ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ವಿಶಾಲ ಆಭರಣ ಮಳಿಗೆ ಸಪ್ತ ಜ್ಯುವೆಲ್ಸ್ ಇಂದು ಶುಭಾರಂಭ

Posted by Vidyamaana on 2023-06-05 03:45:48 |

Share: | | | | |


ವಿಶಾಲ ಆಭರಣ ಮಳಿಗೆ ಸಪ್ತ ಜ್ಯುವೆಲ್ಸ್ ಇಂದು ಶುಭಾರಂಭ

ವಿಟ್ಲ: ವಿಟ್ಲ - ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಂಡ ಸಪ್ತ ಜ್ಯುವೆಲ್ಸ್ ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭ ಜೂ.೫ರಂದು ಬೆಳಗ್ಗೆ ೯.೩೦ಕ್ಕೆ ನಡೆಯಲಿದೆ.

ಬೆಳಗ್ಗೆ ೭.೩೦ರಿಂದ ಗಣಪತಿ ಹೋಮ, ಲಕ್ಷ್ಮೀ ಪೂಜೆ ನಡೆದು, ೯.೩೦ಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರು ದೀಪಪ್ರಜ್ವಲನೆಯನ್ನು ಮಾಡಲಿದ್ದು, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟನೆ ಮಾಡಲಿದ್ದಾರೆ. ವಿಟ್ಲ ಪೊಲೀಸ್ ನಿರೀಕ್ಷಕ ಎಚ್. ಇ. ನಾಗರಾಜ, ಶ್ರೀ ಚಂದ್ರನಾಥ ದೇವರ ಬಸದಿ ಆಡಳಿತದಾರ ವಿನಯ ಕುಮಾರ್ ಡಿ., ಬಾವಾ ಬ್ಯುಲ್ಡರ್ ಪ್ರೊಮೊಟರ್ ಅಬ್ದುಲ್ ಖಾದರ್ ಬಾವಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯಕ್ ಭಾಗವಹಿಸಲಿದ್ದಾರೆ.

೨೦೧೭ರಲ್ಲಿ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಸಪ್ತ ಜ್ಯುವೆಲ್ಸ್ ಆಭರಣ ಮಳಿಗೆ ಪ್ರಾರಂಭವಾಗಿದ್ದು, ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಗ್ರಾಹಕರ ಕಲ್ಪನೆಯ ವಿನ್ಯಾಸದ ಆಭರಣಗಳ ಆಯ್ಕೆಗೆ ಅನುಭವೀ ತಂಡ, ಸ್ಥಳದಲ್ಲೇ ಚಿನ್ನದ ಶುದ್ಧತೆ ಪರಿಶೀಲಿಸುವ ಯಂತ್ರದ ವ್ಯವಸ್ಥೆಯನ್ನು ಮಳಿಗೆಯಲ್ಲಿ ಕಲ್ಪಿಸಲಾಗಿದೆ.

ಮಳಿಗೆ ಉದ್ಘಾಟನೆಯ ನಿಟ್ಟಿನಲ್ಲಿ ಚಿನ್ನಾಭರಣ ಖರೀದಿಗೆ ೧ ಪವನ್ ನೆಕ್ಲೆಸ್ ಗೆಲ್ಲುವ ಸುವರ್ಣಾವಕಾಶ, ಚಿನ್ನಾಭರಣ ಪ್ರತಿ ಗ್ರಾಂ ಗೆ ೧೦೦ರೂ ಹಾಗೂ ಬೆಳ್ಳಿ ಆಭರಣಕ್ಕೆ ಶೇ.೫ರ ರಿಯಾಯಿತಿಯನ್ನು ನೀಡಲಾಗಿದೆ. ಜೂ೫ರಿಂದ ೩೦ರವರೆಗೆ ಸಪ್ತ ಅಕ್ಷಯ ಸೇರ್ಪಡೆಗೊಳ್ಳುವ ಎಲ್ಲರಿಗೂ ವಿಶೇಷ ಉಡುಗೊರೆ, ಚಿನ್ನಾಭರಣಗಳ ಶುದ್ಧತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡಲಾಗುತ್ತದೆ.

ವಿಶೇಷ ಸಂಗ್ರಹ:

ಪಾರಂಪರಿಕ ಮಲ್ಲಿಗೆ ಮೊಗ್ಗು ನೆಕ್ಲೇಸ್, ಮೊಹನ ಮಾಲಾ, ಕೊತ್ತಂಬರಿ ಸರ, ರುದ್ರಾಕ್ಷಮಾಲಾ, ತುಳಸಿಮಣಿಸರ, ನವರತ್ನ ಸರ, ಕಠಾಣಿ ಸರ, ಗಿಳಿ ಓಲೆ ನೆಕ್ ಲೇಸ್ ಸೆಟ್ ವಿಶೇಷವಾಗಿದೆ. ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ರಿಚ್ ಲುಕ್ ನೀಡುವ ರುಬಿ, ಎಮರಾಲ್ಡ್, ಸಿ. ಝೆಡ್. ಸ್ಟೋನ್ ನೆಕ್ಲೇಸ್, ಲೈಟ್ ವೈಟ್ ಕೋಲ್ಕತ್ತ ವೆಡ್ಡಿಂಗ್ ಸೆಟ್, ನೆಕ್ಲೇಸ್, ಪೆಂಡೆಂಟ್ಸ್ ಗಳು, ಬ್ಯಾಂಡ್ ರಿಂಗ್, ಮಾಟಿ, ಮುಂದಲೆ, ಡಿಫೆರೆಂಟ್ ಆಂಡ್ ಸ್ಪೆಷಲ್ ಕಲೆಕ್ಷನ್ ಇನ್ ಕೋಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲಾ, ವೆರೈಟಿ ಆಫ್ ಬೆಂಗಾಲಿ ಹ್ಯಾಂಡ್ ಮೇಡ್ ಚೈನ್ಸ್, ಕೊಯಂಬುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಮುಸ್ಟಿ ಚೈನ್, ರೇಡಿಯೋ ಚೈನ್, ಕೇರಳ ಹ್ಯಾಂಡ್ ಮೇಡ್ ವೈನ್ಸ್, ಇಂಡೋ ಇಟಲಿಯನ್ ಚೈನ್ಸ್ ಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ. ಬೆಂಗಾಲಿ ಲೈಟ್ ವೈಟ್ ವೆಡ್ಡಿಂಗ್ ಸೆಟ್, ಫ್ಯೂಷನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಆರ್ನಮೆಂಟರಿ ವೆಡ್ಡಿಂಗ್ ಸೆಟ್ ಗಳು ಹಾಗೂ ಡಿವೈನ್ ಸೆಟ್ ಗಳು, ಪೈವ್ ಇನ್ ಒನ್ ಸೆಟ್, ಚೋಕರ್ ಗಳು ಲಭ್ಯವಿದೆ. ಡಿಫರೆಂಟ್ ವೆರೈಟೀಸ್ ಇನ್ ಹಾಲೋ ಕಾಸ್ಟಿಂಗ್ ಪೆಂಡೆಂಟ್ಸ್, ಗಾಡ್ ಪೆಂಡೆಂಟ್ಸ್, ಸ್ಪೆಷಲ್ ವರ್ಕ್ ಬೆಂಗಾಲಿ ಪೆಂಡೆಂಟ್ಸ್, ಪಾರಂಪರಿಕ ಲಕ್ಷ್ಮೀ ಪೆಂಡೆಂಟ್ಸ್, ಮಲ್ಲಿಗೆ ಮೊಗ್ಗು ಪೆಂಡೆಂಟ್ಸ್, ಗಿಲಿಜಲೆ ಪೆಂಡೆಂಟ್ಸ್, ಪೆಲಿಗಿರಿ ವರ್ಕ್ಸ್ ಪೆಂಡೆಂಟ್ಸ್, ಎಂಬೋಸಿಂಗ್ ಪೆಂಡೆಂಟ್ಸ್, ಡೈ ಪೆಂಡೆಂಟ್ಸ್, ಲೈಟ್ ವೈಟ್ ರಿಂಗ್, ಕಾಸ್ಟಿಂಗ್ ರಿಂಗ್, ಬೇಬಿ ಡೈ ರಿಂಗ್, ಪವಿತ್ರ ರಿಂಗ್, ಪಯ್ಯನ್ನೂರು ಪವಿತ್ರ ರಿಂಗ್, ನವರತ್ನ ರಿಂಗ್, ಪ್ರೀಕಾಯಿನ್ಸ್, ಸ್ಟೋನ್ ರಿಂಗ್ ಆನ್ ಆರ್ಡರ್, ಕಪಲ್ ರಿಂಗ್, ಕ್ಲೋಸ್ ಸೆಟ್ಟಿಂಗ್ ರಿಂಗ್, ಪ್ಲೈನ್ ಗೋಲ್ಡ್ ಜುಮ್ಕ, ಟೆಂಪಲ್ ಕಲೆಕ್ಷನ್ ಜುಮ್ಕ, ಗ್ರೇಪ್ಸ್ ಜುಮ್ಕ, ಪಿಕಾಕ್ ಜುಮ್ಕ, ಚಾಂದ್ ಬಾಲಿ, ನಾಟ್ಯ ಜುಮ್ಕ, ಮುಕುಟಿ ಜುಮ್ಕ, ಲೂಪ್ ಜುಮ್ಕ, ಬೆಂಗಾಲಿ ಸ್ಟಡ್ಸ್, ಕೋಲ್ಕತ್ತಾ ವರ್ಕ್ ಸ್ಟಡ್ಸ್, ಪಿಲಿಗ್ರಿ ವರ್ಕ್ ಸ್ಟಡ್ಸ್, ನವೀನ್ ಮಾದರಿಯ ಕಾಸ್ಟಿಂಗ್ ಸ್ಟಡ್ಸ್ ಲಭವಿದೆ. ನಿತ್ಯ ಬಳಕೆಯ ಮಾಂಗಲ್ಯ ಸರ, ನವೀನ ಮಾದರಿಯ ಮುಷ್ಠಿ ಮಾಂಗಲ್ಯ ಸರ, ನುಗ್ಗೆ ಚೈನ್ ಮಾಂಗಲ್ಯ ಸರ, ಪಿರಿ ಕಂಠಿ, ಗಾಂಚು ಕಂಠಿ, ಜೋಮಾಲ ಕಂಠಿ, ಕಟ್ಸ್ ಗೋಲು ಕಂಠಿ, ಗುಂಡು ಕಂಠಿ, ಕರ್ತವ್ಯ ನಿರತ ಮಹಿಳೆಯರಿಗೆ ವಿವಿಧ ನಮೂನೆಯ ಗಿಡ್ಡ ಮಾದರಿಯ ಕಂಠಿಗಳು ಲಭ್ಯವಿದೆ.

ಗಿಫ್ಟ್ ಆರ್ಟಿಕಲ್ಸ್:

ಪ್ರೈಮಾ ಹಾಗೂ ಆರ್ಯಾ ಬ್ರಾಂಡ್ ನ ಗೋಲ್ಡನ್ ಫಾಯಿಲ್ ಕಲೆಕ್ಷನ್, ಸಿಲ್ವರ್ ಪಾಯಿಲ್ ಪ್ರೇಮ್ ಕಲೆಕ್ಷನ್


ಬೆಳ್ಳಿಯ ವಿಶೇಷತೆಗಳು:

ಆರ್ನಮೆಂಟ್ಸ್, ಸ್ಟಡ್ಸ್, ರಿಂಗ್ಸ್, ಚೈನ್, ಹ್ಯಾಂಡ್ ಮೇಡ್ ದೈವ ದೇವರ ಪರಿಕರಗಳು, ಆಭರಣಗಳು, ದೇವರ ವಿಗ್ರಹಗಳು, ಕರ್ಪೂರಾರತಿ, ಏಕಾರತಿ, ಶಂಕಾರತಿ, ಸರ್ಪಾರತಿ, ಕೂರ್ಮಾರತಿ, ಕಾಮಾಕ್ಷಿ ದೀಪ ಸೇರಿ ವಿವಿಧ ವಿನ್ಯಾಸದ ಬೆಳ್ಳಿಯ ಆರತಿಗಳು,

ಪ್ರಜ್ವಲ್‌ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

Posted by Vidyamaana on 2024-05-03 07:03:38 |

Share: | | | | |


ಪ್ರಜ್ವಲ್‌ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

ಬೆಳಗಾವಿ: ಪ್ರಜ್ವಲ್ ರೇವಣ್ಣ ಪ್ರಕರಣವು ಚುನಾವಣೆಯ ಮೇಲೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಪ್ರಭಾವ ಬೀರುತ್ತದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇದನ್ನು ಇಡೀ ಎನ್ ಡಿಎ ಅಪರಾಧ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಮಂಗಳೂರು: ನ.16 ರಂದು ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ ನ ಬೆಳ್ಳಿ ಹಬ್ಬದ ಲೋಗೋ ಬಿಡುಗಡೆ

Posted by Vidyamaana on 2023-11-15 13:38:06 |

Share: | | | | |


ಮಂಗಳೂರು: ನ.16 ರಂದು ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ ನ ಬೆಳ್ಳಿ ಹಬ್ಬದ ಲೋಗೋ ಬಿಡುಗಡೆ

ಮಂಗಳೂರು: 25ನೇ ವಾರ್ಷಿಕೋತ್ಸವದ ಪ್ರಯುಕ್ತ ನ.16ರಿಂದ 26ರವರೆಗೆ ನಗರದ ಕಂಕನಾಡಿಯಲ್ಲಿರುವ ಚಿನ್ನಾಭರಣ ಮಳಿಗೆಯಾದ ಸಿಟಿಗೋಲ್ಡ್ ಆ್ಯಂಡ್ ಡೈಮಂಡ್ಸ್ನಲ್ಲಿ ಆ್ಯಂಟಿಕ್ ಫೆಸ್ಟ್ ನಡೆಯಲಿದೆ.


ನ.16ರ ಸಂಜೆ 4ಕ್ಕೆ ಸಂಸ್ಥೆಯ ಬೆಳ್ಳಿಹಬ್ಬದ ಲೋಗೋ ಅನಾವರಣಗೊಳ್ಳಲಿದೆ. ಆ್ಯಂಟಿಕ್ ಫೆಸ್ಟ್ ಕಾರ್ಯಕ್ರಮವನ್ನು ತುಳು ಚಿತ್ರ ನಟ ಹಾಗು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ರಾಮಯ್ಯ, ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಚಾರ್ಮಾಡಿ ಹಸನಬ್ಬ, ಮೀಫ್ ಸಂಸ್ಥೆಯ ಪರವಾಗಿ ಅಧ್ಯಕ್ಷ ಮೂಸಬ್ಬ ಬ್ಯಾರಿ ಹಾಗು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಪೊಸವಣಿಕೆ ಅವರನ್ನು ಸನ್ಮಾನಿಸಲಾಗುವುದು.

ಸಿಟಿ ಗೋಲ್ಡ್ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣ ಖರೀದಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.55ರಷ್ಟು ಹಾಗೂ ವಜ್ರಾಭರಣ ಖರೀದಿಯ ವಜ್ರದ ಮೌಲ್ಯದ ಮೇಲೆ ಶೇ 30ರಷ್ಟು ವಿನಾಯಿತಿ ನೀಡಲಾಗುವುದು.

ಪ್ರತಿ ಖರೀದಿಯ ಗ್ರಾಹಕರಿಗೆ ಸ್ಕ್ರ್ಯಾಚ್ ಆ್ಯಂಡ್ ವಿನ್ ಕೂಪನ್ ವಿತರಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗು ಇತರೆ ಉಡುಗೊರೆಗಳು ನೀಡಲಾಗುವುದು. ಮದುವೆ ಖರೀದಿಯಲ್ಲಿನ ಪ್ರತಿ ಗ್ರಾಹಕರಿಗೂ ಕೂಪನ್ ವಿತರಿಸಲಾಗುವುದು. ವಿಜೇತ 5 ಜೋಡಿ ನವ ದಂಪತಿಗೆ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ.

‘ನೆಲ್ಯಾಡಿ ಧೂಳುಮಯ’ ಹೆದ್ದಾರಿ ಕಾಮಗಾರಿ ಅವಾಂತರ; ಜನರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ

Posted by Vidyamaana on 2023-01-12 12:34:12 |

Share: | | | | |


‘ನೆಲ್ಯಾಡಿ ಧೂಳುಮಯ’ ಹೆದ್ದಾರಿ ಕಾಮಗಾರಿ ಅವಾಂತರ; ಜನರಿಗೆ ಕಾಡುತ್ತಿದೆ ಆರೋಗ್ಯ ಸಮಸ್ಯೆ

ನೆಲ್ಯಾಡಿ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆ ಸಂಪೂರ್ಣ ಧೂಳುಮಯಗೊಂಡಿದೆ. ದೂಳುತಿಂದು ಜನರಲ್ಲಿ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದ್ದು ಕೆಮ್ಮು, ಜ್ವರ, ಅಲರ್ಜಿಯಿಂದ ಶಾಲಾ ಮಕ್ಕಳು, ವರ್ತಕರು, ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ದಿನದಲ್ಲಿ ಒಂದೆರಡು ಸಲ ನೀರು ಹಾಯಿಸಲಾಗುತ್ತಿದ್ದರೂ ದೂಳಿನ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಕನಿಷ್ಠ ನಾಲ್ಕೈದು ಸಲವಾದರೂ ಹೆದ್ದಾರಿಯುದ್ದಕ್ಕೂ ನೀರು ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹ್ಯಾಲೋವೀನ್ ಪಾರ್ಟಿಯಲ್ಲಿ‌ ಗೆಳತಿ ಜಾಸ್ಮಿನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್‌ ಮಲ್ಯ ಪುತ್ರ

Posted by Vidyamaana on 2023-11-02 12:42:51 |

Share: | | | | |


ಹ್ಯಾಲೋವೀನ್ ಪಾರ್ಟಿಯಲ್ಲಿ‌ ಗೆಳತಿ ಜಾಸ್ಮಿನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್‌ ಮಲ್ಯ ಪುತ್ರ

ನವದೆಹಲಿ: ವಿಜಯ್‌ ಮಲ್ಯ ಪುತ್ರ ಸಿದ್ದಾರ್ಥ್‌ ಮಲ್ಯ ತನ್ನ ಗೆಳತಿ ಜೊತೆ ಎಂಗೇಜ್‌ ಮೆಂಟ್‌ ಆಗಿರುವ ಫೋಟೋಸ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಸಿದ್ದಾರ್ಥ್‌ ಮಲ್ಯ ಗರ್ಲ್‌ ಫ್ರೆಂಡ್‌ ಜಾಸ್ಮಿನ್‌  ಅವರಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹಾಗೆ ಮೊಣಕಾಲಿನಲ್ಲಿ  ಕೂತು ಎಂಗೇಜ್‌ ಮೆಂಟ್‌ ರಿಂಗ್‌ ತೋರಿಸಿ, ಅದನ್ನು ಜಾಸ್ಮಿನ್‌ ಅವರ ಕೈಗೆ ಹಾಕಿದ್ದಾರೆ. ಆ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹ್ಯಾಲೋವೀನ್ ಪಾರ್ಟಿಯೊಂದರಲ್ಲಿ ಸಿದ್ದಾರ್ಥ್‌ ಮಲ್ಯ ಎಂಗೇಜ್‌ ಆಗಿದ್ದಾರೆ. ಈ ಕುರಿತ ಫೋಟೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನೀವು ನನ್ನೊಂದಿಗೆ ಶಾಶ್ವತವಾಗಿ ಸಿಲುಕಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಐ ಲವ್‌ ಯೂ ನನ್ನ ಜುಪ್ಪೆಟ್” ಎಂದು ಸಿದ್ದಾರ್ಥ್‌ ಫೋಟೋ ಕೆಳಗೆ ಬರೆದುಕೊಂಡಿದ್ದಾರೆ.


ಎಂಗೇಜ್‌ ಆದ ಸಿದ್ದಾರ್ಥ್‌ ಅವರಿಗೆ ಸುಸ್ಸಾನ್ನೆ ಖಾನ್, ಅರ್ಪಿತಾ ಶರ್ಮಾ, ಇಸಾಬೆಲ್ಲೆ ಕೈಫ್, ಅನುಷಾ ದಾಂಡೇಕರ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.ಸಿದ್ಧಾರ್ಥ್ ಮಲ್ಯ ಕ್ಯಾಲಿಫೋರ್ನಿಯಾದಲ್ಲಿ ತನ್ನ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಟ ಹಾಗೂ ಮಾಡೆಲ್‌ ಆಗಿ ಸಿದ್ದಾರ್ಥ್‌ ಮಲ್ಯ ಗುರುತಿಸಿಕೊಂಡಿದ್ದಾರೆ.

ಚಿಕ್ಕಪುತ್ತೂರು ಶೇಖ್ ಅಬ್ದುಲ್ ಸತ್ತಾರ್ ನಿಧನ

Posted by Vidyamaana on 2024-06-24 18:06:25 |

Share: | | | | |


ಚಿಕ್ಕಪುತ್ತೂರು ಶೇಖ್ ಅಬ್ದುಲ್ ಸತ್ತಾರ್  ನಿಧನ

ಪುತ್ತೂರು :- ಇಲ್ಲಿನ ಚಿಕ್ಕಪುತ್ತೂರು ರೈಲ್ವೆ ನಿಲ್ದಾಣ  ನಿವಾಸಿ  ಚಿಕ್ಕಪುತ್ತೂರು ಹಸನ್ ಸಾಹೇಬ್ ರವರ ಪುತ್ರ ಕೂಲಿ ಕೆಲಸ ಜೊತೆಗೆ ಗೋಳಿಕಟ್ಟೆ ಮೊಹ್ಯಿಯ್ಯದ್ದೀನ್ ಜುಮಾ ಮಸೀದಿಯ ಖಬರ್ ತೋಡುವ ಕೆಲಸ ನಿರ್ವಹಿಸುತ್ತಿದ್ದ  ಶೇಖ್ ಅಬ್ದುಲ್ ಸತ್ತಾರ್ (40) 

Recent News


Leave a Comment: