ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


BIG NEWS : ರಾಜ್ಯದಲ್ಲಿ ಸೆ. 9 ರಿಂದ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

Posted by Vidyamaana on 2024-09-05 07:51:01 |

Share: | | | | |


BIG NEWS : ರಾಜ್ಯದಲ್ಲಿ ಸೆ. 9 ರಿಂದ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ (CMC & TMC) ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯವಾಗಿದ್ದು, ಸೆಪ್ಟೆಂಬರ್ 9 ರಿಂದ ನೋಂದಣಿ ಪ್ರಾರಂಭವಾಗಲಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ನೊಂದಣಿಗೆ ಸಂಬಂಧಿಸಿದಂತೆ  ಇದೇ ಸೆ.9 ರಿಂದ ಜಾರಿಗೆ ಬರುವಂತೆ ಇ-ಆಸ್ತಿ ದಾಖಲೆ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.

ವಿಟ್ಲ ಯುವಕನ ಮೇಲೆ ಹಲ್ಲೆ ಪ್ರಕರಣ: ದೂರು-ಪ್ರತಿದೂರು ದಾಖಲು

Posted by Vidyamaana on 2024-04-03 12:03:39 |

Share: | | | | |


ವಿಟ್ಲ  ಯುವಕನ ಮೇಲೆ ಹಲ್ಲೆ ಪ್ರಕರಣ: ದೂರು-ಪ್ರತಿದೂರು ದಾಖಲು

ವಿಟ್ಲ: ಅಡ್ಯನಡ್ಕ ಸಮೀಪದ ನಡೆದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಅಡ್ಯನಡ್ಕ ನಿವಾಸಿ ಮಹಮ್ಮದ್ ಅಲಿ ಎ (36)ಎಂಬವರ ದೂರಿನಂತೆ ಮಧ್ಯಾಹ್ನ, ಗಣೇಶ್ ಎಂಬಾತನು ಮನೆಯ ಬಳಿಗೆ ಬಂದು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು, ಅವ್ಯಾಚವಾಗಿ ಬೈದು, ತಾನು ತಂದಿದ್ದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಸ್ಥಳೀಯರು ಬರುವುದನ್ನು ಕಂಡು ಆರೋಪಿಯು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ

Posted by Vidyamaana on 2023-08-29 02:07:54 |

Share: | | | | |


ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ

ಪುತ್ತೂರು: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಸ್‌ನ ವತಿಯಿಂದ ನಡೆಸಲಾದ ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರ್ಯಾಂಡ್‌ ಫಿನಾಲೆಯು ಇನ್ನರ್‌ವೀಲ್‌ ಕ್ಲಬ್‌ನ ಸಹಯೋಗದಲ್ಲಿ ನಡೆಯಿತು.


ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್ (ಪ್ರಥಮ), ಮೃನಾಲ್ (ದ್ವಿತೀಯ), ವಿಭಾಶ್ರೀ (ತೃತೀಯ) ಹಾಗೂ ಸೀನಿಯರ್ ವಿಭಾಗದಲ್ಲಿ ಮಾಳವಿಕ (ಪ್ರಥಮ), ವಿನೋದ್ ಜಾಲ್ಸೂರ್ (ದ್ವಿತೀಯ) ಹಾಗೂ ಪವಿತ್ರ ಆರ್ (ತೃತೀಯ) ಬಹುಮಾನಗಳನ್ನು ಪಡೆದರು.


ಪ್ರಥಮ ಬಹುಮಾನ ಪಡೆದವರಿಗೆ ಗಾನ ಕೋಗಿಲೆ, ಚಿನ್ನದ ನಾಣ್ಯ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಹಾಗೂ ಬೆಳ್ಳಿಯ ನಾಣ್ಯ ಮತ್ತು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬೆಳ್ಳಿಯ ನಾಣ್ಯ ನೀಡಿ ಗೌರವಿಸಲಾಯಿತು. ಗಣೇಶ್ ಮಂಗಳೂರು, ಮಿಥುನ್ ರಾಜ್ ಕಬಕ ಹಾಗೂ ವಿದ್ಯಾಶ್ರೀ ಕಲ್ಲಡ್ಕ ತೀರ್ಪುಗಾರರಾಗಿದ್ದರು.


ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಗಾನರಥ ಗಾಯನ ಸ್ಪರ್ಧೆಯು ಕಲ್ಲಡ್ಕ, ವಿಟ್ಲ, ಈಶ್ವರಮಂಗಲ, ಕಬಕ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ಳಾರೆ, ಸುಬ್ರಹ್ಮಣ್ಯ ಹಾಗೂ ಪುತ್ತೂರು ಸಹಿತ 9 ಕಡೆಗಳಲ್ಲಿ ಯಶಸ್ವಿಯಾಗಿ ನಡೆದು ಬಂದು ಒಟ್ಟು 400ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಉದಯಕುಮಾರ್ ಲಾಯಿಲ ಅವರ ನೇತೃತ್ವದಲ್ಲಿ ಗಾನರಥ ಸಂಯೋಜನೆಗೊಂಡಿತು.


ಪುತ್ತೂರಿನ ಜೈನಭವನದಲ್ಲಿ ಶನಿವಾರ (ಆ.26) ನಡೆದ ಗ್ರ್ಯಾಂಡ್ ಫಿನಾಲೆಯನ್ನು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹಾಗೂ ಇನ್ನರ್‌ವೀಲ್ ಕ್ಲಬ್‌ ಅಧ್ಯಕ್ಷೆ ಅಶ್ವಿನಿಕೃಷ್ಣ ದೀಪ ಬೆಳಗಿ ಉದ್ಘಾಟಿಸಿದರು.


ಕಾರ್ಯಕ್ರಮ ಸಂಯೋಜಕರಾದ ಆನಂದ ಕುಲಾಲ್, ರಮೇಶ್ ಕುಲಾಲ್, ಮುಳಿಯ ಜ್ಯುವೆಲ್ಸ್‌ನ ಶಾಖಾ ಪ್ರಬಂಧಕ ನಾಮದೇವ್ ಮಲ್ಯ, ಸ್ಟೋರ್ ಮ್ಯಾನೇಜರ್ ಪ್ರವೀಣ್ ಮತ್ತು ಸಂಜೀವ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನೃತ್ಯೋಪಾಸನಾ ಕಲಾ ಕೇಂದ್ರದ ನಿರ್ದೇಶಕಿ ಶಾಲಿನಿ ಆತ್ಮಭೂಷಣ್ ಮಾತನಾಡಿ, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮುಳಿಯ ಜ್ಯುವೆಲ್ಸ್‌ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಅವರಿಗೆ ವೇದಿಕೆ ಒದಗಿಸುವ ಮಹತ್ತರವಾದ ಕಾರ್ಯ ಮಾಡಿರುವುದು ಶ್ಲಾಘನೀಯ. ಇದರಿಂದಾಗಿ ದೂರದ ಬೆಂಗಳೂರು, ಮಂಗಳೂರುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಪುತ್ತೂರಿನಲ್ಲಿಯೂ ಕಾಣುವಂತಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಮುಳಿಯ ಗಾನರಥ ಸೀಸನ್-1 ಮುಕ್ತಾಯಗೊಂಡಿದೆ. ಇನ್ನು ಸೀಸನ್ -2 ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಾರಂಭಗೊಂಡು ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಗಾನ ಮತ್ತು ನೃತ್ಯ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಭೆಗಳು ಬೆಳೆಯಲು ಪರಿಶ್ರಮ ಮುಖ್ಯ ಎಂದರು.


ತೀರ್ಪುಗಾರರಾದ ವಿದ್ಯಾಶ್ರೀ ಕಲ್ಲಡ್ಕ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ವೇದಿಕೆ ಒದಗಿಸುತ್ತಿರುವ ಉತ್ತಮ ಕಾರ್ಯ ಮಾಡಿರುವ ಮುಳಿಯ ಜ್ಯುವೆಲ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಗಣೇಶ್ ಮಂಗಳೂರು ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಮುಳಿಯ ಜ್ಯವೆಲ್ಸ್‌ ಚಿನ್ನದಂತಹ ವೇದಿಕೆ ಒದಗಿಸಿದೆ. ಇಲ್ಲಿನ ಪ್ರತಿಭೆಗಳು ಸಾಣೆ ಹಿಡಿದ ವಜ್ರದಂತೆ ಹೊಳೆಯಲಿ ಎಂದರು.


ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ಕಲೆ, ಸಾಹಿತ್ಯ, ರಾಗ, ತಾಳವನ್ನು ಗಮನದಲ್ಲಿಟ್ಟುಕೊಂಡು ಹಾಡಿದಾಗ ಶ್ರೋತೃಗಳಿಗೆ ರೋಮಾಂಚನ ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಕಲೆಯನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.


ನಾಯಕ್ ಕಿಚನ್ಸ್ ಯೂಟ್ಯೂಬ್ ಬ್ಲಾಗರ್ ಆಶಾ ನಾಯಕ್ ಅತಿಥಿಯಾಗಿ ಭಾಗವಹಿಸಿದ್ದರು. ತೀರ್ಪುಗಾರರಾದ ಮಿಥುನ್ ರಾಜ್, ಮುಳಿಯ ಜ್ಯುವೆಲ್ಸ್‌ನ ಪ್ರವೀಣ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮುಳಿಯ ಜ್ಯುವೆಲ್ಸ್‌ನ ಶೋರೂಂ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಸಹಪ್ರಬಂಧಕ ಯತೀಶ್, ಮೋಹಿನಿ, ನಯನಾ, ಹರಿಣಾಕ್ಷಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವಂದಿಸಿದರು. ನಿರೂಪಕಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ನಾಟ್ಯರಂಜಿನಿ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆದವು.

ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

Posted by Vidyamaana on 2024-02-06 22:12:23 |

Share: | | | | |


ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

ವಿಟ್ಲ :ಪ್ರೀತಿಸುವ ನಾಟಕವಾಡಿ ಕೈಕೊಟ್ಟಿರುವ ಯುವಕನ ಮನೆ ಮುಂದೆ ಯುವತಿಯೊಬ್ಬಳು. ಮೊಕ್ಕಾಂ ಹೂಡಿ ನಿರಶನ ನಡೆಸಿದ ವಿಚಿತ್ರ ಹಾಗೂ ಅಪರೂಪದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 6 ರಂದು ಸಂಜೆ ನಡೆದಿದೆ. ಯುವತಿಯನ್ನು ಮನವೊಲಿಸಲು ವಿಫಲರಾದ ಪೊಲೀಸರು ರಾತ್ರಿ ವೇಳೆ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರ ಭಾರತ ಮೂಲದ ಯುವತಿ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್  ಸಂಸ್ಥೆಯೂಂದನ್ನು ನಡೆಸುತ್ತಿದ್ದು, ಅಲ್ಲಿ ಆಕೆಗೆ ಅಡ್ಯನಡ್ಕದ ಯುವಕನೂಬ್ಬನ ಪರಿಚಯವಾಗಿದೆ. ಯುವಕ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮುಂದಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ.


ಇಂದು ಸಂಜೆ ಅಡ್ಯನಡ್ಕದ ಯುವಕನ ಮನೆ ಬಳಿ ಬಂದ ಸಂತ್ರಸ್ತ ಯುವತಿ ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ. ಈಗ ಹಣವು ವಾಪಸ್ಸು ನೀಡದೆ, ವಿವಾಹವು ಆಗದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಕೂತು ಪ್ರತಿಭಟನೆ ನಡೆಸಿದ್ದಾಳೆ.ಯುವಕ ಹಾಗೂ ಯುವತಿ ಭಿನ್ನ ಕೋಮಿಗೆ ಸೇರಿದವರೆಂದು ಮಾಹಿತಿ ಹಬ್ಬಿದ ಹಿನ್ನಲೆಯಲ್ಲಿ, ಅಡ್ಯನಡ್ಕ ಪೇಟೆಯಲ್ಲಿ ಎರಡು ಕೋಮಿನವರು ಜಮಾಯಿಸಿದ್ದರು.ಯುವಕನ ಊರವರು ಯುವತಿಗಾದ ಹಣಕಾಸಿನ ನಷ್ಟವನ್ನು ಭರಿಸಿ ಕೊಡುವುದಾಗಿ ಹೇಳಿದರೂ ಒಪ್ಪದ ಯುವತಿ ಯುವಕನೇ ಬೇಕೆಂದು ಪಟ್ಟು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ಬಳಿಕ ರಾತ್ರಿ ಆಕೆಯನ್ನು. ಪೊಲೀಸರು ವಿಟ್ಲ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಸೆ 10 : ಬೆಂಗಳೂರಲ್ಲಿ ಎಸ್ಸೆಸ್ಸಫ್ ಗೋಲ್ಡನ್ ಫಿಫ್ಟಿ ಸಮಾವೇಶ

Posted by Vidyamaana on 2023-09-09 19:25:42 |

Share: | | | | |


ಸೆ 10 : ಬೆಂಗಳೂರಲ್ಲಿ ಎಸ್ಸೆಸ್ಸಫ್ ಗೋಲ್ಡನ್ ಫಿಫ್ಟಿ ಸಮಾವೇಶ

ಪುತ್ತೂರು : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ( ಎಸ್ಸೆಸ್ಸಫ್ ) ಇದರ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಗೋಲ್ಡನ್ ಫಿಫ್ಟಿ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು, ಚಿಂತಕರು ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ ಪುತ್ತೂರು ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಮುಸ್ಲಿಂ ಜಮಾಅತ್, ಎಸ್‌ವೈಎಸ್ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಗೋಲ್ಡನ್ ಫಿಫ್ಟಿ ಸಮಾವೇಶದ ಸಮಾರೋಪ ಸಮಾರಂಭ ನವಂಬರ್ 23,24,25 ರಂದು ಮುಂಬೈಯ ಏಕತಾ ಮೈದಾನದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ನಾಯಕರು ತಿಳಿಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

Posted by Vidyamaana on 2024-02-11 21:30:15 |

Share: | | | | |


ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು, ಫೆ.11: ಬಿಜೆಪಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಬಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ನಿರಾಸೆಗೊಂಡಿದ್ದಾರೆ.


ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ.ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.


1.ಧರ್ಮಶೀಲಾ ಗುಪ್ತಾ: ಬಿಹಾರ

2.ಡಾ.ಭೀಮ್ ಸಿಂಗ್: ಬಿಹಾರ

3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್

4.ಸುಭಾಷ್ ಬರಲಾ: ಹರಿಯಾಣ

5.ನಾರಾಯಾಣ ಭಾಂಡಗೆ: ಕರ್ನಾಟಕ

6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ

7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ

8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ

9.ಸಾಧನಾ ಸಿಂಗ್: ಉತ್ತರ ಪ್ರದೇಶ

10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ

11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ

12.ನವೀನ್ ಜೈನ್: ಉತ್ತರ ಪ್ರದೇಶ

13.ಮಹೇಂದ್ರ ಭಟ್: ಉತ್ತರಾಖಂಡ್

14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

Recent News


Leave a Comment: