ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಸೇಡಿಯಾಪು: ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ ಸಹಾಯಧನ

Posted by Vidyamaana on 2023-08-08 01:29:06 |

Share: | | | | |


ಸೇಡಿಯಾಪು: ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ ಸಹಾಯಧನ

ಪುತ್ತೂರು;  ಕೆಲವು ದಿನಗಳ ಹಿಂದೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದ ಸೇಡಿಯಾಪು ನಿವಾಸಿ ಚೈತ್ರೇಶ್ ರವರ ಕುಟುಂಬಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸಹಾಯಧನವನ್ನು ವಿತರಿಸಿದರು.

ಅಪಘಾತದಿಂದ ಮೃತಪಟ್ಟ ಚೈತ್ರೇಶ್ ರವರ ತಾಯಿ ಮಂಜುಳಾ ಅವರಿಗೆ ಶಾಸಕರು ರೂ. ೨೫ ಸಾವಿರ ಮೊತ್ತವನ್ನು ವ್ಯಯುಕ್ತಿಕ ನೆಲೆಯಲ್ಲಿ ವಿತರಿಸಿದರು. ಚೈತ್ರೇಶ್ ಮನೆಗೆ ಭೇಟಿ ನೀಡಿದ್ದ ಶಾಸಕರು ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಕಂಡು ತನ್ನ ವ್ಯಯುಕ್ತಿಕ ನೆಲೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಬಿಲ್ಲವ ಸಮಾಜದ ಓಲೈಕೆಗಾಗಿ ನಾರಾಯಣ ಗುರು ನೆನಪಾಗಿದ್ದಾರೆ:ಬಿಲ್ಲವ ಸಮಾಜಕ್ಕೆ ಅಪಮಾನ ಮಾಡಿದವರನ್ನು ಸನ್ಮಾನಿಸುವ ಅಗತ್ಯ ಏನಿತ್ತು:ಸತ್ಯಜಿತ್ ಸುರತ್ಕಲ್

Posted by Vidyamaana on 2024-04-14 07:49:28 |

Share: | | | | |


ಬಿಲ್ಲವ ಸಮಾಜದ ಓಲೈಕೆಗಾಗಿ ನಾರಾಯಣ ಗುರು ನೆನಪಾಗಿದ್ದಾರೆ:ಬಿಲ್ಲವ ಸಮಾಜಕ್ಕೆ ಅಪಮಾನ ಮಾಡಿದವರನ್ನು ಸನ್ಮಾನಿಸುವ ಅಗತ್ಯ ಏನಿತ್ತು:ಸತ್ಯಜಿತ್ ಸುರತ್ಕಲ್

ಮಂಗಳೂರು, ಎ.13: ಕೇರಳ ಸರಕಾರ ಗಣರಾಜ್ಯೋತ್ಸವ ಪರೇಡಿಗೆ ನಾರಾಯಣ ಗುರು ಸ್ತಬ್ಧಚಿತ್ರ ಮಾಡಿದಾಗ, ಇಲ್ಲದ ನೆಪ ಹೇಳಿ ನಿರಾಕರಣೆ ಮಾಡಲಾಗಿತ್ತು. ಆನಂತರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಾರಾಯಣ ಗುರುಗಳ ಪಠ್ಯವನ್ನೇ ಏಳನೇ ತರಗತಿಯಿಂದ ತೆಗೆದು ಹಾಕಲಾಗಿತ್ತು. ಅದನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡಲಿಲ್ಲ. ಇದೀಗ ಬಿಲ್ಲವ ಸಮಾಜದ ಓಲೈಕೆಗಾಗಿ ಬಿಜೆಪಿಗೆ ಮತ್ತೆ ನಾರಾಯಣ ಗುರು ನೆನಪಾಗಿದ್ದಾರೆ. ಪ್ರಧಾನಿ ಮೋದಿಯವರ ಮೂಲಕ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಟಕಿಯಾಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ತಬ್ಧಚಿತ್ರದ ವಿಚಾರ ಬಂದಾಗ ಇಲ್ಲಿನ ಸಂಸದರು ಮುಂದಿನ ವರ್ಷವೇ ನಾವು ಸ್ತಬ್ಧಚಿತ್ರ ಮಾಡಿಸುತ್ತೇವೆ ಎಂದಿದ್ದರು. ಆದರೆ ಅದು ಈಡೇರಿಕೆ ಆಗಿಲ್ಲ. ನಾವು ಬಿಲ್ಲವ ಸಮಾಜದಿಂದ ಪ್ರತಿಭಟನೆ ನಡೆಸಿದಾಗಲೂ ಯಾವುದೇ ಬಿಜೆಪಿ ನಾಯಕರು ನಮಗೆ ಬೆಂಬಲ ನೀಡಿಲ್ಲ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ತೆಗೆದು ಹಾಕಿದ್ದ ರೋಹಿತ್ ಚಕ್ರತೀರ್ಥ ಅವರನ್ನು ನಮ್ಮ ವಿರೋಧ ನಡುವೆಯೇ ಮಂಗಳೂರಿಗೆ ತಂದು ಸನ್ಮಾನ ಮಾಡಿದ್ದರು

ವಿಟ್ಲ : ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ

Posted by Vidyamaana on 2023-06-27 04:36:48 |

Share: | | | | |


ವಿಟ್ಲ : ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ

ವಿಟ್ಲ : ರಿಕ್ಷಾ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಮಾಣಿಲ ತಿರುವಿನಲ್ಲಿ ನಡೆದಿದೆ.

ಮೃತ ಆಟೋ ಚಾಲಕನನ್ನು ಸುಬ್ರಹ್ಮಣ್ಯ ಪಂಜ ನಿವಾಸಿ ಸುದರ್ಶನ್ (35) ಎಂದು ಗುರುತಿಸಲಾಗಿದೆ.ಸುದರ್ಶನ್ ಹಾಗೂ ಮತ್ತೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆನ್ನಲಾಗಿದೆ.

ಆಟೋ ರಿಕ್ಷಾದಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಅಲ್ಪಸ್ವಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದು, ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು:ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ: ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರುಣ್ ಪುತ್ತಿಲ

Posted by Vidyamaana on 2024-08-21 14:01:00 |

Share: | | | | |


ಪುತ್ತೂರು:ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ: ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರುಣ್ ಪುತ್ತಿಲ

ಪುತ್ತೂರು : ಇಲ್ಲಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಸುಳ್ಳು ಪ್ರಕರಣ ದಾಖಲಾದ ವಿದ್ಯಾರ್ಥಿಯ ಮನೆಗೆ ಆ.21ರಂದು ಅರುಣ್ ಪುತ್ತಿಲ ಭೇಟಿ ನೀಡಿ ಧೈರ್ಯ ತುಂಬಿದರು.

ವಿದ್ಯಾರ್ಥಿಯ ಮಿತ್ತೂರಿನಲ್ಲಿರುವ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಶಾಲಾ ಚಟುವಟಿಕೆಯಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳುವಂತೆ ಹೇಳಿದರು. 

ಭಾರೀ ಭೂಕುಸಿತಕ್ಕೆ ಮತ್ತೆ ನಲುಗಿದ ಶಿರಾಡಿ ಘಾಟ್: ಹಲ ವಾಹನಗಳು ಜಖಂ! ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್!

Posted by Vidyamaana on 2024-07-31 19:28:50 |

Share: | | | | |


ಭಾರೀ ಭೂಕುಸಿತಕ್ಕೆ ಮತ್ತೆ ನಲುಗಿದ ಶಿರಾಡಿ ಘಾಟ್: ಹಲ ವಾಹನಗಳು ಜಖಂ! ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್!

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ.


ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಶಿರಾಡಿ ಘಾಟ್ ರಸ್ತೆ, ಇದೀಗ ಮತ್ತೆ ಭೂಕುಸಿತಕ್ಕೆ ಒಳಗಾಗಿದೆ. ಮಾರೇನಹಳ್ಳಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ.


ದಿನನಿತ್ಯ ಟ್ರಾಫಿಕ್ ಜಾಮಿಗೆ ಕಾರಣವಾಗಿದೆ Ksrtc ಮುಂಭಾಗದ ಬ್ಯಾರಿಕೇಡ್

Posted by Vidyamaana on 2023-06-10 08:00:53 |

Share: | | | | |


ದಿನನಿತ್ಯ ಟ್ರಾಫಿಕ್ ಜಾಮಿಗೆ ಕಾರಣವಾಗಿದೆ Ksrtc ಮುಂಭಾಗದ ಬ್ಯಾರಿಕೇಡ್

ಪುತ್ತೂರು: ಇಲ್ಲಿನ‌ KSRTC ಬಸ್ ನಿಲ್ದಾಣಕ್ಕೆ ಜನ ಬರಬೇಕು. ಅದಕ್ಕಾಗಿಯೇ ಬೃಹತ್ ಸಂಕೀರ್ಣ ಕಟ್ಟಿಸಿರುವುದು. ಆದರೆ ಈ ವಾಣಿಜ್ಯ ಸಂಕೀರ್ಣದ ಮುಂಭಾಗ ಪ್ರಯಾಣಿಕರ, ಸಾರ್ವಜನಿಕರ ವಾಹನ ನಿಲ್ಲಿಸಬಾರದು. ಹೇಗಿದೆ ನೋಡಿ‌ ಇಲಾಖೆಯ ಲಾಜಿಕ್!

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಬದಿಯ ಸ್ಬಲ್ಪ ಜಾಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹಿಂದೆ ಬಳಕೆ ಆಗುತ್ತಿತ್ತು. ಅಂದರೆ ತಮ್ಮ ಸ್ವಂತ ವಾಹನ ಅಥವಾ ರಿಕ್ಷಾದಲ್ಲಿ ಬರುವ ಪ್ರಯಾಣಿಕರು ಹತ್ತಿಳಿಯಲು ಇದು ಪ್ರಯೋಜನಕಾರಿಯಾಗಿತ್ತು. ಆದರೆ ಈಗ ಈ ಜಾಗವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರು ರಸ್ತೆಯಲ್ಲೇ ವಾಹನ ನಿಲ್ಲಿಸಬೇಕಾಗಿದೆ. ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಇದೀಗ ರಸ್ತೆಯಿಡೀ ಬ್ಲಾಕ್.

ನಿಲ್ದಾಣಕ್ಕೆ ಬರುವ ವಾಹನಗಳು, ನಿರ್ಗಮಿಸುವ ಬಸ್ ಗಳು, ಎಪಿಎಂಸಿ ರಸ್ತೆಯಿಂದ ಆಗಮಿಸುವ ಸಾರ್ವಜನಿಕ ವಾಹನಗಳು ಮುಖ್ಯರಸ್ತೆಯಿಂದ‌ ಆಗಮಿಸುವ ವಾಹನಗಳ ಸಂಚಾರಕ್ಕೆ ತೊಡಕಾಗಿ‌ ಪರಿಣಮಿಸಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರು ನಾಮಕರಣದಂದು ಈ ಬ್ಯಾರಿಕೇಡ್ ಹಾಕಲಾಗಿತ್ತು. ಅದು, ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು. ಆದರೆ ಈ ಬ್ಯಾರಿಕೇಡನ್ನು ಅದೇ ಸ್ಥಳದಲ್ಲಿ ಶಾಶ್ವತವಾಗಿಸುವುದೇ?

Ksrtc ನಿಲ್ದಾಣ ಮುಂಭಾಗ ಹಾಕಿರುವ ಬ್ಯಾರಿಕೇಡ್ ಗಳಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ತೊಂದರೆಯಾಗಿದೆ. ಆದ್ದರಿಂದ ಈ ಬ್ಯಾರಿಕೇಡ್ ಗಳನ್ನು ತೆರವು ಮಾಡಬೇಕು ಎಂದು ಪುತ್ತೂರು ವರ್ತಕ ಸಂಘ ಮನವಿ ನೀಡಿತ್ತು. ಆದರೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

Recent News


Leave a Comment: