗುವ ಯೋಗ ಒದಗಿ ಬರಲಿದೆಯಂತೆ.


ಈ ಭವಿಷ್ಯ ನಿಜವೇ ಆದಲ್ಲಿ ರಾಷ್ಟ್ರರಾಜಕಾರಣದಲ್ಲಿ ಇಂದಿರಾ ಗಾಂಧಿ ಬಳಿಕ ಸದ್ಯದಲ್ಲೇ ಮತ್ತೊಬ್ಬ ಮಹಿಳೆಗೆ ಪ್ರಧಾನಿ ಹುದ್ದೆಗೇರುವ ಆಗುವ ಯೋಗ ಒದಗಿಬರಲಿದೆ.


ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ನುಡಿದಿರುವ ಭವಿಷ್ಯದ ಪ್ರಕಾರ, ಮುಂದಿನ ಮಹಾಶಿವರಾತ್ರಿ ಬಳಿಕ ಒಬ್ಬಾಕೆ ಮಹಿಳೆ ಈ ದೇಶವನ್ನು ಆಳ್ತಾರೆ. ಮಹಾಶಿವರಾತ್ರಿ ಬಳಿಕ ರಾಷ್ಟ್ರರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆ ನಿಶ್ಚಿತ ಎನ್ನಲಾಗಿದೆ.


ಕಾಲಜ್ಞಾನ ಭವಿಷ್ಯದ ಪ್ರಕಾರ ಮುಂದಿನ ಬಾರಿ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೇರಲು ಸಾಧ್ಯವಿಲ್ಲವಂತೆ. ಆದರೆ ಮಹಾಶಿವರಾತ್ರಿ ಒಳಗೆ ಲೋಕಸಭೆ ಚುನಾವಣೆ ನಡೆದಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಧಿಕಾರಕ್ಕೇರುವ ಯೋಗ ಇದೆ ಎಂದು ಇದೇ ಸಂದರ್ಭದಲ್ಲಿ ಗುರೂಜಿ ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲಿದೆ ಎಂದು ಈ ಹಿಂದೆ ಡಾ. ಯಶ್ವಂತ ಗುರೂಜಿ ನುಡಿದಿದ್ದ ಭವಿಷ್ಯ ನಿಜವಾಗಿತ್ತು.


ಪ್ರಧಾನಿ ಹುದ್ದೆಗೇರಲಿರುವ ಆ ಮಹಿಳೆ ಯಾರು ಮತ್ತು ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬ ಗುಟ್ಟನ್ನು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಹೇಳಲಾಗುತ್ತದೆ ಎಂದು ಗುರೂಜಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನಾಚರಣೆ

Posted by Vidyamaana on 2023-12-07 20:38:11 |

Share: | | | | |


ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನಾಚರಣೆ


ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಇಂದು ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ ಗ್ರಾಹಕರ ಸೇವೆ ಮತ್ತು ಸಂತೃಪ್ತಿಯಲ್ಲಿ ಮನೆಮಾತಾಗಿದೆ.


ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 7, 8 ಮತ್ತು 9ರಂದು ಗ್ರಾಹಕರು ಮುಳಿಯ ಜ್ಯುವೆಲ್ಸ್‌ನಲ್ಲಿ ಖರೀದಿಸುವ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂ.ಗಳನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲಾಗುವುದು.

 ಗ್ರಾಹಕರು ಹೇಗೆ ಮುಖ್ಯವೋ ಹಾಗೆಯೇ ಸಂಸ್ಥಾಪಕರು ಕೂಡ ಮುಖ್ಯ. ಅವರ ಆಶಯಕ್ಕೆ ಅನುಗುಣವಾಗಿ ಸಂಸ್ಥೆಯನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ನಮ್ಮ ಧ್ಯೇಯ. ನಮ್ಮ ಲಾಭಾಂಶದಲ್ಲಿ ಒಂದು ಅಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ. ಆ ಮೂಲಕ ಅವರ ಸೇವಾ ಮನೋಭಾವವನ್ನು ಮುಂದುವ್ರರಿಸಲು ನಾವು ಬಧ್ಡರಾಗಿದ್ದೇವೆ.

-ಮುಳಿಯ ಜ್ಯುವೆಲ್ಸ್  ಸಂಸ್ಥೆಯ  ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.


ದಿವಂಗತ ಮುಳಿಯ ಕೇಶವ ಭಟ್ಟರು ಸ್ಥಾಪಿಸಿದ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಇಂದು ಬೃಹತ್ತಾಗಿ ಬೆಳೆದಿದೆ.

ಗಾರ್ಡನ್ ಮಾಡುವುದಾಗಿ ಹೇಳಿ ಸ್ಮಶಾನ ಮಾಡಿದ್ದಾರೆ: ಮುಂಡೂರು ಗ್ರಾಮಸ್ಥರಿಂದ ಶಾಸಕರಿಗೆ ದೂರು

Posted by Vidyamaana on 2023-10-16 09:04:25 |

Share: | | | | |


ಗಾರ್ಡನ್ ಮಾಡುವುದಾಗಿ ಹೇಳಿ ಸ್ಮಶಾನ ಮಾಡಿದ್ದಾರೆ: ಮುಂಡೂರು ಗ್ರಾಮಸ್ಥರಿಂದ ಶಾಸಕರಿಗೆ ದೂರು

ಪುತ್ತೂರು: ಮುಂಡೂರು ಗ್ರಾಮದ ಮುಂಡೂರು ಪೇಟೆಯ ಬಳಿ ಜನವಸತಿ ಪ್ರದೇಶದಲ್ಲಿ ಸ್ಮಶಾನವನ್ನು ನಿರ್ಮಾಣ ಮಾಡಿದ್ದು ಅದನ್ನು ತೆರವು ಮಾಡುವಂತೆ ಮುಂಡೂರು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ.


ಈ ಬಗ್ಗೆ ಆರೋಪ ಮಾಡಿದ ಗ್ರಾಮಸ್ಥರು ಇಲ್ಲಿ ತುಂಬಾ ಮನೆಗಳಿವೆ, ಮನೆಗಳ ಮಧ್ಯೆ ಸ್ಮಶಾನ ನಿರ್ಮಾಣ ಮಾಡಿದ್ದಾರೆ. ನಾವು ಇಲ್ಲಿ ಗಾರ್ಡನ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಗ್ರಾಪಂ ನವರು ತಿಳಿಸಿದ್ದರು, ನಾವು ಅದನ್ನು ಸತ್ಯ ಎಂದು ನಂಬಿದ್ದೆವು ಆದರೆ ಕೊನೇ ಗಳಿಗೆಯಲ್ಲಿ ಅದು ಸ್ಮಶಾನ ಎಂದು ಗೊತ್ತಾದಾಗ ನಾವು ಪ್ರತಿಭಟಿಸಿದ್ದೆವು ಆದರೆ ಏನೂ ಪ್ರಯೋಜನವಾಗಲಿಲ್ಲ, ಜನವಸತಿ ಪ್ರದೇಶದಿಂದ ಸ್ಮಶಾನವನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಈಗಾಗಲೇ ಸ್ಮಶಾನದ ಎಲ್ಲಾ ಕಾಮಗಾರಿಗಳೂ ಮುಗಿದಿದೆ ಇನ್ನು ಸ್ಥಳಾಂತರ ಮಾಡುವುದು ಹೇಗೆ? ಇಲ್ಲಿ ಸ್ಮಶಾನ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ನಿಮ್ಮ ಸ್ಥಳೀಯ ಗ್ರಾಪಂ ಸದಸ್ಯರಿಗೆ ಗೊತ್ತಿರಲೇಬೇಕಿತ್ತು. ಯಾಕೆ ನಿಮ್ಮ ಬಳಿ ಗಾರ್ಡನ್ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದರೋ ಗೊತ್ತಿಲ್ಲ. ಗ್ರಾಪಂ ಗೆ ಎಲ್ಲಾ ವಿಚಾರವೂ ಗೊತ್ತಿದ್ದೇ ಇಲ್ಲಿ ಸ್ಮಶಾನ ಮಾಡಲಾಗಿದೆ ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು. ನಮ್ಮ ಮಕ್ಕಳಿಗೆ ಇಲ್ಲಿನ ಸ್ಮಶಾನದಿಂದ ಭಯದ ವಾತಾವರಣವಿದೆ ದಯವಿಟ್ಟು ಏನಾದರೂ ಮಾಡಿ ಎಂದು ಮಹಿಳೆಯರು ಶಾಸಕರಲ್ಲಿ ವಿನಂತಿಯನ್ನು ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಕುಂದಾಪುರ : ಕಾಲೇಜ್ ಹುಡುಗಿಗೆ ನಜೀರ್ ನಿಂದ ಲೈಂಗಿಕ ಕಿರುಕುಳ - ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿನಿ, ವಿಡಿಯೋ ವೈರಲ್.

Posted by Vidyamaana on 2023-06-09 16:23:41 |

Share: | | | | |


ಕುಂದಾಪುರ : ಕಾಲೇಜ್ ಹುಡುಗಿಗೆ  ನಜೀರ್ ನಿಂದ ಲೈಂಗಿಕ ಕಿರುಕುಳ -  ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿನಿ, ವಿಡಿಯೋ ವೈರಲ್.

ಕುಂದಾಪುರ :ಇಂದು ಮುಂಜಾನೆ ವಿದ್ಯಾರ್ಥಿನಿಯೊಬ್ಬಳು ಬೀಜಾಡಿ - ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಿಂದ ಕಾಲೇಜಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ನಜೀರ್ ಆಕೆಗೆ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ್ದು ಆಕೆ ಕೂಗಿಕೊಂಡಿದ್ದಾಳೆ.ಕೂಡಲೇ ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದುಕೊಂಡಿದ್ದು ವಿಚಾರಿಸಿದಾಗ ವಿದ್ಯಾರ್ಥಿನಿ‌ ನಡೆದ ಘಟನೆ ವಿವರಿಸಿದ್ದಾಳೆ. ನೊಂದ ವಿದ್ಯಾರ್ಥಿನಿ ಆರೋಪಿ ನಜೀರನಿಗೆ ಚಪ್ಪಲಿ ಏಟು ನೀಡಿದ್ದು, ಘಟನೆಯ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.ಬಳಿಕ ಸ್ಥಳೀಯರು ಆರೋಪಿಯನ್ನು ಕುಂದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿಯಿಂದ ದೂರು ದಾಖಲು ಮಾಡಿಕೊಂಡಿದ್ದು,‌ ಆರೋಪಿಯ ವಿಚಾರಣೆ ನಡೆಸಿದ್ದಾರೆ.

ಅಮೆರಿಕದಲ್ಲಿ ಕಾರು ಅಪಘಾತ: ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಮೃತ್ಯು

Posted by Vidyamaana on 2024-05-22 14:53:49 |

Share: | | | | |


ಅಮೆರಿಕದಲ್ಲಿ ಕಾರು ಅಪಘಾತ: ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಮೃತ್ಯು

ಜಾರ್ಜಿಯಾ: ಕಾರು ಅಪಘಾತದಲ್ಲಿ ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಮೆರಿಕಾದ ಜಾರ್ಜಿಯಾದಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಆರ್ಯನ್ ಜೋಶಿ ಹಾಗೂ ಶ್ರೀಯಾ ಅವಸರಲ ಎಂಬ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅನ್ವಿ ಶರ್ಮ ಎಂಬ ವಿದ್ಯಾರ್ಥಿಯು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ಹೃದಯದಲ್ಲಿ ಮಡುಗಟ್ಟಿದ ನೋವು ಮೊಗದಲ್ಲಿ ಮುಗುಳ್ನಗೆ ತನ್ನ ಸಾವಿನ ಸುದ್ದಿಯನ್ನು ತಾನೇ ಘೋಷಿಸಿದ ಮಹಿಳೆ

Posted by Vidyamaana on 2023-11-17 20:00:56 |

Share: | | | | |


ಹೃದಯದಲ್ಲಿ ಮಡುಗಟ್ಟಿದ ನೋವು ಮೊಗದಲ್ಲಿ ಮುಗುಳ್ನಗೆ ತನ್ನ ಸಾವಿನ ಸುದ್ದಿಯನ್ನು ತಾನೇ ಘೋಷಿಸಿದ ಮಹಿಳೆ

ಪ್ರೀತಿಸುವ ಗಂಡ, ಮುದ್ದಾದ ಮಕ್ಕಳು, ಜೀವನವನ್ನು ಸಾಗಿಸಲು ಬೇಕಾದಷ್ಟು ಸಂಪಾದನೆ ಇನ್ನೇನು ಬೇಕು ಹೇಳಿ ಬದುಕಲ್ಲಿ. ಆದರೆ ಅಂತಹ ಸುಂದರ ಬದುಕಲ್ಲಿ ಕ್ಯಾನ್ಸರ್​ ಎನ್ನುವ ಬಿರುಗಾಳಿ ಬೀಸಿದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಯಾರಿಗೂ ಇರುವುದಿಲ್ಲ. ಆದರೆ ಈ ಮಹಿಳೆ ತನ್ನ ಸಾವಿನ ಸುದ್ದಿಯನ್ನು ತಾನೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.


ಎಂದೂ ತನಗೆ ಇಂಥಾ ಪರಿಸ್ಥಿತಿ ಬಂದುಬಿಡ್ತಲ್ಲಾ ಎಂದು ದೇವರನ್ನು ಶಪಿಸಿಲ್ಲ, ಇರುವಷ್ಟು ದಿನ ಇದ್ದ ಜೀವನವನ್ನು ಖುಷಿಯಿಂದಲೇ ಕಳೆದಿದ್ದಾರೆ ಈ ಮಹಿಳೆ. ಈ ಮಹಿಳೆ ಹೆಸರು ಕೇಸಿ ಮ್ಯಾಕ್​ಇಂಟೈರ್​ ಆಕೆ ಅಂಡಾಶಯದ ಕ್ಯಾನ್ಸರ್​ನಿಂದ ಭಾನುವಾರ ನಿಧನರಾಗಿದ್ದಾರೆ. ಆಕೆ ಸಾಯುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾವನ್ನು ಘೋಷಿಸಿ ಬಳಿಕ ಪ್ರೀತಿಪಾತ್ರರಿಗೆ ಕೊನೆಯ ವಿದಾಯವನ್ನು ಬರೆದಿದ್ದಳು.ನೀವು ಈ ಪೋಸ್ಟ್​ ಅನ್ನು ಓದುತ್ತಿದ್ದರು ನಾನು ಈ ಜಗತ್ತಿನಲ್ಲಿ ಇಲ್ಲ ಎಂದರ್ಥ, ನನಗೆ ಅಂಡಾಶಯ ಕ್ಯಾನ್ಸರ್​ ಇತ್ತು ಅದನ್ನು ನಾಲ್ಕನೇ ಹಂತವನ್ನು ತಲುಪಿತ್ತು. ಚಿಕಿತ್ಸೆ ಪಡೆದ ಬಳಿಕವೂ ಪುನರಾವರ್ತನೆಯಾಗಿದೆ.


ಈ ಐದು ತಿಂಗಳು ವರ್ಜೀನಿಯಾ, ರೋಡ್​ ಐಲೆಂಡ್​ ಹಾಗೂ ನ್ಯಾಯಾರ್ಕ್​ನಲ್ಲಿ ನನ್ನ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜತೆ ಕಳೆಯಲು ಅವಕಾಶ ದೊರೆತಿರುವುದಕ್ಕೆ ನಾನು ಧನ್ಯ.


ಆಸ್ಪತ್ರೆಗೆ ತೆರಳಿ ಯಾರಿಗೂ ತಿಳಿಯದಂತೆ ಬೇರೆಯವರ ವೈದ್ಯಕೀಯ ಸಾಲವನ್ನು ತಾವು ಪಾವತಿಸಲು ಚಾರಿಟಿಯನ್ನು ತೆರೆಯುವುದು ಆಕೆಯ ಕನಸಾಗಿತ್ತು, ಆ ಕನಸನ್ನು ಸಾಕಾರಗೊಳಿಸುತ್ತೇನೆ ಎಂದು ಮಹಿಳೆಯ ಪತಿ ತಿಳಿಸಿದ್ದಾರೆ. ಶುಕ್ರವಾರದವರೆಗೆ 1.09 ಕೋಟಿ ರೂ. ಸಂಗ್ರಹವಾಗಿದೆ.

ಕೇಸಿ ಅವರು ಮಕ್ಕಳು ಹಾಗೂ ವಯಸ್ಕರಿಗೆ ಪುಸ್ತಕಗಳನ್ನು ಪ್ರಕಟಿಸುವ ಪೆಂಗ್ವಿನ್ ರಾಂಡಮ್​ ಹೌಸ್​ನಲ್ಲಿ ಪ್ರಕಾಶಕರಾಗಿದ್ದರು.ಕೇಸಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನಾವು ನಿಮ್ಮನ್ನು ಕಳೆದುಕೊಂಡುಬಿಟ್ಟೆವು, ನೀನೆಲ್ಲೇ ಇದ್ದರೂ ನಮ್ಮೊಂದಿಗೆ ಇದ್ದೀಯ ಎನ್ನುವ ಭಾವನೆ ನಮ್ಮದು ಎಂದು ಪತಿ ಬರೆದುಕೊಂಡಿದ್ದಾರೆ.

Recent News


Leave a Comment: