ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಉಡುಪಿ | ಗಗನಸಖಿ ಸಹಿತ ನಾಲ್ವರ ಹತ್ಯೆ ಪ್ರಕರಣ; ಶಂಕಿತ ಆರೋಪಿ ಪ್ರವೀಣ್ ಚೌಗಲೆ ತೀವ್ರ ವಿಚಾರಣೆ: ಎಸ್ಪಿ ಡಾ.ಅರುಣ್

Posted by Vidyamaana on 2023-11-15 11:00:56 |

Share: | | | | |


ಉಡುಪಿ | ಗಗನಸಖಿ ಸಹಿತ ನಾಲ್ವರ ಹತ್ಯೆ ಪ್ರಕರಣ; ಶಂಕಿತ ಆರೋಪಿ ಪ್ರವೀಣ್ ಚೌಗಲೆ ತೀವ್ರ ವಿಚಾರಣೆ: ಎಸ್ಪಿ ಡಾ.ಅರುಣ್

ಉಡುಪಿ: ನೇಜಾರುವಿನಲ್ಲಿ ಗಗನಸಖಿ ಸಹಿತ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ವಶಕ್ಕೆ ಪಡೆದಿರುವ ಶಂಕಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.


ಉಡುಪಿ ಎಸ್ಪಿ ಕಚೇರಿಯಲ್ಲಿಂದು ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ವಿಚಾರಣೆಯಲ್ಲಿ ಈ ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಕಂಡುಬಂದಲ್ಲಿ ಆತನನ್ನು ಬಂಧಿಸಿ ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.ಪ್ರಕರಣಕ್ಕೆ ಸಂಬಂಧಿಸಿ ಐದು ತಂಡಗಳನ್ನು ರಚನೆ ಮಾಡಿ ವಿವಿಧ ಆಯಮಗಳಲ್ಲಿ ತನಿಖೆ ನಡೆಸಲಾಗಿತ್ತು. ಮಾಹಿತಿಯಂತೆ ಆರೋಪಿಯನ್ನು ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆದುಕೊಂಡು ಬರಲಾಗಿದೆ. ಇದೀಗ ಆತನನ್ನು ವಿಚಾರಣೆಗೊಳಪಡಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದರು.


ಕೆಲವೊಂದು ತಾಂತ್ರಿಕ ಹಾಗೂ ಗುಪ್ತಚರ ಮಾಹಿತಿಯಂತೆ ಈ ವ್ಯಕ್ತಿ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದುಕೊಳ್ಳಲಾಗಿದೆ ಆತನ ವಿಚಾರಣೆಯಿಂದ ಕೊಲೆಗೆ ಕಾರಣ ಸೇರಿದಂತೆ ಹಲವು ಮಾಹಿತಿಗಳು ದೊರೆಯಲಿದೆ. ವಿಚಾರಣೆ ಮುಗಿದ ಬಳಿಕ ಕಾನೂನು ಪ್ರಕಾರ ಆತನನ್ನು ನ್ಯಾಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದರು.ಪ್ರಕರಣದ ತನಿಖಾಧಿಕಾರಿ ವರದಿ ನೀಡಿದ ಬಳಿಕ ಹೆಚ್ಚಿನ ಮಾಹಿತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ನಮ್ಮ ಮಾಹಿತಿ ಪ್ರಕಾರ ಆತ ಸಿ.ಐ.ಎಸ್.ಎಫ್. ಹಾಗೂ ಸಿ.ಆರ್.ಪಿ.ಎಫ್.ನಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆತ ಸಿವಿಲ್ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿರಬಹುದು ಎಂಬ ಮಾಹಿತಿ ದೊರೆತಿದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದವರು ಹೇಳಿದರು.


ಈ ಪ್ರಕರಣದಲ್ಲಿ ನಾವು 15-20 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೆವು. ಅದೇ ರೀತಿ ಪ್ರವೀಣನನ್ನು ಕೂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.


ಪ್ರಕರಣದ ವಿವರ:


ನ. 12ರಂದು ಬೆಳಗ್ಗೆ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಹಸೀನಾ( 48), ಮಕ್ಕಳಾದ ಅಫ್ಘಾನ್ (23), ಅಯ್ತಾಝ್ (20) ಮತ್ತು ಅಸೀಮ್ (14) ಎಂಬವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು

ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

Posted by Vidyamaana on 2024-03-05 09:03:13 |

Share: | | | | |


ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

ನವದೆಹಲಿ (ಮಾರ್ಚ್ 05): ಮೂರನೇ ಬಾರಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP N

non

da) ಅವರು ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುತರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರು ಹಿಮಾಚಲ ಪ್ರದೇಶ ರಾಜ್ಯಸಭಾ ಸದಸ್ಯತ್ವ(Himachal pr

non

esh Rajya Sabha MP) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ನಡ್ಡಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.


ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಿರುವ ಜೆಪಿ ನಡ್ಡಾ ಅವಧಿ ಏಪ್ರಿಲ್ ತಿಂಗಳಿಗೆ ಅಂತ್ಯವಾಗಲಿದೆ. ಇದಕ್ಕೂ ಮೊದಲೇ ಜೆಪಿ ನಡ್ಡಾ ಅವರು ಗುಜರಾತ್‌ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ ನೀಡಿದ್ದಾರೆ.ಇನ್ನು ಜೆಪಿ ನಡ್ಡಾ ಅವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಡ್ಡಾ ಅವರ ಅಧಿಕಾರವಧಿಯಲ್ಲಿ 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಈ ಘೋಷಣೆ ಮಾಡಿದ್ದರು. ಈ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯನ್ನು ನಡ್ಡಾ ನೇತೃತ್ವದಲ್ಲೇ ಎದುರಿಸಲಿದೆ. ನಡ್ಡಾ ಅವರು 2019ರಲ್ಲಿ ಅಮಿತ್‌ ಶಾ ಅವರ ಬಳಿಕ ಮಧ್ಯಂತರ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ 2020ರಿಂದ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾಜಿ ಮಾಡೆಲ್ ದಿವ್ಯಾ ಪಹುಜಾ ಹತ್ಯೆ ; ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆ

Posted by Vidyamaana on 2024-01-14 04:01:25 |

Share: | | | | |


ಮಾಜಿ ಮಾಡೆಲ್ ದಿವ್ಯಾ ಪಹುಜಾ ಹತ್ಯೆ ; ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆ

ಹರಿಯಾಣ, ಜ 14: ಹರಿಯಾಣದ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಮೃತದೇಹವು ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ತೋಹಾನಾದಲ್ಲಿರುವ ಭಾಕ್ರಾ ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗುರುಗ್ರಾಮ್​ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.


ಜನವರಿ 2ರಂದು ಗುರುಗ್ರಾಮ್‌ನ ಹೋಟೆಲ್ ಕೊಠಡಿಯಲ್ಲಿ 27 ವರ್ಷದ ದಿವ್ಯಾ ಪಹುಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹೋಟೆಲ್ ಮಾಲೀಕರಿಂದ ಹಣ ವಸೂಲಿ ಮಾಡಿದ್ದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ದಿವ್ಯಾ ವಿರುದ್ಧ ಕೇಳಿ ಬಂದ ವಂಚನೆಯ ಆರೋಪವನ್ನು ಈಗಾಗಲೇ ಸಂತ್ರಸ್ತೆಯ ಕುಟುಂಬವು ತಳ್ಳಿಹಾಕಿದೆ.ಮತ್ತೊಂದೆಡೆ, ಹೋಟೆಲ್​ನಲ್ಲಿ ದಿವ್ಯಾ ಪಹುಜಾ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಅಲ್ಲಿಂದ ಸಾಗಿಸಲಾಗಿತ್ತು. ಶವ ಸಾಗಿಸುವ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿದ್ದವು. ಇದರ ಆಧಾರದ ಮೇಲೆ ಐವರು ಆರೋಪಿಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಪೈಕಿ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್, ನೇಪಾಳ ಮೂಲದ ಹೇಮರಾಜ್ ಮತ್ತು ಪಶ್ಚಿಮ ಬಂಗಾಳದ ಓಂಪ್ರಕಾಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೀಗ ಸುಮಾರು 10 ದಿನಗಳ ಬಳಿಕ ದಿವ್ಯಾ ಪಹುಜಾ ಮೃತದೇಹ ಪತ್ತೆಯಾಗಿದೆ.ದಿವ್ಯಾ ಪಹುಜಾ ಜನವರಿ 1ರ ನಂತರ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ದಿನ ಹೋಟೆಲ್ ಮಾಲೀಕ ಅಭಿಜೀತ್ ಭೇಟಿಯಾಗಲು ದಿವ್ಯಾ ಹೋಗಿದ್ದರು. ಮರು ದಿನ ಎಂದರೆ, ಜನವರಿ 2ರಂದು ಬೆಳಗ್ಗೆ 11.50ರ ಸುಮಾರಿಗೆ ಅವರೊಂದಿಗೆ ನಾನು ಕೊನೆಯದಾಗಿ ಮಾತನಾಡಿರುವುದಾಗಿ ಸಹೋದರಿ ನೈನಾ ಪಹುಜಾ ಹೇಳಿದ್ದರು. ಇದಾದ ಬಳಿಕ ಜನವರಿ 5ರಂದು ಹೋಟೆಲ್‌ನ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪರಿಶೀಲಿಸಿದಾಗ ಹೋಟೆಲ್​ನಲ್ಲಿ ದಿವ್ಯಾರ ಉಂಗುರ, ಬೂಟು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು ಎಂದು ಪೊಲೀಸರಿಗೆ ನೈನಾ ದೂರು ಕೊಟ್ಟಿದ್ದರು.


ಅಲ್ಲದೇ, ಗ್ಯಾಂಗ್​ಸ್ಟರ್​ ಸಂದೀಪ್ ಗಡೋಲಿ ಎಂಬಾತನ ಕೊಲೆ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಸಾಕ್ಷಿಯಾಗಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಅವರಿಗೆ ಜೀವ ಬೆದರಿಕೆ ಇತ್ತು. ಗ್ಯಾಂಗ್​ಸ್ಟರ್​ನ ಸಂಬಂಧಿಕರು ದಿವ್ಯಾ ಅವರನ್ನು ಕೊಲೆ ಮಾಡಲು ಅಭಿಜೀತ್‌ಗೆ ಹಣ ಕೊಟ್ಟು ಸುಪಾರಿ ನೀಡಿದ್ದಾರೆ ಎಂದು ನೈನಾ ಪಹುಜಾ ತನ್ನ ದೂರಿನಲ್ಲಿ ತಿಳಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.


ಆಗ ದಿವ್ಯಾ ಅವರನ್ನು ಕೊಂದ ನಂತರ ಅಭಿಜೀತ್ ಆಕೆಯ ಶವವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಲ್ಲದೇ, ಶವವನ್ನು ನೀಲಿ ಬಿಎಂಡಬ್ಲ್ಯು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಇದನ್ನು ಆಧರಿಸಿ ಪೊಲೀಸರು ಹೋಟೆಲ್ ಮಾಲೀಕ ಅಭಿಜೀತ್ ಸೇರಿ ಮೂವರನ್ನು ಬಂಧಿಸಿದ್ದರು.


2016ರ ಫೆಬ್ರವರಿ 6ರಂದು ಮುಂಬೈನಲ್ಲಿ ಗ್ಯಾಂಗ್​ಸ್ಟರ್​ ಸಂದೀಪ್ ಗಡೋಲಿಯನ್ನು ಹರಿಯಾಣ ಪೊಲೀಸರು ಶೂಟೌಟ್‌ ಮಾಡಿದ್ದರು. ಆದರೆ, ಇದೊಂದು ನಕಲಿ ಎನ್‌ಕೌಂಟರ್ ಎಂದು ಹೇಳಲಾಗಿದೆ. ಎದುರಾಳಿ ಗುಂಪಿನ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿಕೊಂಡು ಗಡೋಲಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪವಿತ್ತು.


ಇದಕ್ಕಾಗಿ ದಿವ್ಯಾ ಪಹುಜಾ ಮೂಲಕ ಸಂದೀಪ್ ಗಡೋಲಿಯನ್ನು ಹನಿ ಟ್ರ್ಯಾಪ್‌ ಮಾಡಲಾಗಿತ್ತು ಎಂಬ ಆರೋಪದ ಇತ್ತು. ಈ ಸಂಬಂಧ ಮುಂಬೈ ಪೊಲೀಸರು ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ, ದಿವ್ಯಾರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸುಮಾರು ಏಳು ವರ್ಷಗಳ ನಂತರ ಎಂದರೆ, 2023ರ ಜೂನ್​ನಲ್ಲಿ ಬಾಂಬೆ ಹೈಕೋರ್ಟ್ ದಿವ್ಯಾ ಅವರಿಗೆ ಜಾಮೀನು ನೀಡಿತ್ತು.

ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

Posted by Vidyamaana on 2024-04-19 11:36:09 |

Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರ ಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪರಶುರಾಮ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಗುಂಡ್ಯ : ಹೊಳೆಯಲ್ಲಿ ಸ್ನಾನಕ್ಕಿಳಿದ ವೇಳೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Posted by Vidyamaana on 2023-11-15 17:29:50 |

Share: | | | | |


ಗುಂಡ್ಯ : ಹೊಳೆಯಲ್ಲಿ ಸ್ನಾನಕ್ಕಿಳಿದ ವೇಳೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ನೆಲ್ಯಾಡಿ : ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ನೀರು ಪಾಲಾಗಿದ್ದ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ (34) ರವರ ಮೃತದೇಹ ನ.15 ರಂದು ಮಧ್ಯಾಹ್ನ ಪತ್ತೆಯಾಗಿದೆ.ಅಗ್ನಿಶಾಮಕ ಹಾಗೂ ಶೌರ್ಯ ವಿಪತ್ತು ತಂಡದವರು ಮೃತದೇಹ ಪತ್ತೆ ಹಚ್ಚಿದ್ದಾರೆ.


ಸೋಮಶೇಖರ ರವರು ನ.14 ರಂದು ಸಂಜೆ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ನೀರು ಪಾಲಾಗಿದ್ದರು.


ಕೊಂಬಾರು ಮೂಲದ ಸೋಮಶೇಖರ್ ರೆಂಜಿಲಾಡಿಯಲ್ಲಿ ವಾಸ್ತವ್ಯವಿದ್ದರು.


ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಈ 8 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಯೆಲ್ಲೋ ಅಲರ್ಟ್​ ಘೋಷಣೆ

Posted by Vidyamaana on 2023-09-08 09:08:42 |

Share: | | | | |


ದಕ್ಷಿಣ ಕನ್ನಡ ಸೇರಿದಂತೆ    ಕರ್ನಾಟಕದ ಈ 8 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಯೆಲ್ಲೋ ಅಲರ್ಟ್​ ಘೋಷಣೆ

ಬೆಂಗಳೂರು : ಕರ್ನಾಟಕದ ಈ 8 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಳದಿ ಅಲರ್ಟ್​ ಘೋಷಿಸಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.


ಇನ್ನುಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯಪುರದಲ್ಲಿ ಸಾಧಾರಣ ಮಲೆಯಾಗಲಿದೆ, ಸೆಪ್ಟೆಂಬರ್ 13ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.



Leave a Comment: