ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಮೈಮೇಲೆ ಪ್ರೇತ ಬರುವ ನೆಪ: 3 ತಿಂಗಳಿನಿಂದ ಕತ್ತಲ ಕೋಣೆಯಲ್ಲಿ ದಿಗ್ಭಂಧನವಾಗಿದ್ದ ಮಹಿಳೆಯ ರಕ್ಷಣೆ

Posted by Vidyamaana on 2024-01-04 11:36:22 |

Share: | | | | |


ಮೈಮೇಲೆ ಪ್ರೇತ ಬರುವ ನೆಪ: 3 ತಿಂಗಳಿನಿಂದ ಕತ್ತಲ ಕೋಣೆಯಲ್ಲಿ ದಿಗ್ಭಂಧನವಾಗಿದ್ದ ಮಹಿಳೆಯ ರಕ್ಷಣೆ

ಪುತ್ತೂರು: ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ಕೊಠಡಿಯೊಂದರಲ್ಲಿ ದಿಗ್ಭಂಧನದಲ್ಲಿರಿಸಿದ್ದ ವಿವಾಹಿತ ಮಹಿಳೆಯೊಬ್ಬರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ರಕ್ಷಿಸಿದ್ದಾರೆ. ಮಹಿಳೆಯನ್ನು ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಶ್ರೀಪತಿ ಹೆಬ್ಬಾರ್ ಎಂಬುವರ ಪತ್ನಿಯನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಕಳೆದ 3 ತಿಂಗಳಿನಿಂದ ದಿಗ್ಬಂಧನದಲ್ಲಿರಿಸಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನಾಮಧೇಯ ಕರೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮೇಲ್ವಿಚಾರಕರ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದಾಗ ನಿರಾಕರಿಸಿದ್ದರು. ಬಳಿಕ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.ಶ್ರೀಪತಿ ಹೆಬ್ಬಾರ್ ಅವರ ಮನೆಯಲ್ಲಿದ್ದ ಅವರ ಸಹೋದರಿಯನ್ನು ಅಧಿಕಾರಿಗಳು ವಿಚಾರಿಸಿದಾಗ ಆಕೆಗೆ ಪ್ರೇತ ಮೈಮೇಲೆ ಬರುವ ಕಾರಣಕ್ಕಾಗಿ ದಿಗ್ಭಂಧನದಲ್ಲಿಸಿರುವುದಾಗಿ ತಿಳಿಸಿದ್ದರು. ಅಧಿಕಾರಿಗಳು ಶ್ರೀಪತಿ ಹೆಬ್ಬಾರ್​​ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರೂ, ಅವರು ಕರೆ ಸ್ವೀಕರಿಸಿಲ್ಲ ಎಂಬ ಮಾಹಿತಿ ಲಭಿಸಿದೆ.


ದಿಗ್ಭಂಧನದಲ್ಲಿದ್ದ ಮಹಿಳೆಯ ಗಂಡ ಮತ್ತು ಆತನ ಸಹೋದರಿ ಇದೇ ಮನೆಯಲ್ಲಿ ವಾಸವಾಗಿದ್ದು, ಮಹಿಳೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಹಾಕಿರುವ ಬಗ್ಗೆ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.,ಪ್ರೇತ ಮೈಮೇಲೆ ಬರುವ ನೆಪ?: ಅಡುಗೆ ವೃತ್ತಿ ಮಾಡುತ್ತಿದ್ದ ಶ್ರೀಪತಿ ಹೆಬ್ಬಾರ್​ ಅವರು ಬಂಟ್ವಾಳ ತಾಲೂಕಿನ ವಿಟ್ಲ ಮೂಲದ ಮಹಿಳೆಯನ್ನುಅಂತರ್ಜಾತಿ ವಿವಾಹವಾಗಿದ್ದರು. ಈ ಅವರ ಮೈಮೇಲೆ ಪ್ರೇತ ಬರುತ್ತದೆ ಎಂಬ ಕಾರಣದ ಹಿನ್ನೆಲೆಯಲ್ಲಿ ಮನೆಯ ಪಕ್ಕದ ಗೂಡಿನಂತಿರುವ ಕೊಠಡಿಯಲ್ಲಿ ಕೂಡಿ ಹಾಕಿ ದಿನವೊಂದಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಚಹಾ ಮತ್ತು ಬಿಸ್ಕೆಟ್​ ಮಾತ್ರ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಈ ರೀತಿ ದಿಗ್ಭಂಧನದಲ್ಲಿರಿಸಲಾಗಿತ್ತು. ಸುದೀರ್ಘ ಸಮಯದಿಂದ ಸ್ನಾನ ಮಾಡಿಸದ ರೀತಿ, ತೀರಾ ಅಶಕ್ತರಾಗಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ವಿಚಾರಣೆಯ ವೇಳೆ ದೊರಕಿದೆ.

ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

Posted by Vidyamaana on 2023-10-11 14:36:06 |

Share: | | | | |


ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

ಬೆಳ್ತಂಗಡಿ: ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಆಕ್ಟೋಬರ್ 10 ರಂದು ಸಂಜೆ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜಿನ ಭಜನಾ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾಗ ವ್ಯಕ್ತಿಯೊರ್ವ ಸ್ಥಳಕ್ಕೆ ತೆರಳಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಮುಂಡೂರಿನ ಆನಂದ ಆಚಾರ್ಯ (38) ಎಂಬಾತನು ಅಕ್ಟೋಬರ್ 10 ರಂದು ಸಂಜೆ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆಸುತ್ತಿದ್ದರು,ಪ್ರವಾಸಿಗರು ಕೂಡ ಇದ್ದರು. ಈ ಸಂದರ್ಭ ಅಲ್ಲಿಗೆ ತೆರಳಿ ಮಚ್ಚು ತೋರಿಸಿ, ಬೊಬ್ಬೆ ಹಾಕಿ ಬೆದರಿಕೆ ಹಾಕಿದ್ದು ಕೂಡಲೇ ಸ್ಥಳಿಯರು ವೇಣೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೋಲೀಸರು ಆಗಮಿಸಿ ಮಚ್ಚನ್ನು ವಶಪಡಿಸಿಕೊಂಡು.ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

Posted by Vidyamaana on 2023-12-07 13:41:00 |

Share: | | | | |


ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್‌: ಹೈದರಾಬಾದಿನ ಎಲ್‌ಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅದ್ದೂರಿ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಹಾಗೂ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಉಪಸ್ಥಿತರಿದ್ದರು.


ಸುಮಾರು ಒಂದು ಲಕ್ಷ ಮಂದಿ ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪುತ್ತೂರು ಪುಡಾ ಅಧ್ಯಕ್ಷ, ಸದಸ್ಯರ ಪದಗ್ರಹಣ ಕಚೇರಿ ಉದ್ಘಾಟನೆ

Posted by Vidyamaana on 2024-03-17 21:43:00 |

Share: | | | | |


ಪುತ್ತೂರು ಪುಡಾ ಅಧ್ಯಕ್ಷ, ಸದಸ್ಯರ ಪದಗ್ರಹಣ ಕಚೇರಿ ಉದ್ಘಾಟನೆ

ಪುತ್ತೂರು: ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಮತ್ತು ಸದಸ್ಯರಾದ ರೈ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ್‌ನ ನಿಹಾಲ್‌ ಪಿ ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌, ನಗರಸಭೆ ಮಾಜಿ ಸದಸ್ಯ ಅನ್ವರ್‌ಕಾಸಿಂ ಅವರ ಅಧಿಕಾರ ಸ್ವೀಕಾರ ಮತ್ತು ಕಚೇರಿ ಉದ್ಘಾಟನೆ ಕಾರ್ಯಕ್ರಮ ಮಾ. 16ರಂದು ಪುತ್ತೂರು ಪುಡಾ ಕಚೇರಿಯಲ್ಲಿ ನಡೆಯಿತು. ನಗರಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಶ್ ಎಂ ಅವರು ನೂತನ ಅಧ್ಯಕ್ಷ, ಸದಸ್ಯರಿಗೆ ಅಧಿಕಾರ ಚಲಾವಣೆಯ ಕುರಿತು ದಾಖಲೆ ಪತ್ರಗಳಿಗೆ ಸಹಿ ಪಡೆದರು.ಕಚೇರಿಯ ದೀಪ ಪ್ರಜ್ವಲನೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುಡಾದಲ್ಲಿ ಸರಕಾರ ಮತ್ತು ಕಾನೂನಿನ ತೊಡಕುಗಳಿವೆ ಅದರಲ್ಲೂ ಪುಡಾದಲ್ಲೂ ತೊಂದರೆ ಇದೆ. ಜನರು ಇಲ್ಲಿಗೆ ಬಂದು ಅಲೆದಾಡುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಪುಡಾದ ನೂತನ ಅಧ್ಯಕ್ಷ ಮತ್ತು ಸದಸ್ಯರು ಇಲ್ಲಿಗೆ ಯಾರು ಬಡವ ಬಂದರೂ ಅವರ ಸಮಸ್ಯೆಯನ್ನು ಎಡೆಂಡ್ ಮಾಡುವ ಕೆಲಸ ಆಗಬೇಕು. ಬೋಕರ್‌ಗಳಿಗೆ ಅವಕಾಶ ಕೊಡುವುದನ್ನು ಕಡಿಮೆ ಮಾಡಿ. ಭ್ರಷ್ಟಾಚಾರ ರಹಿತವಾಗಿ ಪುಡಾ ಕೆಲಸ ಮಾಡಬೇಕು. ಜನರಿಗೆ ಉತ್ತಮ ಸ್ಪಂದನೆ ಸಿಗಬೇಕು. ಸಮಸ್ಯೆಗಳಿಗೆ ಕಾನೂನಿನಲ್ಲಿ ಅದಕ್ಕೆ ಉಪ ಕಾನೂನು ಇದ್ದೇ ಇರುತ್ತದೆ. ಕೆಲವು ಕಡೆ ಕನ್ವರ್ಷನ್, ಖಾತೆ ಮಾಡಲು ದೊಡ್ಡ ಸಮಸ್ಯೆ, ಕಾನೂನ್ನು ಉಲ್ಲಂಘನೆ ಮಾಡಿ ಕೊಡಿ ಎಂದು ಹೇಳುವುದಿಲ್ಲ. ಯಾವುದೇ ರೀತಿಯ ಮನೆ ಕಟ್ಟಲು ತೊಂದರೆ ಆಗದಂತೆ ಕಾನೂನಿನ ಚೌಕಟಿನಲ್ಲಿ ನೋಡಿ. ಕೆಲವೊಂದು ವಿಚಾರಗಳಿಗೆ, ಸಮಸ್ಯೆಗಳಿಗೆ ಸಂಬಂಧಿಸಿ ಮೂಡಬಿದ್ರೆ, ಮಂಗಳೂರು ತರದ ಕಾನೂನನ್ನು ಪುತ್ತೂರಿಗೆ ಅನ್ವಯ ಮಾಡಬೇಕು. ಇದಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಅದನ್ನು ಸರಕಾರದಿಂದ ಮಾಡಿ ಕೊಡಿಸುವ ಕೆಲಸ ಮಾಡುತ್ತೇನೆ. ಬಡವರಿಗೆ ಸ್ಪಂದನೆ ಮಾಡುವಾಗ ಒಂದು ನಿಮಿಷ ಹಿಂದೆ ಮುಂದೆ ನೋಡಬೇಡಿ ಎಂದರು

ಶಾಸಕರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ:

ಪುಡಾ ನೂತನ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಮಾತನಾಡಿ ಶಾಸಕರು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕೆಂದು ಹೇಳಿದ್ದಾರೆ. ನಾನು ಇಲ್ಲಿ ತನಕ ಭ್ರಷ್ಟಾಚಾರ ಮಾಡಿಲ್ಲ. ಇನ್ನು ಮಾಡುವುದೂ ಇಲ್ಲ ಎಂಬ ಭರವಸೆ ನೀಡುತ್ತೇನೆ ಎಂದ ಅವರು ಈಗಾಗಲೇ ಕಟ್ ಕನ್ವರ್ಷನ್, ಸಿಂಗಲ್ ಲೇಔಟ್ ಸಮಸ್ಯೆಗಳನ್ನು ಸರಿ ಮಾಡಲು ಹಲವು ಮಂದಿಯ ಮನವಿ ಬಂದಿದೆ. ಕೆಲವರಿಗೆ ಪುಡಾ ಕಚೇರಿಗೆ ಹೋಗಿ ಬಂದಾಗ ಕಣ್ಣು, ಕಿವಿ, ಮೂಗಲ್ಲಿ ಬೆಂಕಿ ಬರುತ್ತದೆ ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಬೇಕು. ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶ. ಶಾಸಕರ ನಿರೀಕ್ಷೆಯಂತೆ ಜನರಿಗೆ ಸಹಾಯ ಮಾಡುವ ಉದ್ದೇಶ ನನಗೆ ಮತ್ತು ಮೂವರು ಸದಸ್ಯರಿಗೂ ಇದೆ. ನಮಗೆ ಸಾರ್ವಜನಿಕರ ಸಹಕಾರವೂ ಬೇಕಾಗಿದೆ ಎಂದರು.ಈ ಸಂದರ್ಭ ಭಾಸ್ಕರ್ ಕೋಡಿಂಬಾಳ ಅವರ ಪತ್ನಿ ಉಪ್ಪಿನಂಗಡಿ ಪುಳೀತ್ತಡಿ ಸರಕಾರಿ ಶಾಲೆಯ ಶಿಕ್ಷಕಿ ಶುಭಲತಾ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹ‌ರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾರದಾ ಅರಸ್‌, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಅಮಳ ರಾಮಚಂದ್ರ, ಜೋಕಿಂ ಡಿಸೋಜ, ಜಿ.ಪಂ ಮಾಜಿ ಸದಸ್ಯ ಎಮ್.ಎಸ್ ಮಹಮ್ಮದ್, ಕೆಪಿಸಿಸಿಯ ಹೇಮನಾಥ ಶೆಟ್ಟಿ ಕಾವು, ಕಾಂಗ್ರೆಸ್ ಮುಖಂಡರಾದ ಅಮಳರಾಮಚಂದ್ರ, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಎಂ.ಪಿ.ಅಬೂಬಕ್ಕ‌ರ್, ದೀಪಕ್ ಬೊಳುವಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌, ಉಪಾಧ್ಯಕ್ಷ ರಾಜಶೇಖರ್ ಜೈನ್, ಪ್ರಸಾದ್ ಕೌಶಲ್ ಶೆಟ್ಟಿ, ವಿಶಾಲಾಕ್ಷಿ ಬನ್ನೂರು, ಗಣೇಶ್ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಹತ್ ಹಾಗೂ ಎಸ್ ವೈ ಎಸ್ ಪಡೀಲ್ ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣಿ

Posted by Vidyamaana on 2023-04-02 10:46:05 |

Share: | | | | |


ಕರ್ನಾಟಕ ಮುಸ್ಲಿಂ ಜಮಾಹತ್ ಹಾಗೂ ಎಸ್ ವೈ ಎಸ್ ಪಡೀಲ್ ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣಿ

ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾತ್ ಹಾಗೂ ಎಸ್ ವೈ ಎಸ್ ಪಡೀಲ್   ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣಿ ಕಾರ್ಯಕ್ರಮವು ಮಾ 31ರಂದು ಪಡೀಲ್ ನಲ್ಲಿ ನಡೆಯಿತ್ತು.  ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ದುವಾ ನೆರವೇರಿಸಿದರು.

ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

Posted by Vidyamaana on 2024-02-08 17:52:07 |

Share: | | | | |


ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

ಪುತ್ತೂರು: ಸತ್ಯಜಿತ್ ಸುರತ್ಕಲ್ ರವರಿಗೆ ಲೋಕಸಭಾ ಚುನಾವಣೆಗೆ ಭಾಜಪದಿಂದ ದ.ಕ ಜಿಲ್ಲೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಫೆ.25ರಂದು ಜಿಲ್ಲಾ ಮಟ್ಟದ ಆಗ್ರಹ ಸಭೆಯ ಪ್ರಯುಕ್ತ ಫೆ.9ರಂದು ಪುತ್ತೂರು ರೋಟರಿ ಕ್ಲಬ್ ಮನಿಶಾ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು 5.30ಕ್ಕೆ ನಡೆಯಲಿದೆ ಎಂದು ಪುತ್ತೂರು ತಾಲೂಕು ಸತ್ಯಜಿತ್‌ ಸುರತ್ಕಲ್ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

Recent News


Leave a Comment: