ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

Posted by Vidyamaana on 2023-12-21 16:34:47 |

Share: | | | | |


ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

ಉಡುಪಿ : ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಉದ್ಯಾವರದ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಅಪಘಾತದಲ್ಲಿ ಮೃತರಾದವರನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ.ಉದ್ಯಾವರದ ಐಸಿವೈಎಂ ಘಟಕದ ಸದಸ್ಯರಿದ್ದ ಫಿಗೋ ಕಾರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ.


ಪರಿಣಾಮ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.ಯುವ ನಾಯಕನ ಅಗಲಿಕೆಗೆ ಕ್ರೈಸ್ತ ಸಮುದಾಯ ಸಂತಾಪ ಸೂಚಿಸಿದೆ.

ಬಾಡಿಗೆ ಕಾರು ಚಾಲಕನ ಖಾತೆಗೆ ಬ್ಯಾಂಕ್​ನಿಂದ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ! ಮುಂದೇನಾಯ್ತು ಗೊತ್ತಾ?

Posted by Vidyamaana on 2023-09-21 14:48:10 |

Share: | | | | |


ಬಾಡಿಗೆ ಕಾರು ಚಾಲಕನ ಖಾತೆಗೆ ಬ್ಯಾಂಕ್​ನಿಂದ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ! ಮುಂದೇನಾಯ್ತು ಗೊತ್ತಾ?

ಚೆನ್ನೈ: ಬಾಡಿಗೆ ಚಾಲಕನೋರ್ವನ ಬ್ಯಾಂಕ್​ ಖಾತೆಗೆ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿರುವ ಘಟನೆ ಇದೀಗ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾರು ಚಾಲಕ ಹಾಗೂ ಬ್ಯಾಂಕ್​ ಕಡೆಯಿಂದ ಲಾಯರ್​ಗಳು ಮಧ್ಯಸ್ಥಿಕೆವಹಿಸಿ ರಾಜಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.


ಪಳನಿ ನೇಯ್ಕಪಟ್ಟಿ ನಿವಾಸಿ ರಾಜಕುಮಾರ್​, ಕೋಡಂಬಾಕ್ಕಂನಲ್ಲಿ ಸ್ನೇಹಿತರೊಬ್ಬರ ರೂಂನಲ್ಲಿದ್ದು, ಬಾಡಿಗೆ ಬಾಡಿಗೆ ಕಾರು ಓಡಿಸುತ್ತಿದ್ದಾರೆ. ಸೆ. 9 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ರಾಜಕುಮಾರ್​ ಅವರು ತಮ್ಮ ಕಾರಿನಲ್ಲಿ ಮಲಗಿದ್ದಾಗ ಮೊಬೈಲ್​ಗೆ ಮೆಸೇಜ್​ ಬಂದಿದೆ. ರಾಜಕುಮಾರ್​ ಅವರ ಬ್ಯಾಂಕ್​ ಖಾತೆಗೆ ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ಮೆಸೇಜ್​ ಮೂಲಕ ತಿಳಿಸಲಾಗಿತ್ತು. ಅದರಲ್ಲಿದ್ದ ಸೊನ್ನೆಗಳನ್ನು ಲೆಕ್ಕ ಹಾಕಲಾಗದೆ ಎಷ್ಟು ಹಣ ಬಂದಿದೆ ಎಂದು ಗೊಂದಲದಲ್ಲಿದ್ದ ರಾಜಕುಮಾರ್,​ ಯಾರೋ ಮೋಸ ಮಾಡಲೆಂದೇ ಈ ರೀತಿಯ ಮೆಸೇಜ್​ ಕಳುಹಿಸಿದ್ದಾರೆ, ತಮ್ಮ ಖಾತೆಯಲ್ಲಿ 15 ರೂಪಾಯಿ ಮಾತ್ರ ಇದೆ ಎಂದುಕೊಂಡಿದ್ದರು. ಆದರೂ ಒಂದು ಬಾರಿ ನೋಡೋಣ ಎಂದು ತಮ್ಮ ಸ್ನೇಹಿತರೊಬ್ಬರಿಗೆ 21 ಸಾವಿರ ರೂಪಾಯಿ ಕಳುಹಿಸಿದ್ದಾರೆ. ಆಗ ನಿಜವಾಗಿಯೂ ಅವರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಹಣ ಬಂದಿರುವುದು ನಿಜ ಎಂದು ನಂಬಿ ಖುಷಿಯಾಗಿದ್ದಾರೆ.


ಆದರೆ ಅಷ್ಟರಲ್ಲಿ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕೇಂದ್ರ ಕಚೇರಿ ತೂತುಕುಡಿಯಿಂದ ರಾಜಕುಮಾರ್​ ಅವರಿಗೆ ದೂರವಾಣಿ ಕರೆ ಬಂದಿದೆ. ಫೋನ್​ ಮಾಡಿದವರು ತಪ್ಪಾಗಿ ನಿಮ್ಮ ಖಾತೆಗೆ 9 ಸಾವಿ ಕೋಟಿ ಹಣ ಜಮೆಯಾಗಿದೆ. ಬ್ಯಾಂಕ್​ನಿಂದ ಜಮೆ ಆಗಿರುವ ಹಣವನ್ನು ಖರ್ಚು ಮಾಡದಂತೆ ಬ್ಯಾಂಕ್​ ಆಡಳಿತ ಮಂಡಳಿ ರಾಜಕುಮಾರ್​ ಅವರಿಗೆ ತಿಳಿಸಿದೆರಾಜಕುಮಾರ್​ ಅವರು ಸ್ನೇಹಿತನಿಗೆ ಕಳುಹಿಸಿದ 21 ಸಾವಿರ ಹೊರತುಪಡಿಸಿ, ಉಳಿದ ಎಲ್ಲಾ ಹಣವನ್ನು ತಕ್ಷಣವೇ ಹಿಂಪಡೆದಿದೆ. ಇದಾದ ನಂತರ ಬ್ಯಾಂಕ್​ನವರು ಉಳಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವಂತೆ ರಾಜಕುಮಾರ್​ ಅವರಿಗೆ ಬೆದರಿಕೆ ಹಾಕಲು ಆರಂಭಿಸಿತ್ತು ಎನ್ನಲಾಗಿದೆ. ರಾಜಕುಮಾರ್​ ಅವರು ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆದರೆ ನಂತರ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕಡೆಯಿಂದ ಹಾಗೂ ಕಾರು ಚಾಲಕ ರಾಜಕುಮಾರ್​ ಕಡೆಯಿಂದ ವಕೀಲರು ಚೆನ್ನೈನ ತ್ಯಾಗರಾಯನಗರದಲ್ಲಿರುವ ಶಾಖೆಗೆ ತೆರಳಿ ಸಂಧಾನ ಮಾತುಕತೆ ನಡೆಸಿದ್ದಾರೆ.ಸಂಧಾನ ಮಾತುಕತೆಯಲ್ಲಿ ಬ್ಯಾಂಕ್​ನವರು ರಾಜಕುಮಾರ್​ ಅವರು ಈಗಾಗಲೇ 9 ಸಾವಿರ ಕೋಟಿ ರೂಪಾಯಿಯಲ್ಲಿ ಸ್ನೇಹಿತನಿಗೆ ನೀಡಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವುದು ಬೇಡ ಎನ್ನುವುದರ ಜೊತೆಗೆ ಅವರಿಗೆ ವಾಹನ ಸಾಲವನ್ನು ನೀಡುವುದಾಗಿಯೂ ಹೇಳಿದ್ದಾರೆ. ಆದರೆ ರಾಜಕುಮಾರ್​ ಆ ಆಫರ್​ ಅನ್ನು ಸ್ವೀಕರಿಸಿಲ್ಲ ಎಂದು ವರದಿಯಾಗಿದೆ. ಒಬ್ಬ ಕಾರು ಚಾಲಕನ ಖಾತೆಗೆ ಏಕಾಏಕಿ 9 ಸಾವಿರ ಕೋಟಿ ಹಣ ಜಮೆ ಆಗಿರುವುದು ಭಾರಿ ಸಂಚಲನ ಮೂಡಿಸಿದೆ.

RCB ಬೆನ್ನು ಬಿಡದ ಬ್ಯಾಡ್ ಲಕ್ !!!; ಕೆಕೆಆರ್ ಎದುರು 1 ರನ್ ಸೋಲು

Posted by Vidyamaana on 2024-04-22 07:29:22 |

Share: | | | | |


RCB ಬೆನ್ನು ಬಿಡದ ಬ್ಯಾಡ್ ಲಕ್ !!!; ಕೆಕೆಆರ್ ಎದುರು 1 ರನ್ ಸೋಲು

ಕೋಲ್ಕತಾ : ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ರನ್ ನಿಂದ ಸೋಲು ಅನುಭವಿಸಿದ್ದು ತಂಡದ ದುರಾದೃಷ್ಟಕ್ಕೆ ಸಾಕ್ಷಿಯಾಯಿತು.ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಕೆಕೆಆರ್ ಪರ ಓಪನರ್ ಫಿಲ್ ಸಾಲ್ಟ್ ಅವರ ಆಕ್ರಮಣಕಾರಿ 48 ರನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಆಘಾತ ಅನುಭವಿಸಿತು. 7 ರನ್ ಗಳಿಸಿ ನಾಯಕ ಫ್ಲೆಸಿಸ್ ಔಟಾದರೆ, ಕೊಹ್ಲಿ 18 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು. ಆ ಬಳಿಕ ಭರವಸೆಯ ನಿರ್ಣಾಯಕ ಆಟವಾಡಿದ ವಿಲ್ ಜ್ಯಾಕ್ಸ್ 55(32 ಎಸೆತ) ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ರಜತ್ ಪಾಟಿದಾರ್ 52 (23 ಎಸೆತ) ರನ್ ಗಳಿಸಿ ಔಟಾದರು.

ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

Posted by Vidyamaana on 2023-11-18 11:58:36 |

Share: | | | | |


ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

ಸುಳ್ಯ  ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16 ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ(Sullia student missing case ) .


ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.


ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.

ಚಿನ್ನಾಭರಣ ಪ್ರಿಯರನ್ನು ಯಶಸ್ವಿಯಾಗಿ ಆಕರ್ಷಿಸುತ್ತಿರುವ ಆಟಿ ಸೇಲ್

Posted by Vidyamaana on 2023-08-14 13:01:30 |

Share: | | | | |


ಚಿನ್ನಾಭರಣ ಪ್ರಿಯರನ್ನು ಯಶಸ್ವಿಯಾಗಿ ಆಕರ್ಷಿಸುತ್ತಿರುವ ಆಟಿ ಸೇಲ್

ಪುತ್ತೂರು: ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ನ ಪುತ್ತೂರು ಹಾಗೂ ಸುಳ್ಯ ಚಿನ್ನಾಭರಣ ಮಳಿಗೆಗಳಲ್ಲಿ ಆಗಸ್ಟ್ 7ರಂದು ಆರಂಭಗೊಂಡ ‘ಆಟಿ ಸೇಲ್’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆ. 15ರಂದು ಕೊನೆ ದಿನವಾಗಿದ್ದು, ಆಟಿ ಸೇಲ್ ನಿರೀಕ್ಷೆಗಳನ್ನು ಹೆಚ್ಚಳಗೊಳಿಸಿದೆ.

ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ. 100 ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರೆಟ್ ಮೇಲೆ ರೂ. 5,000ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂಗೆ ರೂ.2,000 ರಿಯಾಯಿತಿ ನೀಡಲಾಗಿದೆ. ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ ಗಳು, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಅಪೂರ್ವ ಸಂಗ್ರಹ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆದಿಟ್ಟಿದೆ.

ವಿಶಾಲವಾದ ವಾಹನ ಪಾರ್ಕಿಂಗ್, ಸಿಬ್ಬಂದಿಗಳಿಂದ ನಗುಮೊಗದ ಸೇವೆ, ಸಂಪೂರ್ಣ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕಾ ವೆಚ್ಚ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ನ ವೈಶಿಷ್ಟ್ಯಗಳು ಎಂಬ ಶ್ಲಾಘನೆ ಗ್ರಾಹಕರಿಂದ ವ್ಯಕ್ತವಾಗಿದೆ.

ಫೆ.18: ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಉಚಿತ ಗುದಾಗತ ರೋಗಗಳ ತಪಾಸಣೆ ಶಿಬಿರ

Posted by Vidyamaana on 2024-02-18 04:47:59 |

Share: | | | | |


ಫೆ.18: ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಉಚಿತ ಗುದಾಗತ ರೋಗಗಳ ತಪಾಸಣೆ ಶಿಬಿರ

ಪುತ್ತೂರು: ಪುರುಷರಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಗುದಾಗತ ರೋಗಗಳ ತಪಾಸಣಾ ಶಿಬಿರ (ಪೈಲ್ಸ್, ಫಿಷರ್, ಫಿಸ್ತುಲ) ಫೆ.18 ಭಾನುವಾರ ನಡೆಯಲಿದೆ.


ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ನಡೆಯುವ ಶಿಬಿರದಲ್ಲಿ ಪೈಲ್ಸ್, ಫಿಷರ್, ಫಿಸ್ತುಲ ಮುಂತಾದ ಗುದ ಸಂಬಂಧಿ ರೋಗಗಳು, ಮಲಬದ್ಧತೆ, ಗುದದ್ವಾರದಲ್ಲಿ ಊತ, ನೋವು, ಕೀವು, ತುರಿಕೆ, ರಕ್ತಸ್ರಾವ ಮುಂತಾದ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷಿಸದೇ ಕೂಡಲೇ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಹಾಗಾಗಿ ನಮ್ಮ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಉಚಿತವಾಗಿ ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರ ತಪಾಸಣೆ, ಸಲಹೆ ಮತ್ತು ಸಂದರ್ಶನವನ್ನು ಆಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಶಸ್ತ್ರಕ್ರಿಯೆಗೆ ಒಳಪಡದೆ ಆಯುರ್ವೇದೀಯ ಕ್ಷಾರ ಕರ್ಮವನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಾಡಲಾಗುವುದು. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳಲು ಫೆ.17ನೇ ಶನಿವಾರದ ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು ಡಾ ಸುಜಯ್ ತಂತ್ರಿ, ಕೆಮ್ಮಿಂಜೆ ತಿಳಿಸಿದ್ದಾರೆ.

ವಿಶೇಷವಾಗಿ ಶಲ್ಯ ತಂತ್ರ ವಿಭಾಗದ ತಜ್ಞ ವೈದ್ಯರು ಪ್ರತೀ ಆದಿತ್ಯವಾರ ಸಂಜೆ 3.30ರಿಂದ 5.30ರ ವರೆಗೆ ಲಭ್ಯರಿರುತ್ತಾರೆ. ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.



Leave a Comment: