ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ನಾಲ್ವರು ಪೊಲೀಸ್ ವಶ

Posted by Vidyamaana on 2024-05-16 07:23:16 |

Share: | | | | |


ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ನಾಲ್ವರು ಪೊಲೀಸ್ ವಶ

ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಬಿಜೈ ನ್ಯೂರೋಡ್‌ನ‌ ಮೊಹಮ್ಮದ್‌ ಅಮೀನ್‌ ರಾಫಿ (23), ಅಡ್ಡೂರಿನ ಮೊಹಮ್ಮದ್‌ ಸಿನಾನ್‌ ಅಬ್ದುಲ್ಲಾ (23), ಬಂದರಿನ ಮೊಹಮ್ಮದ್‌ ನೌಮಾನ್‌ (22) ಮತ್ತು ಬೋಳಿಯಾರ್‌ನ ಮೊಹಮ್ಮದ್‌ ಸಫೀಲ್‌ (23)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅವರಿಂದ 6,50,000 ರೂ ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್‌, ಕಾರು, ಡಿಜಿಟಲ್‌ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಅಂದಾಜು 14,85,500 ರೂ. ಎಂದು ಅಂದಾಜಿಸಲಾಗಿದೆ.

ಪುತ್ತೂರು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ: ಕಡಬ ಮೂಲದ ಪ್ರವೀಣ್ ಪೊಲೀಸ್ ವಶಕ್ಕೆ

Posted by Vidyamaana on 2023-07-19 15:11:32 |

Share: | | | | |


ಪುತ್ತೂರು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ: ಕಡಬ ಮೂಲದ ಪ್ರವೀಣ್ ಪೊಲೀಸ್ ವಶಕ್ಕೆ

ಪುತ್ತೂರು; ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನ ಕಲ್ಲಿಮಾರು ಎಂಬಲ್ಲಿ ನಡೆದಿದೆ.


ನಿನ್ನೆ ಬೆಳಿಗ್ಗೆ ಎಂದಿನಂತೆ ವಿದ್ಯಾರ್ಥಿನಿಯರಿಬ್ಬರು ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದಾಗ ದಾರಿಯಲ್ಲಿ ಬಂದ ಯುವಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬಂದ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಕಾಲೇಜಿನ ಉಪನ್ಯಾಸಕಿಗೆ ಮಾಹಿತಿ ನೀಡಿದ್ದಾರೆ.


ಇನ್ನು ಈ ಯುವಕ ಕಡಬ ತಾಲೂಕಿನ ಬೆಳಂದೂರು ಮೂಲದ ಪ್ರವೀಣ್ ಯಾನೆ ಸೀತಾರಾಮ ಎನ್ನಲಾಗಿದೆ. ಈ ಬಗ್ಗೆ ಕಾಲೇಜಿನ ಉಪನ್ಯಾಸಕಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

Posted by Vidyamaana on 2023-11-05 21:52:52 |

Share: | | | | |


ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

ಬೆಂಗಳೂರು : ಆನೇಕಲ್ ಮುಗಳೂರು ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಪ್ರಕರಣಕ್ಕೆ ಹಿಂದೆ ಬಿದ್ದ ಖಾಕಿ ಪಡೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆಂಟಿಯ ಪ್ರೀತಿಸಲು ಹೋಗಿ ಯುವಕ ಹೆಣವಾಗಿ ಹೋಗಿದ್ದಾನೆ..ಈ ಕೇಸ್​ನಲ್ಲಿ ಮೃತನ ಪ್ರೇಯಸಿಯೇ ಆತನನ್ನು ಕೊಂದಿರುವ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುಗಳೂರು ಹೊಳೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಸಿಕ್ಕಿದ್ದು, ಈ ಪ್ರಕರಣ ಆಸುಪಾಸಿನ ಜನರನ್ನು ಆತಂಕಕ್ಕೀಡು ಮಾಡಿತ್ತು. ಆದರೀಗ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದು, ಮೃತ ಯುವಕನನ್ನು ಕೋಲಾರ ಮಾಲೂರು ತಾಲೂಕಿನ ಅಯ್ಯಪ್ಪನಗರದ 28 ವರ್ಷದ ಚೇತನ್ ಎಂದು ಗುರುತಿಸಲಾಗಿದೆ. ಮಾಲೂರು ಸೊನ್ನಾಪುರ ಗ್ರಾಮದ ಸತೀಶ್(30), ಶಶಿ(29), ಶೋಭಾ(28) ಕೊಲೆ ಆರೋಪಿಗಳಾಗಿದ್ದಾರೆ.


ಕಳೆದ ತಿಂಗಳು 26ನೇ ತಾರೀಖು ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ವೇಳೆ ಸಮೀಪದ ಮುಗಳೂರು ಬ್ರಿಡ್ಜ್ ತಡೆಗೋಡೆ ಮೇಲೆ ರಕ್ತದ ಕಲೆಗಳಿರುವುದು ಪತ್ತೆಯಾಗಿತ್ತು. ಆದ್ರೆ ಅಂದು ಮೃತನ ಗುರುತು ಪತ್ತೆಯಾಗಿರಲಿಲ್ಲ. ಸರ್ಜಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇದಾದ ಬಳಿಕವೇ ಯುವಕನ ಮರ್ಡರ್ ಕಹಾನಿ ಬಯಲಿಗೆ ಬಂದಿದೆ.ಮೃತ ಚೇತನ್ ಗಂಡ ಬಿಟ್ಟಿದ್ದ ಮಹಿಳೆ ಜೊತೆ ಸಹಜೀವನ ಆರಂಭಿಸಿದ್ದು, ಕಳೆದ ಎಂಟು ತಿಂಗಳಿಂದ ಇಬ್ಬರೂ ಒಟ್ಟಿಗಿದ್ದರೆನ್ನಲಾಗಿದೆ. ಈ ನಡುವೆ ಚೇತನ್ ಮೂಲಕ ಸತೀಶ್ ಪರಿಚಯವಾಗಿದ್ದು, ಸಿರಿವಂತ ಸತೀಶ್ ಮೇಲೆ ಶೋಭಾ ಕಣ್ಣು ಬಿದ್ದಿದೆ. ಕೆಲವೇ ದಿನಗಳಲ್ಲಿ ಶೋಭಾಗಾಗಿ ಆತ ಲಕ್ಷ ಲಕ್ಷ ಖರ್ಚು ಮಾಡಿದ್ದ. 25 ಲಕ್ಷ ಖರ್ಚು ಮಾಡಿದ್ದ ಆತ ಶೋಭಗಾಗಿ ಬ್ಯೂಟಿ ಪಾರ್ಲರ್ ಆರಂಭ ಮಾಡಿದ್ದ. ಆದರೆ ಇಬ್ಬರ ನಡುವಿನ ಈ ಆಪ್ತತೆಗೆ ಚೇತನ್ ಅಡ್ಡಿಯಾಗಿದ್ದ.


ತಮ್ಮ ಈ ಸಂಬಂಧಕ್ಕೆ ಅಡ್ಡಿಯಾದ ಚೇತನ್​ ಆಟ ಮುಗಿಸಲು ಶೋಭಾ ಪ್ಲಾನ್ ಮಾಡಿದ್ದಾಳೆ. ನಂತರ ಒಂದು ದಿನ ಎಣ್ಣೆ ಪಾರ್ಟಿ ನಡೆದಿದೆ. ಹೊಸಕೋಟೆ ಐಶ್ವರ್ಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಚೇತನ್‍ನನ್ನು ಮಚ್ಚಿನಿಂದ ಹೊಡೆದು ಮುಗಳೂರು ಹೊಳೆಗೆ ಎಸೆದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಈ ಹಿಂದೆ ಅತ್ತಿಬೆಲೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ  ಶೋಭಾ, ಈ ಬಾರಿ ತನ್ನ ಮಾಸ್ಟರ್ ಪ್ಲಾನ್ ನಿಂದಾಗಿ ಇಬ್ಬರ ಭವಿಷ್ಯ ಹಾಳು ಮಾಡಿದ್ದಾಳೆ. ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

Posted by Vidyamaana on 2023-11-04 09:06:48 |

Share: | | | | |


ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

ಪುತ್ತೂರು : ಪುತ್ತೂರು ಸುತ್ತಮುತ್ತಲ ಗ್ರಾಮ ಗಳಲ್ಲಿ ನ 3 ರಂದು ರಾತ್ರಿ  ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದು,ಆರ್ಯಾಪು ಗ್ರಾಮದ ಕುರಿಯ ಅಜಲಾಡಿ ನಿವಾಸಿ ರುಖ್ಯ  ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.


ಸಿಡಿಲ ಆಘಾತಕ್ಕೆ ಮನೆಯ ವಯರಿಂಗ್‌ ಸಂಪೂರ್ಣ ಕೆಟ್ಟುಹೋಗಿದೆ.ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಆರ್ಯಾಪು ಗ್ರಾ.ಪಂ. ಸದಸ್ಯ ಯಾಕುಬ್ ಸಾಹೇಬ್ ಭೇಟಿ ನೀಡಿದರು

ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

Posted by Vidyamaana on 2024-03-15 20:41:36 |

Share: | | | | |


ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಇನ್ನು‌ ಬಿಜೆಪಿ ಸೇರ್ಪಡೆಗೊಂಡಿಲ್ಲ ಎನ್ನುವುದು ಇದೀಗ ದೃಢಗೊಂಡಿದೆ.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಗೌಪ್ಯ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, "ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ಮಾಧ್ಯಮ ಪ್ರಚಾರ" ಎಂದು ಹೇಳಿದರು.

ಈ ಮೂಲಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಇನ್ನು ಒಂದು ಒಮ್ಮತಕ್ಕೆ ಬರಲು ವಿಫಲವಾಗಿದೆ ಎನ್ನುವುದು ದೃಢಗೊಂಡಿದೆ. ಎರಡು ಬಣಗಳು ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಪುತ್ತಿಲ ವಿಚಾರವಾಗಿ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.


ಉಳಿದಂತೆ ಚುನಾವಣೆ ಬಗ್ಗೆಯೇ ಮಾತುಕತೆ ನಡೆಯಿತು.

ಯುವತಿ ನಾಪತ್ತೆ

Posted by Vidyamaana on 2024-02-29 04:29:14 |

Share: | | | | |


ಯುವತಿ ನಾಪತ್ತೆ

ಕಾರ್ಕಳ; ಮನೆಯಿಂದ ಹೊರಗೆ ಹೋದ ಯುವತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದಲ್ಲಿ ನಡೆದಿದೆ. ಅಸಲ್ ಜಡ್ಡು ನಿವಾಸಿ ಪ್ರಮೀಳಾ (24) ಫೆಬ್ರವರಿ 24 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುವ ಪ್ರಮೀಳಾ, ಕನ್ನಡ, ತುಳು, ಇಂಗ್ಲೀಷ್ ಹಾಗೂ ಕುಡುಬಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ A.: 08253-271100, ಸಂಖ್ಯೆ 9480805470, 9480805471, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು A.: 08258-231083, .: 9480805435, ಜಿಲ್ಲಾ ಪೊಲೀಸ್‌ ಕಚೇರಿ ದೂ.ಸಂಖ್ಯೆ: 0820-2534777 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಜೆಕಾರು ಪೊಲೀಸ್‌ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent News


Leave a Comment: