ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬಂಟ್ವಾಳ : ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ LIC ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ

Posted by Vidyamaana on 2023-10-02 07:54:25 |

Share: | | | | |


ಬಂಟ್ವಾಳ : ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ LIC  ಏಜೆಂಟ್ ನಾರಾಯಣ ಕುಲಾಲ್  ಆತ್ಮಹತ್ಯೆ

ಬಂಟ್ವಾಳ : ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಅ 02 ಸೋಮವಾರ ಮುಂಜಾನೆ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.


    ಮೃತನನ್ನು ಸೂರಿಕುಮೇರ್ ನಿವಾಸಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ.


  ಅ 2 ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿಯನ್ನು ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಗೈದಿರಬೇಕು ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.


   ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಅಲ್ಲಿ ಸೇರಿದವರು ಮೃತನನ್ನು ಗುರುತಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.


   ಪ್ರಥಮ ನೋಟದಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಷ್ಟೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಇದ್ದರೂ ಎತ್ತಿನಹೊಳೆ ಯೋಜನೆ ನೀಡಿದ್ದೆ

Posted by Vidyamaana on 2023-10-04 11:58:59 |

Share: | | | | |


ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಇದ್ದರೂ ಎತ್ತಿನಹೊಳೆ ಯೋಜನೆ ನೀಡಿದ್ದೆ

ಕೋಲಾರ:: ನನ್ನ ಜಿಲ್ಲೆಯ ಜನರ ವಿರೋಧ ಇದ್ದರೂ, ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿದ್ದೆ. 800 ಕೋಟಿ ರೂಪಾಯಿ ಮೊತ್ತದಲ್ಲಿ ಡಿಪಿಆರ್ ತಯಾರಿಸಿ ಯೋಜನೆ ಜಾರಿ ಮಾಡಿದ್ದೆ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಅದು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದು ಬಿಟ್ಟರೆ ನೀರು ತರಲು ಮುಂದಾಗಿಲ್ಲ. ಯೋಜನೆ ಹೆಸರಲ್ಲಿ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.


ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಅವರನ್ನು ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಹೊರಕ್ಕೆ ತಳ್ಳಿದ ಘಟನೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಸದಾನಂದ ಗೌಡ ತನ್ನ ಸಾಧನೆಯನ್ನು ಹೇಳಿಕೊಂಡಿದ್ದಾರೆ.


ಇವತ್ತು ಕೋಲಾರದ ಜನ ಕುಡಿಯಲು ನೀರಿಲ್ಲದಿದ್ದರೂ ಹನಿ ನೀರಾವರಿ ಮೂಲಕ ಕೃಷಿ ಮಾಡಿ, ಬೆಂಗಳೂರಿನ ಜನರಿಗೆ ತರಕಾರಿ ಪೂರೈಸುತ್ತಿದ್ದಾರೆ. ಇಲ್ಲಿನ ಜನರಿಗೆ ನೀರು ಕೊಡಬೇಕೆಂದು ಎತ್ತಿನಹೊಳೆ ಯೋಜನೆಯನ್ನು ತಯಾರಿಸಿದ್ದು ನಾವು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷ ಆಡಳಿತ ನಡೆಸಿತಲ್ಲಾ.. ಯಾಕೆ ಇವರಿಗೆ ಆ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಯೋಜನೆಯನ್ನು ಜಾರಿಗೆ ತರುತ್ತಿದ್ದರೆ ಕೋಲಾರದ ಕೆರೆಗಳು ತುಂಬುತ್ತಿತ್ತಲ್ಲಾ.. ಇವರು ಆ ಯೋಜನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನ ಮಾಡಿದರು. ಜೊತೆ ಜೊತೆಗೆ ಯೋಜನೆ ಹೆಸರಲ್ಲಿ ದುಡ್ಡು ಲೂಟಿ ಹೊಡೆದಿದ್ದಾರೆ. ಕಾಂಗ್ರೆಸಿನವರು ಲೂಟಿಕೋರರು ಎಂದು ಆರೋಪಿಸಿದರು.




ಯೋಜನೆ ನಿರ್ಮಾತೃಗಳು ಡೀವಿ, ಮೊಯ್ಲಿ


2011ರಲ್ಲಿ ಕರಾವಳಿ ಜಿಲ್ಲೆಗಳ ವಿರೋಧದ ನಡುವೆಯೂ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಿದ್ದರು. ಆನಂತರ, 2012ರಲ್ಲಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿಯೇ ಶಿಲಾನ್ಯಾಸ ಮಾಡಿ, ಮತ್ತೊಂದು ಎಡವಟ್ಟು ಮಾಡಿದ್ದರು. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಯೋಜನೆಗೆ ಹಣ ಬಿಡುಗಡೆಗೊಳಿಸಿ, ಅನುಷ್ಠಾನಕ್ಕೆ ಯತ್ನಿಸಿದ್ದರು. ಆದರೆ ಬಹುತೇಕ ಜಲತಜ್ಞರು ಎತ್ತಿನಹೊಳೆ ಯೋಜನೆಯಿಂದ ನೀರು ಸಿಗಲ್ಲ ಎಂದು ಹೇಳಿದರೂ ಸರಕಾರ ಕೇಳಿರಲಿಲ್ಲ. ಯೋಜನೆ ಹೆಸರಲ್ಲಿ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಕ್ಷ ಭೇದ ಇಲ್ಲದೆ ಹಣ ಕೊಳ್ಳೆ ಹೊಡೆದಿದ್ದು ಬಿಟ್ಟರೆ ನೀರು ಒಯ್ಯುವ ಕೆಲಸ ಮಾಡಿಲ್ಲ. ಈಗ ಅಂದಿನ ಸಿಎಂ ಸದಾನಂದ ಗೌಡ ಯಾವುದೇ ನಾಚಿಕೆ ಇಲ್ಲದೆ, ತಾನು ಜಾರಿಗೊಳಿಸಿದ್ದ ಯೋಜನೆಯ ಹೆಸರಲ್ಲಿ ಕಾಂಗ್ರೆಸಿಗರು ಲೂಟಿ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರದ ಜನರನ್ನು ಪ್ರತಿ ಬಾರಿ ಮೋಸ ಮಾಡುತ್ತಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ

Posted by Vidyamaana on 2023-07-30 01:53:26 |

Share: | | | | |


ಗೃಹಲಕ್ಷ್ಮೀ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ

ಕಡಬ: ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನ ಉಚಿತವಾಗಿ ನೋಂದಣಿಗೆ ಸರಕಾರ ಆದೇಶ ನೀಡಿರುವುದರಿಂದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟಕ್ಕೆ ಒಳಗಾಗಿದೆ ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಕಡಬ ತಾಲೂಕಿನ ಗ್ರಾಮ ಒನ್ ಫ್ರಾಂಚೈಸಿನ ನಿರ್ವಾಹಕರು ಕಡಬ ತಹಸೀಲ್ದಾರ್ ಮೂಲಕ ಜು.24ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.


ಕಡಬ ತಾಲೂಕಿನ ಸುಮಾರು 20 ಗ್ರಾಮ್ ಒನ್ ಫ್ರಾಂಚೈಸಿ ನಿರ್ವಾಹಕರು ಮನವಿ ನೀಡಿದ್ದು, ನಾವು ಒಂದು ವರುಷದ ಹಿಂದೆ ಗ್ರಾಮ ಒನ್ ಕೇಂದ್ರಗಳನ್ನು ಬಂಡವಾಳ ಹೂಡಿಕೆ ಮಾಡಿ ಆರಂಭಿಸಿರುತ್ತೇವೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನವರು ಗ್ರಾಮ ಪಂಚಾಯತ್‌ಗಳಿಗೆ ಕಳುಹಿಸಿದ ಸುತ್ತೋಲೆಯಲ್ಲೂ ಗ್ರಾಮ ಒನ್ ಕೇಂದ್ರಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಡಬೇಕಾಗಿ ತಿಳಿಸಲಾಗಿದೆ. ಆದರೆ ಸರಕಾರದಿಂದ ನಮ್ಮ ದ ಕೇಂದ್ರಗಳಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಕೇವಲ ಐಡಿ ಮಾತ್ರ ಕೊಟ್ಟು ನಮ್ಮ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮಗೆ ಸರಿಯಾದ ಕಮಿಷನ್ ಕೂಡ ಸಿಗುತ್ತಿಲ್ಲ. ಈ ಮೊದಲು ಉಚಿತವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸಿಕೊಡುವಂತೆ ಜಿಲ್ಲಾ ಸಂಯೋಜಕರು ನಮಗೆ ತಿಳಿಸಿ, ಇದಕ್ಕೆ ಸಂಭಾವನೆ ಇದೆ ಎಂದು ಎಲ್ಲರಿಗೂ ದೂರವಾಣಿ ಮುಖಾಂತರ ತಿಳಿಸಿದ್ದರು. ಆದರೆ ಅದಕ್ಕೆ ಸರಿಯಾದ ಕಮಿಷನ್ ಅಥವಾ ಯಾವುದೇ ರೀತಿಯ ಸಂಭಾವನೆಯನ್ನು ಇಲ್ಲಿಯವರೆಗೆ ನೀಡಿರುವುದಿಲ್ಲ. ಹಲವು ಕ್ಯಾಂಪ್‌ಗಳನ್ನು ಮಾಡಿ ಸಾವಿರಾರು ರೂ ಖರ್ಚು ಮಾಡಿ ನಷ್ಟ ಅನುಭವಿಸಿರುತ್ತೇವೆ. ಅದಕ್ಕೆ ಮಾಡಿದ ಖರ್ಚು ಕೂಡ ನಮಗೆ ಕೊಟ್ಟಿಲ್ಲ. ಇದೀಗ ಸರಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಉಚಿತವಾಗಿ ಮಾಡಿಕೊಡಬೇಕೆಂದು ಒತ್ತಡ ಹಾಕುತ್ತಿದ್ದಾರೆ.ನಾವು ನೀಡುವ ಸೇವೆಗಳಿಗೆ ಹಣವನ್ನು ಅದೇ ದಿನ ಜಮಾ ಮಾಡಬೇಕು. ಎಲ್ಲವನ್ನೂ ಉಚಿತವಾಗಿ ಮಾಡಿಕೊಟ್ಟರೆ ನಮ್ಮ ಗ್ರಾಮ ಒನ್ ಕೇಂದ್ರದ ಖರ್ಚು ವೆಚ್ಚಗಳನ್ನು ಯಾರು ಕೊಡುವುದು ನಮ್ಮ ಜೀವನೋಪಾಯಕ್ಕೆ ನಾವು ಏನು ಮಾಡಬೇಕು. ತಿಂಗಳ ಖರ್ಚು ಕೊಠಡಿ ಬಾಡಿಗೆ ವಿದ್ಯುತ್ ಬಿಲ್, ಇಂಟರ್ನೆಟ್ ಬಿಲ್ ಪ್ರಿಂಟ್ ಪೇಪರ್ ಮತ್ತು ಇತರ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮಒನ್ ಐಡಿ ಪಡೆದುಕೊಂಡು ಸೈಬರ್ ಸೆಂಟರ್‌ಗಳಿಂದ ದುರುಪಯೋಗ:

ಈ ನಡುವೆ ಕೆಲವು ಸೇವಾ ಕೇಂದ್ರದ ಹೆಸರಿನಲ್ಲಿ ಅನಧಿಕೃತವಾಗಿ ಸೇವಾ ಸಿಂಧು ಐಡಿಯಲ್ಲಿ ಕೆಲಸ ಮಾಡಿಕೊಂಡು ಹಣ ಮಾಡುತ್ತಿದ್ದಾರೆ. ನಾವು ಎಲ್ಲವನ್ನು ಸಹಿಸಿಕೊಂಡು ವಿಧೇಯತೆಯಿಂದ ಕೆಲಸ ಮಾಡುತ್ತಿದ್ದರೂ, ಅದನ್ನು ಸಹಿಸಲಾಗದೆ ಕೆಲವರು ಗ್ರಾಮ್ ಒನ್‌ ನಾಗರಿಕ ಸೇವಾ ಕೇಂದ್ರದ ವಿರೋಧಿಗಳು ನಮ್ಮ ವಿರುದ್ದ ವಿವಿಧ ರೀತಿಯ ಷಡ್ಯಂತರಗಳನ್ನು ಮಾಡಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಕೆಲಸ ಮಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಗ್ರಾಮಒನ್‌ ಪ್ರಾಂಚೈಸಿ ನಿರ್ವಾಹಕರು ಉಪಸ್ಥಿತರಿದ್ದರು, ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮನವಿ ಸ್ವೀಕರಿಸಿದರು

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟ‌ರ್ ತುರ್ತು ಭೂಸ್ಪರ್ಷ - ಇಬ್ರಾಹಿಂ ರೈಸಿ ಸ್ಥಿತಿ ಹೇಗಿದೆ?

Posted by Vidyamaana on 2024-05-19 20:56:19 |

Share: | | | | |


ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟ‌ರ್ ತುರ್ತು ಭೂಸ್ಪರ್ಷ - ಇಬ್ರಾಹಿಂ ರೈಸಿ ಸ್ಥಿತಿ ಹೇಗಿದೆ?

ಟೆಹರಾನ್ : ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಠಿಣ ಪರಿಸ್ಥಿತಿಯಲ್ಲಿ ತುರ್ತು ಭೂ ಸ್ಪರ್ಷ ಮಾಡಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ತಸ್ನೀಮ್‌ ರವಿವಾರ ಎಕ್ಸ್‌ನಲ್ಲಿ ವರದಿ ಮಾಡಿದೆ. ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಮಂಜಿನ ಪರಿಸ್ಥಿತಿಗಳಿಂದಾಗಿ ಹೆಲಿಕಾಪ್ಟರ್ ಕಠಿಣ ಪರಿಸ್ಥಿತಿಯಲ್ಲಿ ತುರ್ತು ಭೂ ಸ್ಪರ್ಷ ಮಾಡಿತು.

ರಾಜ್ಯ ಸರ್ಕಾರದಿಂದ ಸುಳ್ಳು ಸುದ್ದಿ ತಡೆಗೆ ಮಹತ್ವದ ಕ್ರಮ IDTU ಕಾರ್ಯ ನಿರ್ವಾಹಣೆಗೆ 5 ಸಂಸ್ಥೆಗಳ ಆಯ್ಕೆ

Posted by Vidyamaana on 2023-12-12 11:56:38 |

Share: | | | | |


ರಾಜ್ಯ ಸರ್ಕಾರದಿಂದ ಸುಳ್ಳು ಸುದ್ದಿ ತಡೆಗೆ ಮಹತ್ವದ ಕ್ರಮ  IDTU ಕಾರ್ಯ ನಿರ್ವಾಹಣೆಗೆ 5 ಸಂಸ್ಥೆಗಳ ಆಯ್ಕೆ

ಬೆಂಗಳೂರು : ರಾಜ್ಯ ಸರ್ಕಾರವು ಸುಳ್ಳು ಸುದ್ದಿ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಮಾಹಿತಿ ತಿರುಚುವಿಕೆ ಪತ್ತೆ ಘಟಕದ (IDTU) ಕಾರ್ಯ ನಿರ್ವಹಣೆಗೆ ಐದು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.ರಾಜ್ಯ ಸರ್ಕಾರವು ಇನ್ಫೋ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌, ಗೌರಿ ಮೀಡಿಯಾ ಟ್ರಸ್ಟ್‌, ಟೈಲೈಕ್‌ ಟೆಕ್ನಾಲಜಿ ಲಿಮಿಟೆಡ್‌, ನ್ಯೂಸ್‌ ಪ್ಲಸ್‌ ಕಮ್ಯುನಿಕೇಷನ್‌ ಮತ್ತು ಒಡಬ್ಲ್ಯೂ ಡಾಟಾ ಲೀಡ್ಸ್‌ ಸಂಸ್ಥೆಗಳನ್ನು ಸುಳ್ಳು ಸುದ್ದಿ ಪತ್ತೆಗೆ ಆಯ್ಕೆ ಮಾಡಲಾಗಿದೆ.ರಾಜ್ಯ ಸರ್ಕಾರವು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಪೊಲೀಸ್‌ ಮಹಾನಿರ್ದೇಶಕರ ನೇತೃತ್ವದಲ್ಲಿ ಐಡಿಟಿಯು ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ.

ಚಾರ್ಮಾಡಿ ಘಾಟಿಯಲ್ಲಿ ಬ್ಲಾಕ್ ನಲ್ಲಿ ಸಿಲುಕಿ ಗರ್ಭಿಣಿ ಪರದಾಟ

Posted by Vidyamaana on 2023-07-08 13:47:02 |

Share: | | | | |


ಚಾರ್ಮಾಡಿ ಘಾಟಿಯಲ್ಲಿ ಬ್ಲಾಕ್ ನಲ್ಲಿ ಸಿಲುಕಿ ಗರ್ಭಿಣಿ ಪರದಾಟ

   ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಅದರಲ್ಲಿ ಖಾಸಗಿ ವಾಹನದಲ್ಲಿ ಬಂದಿದ್ದ  ಧರ್ಮಸ್ಥಳದಿಂದ ಬೆಂಗಳೂರಿಗೆ ಸಾಗುತ್ತಿದ್ದ ಗರ್ಭಿಣಿ ಮಹಿಳೆ ಚೈತ್ರಾ ಎಂಬವರು ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಶುಕ್ರವಾರ ಚಾರ್ಮಾಡಿ ಘಾಟ್ ನಲ್ಲಿ ಗಂಟೆಗಟ್ಟಲೆ  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥತೆಗೊಂಡಿದ್ದರಿಂದ ಸ್ಥಳದಲ್ಲಿದ್ದ  ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಪ್ ಅವರು ಅವರ ಅಂಬುಲೆನ್ಸ್ ನಲ್ಲಿ ವಾಹನ ದಟ್ಟಣೆಯಲ್ಲೂ ಸೈರನ್ ಹಾಕಿ ಮೂಡಿಗೆರೆ ಆಸ್ಪತ್ರೆಗೆ ತಂದು ದಾಖಲು ಮಾಡಿದರು.ಇದರಿಂದ ಗರ್ಭಿಣಿ ಮಹಿಳೆಯನ್ನು ತುರ್ತು ಸಮಯದಲ್ಲಿ ಪ್ರಾಣ ಉಳಿಸಿದಂತಾಯಿತು ಎಂದು ಕುಟುಂಬದವರು ಆರೀಫ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.



Leave a Comment: