ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ಸುಳ್ಳು ಭರವಸೆಯನ್ನು ಕೊಡುವುದಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆ: ಅಶೋಕ್ ರೈ

Posted by Vidyamaana on 2023-05-04 11:51:21 |

Share: | | | | |


ಸುಳ್ಳು ಭರವಸೆಯನ್ನು ಕೊಡುವುದಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆ: ಅಶೋಕ್ ರೈ

ಪುತ್ತೂರು: ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಮತ್ತು ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು.

ಮಲ್ಪೆ: ಲಾರಿಯೊಳಗೆ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು

Posted by Vidyamaana on 2023-09-14 16:12:25 |

Share: | | | | |


ಮಲ್ಪೆ: ಲಾರಿಯೊಳಗೆ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು

ಮಲ್ಪೆ, ಸೆ.14: ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುತ್ತಿದ್ದ ವೇಳೆ ಮೈಮೇಲೆ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.


ಮೃತರನ್ನು ಒರಿಸ್ಸಾದ ಕಾರ್ಮಿಕರಾದ ಬಾಬುಲ್ಲ(35) ಮತ್ತು ಭಾಸ್ಕರ (35) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ನಿರ್ಮಾಣವಾಗುತ್ತಿರುವ ಮನೆ ಯೊಂದಕ್ಕೆ ಕಂಟೈನರ್ ಲಾರಿಯಲ್ಲಿ ತಂದಿದ್ದ ಗ್ರಾನೈಟ್ ಇಳಿಸುತ್ತಿದ್ದಾಗ ಲಾರಿಯೊಳಗೆ ಗ್ರಾನೈಟ್ ಜಾರಿ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.


ಗಂಭೀರವಾಗಿ ಗಾಯಗೊಂಡ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ

ಸೀಟೂ ಹೋಯ್ತು ನೋಟೂ ಹೋಯ್ತು..– ಇದು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ದುಡ್ಡು ಕಳೆದುಕೊಂಡವರ ವ್ಯಥೆ

Posted by Vidyamaana on 2023-05-16 23:26:35 |

Share: | | | | |


ಸೀಟೂ ಹೋಯ್ತು ನೋಟೂ ಹೋಯ್ತು..– ಇದು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ದುಡ್ಡು ಕಳೆದುಕೊಂಡವರ ವ್ಯಥೆ

ಪುತ್ತೂರು: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ರಚನೆಗೆ ಸರ್ಕಸ್ ಮುಂದುವರಿತ್ತಿರುವುದರ ನಡುವೆ ಇಲ್ಲಿ ಪುತ್ತೂರಿನಲ್ಲಿ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತೆ ಸೋಲಿನ ಪೆಟ್ಟು ನೀಡಿದ ಅರುಣ್ ಪುತ್ತಿಲ ಮತ್ತವರ ಹಿಂದುತ್ವದ ಸೇನೆಯ ರಣರೋಚಕ ಕಥೆಗಳು ಪತ್ತೂರು ಆಸುಪಾಸಿನವರ ಬಾಯಲ್ಲಿ ನಿತ್ಯ ನಲಿದಾಡುತ್ತಿದೆ.

   ಪುತ್ತೂರಿನಲ್ಲಿ ಬಿಜೆಪಿ  ಮುಖಂಡರ ಆತ್ಮವಿಶ್ವಾಸ ಎಷ್ಟರಮಟ್ಟಿಗೆ ಇತ್ತೆಂದರೆ ಕೌಂಟಿಂಗ್ ನಡೆಯುವ ದಿನದವರೆಗೂ ಅವರೆಲ್ಲರೂ ಬಿಜೆಪಿ ಗೆಲ್ಲುತ್ತದೆ ಇಲ್ಲವೇ ಎರಡನೇ ಸ್ಥಾನ ಪಡೆಯುತ್ತದೆ ಮತ್ತು ಪುತ್ತಿಲ ಅವರಿಗೆ 15 ಸಾವಿರಕ್ಕಿಂತ ಹೆಚ್ಚಿನ ಮತಗಳು ಬೀಳುವುದಿಲ್ಲ ಎಂಬ ವಿಶ್ವಾಸದಲ್ಲೇ ಇದ್ರು. ಆದರೆ ಅಂತಿಮವಾಗಿ ಪುತ್ತಿಲ ಅವರು 63 ಸಾವಿರದಷ್ಟು ಮತಗಳನ್ನು ಪಡೆದು ಅಲ್ಪ ಅಂತರದಿಂದ ಅಶೋಕ್ ಕುಮಾರ್ ರೈ ಎದುರು ಸೋತಿದ್ದು ಬಿಜೆಪಿ  ನಾಯಕರಿಗೆ ಬಿದ್ದ ಮೊದಲ ಪೆಟ್ಟಾಗಿತ್ತು.

     ಇದಕ್ಕಿಂತಲೂ ವಿಶೇಷವೆಂದ್ರೆ ಈ ಸಲ ಪುತ್ತೂರಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಭರ್ಜರಿ ಬೆಟ್ಟಿಂಗ್ ನಡೆದಿತ್ತು ಎನ್ನುವುದು. ಕರಾವಳಿಯಲ್ಲಿ ಚುನಾವಣಾ ಬೆಟ್ಟಿಂಗ್ ರಾಜ್ಯದ ಬೇರೆ ಕಡೆಗಳಲ್ಲಿ ಇರುವಂತೆ ಇಲ್ಲ. ಆದರೆ ಈ ಬಾರಿ ಪುತ್ತೂರಿನಲ್ಲಿ ರಣ ರೋಚಕ ಫೈಟ್ ಇದ್ದ ಕಾರಣ ಭರ್ಜರಿಯಾಗಿಯೇ ಬೆಟ್ಟಿಂಗ್ ನಡೆದಿದೆ ಎನ್ನುವುದು ಇದೀಗ ಹೊರಬೀಳುತ್ತಿರುವ ಲೇಟೆಸ್ಟ್ ಸುದ್ದಿಯಾಗಿದೆ.

     ಅದರಂತೆ ಪುತ್ತಿಲ ಪರ ಇದ್ದವರು ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯುತ್ತದೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಇದಕ್ಕರ ಎದುರಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗೋದಿಲ್ಲ ಎಂದು ಬಿಜೆಪಿ ಪರ ಇದ್ದವರು ಬೆಟ್ ಕಟ್ಟಿದ್ದಾರೆ. ಈ ಬೆಟ್ಟಿಂಗ್ ಮತದಾನ ನಡೆದ ಬಳಿಕ ಇನ್ನಷ್ಟು ಬಿರುಸಾಗಿಯೇ ನಡೆದಿದೆ! ಎಲ್ಲಿಯವರೆಗೆ ಅಂದ್ರೆ ಖಾಸಗಿ ಬ್ಯಾಂಕಿನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಏಳು ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಪುತ್ತೂರಿನಲ್ಲಿ ಗೌಪ್ಯವಾಗೇನೂ ಉಳಿದಿಲ್ಲ!. ಇವರು ಮಾತ್ರವಲ್ಲದೇ ತಾಲೂಕು ಬಿಜೆಪಿ ಪದಾಧಿಕಾರಿಯೊಬ್ಬರು ತನ್ನ ಮನೆಯ ಒಡವೆಗಳನ್ನೆಲ್ಲಾ ಅಡವಿಟ್ಟು ಸುಮಾರು 50 ಲಕ್ಷ ರೂಪಾಯಿಗಳಷ್ಟು ಹಣವನ್ನು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ಕಳ್ಕೊಂಡು ಇದೀಗ ಪೆಚ್ಚುಮೋರೆ ಹಾಕಿಕೊಂಡು ಓಡಾಡ್ತಿದ್ದಾರೆ ಎನ್ನುವ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ! ಇನ್ನೊಬ್ಬ ಮಹಾಶಯರು ಹೊಸ ಉದ್ಯಮ ಪ್ರಾರಂಭಿಸಲೆಂದು ತೆಗೆದಿಟ್ಟಿದ್ದ 2.5ಕೋಟಿ ರೂಪಾಯಿಗಳನ್ನು ಬಿಜೆಪಿ ಪರ ಬೆಟ್ ಕಟ್ಟಿ ಇದೀಗ ತಲೆ ಮೇಲೆ ಟವಲ್ ಹಾಕ್ಕೊಂಡು ಕುಳಿತುಕೊಳ್ಳೋ ಪರಿಸ್ಥಿತಿಗಿಳಿದಿದ್ದಾರಂತೆ! ಹೀಗೆ ಈ ಸಲ ಏನಿಲ್ಲವೆಂದರೂ ಪುತ್ತೂರಿನಲ್ಲಿ ಬಿಜೆಪಿ –ಅರುಣ್ ಪುತ್ತಿಲ ಕಾದಾಟದಲ್ಲಿ ಫಲಿತಾಂಶದ ಪರ-ವಿರೋಧವಾಗಿ ಸುಮಾರು 75 ಕೋಟಿ ರೂಪಾಯಿಗಳಷ್ಟು ಮೊತ್ತದ ಭಾರೀ ಬೆಟ್ಟಿಂಗ್ ನಡೆದಿದೆ ಎನ್ನುವುದು ತಾಲೂಕಿನ ಮಟ್ಟಿಗೆ ಒಂದು ದಾಖಲೆಯೇ ಸರಿ.

   ಮತದಾನಕ್ಕೆ ಎರಡು ದಿನ ಇರುವಾಗ ಶುರುವಾದ ಈ ಬೆಟ್ಟಿಂಗ್ ಕೌಂಟಿಂಗ್ ದಿನ ಪೀಕ್ ನಲ್ಲಿತ್ತು. ಇಲ್ಲಿ ಪುತ್ತಿಲ ಪರ ಇದ್ದವರು ಕಡಿಮೆ ರೇಟಲ್ಲಿ ಜೂಜಿನ ಸವಾಲು ಪಡೆದು ಬಂಪರ್ ಲಾಟರಿ ಸಂಪಾದಿಸಿದ್ದಾರೆ. ದೊಡ್ಡ ಕುಳಗಳು ಮಾತ್ರವಲ್ಲದೇ ಅಂಗಡಿ ಮಾಲಕರು, ತೆಂಗಿನಕಾಯಿ ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರೂ ಸಹ ಈ ಬೆಟ್ಟಿಂಗ್ ನಲ್ಲಿ ದುಡ್ಡು ಕಟ್ಟಿ ಕೆಲವರು ಭರ್ಜರಿ ಲಾಭ ಮಾಡ್ಕೊಂಡಿದ್ರೆ ಇನ್ನು ಕೆಲವರು ನುಣ್ಣಗೆ ಬೋಳಿಸ್ಕೊಂಡು ಇದೀಗ ಒಟ್ರಾಶಿ ಟೆನ್ಷನ್ ನಲ್ಲಿದ್ದಾರೆ ಎನ್ನುವುದು ಪುತ್ತೂರಿನಲ್ಲಿ ಜನರ ಬಾಯಲ್ಲಿ ಓಡಾಡ್ತಿರೋ ವಿಷಯವಾಗಿದೆ.

ಒಟ್ಟಿನಲ್ಲಿ ಈ ಬಾರಿ ಪುತ್ತೂರಿನಲ್ಲಿ ಪುತ್ತಿಲರನ್ನು ಟಚ್ ಮಾಡಲು ಹೋಗಿ  ನಾಯಕರುಗಳು ಎಂದೂ ಮರೆಯಲಾಗದ ಏಟು ತಿಂದಿರುವುದು ಮಾತ್ರ ಸುಳ್ಳಲ್ಲ.

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಕ್ತ ನಿಧನ

Posted by Vidyamaana on 2023-05-04 18:02:16 |

Share: | | | | |


ಪುತ್ತೂರು :  ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಕ್ತ ನಿಧನ

ಪುತ್ತೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ (71) ಮೇ.4 ರಂದು ನಿಧನರಾದರು.

ಜನಸಂಘದ ಕಾಲದಲ್ಲಿ ಸಕ್ರೀಯರಾಗಿದ್ದು, ತಮ್ಮ ಮನೆಯನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಮಾಡಿಕೊಂಡಿದ್ದ ದಿ. ದೇವದಾಸ್ ಭಕ್ತ ಅವರ ಪುತ್ರ ರಾಧಾಕೃಷ್ಣ ಭಕ್ತ ತನ್ನ ತಂದೆಯ ಮಾರ್ಗದರ್ಶದನಲ್ಲೇ ಮುಂದುವರಿದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು.ಪುತ್ತೂರಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯ ಮುಖ್ಯ ರೂವಾರಿಯಾಗಿ, ಸಂಚಾಲಕರಾಗಿ, ಪುತ್ತೂರು ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರಾಗಿದ್ದು ಹಲವು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅಖಿಲ ಭಾರತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ದೇವಾಲಯಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು

ಮೃತರು ಪತ್ನಿ ಲಕ್ಷ್ಮಿಭಕ್ತ, ಪುತ್ರಿ ಅಶ್ವಿನಿ ಭಕ್ತ, ಸಹೋದರರಾದ ಯೋಗೀಶ್ ಭಕ್ತ, ಗುರುದತ್ ಭಕ್ತ ಮತ್ತು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

ರಾಧಾಕೃಷ್ಣ ಭಕ್ತ ಅವರ ಪಾರ್ಥಿವ ಶರೀರವನ್ನು ಕೋರ್ಟ್ ರಸ್ತೆಯಲ್ಲಿರುವ ಮನೆಯಲ್ಲಿ ಇರಿಸಲಾಗಿದ್ದು, ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೃತರ ಸಹೋದರ ಯೋಗೀಶ್ ಭಕ್ತ ತಿಳಿಸಿದ್ದಾರೆ.

ವಿಟ್ಲ :ಪರ್ತಿಪ್ಪಾಡಿ M.K.ಖಲೀಲ್ ಮನೆಗೆ ನುಗ್ಗಿದ ಕಳ್ಳರಿಂದ ನಾಲ್ಕು ಕಪಾಟುಗಳು ಧ್ವಂಸ

Posted by Vidyamaana on 2024-05-26 13:53:21 |

Share: | | | | |


ವಿಟ್ಲ :ಪರ್ತಿಪ್ಪಾಡಿ M.K.ಖಲೀಲ್ ಮನೆಗೆ ನುಗ್ಗಿದ ಕಳ್ಳರಿಂದ ನಾಲ್ಕು ಕಪಾಟುಗಳು ಧ್ವಂಸ

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕೈಚಳಕ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು.

ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು. ಎ.ಸಿ.ಚಾಲು ಮಾಡಿಯೇ ಆರಾಮವಾಗಿ ನಾಲ್ಕು ಕಪಾಟುಗಳನ್ನು ಒಡೆದ

ಉಳ್ಳಾಲದಲ್ಲಿ ಸೈಟ್ ಅಭಿವೃದ್ಧಿ ಹೆಸರಲ್ಲಿ ಬಿಲ್ಡರ್‌ನಿಂದ 86 ಲಕ್ಷ ಹಣ ಪಡೆದು ವಂಚನೆ ; ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರ ಮೇಲೆ ಕೇಸು ದಾಖಲು

Posted by Vidyamaana on 2024-05-29 05:56:24 |

Share: | | | | |


ಉಳ್ಳಾಲದಲ್ಲಿ ಸೈಟ್ ಅಭಿವೃದ್ಧಿ ಹೆಸರಲ್ಲಿ ಬಿಲ್ಡರ್‌ನಿಂದ 86 ಲಕ್ಷ ಹಣ ಪಡೆದು ವಂಚನೆ ; ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರ ಮೇಲೆ ಕೇಸು ದಾಖಲು

ಮಂಗಳೂರು, ಮೇ.27: ಸೈಟ್ ಅಭಿವೃದ್ಧಿ ಪಡಿಸುವ ನೆಪದಲ್ಲಿ ಬಿಲ್ಡರ್‌ ಒಬ್ಬರಿಂದ 86 ಲಕ್ಷ ರೂ. ಹಣ ಪಡೆದು ವಂಚಿಸಿ, ಲೇಔಟ್‌ ವ್ಯವಹಾರಕ್ಕೆ ಅಡ್ಡಿಪಡಿಸಿ,  ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್‌ ಸಹಿತ ಬ್ರೋಕರ್‌, ಸಿವಿಲ್‌ ಗುತ್ತಿಗೆದಾರನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್‌ ಆಗಿರುವ ಜೆಪ್ಪಿನಮೊಗರು ನಿವಾಸಿ ಪವನ್‌ ಕುಮಾರ್‌, ಬ್ರೋಕರ್‌ ಆಗಿರುವ ಗುರುರಾಜ್‌, ಸಿವಿಲ್‌ ಗುತ್ತಿಗೆದಾರ ಜಗದೀಶ್‌ ಹಾಗೂ ಅವರ ಸಹಚರ ಜಯಪ್ರಕಾಶ್‌ ಜೆ.ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳ್ಳಾಲದ ಪುಷ್ಪರಾಜ್ ಎಂಬವರು ಬೆಂಗಳೂರು ಮೂಲದ ವೆಂಕಟೇಶ್ ಮತ್ತು ಮಹೇಶ್ ಕುಮಾರ್ ಎಂಬಿಬ್ಬರು ಬಿಲ್ಡರ್‌ ಗಳ ಜೊತೆಗೂಡಿ ಮಂಗಳೂರಿನಲ್ಲಿ ಲೇಔಟ್‌ ನಿರ್ಮಿಸಿ ಸಾರ್ವಜನಿಕವಾಗಿ ಸೈಟ್‌ ಮಾರಾಟ ಮಾಡಲು ಯೋಜನೆ ಹಾಕಿದ್ದರು. ಇದೇ ಸಂದರ್ಭ ಬ್ಯಾಂಕ್‌ ಮ್ಯಾನೇಜರ್‌ ಪವನ್‌ ಕುಮಾರ್‌ ಎಂಬಾತ ಪರಿಚಯವಾಗಿದ್ದು ತನ್ನ ಮೂಲಕ ಉಳ್ಳಾಲದಲ್ಲಿ ನಾಲ್ಕು ಎಕ್ರೆ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. 2022ರ ಫೆಬ್ರವರಿ ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಪವನ್‌ ಕುಮಾರ್‌, ಬಿಲ್ಡರ್‌ ಅವರಲ್ಲಿ  ಲೇಔಟ್‌ನ ಡ್ರೈನೇಜ್‌ ಇನ್ನಿತರ ಕೆಲಸಗಳನ್ನು ತಾನೇ ಮಾಡಿಸುತ್ತೇನೆಂದು ಹೇಳಿ ಮಾತುಕತೆ ನಡೆಸಿದ್ದರು.

Recent News


Leave a Comment: