KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ದರ್ಬೆಯಲ್ಲಿರುವ ನ್ಯೂ ಮಂಗಳೂರು ಎಲೆಕ್ಟ್ರೋನಿಕ್ಸಿನಲ್ಲಿ ಕಾಂಬೋ ಆಫರ್

Posted by Vidyamaana on 2023-09-06 17:09:48 |

Share: | | | | |


ದರ್ಬೆಯಲ್ಲಿರುವ ನ್ಯೂ ಮಂಗಳೂರು ಎಲೆಕ್ಟ್ರೋನಿಕ್ಸಿನಲ್ಲಿ ಕಾಂಬೋ ಆಫರ್

ಪುತ್ತೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನ್ಯೂ ಮಂಗಳೂರು ಎಲೆಕ್ಟ್ರೋನಿಕ್ಸ್ ವಿಶೇಷ ಆಫರ್ಗಳನ್ನು ಗ್ರಾಹಕರ ಮುಂದಿಟ್ಟಿದೆ.

ಪುತ್ತೂರಿನ ದರ್ಬೆ ಬುಶ್ರಾ ಟವರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ಮಂಗಳೂರು ಎಲೆಕ್ಟ್ರೋನಿಕ್ಸ್ ಕಾಂಬೋ ಆಫರ್ಗಳನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಈ ಆಫರ್ ಉತ್ಸವದವರೆಗೆ ನೀಡಲಾಗುತ್ತಿದ್ದು, ಕೆಲವೇ ದಿನಗಳವರೆಗೆ ಸೀಮಿತಗೊಳಿಸಲಾಗಿದೆ.

ಆಯ್ದ ಉತ್ಪನ್ನಗಳ ಖರೀದಿ ಮೇಲೆ ಶೇ. 26ರವರೆಗೆ ಕ್ಯಾಶ್ಬ್ಯಾಕ್ ನೀಡಲಾಗುತ್ತದೆ. ಮಾತ್ರವಲ್ಲ, ಆಯ್ದ ಉತ್ಪನ್ನಗಳಿಗೆ 888 ರೂ.ನಿಂದ ನಿಗದಿತ ಇಎಂಐ ಪ್ರಾರಂಭವಾಗಲಿದೆ. ಆಯ್ದ ಕೆಲ ಉತ್ಪನ್ನಗಳಿಗೆ 1 ಕಂತು ಉಚಿತವಾಗಿಯೂ ನೀಡಲಾಗುತ್ತಿದೆ.

ಇದರೊಂದಿಗೆ ಕಾಂಬೋ ಆಫರ್ಗಳು ಗ್ರಾಹಕರನ್ನು ಸೆಳೆಯುತ್ತಿವೆ. 4345 ರೂ.ನ ವಿಕ್ಟರ್ 600 ವ್ಯಾಟಿನ ಕುಕ್ಕರ್ ಹಾಗೂ 6944 ರೂ.ನ ವಿವಾ ಸ್ಕೈ - 2b ಗ್ಯಾಸ್ ಸ್ಟೌ ಅನ್ನು 6790 ರೂ.ಗೆ ನೀಡಲಾಗುತ್ತಿದೆ. ವೀಡಿಯಂ ಕಂಪೆನಿಯ ಈ ಉತ್ಪನ್ನಗಳಿಗೆ 5 ವರ್ಷದ ವಾರೆಂಟಿಯೂ ಇದೆ.

ಇನ್ನು, 14100 ರೂ.ನ 4 ಬರ್ನಲಿನ ಗ್ಯಾಸ್ ಸ್ಟೌ ಹಾಗೂ 12595 ರೂ.ನ ಎಲೆಕ್ಟ್ರಿಕ್ ಕಿಚನ್ ಚಿಮ್ನಿ ಅನ್ನು 14690 ರೂ.ಗೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಭ್ರಮ ನಿಮ್ಮ ಮನೆ ಬಾಗಿಲಿಗೆ ಎನ್ನುವ ಸ್ಲೋಗನಿನೊಂದಿಗೆ ನೀಡಲಾಗುತ್ತಿರುವ ಕಾಂಬೋ ಆಫರಿನ ಜೊತೆಗೆ 100ಕ್ಕೂ ಹೆಚ್ಚು ಮಾಡೆಲ್‌ನ ಫ್ಯಾನ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಗ್ಯಾಸ್ ಸ್ಟವ್‌ಗಳು, 25ಕ್ಕೂ ಹೆಚ್ಚು ಮಾಡೆಲ್‌ನ ಎಲ್.ಇ.ಡಿ. ಟಿವಿಗಳು, 55ಕ್ಕೂ ಹೆಚ್ಚು ಮಾಡೆಲ್‌ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್‌ನ ಗ್ರೈಂಡರ್‌ಗಳು, 20ಕ್ಕೂ ಹೆಚ್ಚು ಮಾಡೆಲ್‌ನ ಇಂಡಕ್ಷನ್ ಸ್ಟವ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ಗ್ರಾಹಕರ ಖರೀದಿಗೆ ತೆರೆದುಕೊಳ್ಳಲಿದೆ.

ಸುಮಾರು 43 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ್ ಸಹ ಸಂಸ್ಥೆಯಲ್ಲಿ ಟಿ.ವಿ., ಫ್ರಿಡ್ಜ್ ವಾಷಿಂಗ್ ಮೆಷಿನ್ ಇತ್ಯಾದಿ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಪ್ರತೀ ಖರೀದಿಗೆ ಹಲವು ಆಕರ್ಷಕ ಉಡುಗೊರೆಗಳು ಮತ್ತು ಗಿಫ್ಟ್ ವೋಚರ್ ಪಡೆಯುವ ಸುವರ್ಣಾವಕಾಶವನ್ನು ನೀಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

Posted by Vidyamaana on 2024-04-10 06:19:14 |

Share: | | | | |


ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

ನವದೆಹಲಿ :ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಗೃಹ ಸಚಿವಾಲಯವು ಝಡ್ ಶ್ರೇಣಿಯ ಭದ್ರತೆ ಕಲ್ಪಿಸಿದೆ.ಚುನಾವಣಾ ಆಯೋಗದ ಕಚೇರಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಬೆದರಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಭದ್ರತೆ ನೀಡಿದೆ

ಕಾಡಿನೊಳಗೆ ಹಸಿವಿನಿಂದ ಸಾವನ್ನಪ್ಪಿದ 6 ಮಂದಿ ಮ್ಯಾನ್ಮಾರ್ ಕಳ್ಳ ಬೇಟೆಗಾರರು

Posted by Vidyamaana on 2024-02-19 08:04:09 |

Share: | | | | |


ಕಾಡಿನೊಳಗೆ ಹಸಿವಿನಿಂದ ಸಾವನ್ನಪ್ಪಿದ 6 ಮಂದಿ ಮ್ಯಾನ್ಮಾರ್ ಕಳ್ಳ ಬೇಟೆಗಾರರು

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದೂರದ ನಾರ್ಕೊಂಡಮ್ ದ್ವೀಪದಲ್ಲಿ ಆರು ಶಂಕಿತ ಮ್ಯಾನ್ಮಾರ್ ಕಳ್ಳ ಬೇಟೆಗಾರರ ​​ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ದ್ವೀಪದಲ್ಲಿ ಬೇಟೆಗಾರರು ಹಸಿವಿನಿಂದ ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿರುವುದಾಗಿ ತೋರುತ್ತದೆ. ದ್ವೀಪವನ್ನು ತಲುಪಲು ಬಳಸಿದ್ದ ಸಣ್ಣ ದೋಣಿಯಲ್ಲಿ ಸ್ವಲ್ಪ ತೊಂದರೆ ಉಂಟಾಗಿ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಶನಿವಾರ ಚಿಕ್ಕ ನಾರ್ಕೊಂಡಮ್ ದ್ವೀಪದ ಕಾಡಿನಲ್ಲಿ ತೀರದಿಂದ ಕೆಲವು ಮೀಟರ್ ದೂರದಲ್ಲಿ ಶವಗಳು ಬಿದ್ದಿವೆ ಎಂದು ಅಧಿಕಾರಿ ಹೇಳಿದರು.

ಭಾರತದ ಪೂರ್ವ ಭಾಗದಲ್ಲಿದೆ, ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯ ನಾರ್ಕೊಂಡಮ್ ಮ್ಯಾನ್ಮಾರ್‌ನ ಕೊಕೊ ದ್ವೀಪದಿಂದ ಕೇವಲ 126 ಕಿಮೀ ದೂರದಲ್ಲಿದೆ. ಇದು ಆಂಡಿಸೈಟ್, ಜ್ವಾಲಾಮುಖಿ ಬಂಡೆಯಿಂದ ರೂಪುಗೊಂಡಿದೆ. ಈ ದ್ವೀಪವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಸುಪ್ತ ಜ್ವಾಲಾಮುಖಿ ಎಂದು ವರ್ಗೀಕರಿಸಿದೆ.

ಸರಿಸುಮಾರು 7.6 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ದ್ವೀಪ ಮ್ಯಾನ್ಮಾರ್ ಬೇಟೆಗಾರರಿಗೆ ಬೇಟೆಯಾಡುವ ಸ್ಥಳವಾಗಿದೆ.ಫೆಬ್ರವರಿ 14 ರಂದು, ಅಂಡಮಾನ್ ಪೊಲೀಸರು ಶೋಧ ಕಾರ್ಯಾಚರಣೆಯ ಸಮಯದಲ್ಲಿ ನಾರ್ಕೊಂಡಮ್ ದ್ವೀಪದಿಂದ ಇಬ್ಬರು ಮ್ಯಾನ್ಮಾರ್ ಕಳ್ಳ ಬೇಟೆಗಾರರನ್ನು ಬಂಧಿಸಿ ಪೋರ್ಟ್ ಬ್ಲೇರ್‌ಗೆ ಕರೆತಂದು ಸಿಐಡಿಗೆ ಒಪ್ಪಿಸಿದ್ದಾರೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಅಲೋಕ್‌ ಮೋಹನ್‌ ನೇಮಕ

Posted by Vidyamaana on 2023-08-05 13:01:52 |

Share: | | | | |


ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಅಲೋಕ್‌ ಮೋಹನ್‌ ನೇಮಕ

ಬೆಂಗಳೂರು:ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕರಾಗಿ ಅಲೋಕ್‌ ಮೋಹನ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೆಲ ತಿಂಗಳ ಹಿಂದೆ ಕರ್ನಾಟಕದ ಡಿಜಿ-ಐಜಿಪಿಯಾಗಿದ್ದ ಪ್ರವೀಣ್‌ ಸೂದ್‌ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಅಲೋಕ್‌ ಮೋಹನ್‌ ಅವರನ್ನು ನಿಯೋಜಿಸಲಾಗಿತ್ತು.


ಪ್ರವೀಣ್ ಸೂದ್‌ ನಿರ್ಗಮನದ ಬಳಿಕ ಡಿಜಿ-ಐಜಿಪಿಯಾಗಿ ಅಲೋಕ್‌ ಮೋಹನ್‌ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಈಗ ಆ ಸ್ಥಾನಕ್ಕೆ ಅವರನ್ನೇ ನೇಮಿಸಿ ಸರ್ಕಾರ ಆದೇಶಿಸಿದೆ.

ಬನ್ನೇರುಘಟ್ಟ ದಸರಾದ ಆನೆಯನ್ನು ಸಾಗಿಸುತ್ತಿದ್ದ ಲಾರಿ ತಮಿಳುನಾಡಿನಲ್ಲಿ ಅಪಘಾತ; ಚಾಲಕ ಸಾವು

Posted by Vidyamaana on 2023-10-25 16:32:41 |

Share: | | | | |


ಬನ್ನೇರುಘಟ್ಟ ದಸರಾದ ಆನೆಯನ್ನು ಸಾಗಿಸುತ್ತಿದ್ದ ಲಾರಿ ತಮಿಳುನಾಡಿನಲ್ಲಿ  ಅಪಘಾತ; ಚಾಲಕ ಸಾವು

ಮೈಸೂರು : ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್‌ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಅದೃಷ್ಟವಶಾತ್‌ ಲಾರಿಯಲ್ಲಿದ್ದ ಆನೆ ಪ್ರಾಣಾಪಾಯದಿಂದ ಪಾರಾಗಿದೆ. ನಂತರ, ಕ್ರೇನ್‌ ತರಿಸಿ ಆನೆಯನ್ನು ರಕ್ಷಣೆ ಮಾಡಲಾಗಿದೆ.


ಬೆಂಗಳೂರಿನ ಹೊರವಲಯ ಬನ್ನೇರುಘಟ್ಟ ಬಳಿ ದಸರಾ ಉತ್ಸವಕ್ಕೆ ತರಲಾಗಿದ್ದ ತಮಿಳುನಾಡಿನ ತಿರುಚ್ಚಿಯ ಆನೆಯನ್ನು ವಾಪಸ್‌ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಲಾರಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಚಾಲಕ ಮೂತ್ರ ವಿಸರ್ಜನೆಗೆ ತೆರಳಿದಾಗ ಲಾರಿಯನ್ನು ಹ್ಯಾಂಡ್‌ ಬ್ರೇಕ್‌ ಮಾಡದ ಹಿನ್ನೆಲೆಯಲ್ಲಿ ಲಾರಿ ಮುಂದಕ್ಕೆ ಚಲಿಸಿ ಮುಂಭಾಗದಲ್ಲಿದ್ದ ಚಾಲಕನ ಮೇಲೆ ಹರಿದಿದೆ. ಇದರಿಂದ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಇಳಿದಿದ್ದ ಲಾರಿಯಲ್ಲಿ ಆನೆ ನಿಂತುಕೊಂಡಿದ್ದು, ಅದನ್ನು ಕ್ರೇನ್‌ ಮೂಲಕ ಸಂರಕ್ಷಣೆ ಮಾಡಲಾಗಿದೆ.ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶಾನಮಾವು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ತಮಿಳುನಾಡಿನ ಪುದುಕ್ಕೊಟ್ಟೈ ಮೂಲದ ಆರೋಗ್ಯ ಸ್ವಾಮಿ ಮೃತಪಟ್ಟ ದುರ್ದೈವಿ ಆಗಿದ್ದಾನೆ. ಲಾರಿ ಮುಂದೆ ಮೂತ್ರ ವಿಸರ್ಜನೆಗೆ ಮಾಡುವಾಗ ಡ್ರೈವರ್ ಧಾರಣ ಸಾವನ್ನಪ್ಪಿದ್ದಾರೆ. ರಸ್ತೆಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವಾಗ ಘಟನೆ ನಡೆದಿದೆ. ಲಾರಿಯ ಹ್ಯಾಂಡ್‌ ಬ್ರೇಕ್‌ ಮಾಡದ ಹಿನ್ನೆಲೆಯಲ್ಲಿ ಲಾರಿಯಲ್ಲಿದ್ದ ಆನೆ ಸ್ವಲ್ಪ ಅಲುಗಾಡಿದ್ದರಿಂದ ಲಾರಿ ಸೀದಾ ಮುಂದಕ್ಕೆ ಹೋಗಿ ಚಾಲಕನ ಮೇಲೆ ಹರಿದಿದೆ.ತಿರುಚ್ಚಿ ಜಿಲ್ಲೆಯ ಶ್ರೀ ರಂಗಂ ಪ್ರದೇಶಕ್ಕೆ ಸೇರಿದ ಭಾಸ್ಕರನ್ ಬಳಿ 3 ಸಾಕಾನೆಗಳು ಇದ್ದವು. ಇದರಲ್ಲಿ ಕರ್ನಾಟಕ ರಾಜ್ಯದ ಬನ್ನೇರುಘಟ್ಟ ಪ್ರದೇಶದ ಪೆರುಮಾಳ್ ದೇವಸ್ಥಾನದಲ್ಲಿ ದಸರಾ ಹಬ್ಬವನ್ನು ಆಚರಿಸಲು ರಾಣಿ ಆನೆಯನ್ನು ಕರೆದೊಯ್ಯಲಾಗಿತ್ತು. 6 ಜನರು ರಾತ್ರಿ ಈಚರ್ ವಾಹನದಲ್ಲಿ ತಿರುಚ್ಚಿಗೆ ತೆರಳಿದರು. ಆದರೆ, ಆನೆಯಿರುವ ಸ್ಥಳಕ್ಕೆ ತೆರಳುವ ಮುನ್ನವೇ ದುರಂತ ಸಂಭವಿಸಿದೆ. ಆನೆಯ ರಕ್ಷಣಾ ಕಾರ್ಯದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತ ಮಾಡಲಾಗಿತ್ತು.ಎರಡು ಕ್ರೇನ್‌ಗಳ ಸಹಾಯದಿಂದ ಆನೆ ಯನ್ನ ಸುರಕ್ಷಿತವಾಗಿ ಹೊರತೆಗೆಯಲಾಯಿತು. ನಂತರ ಲಾರಿ ಚಾಲಕ ಆರೋಗ್ಯಸ್ವಾಮಿ ಅವರ ಮೃತದೇಹವನ್ನು ಹೂಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದರಿಂದ ಮಧ್ಯರಾತ್ರಿ ಸುಮಾರು 1 ಗಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೂಸೂರು, ಅನ್ನೋ ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.

ಬಿಜೆಪಿ - ಜೆಡಿಎಸ್ ಪಾದಯಾತ್ರೆ :ಎಚ್ ಡಿಕೆ ತೆರಳಿದ ಬಳಿಕ ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗಿ

Posted by Vidyamaana on 2024-08-04 06:18:29 |

Share: | | | | |


ಬಿಜೆಪಿ - ಜೆಡಿಎಸ್ ಪಾದಯಾತ್ರೆ :ಎಚ್ ಡಿಕೆ ತೆರಳಿದ ಬಳಿಕ ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗಿ

ರಾಮನಗರ : ಮುಡಾ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಪಾದಯಾತ್ರೆಯಲ್ಲಿ ಹಾಜರಾಗಿ ಹೆಜ್ಜೆ ಹಾಕಿದ್ದಾರೆ.ಪ್ರಜ್ವಲ್​​ ರೇವಣ್ಣ ಪೆನ್​​​​​​​​ಡ್ರೈವ್​​​​ ವಿಚಾರ ಮುಂದಿಟ್ಟು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರಹಾಕಿ ಪಾದಯಾತ್ರೆಗೆ ಬರುವುದನ್ನು ವಿರೋಧಿಸಿದ್ದರು.

Recent News


Leave a Comment: