ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೆಡಿಕಲ್‍ ಅಸೋಸಿಯೇಶನ್‍ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ | ಸರಕಾರದ ಗಮನ ಸೆಳೆಯುವಂತೆ ಆಗ್ರಹ

Posted by Vidyamaana on 2023-02-28 10:45:53 |

Share: | | | | |


ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೆಡಿಕಲ್‍ ಅಸೋಸಿಯೇಶನ್‍ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ | ಸರಕಾರದ ಗಮನ ಸೆಳೆಯುವಂತೆ ಆಗ್ರಹ

ಪುತ್ತೂರು: ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸಾ ದರ ಪರಿಷ್ಕರಿಸುವ ಸಹಿತ ವಿವಿಧ ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರವನ್ನು ಮೆಡಿಕಲ್‍ ಅಸೋಸಿಯೇಶನ್‍ ಕೈಗೊಂಡಿದೆ ಎಂದು ಅಸೋಸಿಯೇಶನ್‍ ಅಧ್ಯಕ್ಷ ಡಾ.ಶ್ರೀಪತಿ ರಾವ್‍ ತಿಳಿಸಿದ್ದಾರೆ..

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಎಲ್ಲಾ ಹಣವನ್ನು ಕೂಡಲೇ ಸಂದಾಯ ಮಾಡಬೇಕು, ರೋಗಿಗಳು ಆಸ್ಪತ್ರೆಗೆ ಸೇರುವಾಗ ಇರುವ ನಿಬಂಧನೆಗಳನ್ನು ಸಡಿಲಿಕರಣಗೊಳಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಪುತ್ತೂರಿನ ಆಸ್ಪತ್ರೆಗಳಲ್ಲಿ ಸರಕಾರಿ ಯೋಜನೆಗಳಾದ ಇಎಸ್‌ಐ, ಯಶಸ್ವಿನಿ ಸಹಿತ ಹಲವಾರು ಯೋಜನೆಗಳನ್ನು ಉತ್ತಮವಾಗಿ ನಿಭಾಯಿಸುತ್ತಿವೆ. ಆದರೆ ಇದೀಗ ಸ್ಥಗಿತಗೊಳಿಸಿದ ಯಶಸ್ವಿ ಯೋಜನೆ ಮರು ಪ್ರಾಂಭಿಸುವಾಗ ಹಲವಾರು ನಿಬಂಧನೆ ಮತ್ತು ರೋಗಿಗಳ ಚಿಕಿತ್ಸಾ ದರವನ್ನು ಕಡಿಮೆ ಗೊಳಿಸಿದ್ದರಿಂದ ನ್ಯಾಯುತವಾಗಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಕೇಂದ್ರ ಸಿ.ಜಿ.ಎಸ್.ಹೆಚ್.ಎಸ್ ನಂತೆ 2014ರ ಇಸವಿಯ ಚಿಕಿತ್ಸಾ ದರವೇ ಈಗಲೂ ಚಾಲ್ತಿಯಲ್ಲಿದೆ. 2014ರ ಚಿಕಿತ್ಸಾ ದರ 2017 ಮತ್ತು 2020ರಲ್ಲಿ ಹಾಗೂ 2023ರಲ್ಲಾದರೂ ಪರಿಷ್ಕರಣೆ ಆಗಬೇಕಾಗಿತ್ತು. ಆದರೆ ಅದನ್ನು ಮಾಡಿಲ್ಲ. ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ಉತ್ತಮವಾಗಿತ್ತು. ಆದರೆ ಅದರಲ್ಲೂ ಹಲವು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಈ ನಿಟ್ಟಿನಲ್ಲಿ ಯಸ್ವಿನಿ ಯೋಜನೆಗೆ ಬಹುತೇಕ ಆಸ್ಪತ್ರೆಗೆಳು ಸೇರ್ಪಡೆಗೊಂಡಿಲ್ಲ.ಇತ್ತೀಚೆಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭ ಬಂದಿರುವ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನಮಗೆ ನೋಟೀಸ್ ನೀಡಿದ್ದಾರೆ. ಈ ನೋಟೀಸ್‌ಗೆ ಸಂಬಂಧಿಸಿ ನಾವು ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಸೇರಬೇಕಾದರೆ ನಮ್ಮ ಕೆಲವೊಂದು ಬೇಡಿಕೆಗಳಿವೆ. ಅದನ್ನು ಈಡೇರಿಸವಂತೆ ಮನವಿ ಮಾಡಲಿದ್ದೇವೆ. ಖಾಸಗಿ ಕೊಠಡಿಗಳಿಗೂ ರೋಗಿಗಳಿಗೆ ಅನುಮತಿ ನೀಡಬೇಕೆಂದು ಮನವಿ ನೀಡಲಿದ್ದೇವೆ ಎಂದು ತಿಳಿಸಿದ ಅವರು, ಒಟ್ಟಿನಲ್ಲಿ ಉಳುವ ರೈತರ ಹೈನುಗಾರರ ಆರೋಗ್ಯದ ಮೇಲೆ ಕಾಳಜಿ ವಹಿಸಿ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುವಂತೆ ಮಾಡುವ ಜವಾಬ್ದಾರಿ ಸರಕಾರಕ್ಕೂ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಇದೆಯೆಂದು ತಿಳಿದು ಸರಕಾರ ಉತ್ತಮ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದರು.

ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಡಿ ಪುತ್ತೂರಿನ ನಾಲ್ಕು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಹಿಂದೆ ಸರಕಾರದಿಂದ ಯೋಜನೆ ಚಾಲ್ತಿಯಲ್ಲಿತ್ತು. ಬಳಿಕ ಅದನ್ನು ಇನ್‌ಶ್ಯುರೆನ್ಸ್ ಕಂಪೆನಿಗೆ ವರ್ಗಾಯಿಸಲಾಯಿತು. ಈ ಸಂದರ್ಭ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ಪಾವತಿ ಬಾಕಿಯಾಗುತ್ತಿತ್ತು. ಈ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಟ್ಟು ನಾಲ್ಕು ಆಸ್ಪತ್ರೆಗೆಳಿಗೆ ಸುಮಾರು ರೂ. 22ಲಕ್ಷ ಬಾಕಿ ಇದೆ. ಎಂದು ಅಸೋಸಿಯೇಶನ್‍ ಉಪಾಧ್ಯಕ್ಷ ಡಾ.ಭಾಸ್ಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ. ಎಸ್.ಎಸ್ ಜೋಶಿ, ಕೋಶಾಧಿಕಾರಿ ಡಾ. ಅಶೋಕ್ ಪಡಿವಾಳ್, ಸದಸ್ಯರಾದ ಡಾ. ಜೆ.ಸಿ.ಅಡಿಗ, ಡಾ. ರವೀಂದ್ರ ಉಪಸ್ಥಿತರಿದ್ದರು.

ಶಿಕ್ಷಕಿಯರಿಂದ ಕಳ್ಳತನ ಆರೋಪ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

Posted by Vidyamaana on 2024-03-17 17:23:49 |

Share: | | | | |


ಶಿಕ್ಷಕಿಯರಿಂದ ಕಳ್ಳತನ ಆರೋಪ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ:ಶಿಕ್ಷಕಿಯರು ವಿದ್ಯಾರ್ಥಿನಿಯ ವಿರುದ್ಧ ಕಳ್ಳತನ ಆರೋಪ ಮಾಡಿ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಅವಮಾನವಾಗಿ ವರ್ತಿಸಿದ್ದ ಸಲುವಾಗಿ ಇದರಿಂದ ಮನನೊಂದು ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಬಾಗಲಕೋಟೆ ತಾಲೂಕಿನ ಕದಂಪುರ ಗ್ರಾಮದ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಮಿಶ್ರೀಕೋಟಿ, ಮುಖ್ಯಶಿಕ್ಷಕ ಕೆ.ಹೆಚ್.ಮುಜಾವರ ಹಾಗೂ ಇತರೆ ಶಿಕ್ಷಕರು ಶಾಲೆಯಲ್ಲಿ 2 ಸಾವಿರ ರೂಪಾಯಿ ಕಳೆದುಹೋಗಿದೆ ಅಂಥ ಹೇಳಿ, 8ನೇ ತರಗತಿ ಓದುತ್ತಿದ್ದ ದಿವ್ಯಾ ಬಾರಕೇರ ಎನ್ನುವ ವಿದ್ಯಾರ್ಥಿನಿಯ ಬಳಿಯಲ್ಲಿ ಅಮಾನೀಯವಾಗಿ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.ಇದಲ್ಲದೇ ವಿದ್ಯಾರ್ಥಿನಿಯ ಮೇಲೆ ಸಂಶಯ ಪಟ್ಟು ಶಿಕ್ಷಕಿಯರು ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇದರಿಂದ ಮನನೊಂದ ದಿವ್ಯಾ ಬಾರಕೇರ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸದ್ಯ ಪ್ರಕರಣ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

Posted by Vidyamaana on 2024-04-19 11:36:09 |

Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರ ಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪರಶುರಾಮ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಪುತ್ತಿಲರವರಿಗೆ ಸಿಂಹ ಬಲ - ವೇದಿಕೆಯ ಹಿಂಭಾಗದಿಂದ ಮುಂಭಾಗಕ್ಕೆ ಪ್ರಮೋಷನ್

Posted by Vidyamaana on 2024-04-03 12:48:23 |

Share: | | | | |


ಪುತ್ತಿಲರವರಿಗೆ ಸಿಂಹ  ಬಲ - ವೇದಿಕೆಯ ಹಿಂಭಾಗದಿಂದ ಮುಂಭಾಗಕ್ಕೆ ಪ್ರಮೋಷನ್

ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪ್ರಚಾರ ಕಾರ್ಯ ಹಿನ್ನೆಲೆ ಕಾರ್ಯಕರ್ತರ ಸಮಾವೇಶ ಪುತ್ತೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ವೇದಿಕೆ ಬದಿಯಲ್ಲಿದ್ದ ಬಿಜೆಪಿ ಮುಖಂಡ ಅರುಣ್ ಪುತ್ತಿಲರನ್ನು ಕರೆದು ಎದುರಿನ ಸಾಲಿನ ತನ್ನ ಹತ್ತಿರದಲ್ಲೇ ಕೂರಿಸಿಕೊಂಡ ವೀಡಿಯೋ ಭಾರಿ ವೈರಲ್ ಆಗಿತ್ತು.

ಇಂದು ಶಾಸಕರಿಂದ ಪಕ್ಷದ ಪ್ರಮುಖರ ಸಭೆ

Posted by Vidyamaana on 2023-05-16 02:57:58 |

Share: | | | | |


ಇಂದು ಶಾಸಕರಿಂದ ಪಕ್ಷದ ಪ್ರಮುಖರ ಸಭೆ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಮೇ 16ರಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ಪ್ರಮುಖರ ಸಭೆ ಕರೆದಿದ್ದಾರೆ.

ಕಾಂಗ್ರೆಸಿನ ಚುನಾವಣಾ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು: ಯುವತಿ ಸಾವು, ಯುವಕ ಪಾರು

Posted by Vidyamaana on 2023-06-06 23:03:01 |

Share: | | | | |


ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು: ಯುವತಿ ಸಾವು, ಯುವಕ ಪಾರು

ಹಾವೇರಿ: ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಹಾವೇರಿಯಲ್ಲಿ (Haveri) ನಡೆದ ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿಬಾಗಲಕೋಟೆ ಮೂಲದ ಅಖಿಲ್​​ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಬಾಳುವುದಾದರೆ ಇಬ್ಬರೂ ಜೊತೆಗೆ ಬಾಳುವ ನಿರ್ಣಯ ಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್​ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.ಕೂಡಲೇ ಎಚ್ಚೆತ್ತ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಹೇಮಾ ಕೊನೆಯುಸಿರೆಳೆದಿದ್ದಾಳೆ. ಪ್ರಜ್ಞೆ ಕಳೆದುಕೊಂಡಿದ್ದ ಅಖಿಲ್​ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಚಳಗೇರಿ ಟೋಲ್ 5 ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೂ ಮುನ್ನ ಪೋಷಕರಿಗೆ ಹೇಮಾ ಹೇಳಿದ್ದೇನು?

ಆತ್ಮಹತ್ಯೆಗೂ ಮುನ್ನ ಹೇಮಾ ಪೋಷಕರಿಗೆ ದೂರವಾಣಿ ಕರೆ ಮಾಡಿದ್ದಾಳೆ. ನಮ್ಮ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗುತ್ತಾ ಇದ್ದೇವೆ ಪೋಷಕರಿಗೆ ತಿಳಿಸಿದ್ದಾಳೆ. ಇಷ್ಟು ಹೇಳಿ ಕಾಲ್ ಕಟ್ ಮಾಡಿದ್ದ ಹೇಮಾ ಮತ್ತು ಅಖಿಲ್ ಬಾಂಬೆಗೆ ಹೋಗದೆ ಬಸ್​ನಲ್ಲಿ ವಿಷ ಸೇವಿಸಿದ್ದಾರೆ

Recent News


Leave a Comment: