ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

Posted by Vidyamaana on 2024-08-11 22:38:27 |

Share: | | | | |


ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

ಸುರತ್ಕಲ್ : ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರತ್ಕಲ್ ಕಡಂಬೋಡಿ ನಿವಾಸಿ ಹೇಮಂತ್ (50) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಜೀವ ಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ಧ: ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್

Posted by Vidyamaana on 2023-07-29 03:29:43 |

Share: | | | | |


ಜೀವ ಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ಧ: ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್

ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಂದ ಜೀವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ದವಾಗಿದ್ದು, ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು.


ಅವರು ಜು.28ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 


 ಮಳೆಗಾಲದಲ್ಲಿ ಜನರ ಜೀವ ರಕ್ಷಿಸಲು ಜಿಲ್ಲೆಯಲ್ಲಿ ನಿರ್ಬಂಧ ಹೇರಲಾದ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ತೆರಳಬಾರದು, ಈಗಾಗಲೇ ಜಿಲ್ಲೆಯ ಸಮುದ್ರ ಕಿನಾರೆಗಳು, ದೇವಸ್ಥಾನದ ಹತ್ತಿರದ ನದಿಗಳು, ಸ್ನಾನ ಘಟ್ಟಗಳು, ಚಾರಣ ತಾಣಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ, ಅದನ್ನ ಉಲ್ಲಂಘಿಸಿದ್ದಲ್ಲೀ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲೆಯ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ನೀರು ಹರಿಯುತ್ತಿರುವ ಸ್ಥಳಗಳಿಗೆ ಪ್ರವೇಶ ನಿಬರ್ಂಧದ ಬಗ್ಗೆ ಸೂಚನೆ ನೀಡುವಂತೆ ತಿಳಿಸಿದ್ದು, ಅದನ್ನು ಮೀರುವಂತಿಲ್ಲ. ಚಾರಣೀಗರು ನಿಷೇಧಿತ ಸ್ಥಳಗಳಲ್ಲಿ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜುರುಗಿಸಲಾಗುವುದು ಎಂದು ಎಚ್ಚರಿಸಿದರು.


ಜಿಲ್ಲೆಯಲ್ಲಿ ಸಾಕಷ್ಟು ಪ್ರದೇಶಗಳನ್ನು ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವ ಅಪಾಯಕಾರಿ ಪ್ರದೇಶಗಳು ಎಂದು ಗುರುತಿಸಲಾಗಿದ್ದು, ಅದರೊಂದಿಗೆ ಜಿಲ್ಲೆಯೊಳಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 87 ಸ್ಥಳಗಳನ್ನು ಅಪಾಯ ಸ್ಥಳಗಳೆಂದು ಗುರುತಿಸಲಾಗಿದೆ,  ಚಾರ್ಮಾಡಿ ಘಾಟಿಯಲ್ಲಿಗೆ 34 ಕಡೆಗಳಲ್ಲಿ ಅಪಾಯ ಸ್ಥಳಗಳನ್ನು ಗುರುತಿಸಲಾಗಿದೆ, ಅಪಾಯಕಾರಿ ಸಂದರ್ಭ ಎದುರಾಗುವಾಗ ಅಲ್ಲಿ ಸಾರ್ವಜನಿಕರು, ಪ್ರಯಾಣಿಕರು ತೆರಳಬಾರದು ಎಂದರು.


ಜಿಲ್ಲೆಯಲ್ಲಿ ಈಗಾಗಲೇ 25 ಎನ್‍ಡಿಆರ್‍ಎಫ್, 38 ಎಸ್‍ಡಿಆರ್‍ಎಫ್, 190 ಅಗ್ನಿಶಾಮಕ ದಳ ಹಾಗೂ 76 ಜನ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ, ಜಿಲ್ಲೆಯಲ್ಲಿ ಪ್ರತೀ ಗ್ರಾಮ ಮಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕೇಂದ್ರಗಳನ್ನು ತೆರೆಯಲಾಗಿದೆ. ಅದಕ್ಕೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಲ್ಲಿ ಏನಾದರೂ ಅಪಾಯ ಸಂಭವಿಸಿದಲ್ಲಿ ನೋಡಲ್ ಅಧಿಕಾರಿಗಳಿಗೆ ತಿಳಿಸಿದರೆ ಅವರು ಕ್ರಮ ಕೈಗೊಳ್ಳಲಿದ್ದಾರೆ. ಹೆಚ್ಚಿನ ಕ್ರಮ ಜರುಗಬೇಕಾಗಿದ್ದಲ್ಲಿ ತಹಶೀಲ್ದಾರರ್‍ಗೆ ಅವರು  ತಿಳಿಸಲಿದ್ದಾರೆ. ಇದಕ್ಕಾಗಿ ಜಿಲ್ಲೆಯಾಧ್ಯಂತ 34 ಕಂಟ್ರೋಲ್ ರೂಂ. ತೆರೆಯಲಾಗಿದ್ದು, ಅವರಿಗೆ ಕರೆ ಮಾಡುವಂತೆ ಕೋರಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಮಾತನಾಡಿ, ಹೊರಗಿನಿಂದ ಜಿಲ್ಲೆಯ ದೇವಸ್ಥಾನಕ್ಕೆ ಬರುವವರು ಸಾಕಷ್ಟು ಜಾಗೃತಿ ವಹಿಸಬೇಕಾಗಿದೆ. ಅಗತ್ಯವಿದ್ದರೆ ಮಾತ್ರ ಬರುವುದು ಸೂಕ್ತ. ಈಗಾಗಲೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವಂತಹ 2 ರಸ್ತೆಗಳು ಮುಚ್ಚಲಾಗಿದೆ. ರಸ್ತೆ ತಡೆ ಉಂಟಾದಲ್ಲಿ ಸಮಸ್ಯೆಯಾಗಲಿದೆ. ಹೊರಗಿನಿಂದ ಬರುವವರು ನೀರಿಗೆ ಇಳಿಯುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 


ನಗರ ಪೊಲೀಸ್ ಆಯುಕ್ತ ಕುಲ್‍ ದೀಪ್ ಕುಮಾರ್ ಜೈನ್ ಮಾತನಾಡಿ, ಹೊರ ಜಿಲ್ಲೆಯಿಂದ ಇಲ್ಲಿಗೆ ಬರುವವರು ಮಳೆ ಸಂದರ್ಭದಲ್ಲಿ ಗೂಗಲ್ ಮ್ಯಾಪ್ ಬಳಸುವುದು ಸೂಕ್ತ. ಯಾವ ರಸ್ತೆಯನ್ನು ಮುಚ್ಚಿದೆ, ಎಷ್ಟು ಗಂಟೆಯಿಂದ ಎಷ್ಟು ಗಂಟೆಯ ತನಕ ಮುಚ್ಚಲಾಗುವುದು ಎಂಬ ಮಾಹಿತಿ ಲಭಿಸಲಿದೆ, ಇದರಿಂದ ಅವರ ಪ್ರಯಾಣಕ್ಕೆ ಅನುಕೂಲವಾಗುವುದು ಎಂದರು.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

Posted by Vidyamaana on 2024-05-10 15:14:17 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

ಪುತ್ತೂರು: ಮಿತ್ತೂರು ರೈಲ್ವೇ ಓವರ್ ಬ್ರಿಡ್ಜ್ ಸಮೀಪ ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಆಟೋ ಚಾಲಕ, ಮಿತ್ತಪಡ್ಪು ಪಾಟ್ರಕೋಡಿ ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ.

ಅಗ್ನಿವೀರ್ ಗೆ ಆಯ್ಕೆಯಾದ ಭವೀಶ್ ಗೆ ಮುಳಿಯ ಜ್ಯುವೆಲ್ಲರ್ಸ್‌ ವತಿಯಿಂದ ಅಭಿನಂದನೆ

Posted by Vidyamaana on 2024-06-18 13:17:16 |

Share: | | | | |


ಅಗ್ನಿವೀರ್ ಗೆ ಆಯ್ಕೆಯಾದ ಭವೀಶ್ ಗೆ ಮುಳಿಯ ಜ್ಯುವೆಲ್ಲರ್ಸ್‌ ವತಿಯಿಂದ ಅಭಿನಂದನೆ

ಪುತ್ತೂರು: ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯ ಮೂಲಕ ಯುವಕರಿಗೆ ಸೇನೆಯಲ್ಲಿ ಸೇವೆ ನೀಡುವ ಅವಕಾಶವನ್ನು ಕಲ್ಪಿಸಿದೆ. ದೇಶ ಭಕ್ತಿ ಅಂತರಾಳದಲ್ಲಿ ಇದ್ದ ಕಾರಣದಿಂದ ಅಗ್ನಿವೀರನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಎಲ್ಲರಿಗೂ ಮಾದರಿಯಾಗಿರುವ ಯುವಕ ಬೇರೆ ಯುವಕರನ್ನು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸಾಮಥ್ಯವನ್ನು ಹೊಂದಿದ್ದಾನೆ ಎಂದು ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಹೇಳಿದರು.

ಪುತ್ತೂರು ಮುಳಿಯ ಜ್ಯುವೆಲ್ಸ್ ನ ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ನ ವತಿಯಿಂದ ಭಾರತೀಯ ಸೇನೆಗೆ ಆಯ್ಕೆಯಾದ ಅಗ್ನಿವೀರರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಳ್ಯ ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ಟ್ಯಾಂಕರ್ ಅಪಘಾತ

Posted by Vidyamaana on 2023-06-30 23:49:49 |

Share: | | | | |


ಸುಳ್ಯ  ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ಟ್ಯಾಂಕರ್ ಅಪಘಾತ

ಸುಳ್ಯ: ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ನಲ್ಲಿ ಸಂಭವಿಸಿದ ಟ್ಯಾಂಕರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.


ಅಪಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಂಭೀರ ಗಾಯಗೊಂಡಿದ್ದು ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಲಾರಿ ಚಾಲಕ ಹಾಸನ ಮೂಲದ ಪ್ರವೀಣ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಟ್ಯಾಂಕರ್ ನಲ್ಲಿದ್ದ ಗಾಯಗೊಂಡ ವ್ಯಕ್ತಿಯ ಸ್ಥಿತಿಯು ಗಂಭೀರವಾಗಿದೆ ಎನ್ನಲಾಗಿದೆ.

ಹಿಂ.ಜಾ.ವೇ. ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ರವರ ತಂದೆ ರಮೇಶ್ ಸುವರ್ಣ ನಿಧನ .

Posted by Vidyamaana on 2023-02-03 04:11:25 |

Share: | | | | |


ಹಿಂ.ಜಾ.ವೇ. ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ರವರ ತಂದೆ ರಮೇಶ್ ಸುವರ್ಣ ನಿಧನ .

ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ರವರ ತಂದೆ ಆರ್ಯಾಪು ಮೇರ್ಲದ ರಮೇಶ್ ಸುವರ್ಣ ರವರು ನಿಧನರಾದರು.ರಮೇಶ್ ಸುವರ್ಣ ರವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯಾ ನಿರ್ವಹಿಸುತ್ತಿದ್ದು, ಕೆಲ ವರುಷಗಳ ಹಿಂದೆ ನಿವೃತ್ತರಾಗಿದ್ದರು.ಮೃತರು ಮನೆಯವರು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

2019ರಲ್ಲಿ ಸೆ.3 ರಂದು ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸುತ್ತಿದ್ದ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ರನ್ನು ಹತ್ಯೆ ಮಾಡಲಾಗಿತ್ತು.

Recent News


Leave a Comment: